ವೊಲ್ವೊ ಇಂಡಿಯಾ ವಿಭಾಗದ ಮುಖ್ಯಸ್ಥರಾಗಿ ಮೊದಲ ಭಾರತೀಯ ಅಧಿಕಾರಿ ನೇಮಕ

ಸ್ವೀಡಿಷ್ ಕಾರು ಉತ್ಪಾದನಾ ಕಂಪನಿಯಾಗಿರುವ ವೊಲ್ವೊ ತನ್ನ ಭಾರತೀಯ ಮಾರುಕಟ್ಟೆಯಲ್ಲಿನ ಕಾರ್ಯಾಚರಣೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಪರಿಚಯಿಸಿದ್ದು, ಜ್ಯೋತಿ ಮಲ್ಹೋತ್ರಾ ಅವರನ್ನು ವೊಲ್ವೊ ಕಾರ್ಸ್ ಇಂಡಿಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕಗೊಳಿಸಿದೆ.

ವೊಲ್ವೊ ಇಂಡಿಯಾ ವಿಭಾಗದ ಮುಖ್ಯಸ್ಥರಾಗಿ ಮೊದಲ ಭಾರತೀಯ ಅಧಿಕಾರಿ ನೇಮಕ

ವೊಲ್ವೊ ಕಾರ್ಸ್ ಇಂಡಿಯಾ ವಿಭಾಗಕ್ಕೆ ವೊಲ್ವೊ ಕಂಪನಿಯು ಮೊದಲ ಬಾರಿಗೆ ಭಾರತೀಯ ಮೂಲದ ಅಧಿಕಾರಿಯನ್ನು ನೇಮಕಗೊಳಿಸಿದ್ದು, ನಿವೃತ್ತಿಯಲ್ಲಿರುವ ಚಾರ್ಲ್ಸ್ ಫ್ರಾಂಪ್ ಸ್ಥಾನಕ್ಕೆ ಜ್ಯೋತಿ ಮಲ್ಹೋತ್ರಾ ಅವರನ್ನು ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ವೊಲ್ವೊ ಕಾರ್ಸ್ ಇಂಡಿಯಾ ಕಂಪನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕರಾಗಿದ್ದ ಜ್ಯೋತಿ ಮಲ್ಹೋತ್ರಾ ಅವರಿಗೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಬಡ್ತಿ ನೀಡಲಾಗಿದೆ.

ವೊಲ್ವೊ ಇಂಡಿಯಾ ವಿಭಾಗದ ಮುಖ್ಯಸ್ಥರಾಗಿ ಮೊದಲ ಭಾರತೀಯ ಅಧಿಕಾರಿ ನೇಮಕ

ಸ್ವೀಡಿಷ್ ಕಾರು ಕಂಪನಿಯ ಈ ಹಿಂದೆ ತನ್ನ ಮೂಲ ಕಾರು ಉತ್ಪಾದನಾ ಘಟಕದಲ್ಲಿನ ಹಿರಿಯ ಅಧಿಕಾರಿಗಳನ್ನೇ ಭಾರತೀಯ ಮಾರುಕಟ್ಟೆಯಲ್ಲಿ ನೇಮಕ ಮಾಡುತ್ತಿತ್ತು. ಇದೇ ಮೊದಲ ಭಾರತೀಯ ಅಧಿಕಾರಿಯೊಬ್ಬರಿಗೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಬಡ್ತಿ ನೀಡಿದೆ.

ವೊಲ್ವೊ ಇಂಡಿಯಾ ವಿಭಾಗದ ಮುಖ್ಯಸ್ಥರಾಗಿ ಮೊದಲ ಭಾರತೀಯ ಅಧಿಕಾರಿ ನೇಮಕ

ವೊಲ್ವೊ ಕಾರು ಮಾರಾಟ ವಿಭಾಗದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದು, ಭಾರತೀಯ ಗ್ರಾಹಕರ ಬೇಡಿಕೆಯನ್ನು ಅರಿತು ಹೊಸ ಕಾರು ಉತ್ಪನ್ನಗಳನ್ನು ಸಿದ್ದಪಡಿಸುವಲ್ಲಿ ಸಾಕಷ್ಟು ಅನುಭವಗಳನ್ನು ಹೊಂದಿದ್ದಾರೆ.

ವೊಲ್ವೊ ಇಂಡಿಯಾ ವಿಭಾಗದ ಮುಖ್ಯಸ್ಥರಾಗಿ ಮೊದಲ ಭಾರತೀಯ ಅಧಿಕಾರಿ ನೇಮಕ

ಇದೀಗ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕಗೊಳಿಸಿರುವುದು ಭವಿಷ್ಯ ವಾಹನಗಳ ಉತ್ಪಾದನೆಯಲ್ಲಿ ಬಹುದೊಡ್ಡ ಬದಲಾವಣೆ ತರುವ ಗುರುತರ ಜವಾಬ್ದಾರಿ ಹೊತ್ತುಕೊಂಡಿದ್ದು, ಮಾರ್ಚ್ 1ರಿಂದಲೇ ಅಧಿಕೃತವಾಗಿ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವಿಕರಿಸಲಿದ್ದಾರೆ. ಇನ್ನು ವೊಲ್ವೊ ಕಂಪನಿಯು ಭವಿಷ್ಯ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ವಾಹನ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಶೀಘ್ರದಲ್ಲೇ ತನ್ನ ಪ್ರಮುಖ ಕಾರು ಮಾದರಿಗಳಲ್ಲಿನ ಡೀಸೆಲ್ ಎಂಜಿನ್ ಮಾದರಿಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.

ವೊಲ್ವೊ ಇಂಡಿಯಾ ವಿಭಾಗದ ಮುಖ್ಯಸ್ಥರಾಗಿ ಮೊದಲ ಭಾರತೀಯ ಅಧಿಕಾರಿ ನೇಮಕ

ಮಾಲಿನ್ಯ ತಡೆಗಾಗಿ ಈಗಾಗಲೇ ಮುಂದುವರಿದ ಹಲವು ರಾಷ್ಟ್ರಗಳು ಡೀಸೆಲ್ ಎಂಜಿನ್ ವಾಹನಗಳ ಬಳಕೆ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ವೊಲ್ವೊ ಇಂಡಿಯಾ ವಿಭಾಗದ ಮುಖ್ಯಸ್ಥರಾಗಿ ಮೊದಲ ಭಾರತೀಯ ಅಧಿಕಾರಿ ನೇಮಕ

ಇದಕ್ಕೆ ಪೂರಕವಾಗಿ ಭವಿಷ್ಯದ ವಾಹನ ಮಾದರಿಗಳ ಮೇಲೆ ಗಮನಹರಿಸಿರುವ ಆಟೋ ಉತ್ಪಾದನಾ ಕಂಪನಿಗಳು ಕೂಡಾ ಡೀಸೆಲ್ ವಾಹನಗಳ ಉತ್ಪಾದನೆಯನ್ನು ತಗ್ಗಿಸುವ ಮೂಲಕ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ.

ವೊಲ್ವೊ ಇಂಡಿಯಾ ವಿಭಾಗದ ಮುಖ್ಯಸ್ಥರಾಗಿ ಮೊದಲ ಭಾರತೀಯ ಅಧಿಕಾರಿ ನೇಮಕ

ವೊಲ್ವೊ ಕಂಪನಿಯು ಕೂಡಾ ಈಗಾಗಲೇ ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೂರ್ಣ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, 2022ರಿಂದ ಇನ್ನುಳಿದ ಕಾರು ಮಾದರಿಗಳಲ್ಲಿನ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ.

ವೊಲ್ವೊ ಇಂಡಿಯಾ ವಿಭಾಗದ ಮುಖ್ಯಸ್ಥರಾಗಿ ಮೊದಲ ಭಾರತೀಯ ಅಧಿಕಾರಿ ನೇಮಕ

ಹೈಬ್ರಿಡ್ ಎಂಜಿನ್ ವಾಹನ ಉತ್ಪಾದನೆಯಲ್ಲಿ ಈಗಾಗಲೇ ಮುಂಚೂಣಿ ಹೊಂದಿರುವ ವೊಲ್ವೊ ಕಂಪನಿಯು 2023ರ ವೇಳೆಗೆ ಒಟ್ಟು 6 ಕಾರು ಮಾದರಿಗಳನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಮಾರಾಟಮಾಡುವ ಗುರಿಹೊಂದಿದ್ದು, ಇದೇ ವರ್ಷದ ಮಧ್ಯಂತರದಲ್ಲಿ ಭಾರತದಲ್ಲಿ ಮೊದಲ ಇವಿ ಕಾರು ಮಾದರಿಯಾಗಿ ಎಕ್ಸ್‌ಸಿ40 ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆಗಡೆಗೊಳಿಸುತ್ತಿದೆ.

Most Read Articles

Kannada
Read more on ವೊಲ್ವೊ volvo
English summary
Volvo Cars India appoints Jyoti Malhotra as Managing Director. Read in Kannada.
Story first published: Monday, February 15, 2021, 23:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X