ಹೊಸ ತಂತ್ರಜ್ಞಾನ ಪ್ರೇರಿತ ಎಕ್ಸ್‌ಸಿ60 ಫೇಸ್‌ಲಿಫ್ಟ್ ಎಸ್‌ಯುವಿ ಅನಾವರಣಗೊಳಿಸಿದ ವೊಲ್ವೊ

ಭವಿಷ್ಯ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ವಾಹನ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಸ್ವಿಡಿಷ್ ಆಟೋ ಕಂಪನಿ ವೊಲ್ವೊ ಇಂಡಿಯಾ ಶೀಘ್ರದಲ್ಲೇ ತನ್ನ ಪ್ರಮುಖ ಕಾರು ಮಾದರಿಗಳಾದ ಎಕ್ಸ್‌ಸಿ60 ಎಸ್‌ಯುವಿ ಮತ್ತು ಎಸ್90 ಸೆಡಾನ್ ಮಾದರಿಗಳ ನವೀಕೃತ ಆವೃತ್ತಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಎಕ್ಸ್‌ಸಿ60 ಫೇಸ್‌ಲಿಫ್ಟ್ ಎಸ್‌ಯುವಿ ಅನಾವರಣಗೊಳಿಸಿದ ವೊಲ್ವೊ

ವೊಲ್ವೊ ಕಂಪನಿಯು ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಎಸ್60, ಎಕ್ಸ್‌ಸಿ40, ಎಕ್ಸ್‌ಸಿ60, ಎಕ್ಸ್‌ಸಿ90, ಎಸ್90, ವಿ90 ಕ್ರಾಸ್ ಕಂಟ್ರಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಕಂಪನಿಯು ಎಕ್ಸ್‌ಸಿ60 ಮತ್ತು ಎಸ್90 ಸೆಡಾನ್ ಕಾರುಗಳ 2021ರ ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ. ಹೊಸ ಕಾರುಗಳು ಈಗಾಗಲೇ ಬಿಎಸ್-6 ಆವೃತ್ತಿಯೊಂದಿಗೆ ಮಾರಾಟವಾಗುತ್ತಿದ್ದು, 2021ರ ಮಾದರಿಗಳನ್ನು ಹಲವು ಪ್ರಮುಖ ತಂತ್ರಜ್ಞಾನ ಸೌಲಭ್ಯದೊಂದಿಗೆ ಉನ್ನತೀಕರಿಸಿ ಅನಾವರಣಗೊಳಿಸಲಾಗಿದೆ.

ಎಕ್ಸ್‌ಸಿ60 ಫೇಸ್‌ಲಿಫ್ಟ್ ಎಸ್‌ಯುವಿ ಅನಾವರಣಗೊಳಿಸಿದ ವೊಲ್ವೊ

ಎಕ್ಸ್‌ಸಿ60 ಕಾರು ಮಾದರಿಯು ವೊಲ್ವೊ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನ ತಂತ್ರಜ್ಞಾನ ಸೌಲಭ್ಯಗಳನ್ನು ಉನ್ನತೀಕರಿಸಿ ಅಭಿವೃದ್ದಿಸಲಾಗಿದೆ.

ಎಕ್ಸ್‌ಸಿ60 ಫೇಸ್‌ಲಿಫ್ಟ್ ಎಸ್‌ಯುವಿ ಅನಾವರಣಗೊಳಿಸಿದ ವೊಲ್ವೊ

ಜಾಗತಿಕ ಮಾರುಕಟ್ಟೆಗಳಲ್ಲಿ ಕಳೆದ ವರ್ಷ 2 ಲಕ್ಷ ಯುನಿಟ್ ಮಾರಾಟವಾಗಿ ಎಕ್ಸ್‌ಸಿ60 ಮಾದರಿಯು ಈ ಹಿಂದಿನ ವರ್ಷದ ಮಾರಾಟಕ್ಕಿಂತ ಶೇ.29ರಷ್ಟು ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಇದೀಗ ಫೇಸ್‌ಲಿಫ್ಟ್ ಆವೃತ್ತಿಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಎಕ್ಸ್‌ಸಿ60 ಫೇಸ್‌ಲಿಫ್ಟ್ ಎಸ್‌ಯುವಿ ಅನಾವರಣಗೊಳಿಸಿದ ವೊಲ್ವೊ

ವೊಲ್ವೊ ಕಂಪನಿಯು ಹೊಸ ಎಕ್ಸ್‌ಸಿ60 ಕಾರಿನ ಬಾಹ್ಯ ವಿನ್ಯಾಸದಲ್ಲಿ ಕೆಲವೇ ಬದಲಾವಣೆಗಳನ್ನು ಪರಿಚಯಿಸಿದ್ದು, ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಫ್ರಂಟ್ ಗ್ರಿಲ್, ಕ್ರೋಮ್ ಟ್ರಿಮ, ಹೊಸ ಫ್ರಂಟ್ ಬಂಪರ್ ನೀಡಲಾಗಿದೆ. ಹಾಗೆಯೇ ಹೊಸ ಕಾರಿನಲ್ಲಿ ವಿವಿಧ ಬಣ್ಣಗಳ ಆಯ್ಕೆ ಮತ್ತು ಮರುವಿನ್ಯಾಸಗೊಳಿಸಲಾದ ಅಲಾಯ್ ವೀಲ್ಹ್ ಸೌಲಭ್ಯವು ಹೊಸ ಐಷಾರಾಮಿ ಕಾರಿಗೆ ಮತ್ತಷ್ಟು ಬಲಿಷ್ಠತೆ ನೀಡುತ್ತದೆ.

ಎಕ್ಸ್‌ಸಿ60 ಫೇಸ್‌ಲಿಫ್ಟ್ ಎಸ್‌ಯುವಿ ಅನಾವರಣಗೊಳಿಸಿದ ವೊಲ್ವೊ

ಜೊತೆಗೆ ಹೊಸ ಕಾರಿನ ಒಳಭಾಗದಲ್ಲಿ ಉನ್ನತೀಕರಿಸಲಾಗಿರುವ ಕಾರ್ ಟೆಕ್ನಾಲಜಿ ಸೌಲಭ್ಯಗಳು ಕಾರು ಪ್ರಯಾಣವನ್ನು ಮತ್ತಷ್ಟು ಸರಳಗೊಳಿಸುವುದಲ್ಲದೆ ಗರಿಷ್ಠ ಸುರಕ್ಷತೆ ನೀಡಲಿದ್ದು, ಹೊಸ ಕಾರಿನಲ್ಲಿ ಗೂಗಲ್ ಸಹಯೋಗದೊಂದಿಗೆ ಅಭಿವೃದ್ದಿಪಡಿಸಲಾದ ಆಂಡ್ರಾಯ್ಡ್-ಚಾಲಿತ ಇನ್ಫೋಟೈನ್‌ಮೆಂಟ್ ವ್ಯವಸ್ಥೆಯ ಪ್ರಮುಖ ಬದಲಾವಣೆಯಾಗಲಿದೆ.

ಎಕ್ಸ್‌ಸಿ60 ಫೇಸ್‌ಲಿಫ್ಟ್ ಎಸ್‌ಯುವಿ ಅನಾವರಣಗೊಳಿಸಿದ ವೊಲ್ವೊ

ಆಂಡ್ರಾಯ್ಡ್-ಚಾಲಿತ ಇನ್ಫೋಟೈನ್‌ಮೆಂಟ್ ವ್ಯವಸ್ಥೆ ಬೆಂಬಲಿಸಲು ವೊಲ್ವೊ ಕಂಪನಿಯು ಹೊಸ ಡಿಜಿಟಲ್ ಸೇವಾ ಪ್ಯಾಕೇಜ್ ಅನ್ನು ಸಿದ್ದಪಡಿಸಿದ್ದು, ಈ ಮೂಲಕ ಹೊಸ ತಂತ್ರಜ್ಞಾ ಸೇವೆಗಳಲ್ಲಿ ಗೂಗಲ್ ಅಪ್ಲಿಕೇಶನ್, ಗೂಗಲ್ ಅಸಿಸ್ಟೆಂಟ್, ವೊಲ್ವೊ ಆನ್ ಕಾಲ್ ಅಪ್ಲಿಕೇಶನ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಡೇಟಾ ಸೇವೆಗಳನ್ನು ಅದು ಒಳಗೊಂಡಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಎಕ್ಸ್‌ಸಿ60 ಫೇಸ್‌ಲಿಫ್ಟ್ ಎಸ್‌ಯುವಿ ಅನಾವರಣಗೊಳಿಸಿದ ವೊಲ್ವೊ

ಇನ್ನು ವೊಲ್ವೊ ಕಂಪನಿಯು ಹೊಸ ಎಕ್ಸ್‌ಸಿ60 ಫೇಸ್‌ಲಿಫ್ಟ್ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ಜೊತೆಗೆ ಆರಾಮದಾಯಕ ಆಸನಗಳನ್ನು ಒದಗಿಸಲಿದ್ದು, ಹೊಸ ಕಾರು ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟವಾಗಲು ಸಿದ್ದವಾಗಿದೆ.

ಎಕ್ಸ್‌ಸಿ60 ಫೇಸ್‌ಲಿಫ್ಟ್ ಎಸ್‌ಯುವಿ ಅನಾವರಣಗೊಳಿಸಿದ ವೊಲ್ವೊ

ಈ ಹಿಂದೆ ಎಕ್ಸ್‌ಸಿ60 ಎಸ್‌ಯುವಿ ಕಾರಿನಲ್ಲಿ 190ಬಿಎಚ್‌ಪಿ ಮತ್ತು 235-ಬಿಎಚ್‌ಪಿ ಪ್ರೇರಿತ ಎರಡು ಮಾದರಿಯ 2.0-ಲೀಟರ್ ಡೀಸೆಲ್ ಎಂಜಿನ್ ನೀಡುತ್ತಿದ್ದ ವೊಲ್ವೊ ಕಂಪನಿಯು ಹೊಸ ಯೋಜನೆಯ ಭಾಗವಾಗಿ ಎಕ್ಸ್‌ಸಿ60 ಫೇಸ್‌ಲಿಫ್ಟ್ ಮಾದರಿಯಲ್ಲಿ 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎಕ್ಸ್‌ಸಿ60 ಫೇಸ್‌ಲಿಫ್ಟ್ ಎಸ್‌ಯುವಿ ಅನಾವರಣಗೊಳಿಸಿದ ವೊಲ್ವೊ

ಪೆಟ್ರೋಲ್ ಎಂಜಿನ್ ನೀಡುವುದರ ಹೊರತಾಗಿ ಪರ್ಫಾಮೆನ್ಸ್ ಕುರಿತಾಗಿ ಯಾವುದೇ ಮಾಹಿತಿ ಹಂಚಿಕೊಳ್ಳದ ವೊಲ್ವೊ ಮುಂಬರುವ ಕೆಲವೇ ದಿನಗಳಲ್ಲಿ ಹೊಸ ಮಾದರಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, 2023ರಿಂದ ವೊಲ್ವೊ ನಿರ್ಮಾಣದ ಬಹುತೇಕ ಕಾರುಗಳಲ್ಲಿ ಹಂತ-ಹಂತವಾಗಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಲಾಗುತ್ತಿದೆ.

Most Read Articles

Kannada
English summary
New Volvo XC60 Facelift Unveiled Updates Exterior Interior Engine. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X