ಆಗಸ್ಟ್‌ ತಿಂಗಳ ಕಾರು ಮಾರಾಟದಲ್ಲಿ ಟಾಪ್ 5 ನಲ್ಲಿ ಸ್ಥಾನ ಗಿಟ್ಟಿಸಿಕೊಂಡ 3 ದೇಶೀಯ ಬ್ರಾಂಡ್‌ಗಳು

ಕಾರು ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಖರೀದಿದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುತ್ತಿವೆ. ಹೆಚ್ಚಿನ ವಾಹನ ತಯಾರಕರು ಆಗಸ್ಟ್ 2022 ರಲ್ಲಿ ಧನಾತ್ಮಕ ಮಾರಾಟ ಬೆಳವಣಿಗೆಯನ್ನು ದಾಖಲಿಸಿದ್ದಾರೆ.

ಆಗಸ್ಟ್‌ ತಿಂಗಳ ಕಾರು ಮಾರಾಟದಲ್ಲಿ ಟಾಪ್ 5 ನಲ್ಲಿ ಸ್ಥಾನ ಗಿಟ್ಟಿಸಿಕೊಂಡ 3 ದೇಶೀಯ ಬ್ರಾಂಡ್‌ಗಳು

ಕಳೆದ ತಿಂಗಳು ಕಾರು ತಯಾರಕರು ಭಾರತದಲ್ಲಿ 3.28 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ್ದಾರೆ. ಮಾರಾಟದ ವಿಷಯದಲ್ಲಿ, ಮಾರುತಿ ಸುಜುಕಿ ಅಗ್ರಸ್ಥಾನದಲ್ಲಿ ಮುಂದುವರಿದರೆ, ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ತಮ್ಮ ಅತ್ಯಧಿಕ ಮಾಸಿಕ ಮಾರಾಟವನ್ನು ದಾಖಲಿಸಿವೆ.

ಆಗಸ್ಟ್‌ ತಿಂಗಳ ಕಾರು ಮಾರಾಟದಲ್ಲಿ ಟಾಪ್ 5 ನಲ್ಲಿ ಸ್ಥಾನ ಗಿಟ್ಟಿಸಿಕೊಂಡ 3 ದೇಶೀಯ ಬ್ರಾಂಡ್‌ಗಳು

ಇನ್ನು ವಿದೇಶಿ ಕಂಪನಿಯಾದ ಹ್ಯುಂಡೈ ಕೂಡ ಪ್ರತಿ ತಿಂಗಳು ಭಾರತದಲ್ಲಿ ಉತ್ತಮ ಮಾರಾಟವನ್ನು ದಾಖಲಿಸುತ್ತಿದೆ. ಈ ಬಾರಿಯೂ ಟಾಟಾ ಮೋಟಾರ್ಸ್‌ಗೆ ತೀವ್ರ ಪೈಪೋಟಿ ನೀಡುವ ಮೂಲಕ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಆಗಸ್ಟ್ 2022 ರಲ್ಲಿ ಉತ್ತಮ ಮಾರಾಟ ದಾಖಲಿಸಿರುವ ಟಾಪ್ 10 ಕಾರು ಕಂಪನಿಗಳನ್ನು ಈ ಲೇಖನದಲ್ಲಿ ಪಟ್ಟಿ ಮಾಡಲಾಗಿದೆ.

ಆಗಸ್ಟ್‌ ತಿಂಗಳ ಕಾರು ಮಾರಾಟದಲ್ಲಿ ಟಾಪ್ 5 ನಲ್ಲಿ ಸ್ಥಾನ ಗಿಟ್ಟಿಸಿಕೊಂಡ 3 ದೇಶೀಯ ಬ್ರಾಂಡ್‌ಗಳು

ಮಾರುತಿ ಸುಜುಕಿ ಆಗಸ್ಟ್ 2022 ರಲ್ಲಿ 1,34,166 ಯುನಿಟ್ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ, ಕಳೆದ ವರ್ಷದ ಇದೇ ತಿಂಗಳಿನಲ್ಲಿ ಮಾರಾಟವಾದ 1,03,187 ಯುನಿಟ್‌ಗಳಿಗೆ ಹೋಲಿಸಿದರೆ ಕಂಪನಿಯು ಶೇಕಡಾ 40.87 ರಷ್ಟು ಮಾರುಕಟ್ಟೆ ಪಾಲನ್ನು ನೋಂದಾಯಿಸಿದೆ. ವರ್ಷದಿಂದ ವರ್ಷಕ್ಕೆ ಶೇಕಡಾ 30.02 ರಷ್ಟು ಮಾರಾಟದ ಬೆಳವಣಿಗೆಯನ್ನು ಹೊಂದಿದೆ.

ಆಗಸ್ಟ್‌ ತಿಂಗಳ ಕಾರು ಮಾರಾಟದಲ್ಲಿ ಟಾಪ್ 5 ನಲ್ಲಿ ಸ್ಥಾನ ಗಿಟ್ಟಿಸಿಕೊಂಡ 3 ದೇಶೀಯ ಬ್ರಾಂಡ್‌ಗಳು

ಹ್ಯುಂಡೈ ಆಗಸ್ಟ್ 2022 ರಲ್ಲಿ ಅಗ್ರ 10 ಕಾರು ಕಂಪನಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಹ್ಯುಂಡೈ ಮತ್ತು ಟಾಟಾ ನಡುವಿನ ಅಂತರ ಕಡಿಮೆಯಾಗುತ್ತಿದೆ. ಕಂಪನಿಯು ಆಗಸ್ಟ್ 2022 ರಲ್ಲಿ 49,510 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

ಆಗಸ್ಟ್‌ ತಿಂಗಳ ಕಾರು ಮಾರಾಟದಲ್ಲಿ ಟಾಪ್ 5 ನಲ್ಲಿ ಸ್ಥಾನ ಗಿಟ್ಟಿಸಿಕೊಂಡ 3 ದೇಶೀಯ ಬ್ರಾಂಡ್‌ಗಳು

ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ ಹ್ಯುಂಡೈನ 46,866 ಯುನಿಟ್‌ಗಳಿಗೆ ಹೋಲಿಸಿದರೆ ಹುಂಡೈನ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ5.4% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಪ್ರಸ್ತುತ ಕಂಪನಿಯು ಶೇಕಡಾ 15.08 ಮಾರುಕಟ್ಟೆ ಪಾಲನ್ನು ಹೊಂದಿದೆ.

ಆಗಸ್ಟ್‌ ತಿಂಗಳ ಕಾರು ಮಾರಾಟದಲ್ಲಿ ಟಾಪ್ 5 ನಲ್ಲಿ ಸ್ಥಾನ ಗಿಟ್ಟಿಸಿಕೊಂಡ 3 ದೇಶೀಯ ಬ್ರಾಂಡ್‌ಗಳು

ಟಾಟಾ ಮೋಟಾರ್ಸ್ ಆಗಸ್ಟ್ 2022 ರ ಮಾರಾಟದಲ್ಲಿ ಪ್ರಭಾವಶಾಲಿ ಬೆಳವಣಿಗೆಯನ್ನು ದಾಖಲಿಸಿದೆ. ಕಂಪನಿಯು ಕಳೆದ ತಿಂಗಳು 47,166 ಯುನಿಟ್‌ಗಳ ಮಾರಾಟವನ್ನು ನೋಂದಾಯಿಸಿದೆ, ಆಗಸ್ಟ್ 2021 ರಲ್ಲಿ ಮಾರಾಟವಾದ 28,018 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 68.34 ರಷ್ಟು ಬೃಹತ್ ಮಾರಾಟ ಬೆಳವಣಿಗೆಯಾಗಿದೆ.

ಆಗಸ್ಟ್‌ ತಿಂಗಳ ಕಾರು ಮಾರಾಟದಲ್ಲಿ ಟಾಪ್ 5 ನಲ್ಲಿ ಸ್ಥಾನ ಗಿಟ್ಟಿಸಿಕೊಂಡ 3 ದೇಶೀಯ ಬ್ರಾಂಡ್‌ಗಳು

ಈ ಮೂಲಕ ಟಾಟಾ ಮೋಟಾರ್ಸ್ ಮಾರುಕಟ್ಟೆ ಪಾಲು ಶೇ.14.37ಕ್ಕೆ ಏರಿದೆ. ಕಳೆದ ಹಲವು ತಿಂಗಳುಗಳಿಂದ ಹ್ಯುಂಡೈಗೆ ತೀವ್ರ ಪೈಪೋಟಿ ನೀಡುತ್ತಿರುವ ಟಾಟಾ ಮೋಟಾರ್ಸ್, ಮುಂಬರುವ ತಿಂಗಳುಗಳಲ್ಲಿ ಹ್ಯುಂಡೈ ಕಂಪನಿಯನ್ನು ಹಿಂದಿಕ್ಕುವ ಲಕ್ಷಣಗಳು ಹೇರಳವಾಗಿ ಕಾಣುತ್ತಿವೆ.

ಆಗಸ್ಟ್‌ ತಿಂಗಳ ಕಾರು ಮಾರಾಟದಲ್ಲಿ ಟಾಪ್ 5 ನಲ್ಲಿ ಸ್ಥಾನ ಗಿಟ್ಟಿಸಿಕೊಂಡ 3 ದೇಶೀಯ ಬ್ರಾಂಡ್‌ಗಳು

ಮಹೀಂದ್ರಾ ಮತ್ತು ಕಿಯಾ ಇಂಡಿಯಾ ಕ್ರಮವಾಗಿ ಶೇ 9.09 ಮತ್ತು ಶೇ 6.80 ಮಾರುಕಟ್ಟೆ ಪಾಲನ್ನು ಹೊಂದಿರುವ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿವೆ. ಮಹೀಂದ್ರಾ ಆಗಸ್ಟ್‌ನಲ್ಲಿ 29,852 ವಾಹನಗಳನ್ನು ಮಾರಾಟ ಮಾಡಿದ್ದರೆ, ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 15,973 ಯುನಿಟ್‌ಗಳಿಗೆ ಹೋಲಿಸಿದರೆ ಕಂಪನಿಯು ವರ್ಷದಿಂದ ವರ್ಷಕ್ಕೆ ಶೇಕಡಾ 86.89 ರಷ್ಟು ಬೃಹತ್ ಮಾರಾಟ ಬೆಳವಣಿಗೆಯನ್ನು ದಾಖಲಿಸಿದೆ.

ಆಗಸ್ಟ್‌ ತಿಂಗಳ ಕಾರು ಮಾರಾಟದಲ್ಲಿ ಟಾಪ್ 5 ನಲ್ಲಿ ಸ್ಥಾನ ಗಿಟ್ಟಿಸಿಕೊಂಡ 3 ದೇಶೀಯ ಬ್ರಾಂಡ್‌ಗಳು

ಮತ್ತೊಂದೆಡೆ, ಆಗಸ್ಟ್ 2021 ರಲ್ಲಿ 16,750 ಯುನಿಟ್‌ಗಳಿಗೆ ಹೋಲಿಸಿದರೆ ಕಿಯಾ ಕಳೆದ ತಿಂಗಳು 22,322 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಇದರೊಂದಿಗೆ ಕಂಪನಿಯು ವಾರ್ಷಿಕ ಮಾರಾಟದಲ್ಲಿ ಶೇ 33.27 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಭಾರತದ ಟಾಪ್ ಬ್ರಾಂಡ್‌ಗಳೊಂದಿಗೆ ಕಿಯಾ ಗುರ್ತಿಸಿಕೊಂಡಿದೆ.

ಆಗಸ್ಟ್‌ ತಿಂಗಳ ಕಾರು ಮಾರಾಟದಲ್ಲಿ ಟಾಪ್ 5 ನಲ್ಲಿ ಸ್ಥಾನ ಗಿಟ್ಟಿಸಿಕೊಂಡ 3 ದೇಶೀಯ ಬ್ರಾಂಡ್‌ಗಳು

ಪ್ರಯಾಣಿಕ ಹಾಗೂ ಟ್ಯಾಕ್ಸಿ ಫ್ಲೀಟ್‌ಗಳಿಗೆ ಉತ್ತಮ ಕೊಡುಗೆ ನೀಡಿರುವ ಟೊಯೊಟಾ ಆಗಸ್ಟ್ 2022 ರಲ್ಲಿ 14,959 ಯುನಿಟ್‌ಗಳ ಮಾರಾಟದೊಂದಿಗೆ ಆರನೇ ಸ್ಥಾನದಲ್ಲಿದೆ, ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 12,772 ಯುನಿಟ್‌ಗಳಿಗೆ ಹೋಲಿಸಿದರೆ ಟೊಯೊಟಾ ಶೇ.4.56 ಮಾರುಕಟ್ಟೆ ಪಾಲನ್ನು ಹೊಂದಿದೆ.

ಆಗಸ್ಟ್‌ ತಿಂಗಳ ಕಾರು ಮಾರಾಟದಲ್ಲಿ ಟಾಪ್ 5 ನಲ್ಲಿ ಸ್ಥಾನ ಗಿಟ್ಟಿಸಿಕೊಂಡ 3 ದೇಶೀಯ ಬ್ರಾಂಡ್‌ಗಳು

ಆಗಸ್ಟ್ 2022 ರಲ್ಲಿ 7,769 ಯುನಿಟ್‌ಗಳ ಮಾರಾಟದೊಂದಿಗೆ ಹೋಂಡಾ ಏಳನೇ ಸ್ಥಾನದಲ್ಲಿದೆ. ಕಂಪನಿಯು ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 11,177 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 30.49 ರಷ್ಟು ಋಣಾತ್ಮಕ ಮಾರಾಟ ಬೆಳವಣಿಗೆಯನ್ನು ದಾಖಲಿಸಿದೆ.

ಆಗಸ್ಟ್‌ ತಿಂಗಳ ಕಾರು ಮಾರಾಟದಲ್ಲಿ ಟಾಪ್ 5 ನಲ್ಲಿ ಸ್ಥಾನ ಗಿಟ್ಟಿಸಿಕೊಂಡ 3 ದೇಶೀಯ ಬ್ರಾಂಡ್‌ಗಳು

ಭಾರತದಲ್ಲಿ ಪ್ರಯಾಣಿಕ ವಿಭಾಗದಲ್ಲಿ ನಿಧಾನವಾಗಿ ಚೇತರಿಕೆ ಕಾಣುತ್ತಿರುವ ರೆನಾಲ್ಟ್ ಸಹ ಕಳೆದ ತಿಂಗಳು 7,012 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 11,177 ಯುನಿಟ್‌ಗಳಿಗೆ ಹೋಲಿಸಿದರೆ ರೆನಾಲ್ಟ್ ಮಾರಾಟದಲ್ಲಿ ಶೇ 27 ರಷ್ಟು ಕುಸಿತದೊಂದಿಗೆ ಎಂಟನೇ ಸ್ಥಾನವನ್ನು ಗಳಿಸಿದೆ.

ಆಗಸ್ಟ್‌ ತಿಂಗಳ ಕಾರು ಮಾರಾಟದಲ್ಲಿ ಟಾಪ್ 5 ನಲ್ಲಿ ಸ್ಥಾನ ಗಿಟ್ಟಿಸಿಕೊಂಡ 3 ದೇಶೀಯ ಬ್ರಾಂಡ್‌ಗಳು

ಸ್ಕೋಡಾ ಆಟೋ ಆಗಸ್ಟ್ 2022 ರಲ್ಲಿ 4,222 ವಾಹನಗಳ ಮಾರಾಟದೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ಕಳೆದ ತಿಂಗಳು ಕಂಪನಿಯು ಶೇ.10.26 ರಷ್ಟು ಬೆಳವಣಿಗೆ ದಾಖಲಿಸಿದೆ. ಅಂತಿಮವಾಗಿ, ಎಂಜಿ ಮೋಟಾರ್ ಆಗಸ್ಟ್‌ನಲ್ಲಿ 3,823 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಹತ್ತನೇ ಸ್ಥಾನಕ್ಕೆ ತಲುಪಿದೆ. ಆದರೂ ಎಂಜಿ ಮೋಟಾರ್ಸ್ ಮಾರಾಟವು ಶೇ11.40 ರಷ್ಟು ಕುಸಿತವನ್ನು ದಾಖಲಿಸಿದೆ.

Most Read Articles

Kannada
English summary
3 Domestic Brands in Top 5 Car Sales in August
Story first published: Monday, September 5, 2022, 18:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X