Just In
- 1 min ago
13 ಉದ್ಯೋಗಿಗಳಿಗೆ ಹೊಸ ಟೊಯೋಟಾ ಗ್ಲಾನ್ಜಾ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕಂಪನಿ
- 35 min ago
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ
- 2 hrs ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 3 hrs ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
Don't Miss!
- News
ಚುನಾವಣೆಗೆ ಚೀನಾ, ಪಾಕಿಸ್ತಾನ ಬೆಂಬಲ ಕೋರುವುದು ಕಾಂಗ್ರೆಸ್: ಒನ್ ಇಂಡಿಯಾ ಸಂದರ್ಶನದಲ್ಲಿ ಸಿ ಟಿ ರವಿ ಹೇಳಿದ್ದೇನು?
- Sports
ಟೆಸ್ಟ್ ಮಾದರಿಗೆ ಕಮ್ಬ್ಯಾಕ್ ಮಾಡುವ ಬಗ್ಗೆ ಹಾರ್ದಿಕ್ ಪಾಂಡ್ಯ ಕುತೂಹಲಕಾರಿ ಪ್ರತಿಕ್ರಿಯೆ
- Technology
ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
- Finance
Union Budget: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಠೇವಣಿ ಮಿತಿ ಏರಿಕೆ
- Lifestyle
ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್
- Movies
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರೂ.15 ಲಕ್ಷದಿಂದ ರೂ.20 ಲಕ್ಷ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ 7 ಸೀಟರ್ ಎಸ್‌ಯುವಿಗಳಿವು!
ಭಾರತದಲ್ಲಿ ಮಧ್ಯಮ ಕ್ರಮಾಂಕದ ಪ್ರಮುಖ ಕಾರು ಮಾದರಿಗಳು ಇದೀಗ ಗ್ರಾಹಕರ ಬೇಡಿಕೆಯೆಂತೆ 7 ಸೀಟರ್ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿವೆ. 7 ಸೀಟರ್ ಎಸ್‌ಯುವಿ ಮಾದರಿಗಳು ಸಾಮಾನ್ಯ ಎಸ್‌ಯುವಿಗಳಿಂತಲೂ ತುಸು ದುಬಾರಿ ಎನ್ನಿಸಿದರೂ ಕೂಡಾ ಕುಟುಂಬ ಸಮೇತ ಪ್ರಯಾಣಕ್ಕಾಗಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿವೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವಾರು ಹೊಸ ಕಾರು ಮಾದರಿಗಳು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ದರೂ 7 ಸೀಟರ್ ಎಸ್‌ಯುವಿ ವಿಭಾಗವು ತನ್ನದೆ ಆದ ಬೇಡಿಕೆ ಸೃಷ್ಠಿಸಿದ್ದು, ಈ ಲೇಖನದಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 15 ಲಕ್ಷದಿಂದ ರೂ.20 ಲಕ್ಷ ಬೆಲೆ ಅಂತರದಲ್ಲಿ ಖರೀದಿಸಬಹುದಾದ ಎಸ್‌ಯುವಿ ಕಾರುಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್
ಹೊಸ ಸ್ಕಾರ್ಪಿಯೋ-ಎನ್ ಕಾರು ಜೆಡ್2, ಜೆಡ್4, ಜೆಡ್6, ಜೆಡ್8 ಮತ್ತು ಜೆಡ್ಎಲ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.45 ಲಕ್ಷ ಬೆಲೆ ಹೊಂದಿದೆ.

ಹೊಸ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ. 2.0-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಮತ್ತು 2.2 ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಎರಡು ರೀತಿಯ ಪರ್ಫಾಮೆನ್ಸ್ ಆಯ್ಕೆಗಳನ್ನು ಹೊಂದಿದೆ.

ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯನ್ನು ಮಹೀಂದ್ರಾ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದ್ದು, ವಿವಿಧ ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರಿನ ಎಸ್ ವೆರಿಯೆಂಟ್ ಎಕ್ಸ್‌ಶೋರೂಂ ಪ್ರಕಾರ ರೂ. 11.99 ಲಕ್ಷ ಬೆಲೆ ಹೊಂದಿದ್ದರೆ ಎಸ್11 ಟಾಪ್ ಎಂಡ್ ಮಾದರಿಯು ರೂ. 15.49 ಲಕ್ಷ ಬೆಲೆ ಹೊಂದಿದೆ.

ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು 7 ಸೀಟರ್ ಮತ್ತು 9 ಸೀಟರ್ ಸೌಲಭ್ಯದೊಂದಿಗೆ ಹೊಸದಾಗಿ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಮಾತ್ರ ಪಡೆದುಕೊಂಡಿದೆ. ಇದರಲ್ಲಿ ಸ್ಕಾರ್ಪಿಯೋ-ಎನ್ ಮಾದರಿಯಂತೆ ಪೆಟ್ರೋಲ್ ಎಂಜಿನ್, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿಲ್ಲ.

ಮಹೀಂದ್ರಾ ಎಕ್ಸ್‌ಯುವಿ700
ಎಕ್ಸ್‌ಯುವಿ700 ಎಸ್‌ಯುವಿಯ ಎಕ್ಸ್‌ಶೋರೂಂ ಆರಂಭಿಕವಾಗಿ ರೂ. 13.18 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 24.58 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(6-ಸ್ಪೀಡ್ ಎಂಟಿ),450-ಎನ್ಎಂ ಟಾರ್ಕ್(6-ಸ್ಪೀಡ್ ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ. ಸ್ಟ್ಯಾಂಡರ್ಡ್ 7 ಸೀಟರ್ ಮಾದರಿಗಳನ್ನು ಹೊರತುಪಡಿಸಿ 5 ಸೀಟರ್ ಹೊಂದಿರುವ ಮಾದರಿಗಳಲ್ಲಿ 7 ಸೀಟರ್ ಬಯಸುವ ಗ್ರಾಹಕರು ಹೆಚ್ಚುವರಿ ರೂ. 70 ಸಾವಿರ ಪಾವತಿ ಮಾಡಬೇಕಾಗುತ್ತದೆ.

ಟಾಟಾ ಸಫಾರಿ
2021ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ನ್ಯೂ ಜನರೇಷನ್ ಸಫಾರಿ ಮಾದರಿಯು ಕಳೆದ ಒಂದೂವರೆ ವರ್ಷದಲ್ಲಿ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹ್ಯಾರಿಯರ್ ಮಾದರಿಯನ್ನು ಆಧರಿಸಿರುವ ಹೊಸ ಸಫಾರಿಯು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಅತ್ಯುತ್ತಮ ಬೆಲೆ ಪಡೆದುಕೊಂಡಿದೆ.

ಸಫಾರಿ ಎಸ್‌ಯುವಿ ಸದ್ಯ ಸ್ಟ್ಯಾಂಡರ್ಡ್, ಡಾರ್ಕ್, ಅಡ್ವೆಂಚರ್ ಪೆರಸೊನಾ ಮತ್ತು ಜೆಟ್ ಆವೃತ್ತಿಗಳೊಂದಿಗೆ 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.35 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 23.55 ಲಕ್ಷ ಬೆಲೆ ಹೊಂದಿದೆ.

ಹ್ಯುಂಡೈ ಅಲ್ಕಾಜರ್
ಹೊಸ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ ಮಾದರಿಯು 6 ಸೀಟರ್ ಮತ್ತು 7 ಸೀಟರ್ ಆಯ್ಕೆ ಹೊಂದಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಗಳನ್ನು ಹೊಂದಿದೆ.

ಅಲ್ಕಾಜರ್ ಕಾರು ಪ್ರೆಸ್ಟೀಜ್, ಪ್ರೆಸ್ಟೀಜ್ (O), ಪ್ಲಾಟಿನಂ, ಪ್ಲಾಟಿನಂ (O), ಸಿಗ್ನೇಚರ್ ಮತ್ತು ಸಿಗ್ನೇಚರ್ (O) ರೂಪಾಂತರಗಳನ್ನು ಹೊಂದಿದ್ದು, ಇದು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.89 ಲಕ್ಷದಿಂದ ರೂ. 20.25 ಲಕ್ಷ ಬೆಲೆ ಹೊಂದಿದೆ.

ಎಂಜಿ ಹೆಕ್ಟರ್ ಪ್ಲಸ್
ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಕಾರುಗಳು ಒಂದೇ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿಗೊಂಡಿದ್ದರೂ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಹೆಕ್ಟರ್ ಪ್ಲಸ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.43 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರಿನಲ್ಲಿ ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದ್ದು, ಅತ್ಯುತ್ತಮ ಮೈಲೇಜ್ ಜೊತೆ ಪರ್ಫಾಮೆನ್ಸ್ ಮಾದರಿಯಾಗಿರುವ ಪೆಟ್ರೋಲ್ ಹೈಬ್ರಿಡ್ ಮಾದರಿಗೆ ಉತ್ತಮ ಬೇಡಿಕೆಯಿದೆ.