512 ಕಿ.ಮೀ ಮೈಲೇಜ್ ಜೊತೆಗೆ ಸುರಕ್ಷತೆಯಲ್ಲೂ 5 ಸ್ಟಾರ್‌ ರೇಟಿಂಗ್ ಪಡೆದುಕೊಂಡ ಬಿವೈಡಿ ಆಟ್ಟೊ-3

ಯುರೋ NCAP ನಡೆಸಿದ ಇತ್ತೀಚಿನ ಕ್ರ್ಯಾಶ್ ಟೆಸ್ಟ್‌ಗಳಲ್ಲಿ, ಬಿವೈಡಿ ಆಟ್ಟೊ-3 ಎಲೆಕ್ಟ್ರಿಕ್ ಎಸ್‌ಯುವಿ ಪ್ರಭಾವಶಾಲಿ 5-ಸ್ಟಾರ್‌ಗಳನ್ನು ಗಳಿಸಿದೆ. ವಯಸ್ಕರ ಸುರಕ್ಷತೆಯಲ್ಲಿ ಶೇ 91, ಮಕ್ಕಳ ಸುರಕ್ಷತೆಯಲ್ಲಿ ಶೇ 89 ಮತ್ತು ಅದರ ಸೇಫ್ಟಿ ಅಸಿಸ್ಟ್‌ಗಾಗಿ ಶೇ 74 ರಷ್ಟು ಸುರಕ್ಷತೆಯನ್ನು ಖಚಿತಪಡಿಸಿದೆ.

512 ಕಿ.ಮೀ ಮೈಲೇಜ್ ಜೊತೆಗೆ ಸುರಕ್ಷತೆಯಲ್ಲೂ 5 ಸ್ಟಾರ್‌ ರೇಟಿಂಗ್ ಪಡೆದುಕೊಂಡ ಬಿವೈಡಿ ಆಟ್ಟೊ-3

ಭಾರತದಲ್ಲಿ ಇತ್ತೀಚೆಗೆ ಅನಾವರಣಗೊಂಡ ಬೈವೈಡಿನ 5-ಡೋರ್ ಎಲೆಕ್ಟ್ರಿಕ್ SUV, ಟಾಪ್-ಸ್ಪೆಕ್ ಟ್ರಿಮ್‌ನಲ್ಲಿ 7-ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಜೊತೆಗೆ ಲೆವೆಲ್ 2 ADAS ವೈಶಿಷ್ಟ್ಯಗಳೊಂದಿಗೆ ಲೋಡ್ ಆಗಿದೆ. ಇದು ಮಾರುಕಟ್ಟೆಯಲ್ಲಿ ಸುರಕ್ಷಿತವಾದ ಎಲೆಕ್ಟ್ರಿಕ್ SUV ಗಳಲ್ಲಿ ಒಂದಾಗಿದೆ. ಸದ್ಯ ಈಗ ಟೆಸ್ಟ್‌ ಮಾಡಿರುವುದು ಯುರೋ ಎನ್‌ಸಿಎಪಿಯಾಗಿರುವುದರಿಂದ ಪರೀಕ್ಷೆಗೆ ಒಳಪಟ್ಟ ಕಾರು ಎಡಗೈ-ಡ್ರೈವ್ (LHD) ಆವೃತ್ತಿಯಾಗಿದೆ.

512 ಕಿ.ಮೀ ಮೈಲೇಜ್ ಜೊತೆಗೆ ಸುರಕ್ಷತೆಯಲ್ಲೂ 5 ಸ್ಟಾರ್‌ ರೇಟಿಂಗ್ ಪಡೆದುಕೊಂಡ ಬಿವೈಡಿ ಆಟ್ಟೊ-3

ಆದಾರೆ ಇದೇ ರೇಟಿಂಗ್ ಬಲ-ಗೈ ಡ್ರೈವ್ (RHD) ಮಾದರಿಗೂ ಅನ್ವಯಿಸುತ್ತದೆ. ಪರೀಕ್ಷೆಯ ಸಮಯದಲ್ಲಿ BYD Atto 3 ಎಲೆಕ್ಟ್ರಿಕ್ SUV ಮುಂಭಾಗದ ಆಫ್‌ಸೆಟ್ ಪರೀಕ್ಷೆಯಲ್ಲಿ ಸ್ಥಿರವಾಗಿ ಉಳಿಯಿತು, ಮುಂಭಾಗದಲ್ಲಿರುವ ನಕಲಿ ಪ್ರಯಾಣಿಕರ (ಡಮ್ಮಿ ಗೊಂಬೆಗಳು) ಮೊಣಕಾಲುಗಳು ಮತ್ತು ಎಲುಬುಗಳಿಗೆ ಉತ್ತಮ ರಕ್ಷಣೆ ಸಿಕ್ಕಿದೆ.

512 ಕಿ.ಮೀ ಮೈಲೇಜ್ ಜೊತೆಗೆ ಸುರಕ್ಷತೆಯಲ್ಲೂ 5 ಸ್ಟಾರ್‌ ರೇಟಿಂಗ್ ಪಡೆದುಕೊಂಡ ಬಿವೈಡಿ ಆಟ್ಟೊ-3

ಇನ್ನು ಇಂಪ್ಯಾಕ್ಟ್ ಟ್ರಾಲಿಯ ಕುಸಿತದ ವಿಶ್ಲೇಷಣೆ ಮತ್ತು ಪರೀಕ್ಷೆಯ ನಂತರ ವಿರೂಪಗೊಂಡ ತಡೆಗೋಡೆಯ ವಿಶ್ಲೇಷಣೆ ಸೇರಿದಂತೆ BYD Atto-3 ಮುಂಭಾಗದ ಘರ್ಷಣೆಯು ಮಧ್ಯಮ ಹಾನಿಕರವಲ್ಲದ ಮಾದರಿಯಾಗಿ ಹೊರಹೊಮ್ಮಿದೆ. ಪೂರ್ಣ-ಅಗಲದ ಕಟ್ಟುನಿಟ್ಟಿನ ತಡೆಗೋಡೆ ಪರೀಕ್ಷೆಯಲ್ಲಿ, ಚಾಲಕ ಮತ್ತು ಹಿಂದಿನ ಪ್ರಯಾಣಿಕರ ಆಸನಗಳಲ್ಲಿನ ಡಮ್ಮಿಗಳಿಗೆ ದೇಹದ ಎಲ್ಲಾ ನಿರ್ಣಾಯಕ ಪ್ರದೇಶಗಳಲ್ಲಿ ಉತ್ತಮ ರಕ್ಷಣೆ ಸಿಕ್ಕಿದೆ.

512 ಕಿ.ಮೀ ಮೈಲೇಜ್ ಜೊತೆಗೆ ಸುರಕ್ಷತೆಯಲ್ಲೂ 5 ಸ್ಟಾರ್‌ ರೇಟಿಂಗ್ ಪಡೆದುಕೊಂಡ ಬಿವೈಡಿ ಆಟ್ಟೊ-3

ಅಟ್ಟೊ-3 ಮಾದರಿಯು ಅಪಘಾತದಲ್ಲಿ ಪ್ರಯಾಣಿಕರ ಗಾಯಗಳನ್ನು ತಗ್ಗಿಸಲು ಪ್ರತಿಮಾಪನವನ್ನು ಹೊಂದಿದೆ. ಈ ವ್ಯವಸ್ಥೆಯು ಟೆಸ್ಟ್‌ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅಪಘಾತಗಳಲ್ಲಿ ತಲೆಗೆ ಉತ್ತಮ ರಕ್ಷಣೆಯನ್ನು ಕೂಡ ಖಚಿತಪಡಿಸಿದೆ. ಮುಂಭಾಗದ ಆಸನಗಳು ಮತ್ತು ಹೆಡ್‌ ರೆಸ್ಟ್‌ಗಳ ಮೇಲಿನ ಪರೀಕ್ಷೆಗಳು ಹಿಂಬದಿಯಿಂದ ಘರ್ಷಣೆಯಾದಾಗ ಗಾಯಗಳ ವಿರುದ್ಧ ಉತ್ತಮ ರಕ್ಷಣೆಯನ್ನು ಪ್ರದರ್ಶಿಸಿದವು.

512 ಕಿ.ಮೀ ಮೈಲೇಜ್ ಜೊತೆಗೆ ಸುರಕ್ಷತೆಯಲ್ಲೂ 5 ಸ್ಟಾರ್‌ ರೇಟಿಂಗ್ ಪಡೆದುಕೊಂಡ ಬಿವೈಡಿ ಆಟ್ಟೊ-3

ಜೊತೆಗೆ ದ್ವಿತೀಯ ಘರ್ಷಣೆಯನ್ನು ತಪ್ಪಿಸಲು ಅಪಘಾತ ಪ್ರಭಾವದ ನಂತರವೂ ಬ್ರೇಕ್‌ಗಳನ್ನು ಅನ್ವಯಿಸುವ ವ್ಯವಸ್ಥೆಯನ್ನು ಸಹ ಕಾರು ಹೊಂದಿದೆ. ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ, ಮುಂಭಾಗದ ಆಫ್‌ಸೆಟ್ ಪರೀಕ್ಷೆ ಮತ್ತು ಸೈಡ್ ಬ್ಯಾರಿಯರ್ ಎರಡರಲ್ಲೂ, ನಿರ್ಣಾಯಕ ಪ್ರದೇಶಗಳಲ್ಲಿ ಉತ್ತಮ ರಕ್ಷಣೆಯನ್ನು ಖಚಿತಪಡಿಸಿದೆ.

512 ಕಿ.ಮೀ ಮೈಲೇಜ್ ಜೊತೆಗೆ ಸುರಕ್ಷತೆಯಲ್ಲೂ 5 ಸ್ಟಾರ್‌ ರೇಟಿಂಗ್ ಪಡೆದುಕೊಂಡ ಬಿವೈಡಿ ಆಟ್ಟೊ-3

ಏರ್‌ಬ್ಯಾಗ್‌ನ ಸ್ಥಿತಿಯ ಬಗ್ಗೆ ಚಾಲಕನಿಗೆ ಸ್ಪಷ್ಟವಾದ ಮಾಹಿತಿಯನ್ನು ಒದಗಿಸಲಾಗಿದೆ. ಹೆಚ್ಚುವರಿಯಾಗಿ, ಅಟ್ಟೊ 3ನ ಸ್ವಾಯತ್ತ ತುರ್ತುಸ್ಥಿತಿ ಬ್ರೇಕಿಂಗ್ (AEB) ವ್ಯವಸ್ಥೆಯು ಇತರ ವಾಹನಗಳು ಅಡ್ಡ ಬಂದಾಗ ಅದರ ಪ್ರತಿಕ್ರಿಯೆಯ ಪರೀಕ್ಷೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿತು. ಸೀಟ್‌ಬೆಲ್ಟ್ ರಿಮೈಂಡರ್ ಸಿಸ್ಟಮ್ ಅನ್ನು ಮುಂಭಾಗ ಮತ್ತು ಹಿಂಭಾಗದ ಆಸನಗಳಿಗೆ ಪ್ರಮಾಣಿತವಾಗಿ ಅಳವಡಿಸಲಾಗಿದೆ.

512 ಕಿ.ಮೀ ಮೈಲೇಜ್ ಜೊತೆಗೆ ಸುರಕ್ಷತೆಯಲ್ಲೂ 5 ಸ್ಟಾರ್‌ ರೇಟಿಂಗ್ ಪಡೆದುಕೊಂಡ ಬಿವೈಡಿ ಆಟ್ಟೊ-3

ಲೇನ್ ಅಸಿಸ್ಟ್ ವ್ಯವಸ್ಥೆಯು ವಾಹನವು ಲೇನ್‌ನಿಂದ ಹೊರಬರುತ್ತಿದ್ದರೆ ಮತ್ತು ಕೆಲವು ನಿರ್ಣಾಯಕ ಸಂದರ್ಭಗಳಲ್ಲಿ ಮಧ್ಯಪ್ರವೇಶಿಸಿದರೆ ಅದರ ಮಾರ್ಗವನ್ನು ನಿಧಾನವಾಗಿ ಸರಿಪಡಿಸುತ್ತದೆ. ಸ್ಪೀಡ್ ಅಸಿಸ್ಟ್ ವ್ಯವಸ್ಥೆಯು ಸ್ಥಳೀಯ ವೇಗದ ಮಿತಿಯನ್ನು ಪತ್ತೆ ಮಾಡಿ ಕಾರಿನ ಗರಿಷ್ಠ ವೇಗವನ್ನು ಸಿಸ್ಟಮ್ ಆಟೋಮ್ಯಾಟಿಕ್ ಆಗಿ ಹೊಂದಿಕೆಯಾಗಲು ಡ್ರೈವರ್ ಆಯ್ಕೆ ಮಾಡಬಹುದು.

512 ಕಿ.ಮೀ ಮೈಲೇಜ್ ಜೊತೆಗೆ ಸುರಕ್ಷತೆಯಲ್ಲೂ 5 ಸ್ಟಾರ್‌ ರೇಟಿಂಗ್ ಪಡೆದುಕೊಂಡ ಬಿವೈಡಿ ಆಟ್ಟೊ-3

ಭಾರತದಲ್ಲಿ ಬುಕಿಂಗ್ ಪ್ರಾರಂಭ

ಬಿವೈಡಿ ಕಂಪನಿಯು ಈ ಹೊಸ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಲಾಗಿದೆ. ಆಸಕ್ತ ಖರೀದಿದಾರರು ಈಗ 50,000 ರೂಪಾಯಿಗಳನ್ನು ಪಾವತಿಸಿ ಬುಕ್ ಮಾಡಬಹುದು. ಮೊದಲ 500 ಯುನಿಟ್‌ಗಳ ವಿತರಣೆಯು ಜನವರಿ 2023 ರಿಂದ ಪ್ರಾರಂಭವಾಗಲಿದೆ ಎಂದು ಕಾರು ತಯಾರಕರು ದೃಢಪಡಿಸಿದ್ದಾರೆ.

512 ಕಿ.ಮೀ ಮೈಲೇಜ್ ಜೊತೆಗೆ ಸುರಕ್ಷತೆಯಲ್ಲೂ 5 ಸ್ಟಾರ್‌ ರೇಟಿಂಗ್ ಪಡೆದುಕೊಂಡ ಬಿವೈಡಿ ಆಟ್ಟೊ-3

ಸುಮಾರು 30 ಲಕ್ಷ (ಎಕ್ಸ್ ಶೋ ರೂಂ) ಅಂದಾಜು ಬೆಲೆಯೊಂದಿಗೆ ಬಿಡುಗಡೆಯಾಗಬಹುದು. ಹ್ಯುಂಡೈ ಕೋನಾ ಇವಿ ಮತ್ತು ಎಂಜಿ ZS ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಇದು ಪೈಪೋಟಿ ನೀಡುತ್ತದೆ. ಹೊಸ ಬಿವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿಯ ಬ್ಯಾಟರಿ ಪ್ಯಾಕ್‌ಗೆ ಬರುವುದಾದರೆ, ಮೂಲ ರೂಪಾಂತರಗಳು ಸಣ್ಣ 49.92kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಸಜ್ಜುಗೊಳ್ಳುವ ಸಾಧ್ಯತೆಯಿದೆ. ಈ ಬ್ಯಾಟರಿ ಪ್ಯಾಕ್‌ನೊಂದಿಗೆ ಮಾಡೆಲ್ ಅನ್ನು ಪ್ರಾರಂಭಿಸುವ ಬಗ್ಗೆ ಬಿವೈಡಿ ಇನ್ನೂ ಅಧಿಕೃತವಾಗಿ ದೃಢೀಕರಿಸಿಲ್ಲ.

512 ಕಿ.ಮೀ ಮೈಲೇಜ್ ಜೊತೆಗೆ ಸುರಕ್ಷತೆಯಲ್ಲೂ 5 ಸ್ಟಾರ್‌ ರೇಟಿಂಗ್ ಪಡೆದುಕೊಂಡ ಬಿವೈಡಿ ಆಟ್ಟೊ-3

ಮತ್ತೊಂದೆಡೆ, ಬಿವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿ ದೊಡ್ಡದಾದ 60.48kWh ಬ್ಯಾಟರಿ ಪ್ಯಾಕ್‌ನೊಂದಿಗೆ ಪೂರ್ಣ ಚಾರ್ಜ್‌ನಲ್ಲಿ 521 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಅಲ್ಲದೆ, ಮಾದರಿಯು ಸೂಕ್ತವಾದ DC ಫಾಸ್ಟ್ ಚಾರ್ಜರ್ ಅನ್ನು ಬಳಸಿಕೊಂಡು ಕೇವಲ 50 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು.

512 ಕಿ.ಮೀ ಮೈಲೇಜ್ ಜೊತೆಗೆ ಸುರಕ್ಷತೆಯಲ್ಲೂ 5 ಸ್ಟಾರ್‌ ರೇಟಿಂಗ್ ಪಡೆದುಕೊಂಡ ಬಿವೈಡಿ ಆಟ್ಟೊ-3

ಪವರ್‌ಟ್ರೇನ್‌ಗೆ ಬರುವುದಾದರೆ, ಮುಂಬರುವ ವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿ 201 ಬಿಹೆ‍ಪಿ ಪವರ್ ಮತ್ತು 310 ಎನ್ಎಂ ಟಾರ್ಕ್‌ನೊಂದಿಗೆ ಏಕ ಶಾಶ್ವತ ಮ್ಯಾಗ್ನೆಟ್ ಸಿಂಕ್ರೊನಸ್ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗುವ ಸಾಧ್ಯತೆಯಿದೆ.

512 ಕಿ.ಮೀ ಮೈಲೇಜ್ ಜೊತೆಗೆ ಸುರಕ್ಷತೆಯಲ್ಲೂ 5 ಸ್ಟಾರ್‌ ರೇಟಿಂಗ್ ಪಡೆದುಕೊಂಡ ಬಿವೈಡಿ ಆಟ್ಟೊ-3

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಮಾಣಿತ, ತೃಪ್ತಿದಾಯಕ ಮೈಲೇಜ್, ಗರಿಷ್ಟ ಸುರಕ್ಷತೆಯನ್ನು ಪಡೆದುಕೊಂಡಿರುವ ಬಿವೈಡಿ ಆಟ್ಟೊ-3 ಎಲೆಕ್ಟ್ರಿಕ್ ಎಸ್‌ಯುವಿ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಬಿಡುಗಡೆ ನಂತರ ಯಾವಮಟ್ಟಿಗೆ ದೇಶದಲ್ಲಿ ಸದ್ದು ಮಾಡಲಿದೆ ಎಂದಬುದನ್ನು ಕಾದುನೋಡಬೇಕಿದೆ.

Most Read Articles

Kannada
Read more on ಬಿವೈಡಿ byd
English summary
Byd atto 3 gets 5 star safety rating along with 512 km milage
Story first published: Thursday, October 13, 2022, 14:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X