Just In
- 42 min ago ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- 3 hrs ago ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
- 16 hrs ago ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- 18 hrs ago Air Taxi: ಬೆಂಗಳೂರು ಸೇರಿ ಈ ನಗರಗಳಲ್ಲಿ ಏರ್ ಟ್ಯಾಕ್ಸಿ.. ಆಕಾಶದಲ್ಲೇ ಆಫೀಸ್ಗೆ ಹೋಗಬಹುದು, ಕಡಿಮೆ ಖರ್ಚು!
Don't Miss!
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bangalore Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- News Mysuru: ಏಪ್ರಿಲ್ 26ಕ್ಕೆ ಮೈಸೂರಿನ ಪ್ರವಾಸಿ ತಾಣಗಳು ಬಂದ್, ಕಾರಣ ಇಲ್ಲಿದೆ
- Movies "ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿ3 ಮೈಕ್ರೊ ಎಸ್ಯುವಿ ವಿತರಣೆಗೆ ಚಾಲನೆ ನೀಡಿದ ಸಿಟ್ರನ್ ಇಂಡಿಯಾ
ಸಿಟ್ರನ್ ಇಂಡಿಯಾ ಕಂಪನಿಯು ತನ್ನ ಹೊಸ ಸಿ3 ಮೈಕ್ರೊ ಎಸ್ಯುವಿ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಕಂಪನಿಯು ಹೊಸ ಕಾರಿನ ವಿತರಣೆಗೆ ಇದೀಗ ಅಧಿಕೃತ ಚಾಲನೆ ನೀಡಿದೆ.
ಸಿ3 ಮೈಕ್ರೊ ಎಸ್ಯುವಿ ಮಾದರಿಗಾಗಿ ಈಗಾಗಲೇ ಭಾರೀ ಪ್ರಮಾಣದಲ್ಲಿ ಬುಕಿಂಗ್ ಸ್ವಿಕರಿಸಿರುವ ಸಿಟ್ರನ್ ಕಂಪನಿಯು ತನ್ನ ಪ್ರಮುಖ ಡೀಲರ್ಸ್ಗಳಲ್ಲಿ ವಿತರಣೆಗೆ ಚಾಲನೆ ನೀಡಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ನಗರಗಳಲ್ಲಿ ಮಾರಾಟ ಆರಂಭಿಸುವ ಸಿದ್ದತೆಯಲ್ಲಿದೆ.
ಸದ್ಯ ಸಿಟ್ರನ್ ಕಂಪನಿಯು ದೇಶದ ಪ್ರಮುಖ 19 ನಗರಗಳಲ್ಲಿ ಸುಮಾರು 24 ಶೋರೂಂಗಳಲ್ಲಿ ಹೊಸ ಕಾರು ಮಾರಾಟಾ ಮಾಡುತ್ತಿದ್ದು, ಈ ವರ್ಷಾಂತ್ಯಕ್ಕೆ ಹೊಸ ಸಿ3 ಮಾದರಿಯೊಂದಿಗೆ ಮತ್ತಷ್ಟು ಹೊಸ ಶೋರೂಂ ಆರಂಭಿಸುವ ಸಿದ್ದತೆಯಲ್ಲಿದೆ.
ಸಿ3 ಮಾದರಿಯನ್ನು ಸಿಟ್ರನ್ ಕಂಪನಿಯು ವಿವಿಧ ಹಂತದ ಮಾರುಕಟ್ಟೆ ಅಧ್ಯಯನದೊಂದಿಗೆ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದ್ದು, ಹೊಸ ಕಾರು ಮೈಕ್ರೊ ಎಸ್ಯುವಿ ವೈಶಿಷ್ಟ್ಯತೆಯೊಂದಿಗೆ ಕಂಪ್ಯಾಕ್ಟ್ ಎಸ್ಯುವಿ ಮತ್ತು ಪ್ರೀಮಿಯಂ ಹ್ಯಾಚ್ಬ್ಯಾಕ್ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಸಿ3 ಕಾರು ಮಾದರಿಯು ಲೈವ್ ಮತ್ತು ಫೀಲ್ ಎನ್ನುವ ಎರಡು ವೆರಿಯೆಂಟ್ಗಳನ್ನು ಹೊಂದಿದ್ದು, ಹೊಸ ಕಾರಿನ ಆರಂಭಿಕ ಆವೃತ್ತಿಯು ಎಕ್ಸ್ಶೋರೂಂ ಪ್ರಕಾರ ರೂ. 5.71 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.06 ಲಕ್ಷ ಬೆಲೆಯೊಂದಿಗೆ ಎಂಟ್ರಿ ಲೆವೆಲ್ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದೆ.
ಸಿಟ್ರನ್ ಕಂಪನಿಯು ಹೊಸ ಸಿ3 ಮಾದರಿಯಲ್ಲಿ ಸಿಟ್ರನ್ ಕಂಪನಿಯು ಎರಡು ಎಂಜಿನ್ ಆಯ್ಕೆಗಳನ್ನು ನೀಡಿದ್ದು, ಆರಂಭಿಕ ಮಾದರಿಯು 1.2-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ತ್ರಿ-ಸಿಲಿಂಡರ್ ಪ್ಯೂರ್ಟೆಕ್ 82 ಪೆಟ್ರೋಲ್ ಎಂಜಿನ್ ಮತ್ತು ಹೈ ಎಂಡ್ ಮಾದರಿಯಲ್ಲಿ ಟರ್ಬೊ ಚಾರ್ಜ್ ವೈಶಿಷ್ಟ್ಯತೆಯ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದೆ.
ಆರಂಭಿಕ ವೆರಿಯೆಂಟ್ನಲ್ಲಿ ಕಂಪನಿಯು 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಆಯ್ಕೆ ನೀಡಿದ್ದರೆ ಹೈ ಎಂಡ್ ಮಾದರಿಯಲ್ಲಿ 6-ಸ್ಪೀಡ್ ಗೇರ್ಬಾಕ್ಸ್ ಜೋಡಿಸಿದ್ದು, ಹೊಸ ಕಾರಿನಲ್ಲಿ ಸದ್ಯಕ್ಕೆ ಮ್ಯಾನುವಲ್ ಆಯ್ಕೆ ಮಾತ್ರ ನೀಡುತ್ತಿರುವ ಮುಂಬರುವ ದಿನಗಳಲ್ಲಿ ಆಟೋಮ್ಯಾಟಿಕ್ ಆವೃತ್ತಿ ಪರಿಚಯಿಸುವುದಾಗಿ ಹೇಳಿಕೊಂಡಿದೆ.
5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಆಯ್ಕೆ ಹೊಂದಿರುವ ಆರಂಭಿಕ ಮಾದರಿಯು 82 ಬಿಎಚ್ಪಿ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದರೆ 6-ಸ್ಪೀಡ್ ಗೇರ್ಬಾಕ್ಸ್ ಆಯ್ಕೆ ಹೊಂದಿರುವ ಟರ್ಬೊ ಪೆಟ್ರೋಲ್ ಆವೃತ್ತಿಯು 110 ಬಿಎಚ್ಪಿ, 190 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.
ಲೈವ್ ವೆರಿಯೆಂಟ್ನಲ್ಲಿ 1.2-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಎಂಜಿನ್ ಮಾತ್ರ ಆಯ್ಕೆ ಲಭ್ಯವಿದ್ದರೆ ಫೀಲ್ ವೆರಿಯೆಂಟ್ನಲ್ಲಿ ನ್ಯಾಚುರಲಿ ಆಸ್ಪರೆಟೆಡ್ ಮತ್ತು ಟರ್ಬೊ ಪೆಟ್ರೋಲ್ ಆಯ್ಕೆ ಲಭ್ಯವಿದೆ. ಹಾಗೆಯೇ ಹೊಸ ಮೈಕ್ರೊ ಎಸ್ಯುವಿಯು ಪ್ರತಿಸ್ಪರ್ಧಿ ಕಾರು ಮಾದರಿಗಿಂತಲೂ ಸಾಕಷ್ಟು ಆಕರ್ಷಕವಾಗಿದ್ದು, ದೊಡ್ಡದಾದ ಗ್ರಿಲ್ನೊಂದಿಗೆ ಕ್ರೋಮ್ ಫಿನ್ಸಿಂಗ್ ಹೊಂದಿರುವ ಸಿಟ್ರನ್ ಲೊಗೊ, ವಿಭಜಿತವಾಗಿರುವ ಹೆಡ್ಲ್ಯಾಂಪ್, ಡಿಆರ್ಎಲ್, ಲೊಗೊಗೆ ಹೊಂದಾಣಿಕೆಯಾಗುವ ಎಕ್ಸ್ ಶೇಫ್ ಡಿಸೈನ್ನೊಂದಿಗೆ ಗಮನಸೆಳೆಯುತ್ತದೆ.
ಎರಡು ಬದಿಯಲ್ಲೂ ಸ್ಕಫ್ ಪ್ಲೇಟ್, ಏರ್ ಪ್ಯಾಕೇಟ್ ಡಿಸೈನ್, ಅಲಾಯ್ ವ್ಹೀಲ್, ರೂಫ್ ರೈಲ್ಸ್, ಡ್ಯುಯಲ್ ಟೋನ್ ರೂಫ್, ಸ್ಪ್ಲಿಟ್ ಟೈಲ್ ಲ್ಯಾಂಪ್ ಮತ್ತು 180 ಗ್ರೌಂಡ್ ಕಿಯರೆನ್ಸ್ ಆಕರ್ಷಕವಾಗಿದೆ. ಸಿಟ್ರನ್ ಕಂಪನಿಯು ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಬಿಡಿಭಾಗಗಗಳಿಂತಲೂ ಹೆಚ್ಚು ಆಕರ್ಷವಾಗಿರುವ ಮತ್ತು ಚಾಲನೆಗೆ ಪೂರಕವಾದ ಆಕ್ಸೆಸರಿಸ್ ಪ್ಯಾಕೇಜ್ ಸಹ ಪರಿಚಯಿಸಲಿದ್ದು, ಹೊಸ ಆಕ್ಸೆಸರಿಸ್ ಪ್ಯಾಕೇಜ್ನಲ್ಲಿ ಸುಮಾರು 78 ಆಕ್ಸೆಸರಿಸ್ಗಳನ್ನು ಒಳಗೊಂಡಿರಲಿದೆ.
ಹೊಸ ಕಾರಿನ ಕ್ಯಾಬಿನ್ ವೈಶಿಷ್ಟ್ಯತೆಯು ಸಹ ಆಕರ್ಷಕವಾಗಿದ್ದು, ಹೊಸ ಕಾರಿನಲ್ಲಿ 10.25-ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನ್ಮೆಂಟ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಕ್ವಿಕ್ ಚಾರ್ಜಿಂಗ್ ಯುಎಸ್ಬಿ ಸಾಕೆಟ್, ಸ್ಟ್ರೀರಿಂಗ್ ಮೌಟೆಂಡ್ ಕಂಟ್ರೋಲ್, ಕನೆಕ್ಟ್ ಕಾರ್ ಟೆಕ್ನಾಲಜಿ, ಕ್ರೂಸ್ ಕಂಟ್ರೊಲ್, 315 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯವಿದೆ.
ಸಿ3 ಮಾದರಿಯ ಮತ್ತೊಂದು ವಿಶೇಷವೆಂದರೆ ಕಂಪನಿಯು ಬಜೆಟ್ ಕಾರಿನಲ್ಲೂ ವೈರ್ಲೆಸ್ ಆ್ಯಪಲ್ ಕಾರ್ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸೌಲಭ್ಯವನ್ನು ನೀಡುತ್ತಿದ್ದು, ಎಲ್ಇಡಿ ಡಿಆರ್ಎಲ್, ವೈರ್ಲೆಸ್ ಸ್ಮಾರ್ಟ್ಫೋನ್ ಸಂಪರ್ಕ, ಫೋಲ್ಡ್-ಫ್ಲಾಟ್ ಹಿಂದಿನ ಸೀಟ್, ಒನ್-ಟಚ್ ಡೌನ್ ವಿಂಡೋಸ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿದೆ.
ಇದಲ್ಲದೆ ಹೊಸ ಕಾರಿನಲ್ಲಿ ಹಲವಾರು ಸೆಗ್ಮೆಂಟ್ ಫಸ್ಟ್ ಫೀಚರ್ಸ್ಗಳನ್ನು ನೀಡಲಾಗಿದ್ದು, ಹೊಸ ಕಾರು ಅತ್ಯುತ್ತಮ ಕ್ಯಾಬಿನ್ ಸ್ಥಳಾವಕಾಶದೊಂದಿಗೆ ಹಿಂಬದಿಯ ಪ್ರಯಾಣಿಕರಿಗೆ 653 ಎಂಎಂ ಲೆಗ್ರೂಂನೊಂದಿಗೆ 2 ಲೀಟರ್ ಸಾಮರ್ಥ್ಯದ ಡೋರ್ ಪ್ಯಾಕೇಟ್, ಸ್ಮಾರ್ಟ್ಫೋನ್ ಹೋಲ್ಡರ್ ಮತ್ತು ಸೆಂಟರ್ ಕನ್ಸೊಲ್ ಹೊಂದಿದೆ.
ಸಿ3 ಕಾರಿನ ಸ್ಪೋರ್ಟಿ ಲುಕ್ ಹೆಚ್ಚಿಸಲು ಡ್ಯುಯಲ್ ಆಕ್ಸೆಂಟ್ ನೀಡುತ್ತಿರುವುದು ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದ್ದು, ಹೊಸ ಕಾರು ಒಟ್ಟು ಆರು ಸಿಂಗಲ್ ಟೋನ್ ಮತ್ತು ನಾಲ್ಕು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದಿಲಿದೆ.
ಇನ್ನು ಹೊಸ ಕಾರಿನಲ್ಲಿ ಹಲವಾರು ಹೊಸ ಸುರಕ್ಷತಾ ವೈಶಿಷ್ಟ್ಯತೆಗಳನ್ನು ನೀಡಲಾಗಿದ್ದು, ಚಾಲಕ ಮತ್ತು ಪ್ರಯಾಣಿಕರ ಏರ್ಬ್ಯಾಗ್ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಹಿಂದಿನ ಬಾಗಿಲುಗಳಲ್ಲಿ ಚೈಲ್ಡ್ ಲಾಕ್, ಎಂಜಿನ್ ಇಮೊಬಿಲೈಜರ್ ಮತ್ತು ಸ್ಪೀಡ್-ಸೆನ್ಸಿಟಿವ್ ಡೋರ್ ಲಾಕ್ ಸೌಲಭ್ಯಗಳಿವೆ.
ಸಿ3 ಮಾದರಿಯೊಂದಿಗೆ ಹೆಚ್ಚಿನ ಬೇಡಿಕೆಯ ನೀರಿಕ್ಷೆಯಲ್ಲಿರುವ ಕಂಪನಿಯು ಹೊಸ ಕಾರನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಬೆಲೆ ವಿಚಾರವಾಗಿ ಟಾಟಾ ಪಂಚ್ ಮತ್ತು ಮಾರುತಿ ಸುಜುಕಿ ಇಗ್ನಿಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ.