ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ

ಸಿಟ್ರನ್ ಇಂಡಿಯಾ ಕಂಪನಿಯು ತನ್ನ ಎರಡನೇ ಕಾರು ಮಾದರಿಯಾದ ಸಿ3 ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಇದೇ ತಿಂಗಳು 20ರಂದು ಬಿಡುಗಡೆ ಮಾಡುತ್ತಿದ್ದು, ಬಿಡುಗಡೆಗೂ ಹೊಸ ಕಾರಿನ ಬೆಲೆ ಮಾಹಿತಿಯ ಕೈಪಿಡಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ

ಹೊಸ ಸಿ3 ಕಾರು ಮಾದರಿಗಾಗಿ ಸಿಟ್ರನ್ ಕಂಪನಿಯು ರೂ.21 ಸಾವಿರ ಮುಂಗಡದೊಂದಿಗೆ ಬುಕಿಂಗ್ ಆರಂಭಿಸಿದ್ದು, ಹೊಸ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಅತಿ ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದೆ. ಹೊಸ ಕಾರಿನ ಬೆಲೆ ಕುರಿತಾಗಿ ಕಂಪನಿಯು ಇನ್ನು ಯಾವುದೇ ಮಾಹಿತಿ ಹಂಚಿಕೊಂಡಿಲ್ಲವಾದರೂ ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಹೊಸ ಕಾರು ಸಬ್ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಬಹುದಾಗಿದೆ.

ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ

ಮಾಹಿತಿಗಳ ಪ್ರಕಾರ, ಹೊಸ ಕಾರು ಪ್ರಮುಖ ಎರಡು ರೂಪಾಂತರಗಳಲ್ಲಿ ಆರು ವಿವಿಧ ಮಾದರಿಗಳನ್ನು ಒಳಗೊಂಡಿದ್ದು, ಆರಂಭಿಕ ಮಾದರಿಯ ಬೆಲೆಯು ಎಕ್ಸ್‌ಶೋರಂ ಪ್ರಕಾರ ರೂ. 6.25 ಲಕ್ಷದಿಂದ ಟಾಪ್ ಎಂಡ್ ಮಾದರಿಯ ಬೆಲೆಯು ರೂ. 8.50 ಲಕ್ಷ ಬೆಲೆ ಹೊಂದಿರಲಿದೆ ಎನ್ನಲಾಗಿದೆ.

ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ

ಆದರೆ ಅಧಿಕೃತ ಮಾಹಿತಿಯು ಜುಲೈ 20ರಂದು ಲಭ್ಯವಾಗಲಿದ್ದು, ಸೋರಿಕೆಯಾಗಿರುವ ಬೆಲೆ ಮಾಹಿತಿಯಂತೆ ಕಾರು ಬಿಡುಗಡೆಯಾದರೆ ಅದು ಸಬ್ ಕಂಪ್ಯಾಕ್ಟ್ ಮಾತ್ರ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಗಳಿಗೂ ಉತ್ತಮ ಪೈಪೋಟಿಯಾಗಲಿದೆ.

ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ

ಸಿ3 ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೂ ಮುನ್ನ ಸಿಟ್ರನ್ ಕಂಪನಿಯು ವಿವಿಧ ಹಂತದ ಮಾರುಕಟ್ಟೆ ಅಧ್ಯಯನದೊಂದಿಗೆ ಹೊಸ ಮಾದರಿಯನ್ನು ಪರಿಚಯಿಸುತ್ತಿದ್ದು, ಹೊಸ ಕಾರನ್ನು ಕಂಪನಿಯು ಶೇ.90 ರಷ್ಟು ಸ್ಥಳೀಕರಣದೊಂದಿಗೆ ನಿರ್ಮಾಣಗೊಳಿಸಿದೆ.

ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ

ಹೊಸ ಸಿ3 ಕಂಪ್ಯಾಕ್ಟ್ ಎಸ್‌ಯುವಿಯು ಪ್ರತಿಸ್ಪರ್ಧಿ ಕಾರು ಮಾದರಿಗಿಂತಲೂ ಸಾಕಷ್ಟು ಆಕರ್ಷಕವಾಗಿದ್ದು, ದೊಡ್ಡದಾದ ಗ್ರಿಲ್‌ನೊಂದಿಗೆ ಕ್ರೋಮ್ ಫಿನ್ಸಿಂಗ್ ಹೊಂದಿರುವ ಸಿಟ್ರನ್ ಲೊಗೊ, ವಿಭಜಿತವಾಗಿರುವ ಹೆಡ್‌ಲ್ಯಾಂಪ್, ಡಿಆರ್‌ಎಲ್, ಲೊಗೊಗೆ ಹೊಂದಾಣಿಕೆಯಾಗುವ ಎಕ್ಸ್ ಶೇಫ್ ಡಿಸೈನ್‌ನೊಂದಿಗೆ ಗಮನಸೆಳೆಯುತ್ತದೆ.

ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ

ಕಾರಿನ ಎರಡುಬದಿಯಲ್ಲೂ ಸ್ಕಫ್ ಪ್ಲೇಟ್, ಏರ್ ಪ್ಯಾಕೇಟ್ ಡಿಸೈನ್, ಅಲಾಯ್ ವ್ಹೀಲ್, ರೂಫ್ ರೈಲ್ಸ್, ಡ್ಯುಯಲ್ ಟೋನ್ ರೂಫ್, ಸ್ಪ್ಲಿಟ್ ಟೈಲ್ ಲ್ಯಾಂಪ್ ಮತ್ತು 180 ಗ್ರೌಂಡ್ ಕಿಯರೆನ್ಸ್ ಆಕರ್ಷಕವಾಗಿದೆ. ಸಿಟ್ರನ್ ಕಂಪನಿಯು ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಬಿಡಿಭಾಗಗಗಳಿಂತಲೂ ಹೆಚ್ಚು ಆಕರ್ಷವಾಗಿರುವ ಮತ್ತು ಚಾಲನೆಗೆ ಪೂರಕವಾದ ಆಕ್ಸೆಸರಿಸ್ ಪ್ಯಾಕೇಜ್ ಸಹ ಪರಿಚಯಿಸಲಿದ್ದು, ಹೊಸ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಸುಮಾರು 78 ಆಕ್ಸೆಸರಿಸ್‌ಗಳನ್ನು ಒಳಗೊಂಡಿರಲಿದೆ.

ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ

ಹೊಸ ಕಾರಿನ ಕ್ಯಾಬಿನ್ ವೈಶಿಷ್ಟ್ಯತೆಯು ಸಹ ಆಕರ್ಷಕವಾಗಿದ್ದು, ಹೊಸ ಕಾರಿನಲ್ಲಿ 10.25-ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನ್‍‌ಮೆಂಟ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಕ್ವಿಕ್ ಚಾರ್ಜಿಂಗ್ ಯುಎಸ್‌ಬಿ ಸಾಕೆಟ್, ಸ್ಟ್ರೀರಿಂಗ್ ಮೌಟೆಂಡ್ ಕಂಟ್ರೋಲ್, ಕನೆಕ್ಟ್ ಕಾರ್ ಟೆಕ್ನಾಲಜಿ, ಕ್ರೂಸ್ ಕಂಟ್ರೊಲ್, 315 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯವಿದೆ.

ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ

ಸಿ3 ಮಾದರಿಯ ಮತ್ತೊಂದು ವಿಶೇಷವೆಂದರೆ ಕಂಪನಿಯು ಬಜೆಟ್ ಕಾರಿನಲ್ಲೂ ವೈರ್‌ಲೆಸ್ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸೌಲಭ್ಯವನ್ನು ನೀಡುತ್ತಿದ್ದು, ಎಲ್ಇಡಿ ಡಿಆರ್‌ಎಲ್‌, ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ, ಫೋಲ್ಡ್-ಫ್ಲಾಟ್ ಹಿಂದಿನ ಸೀಟ್, ಒನ್-ಟಚ್ ಡೌನ್ ವಿಂಡೋಸ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿದೆ.

ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ

ಸಬ್ ಫೋರ್ ಮೀಟರ್ ವೈಶಿಷ್ಟ್ಯತೆಯೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಕಾರು ಹಲವಾರು ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ಹೊಂದಿದ್ದು, ಹೊಸ ಕಾರು ಅತ್ಯುತ್ತಮ ಕ್ಯಾಬಿನ್ ಸ್ಥಳಾವಕಾಶದೊಂದಿಗೆ ಹಿಂಬದಿಯ ಪ್ರಯಾಣಿಕರಿಗೆ 653 ಎಂಎಂ ಲೆಗ್‌ರೂಂನೊಂದಿಗೆ 2 ಲೀಟರ್ ಸಾಮರ್ಥ್ಯದ ಡೋರ್ ಪ್ಯಾಕೇಟ್, ಸ್ಮಾರ್ಟ್‌ಫೋನ್ ಹೋಲ್ಡರ್ ಮತ್ತು ಸೆಂಟರ್ ಕನ್ಸೊಲ್ ಹೊಂದಿದೆ.

ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ

ಸಿ3 ಕಾರಿನ ಸ್ಪೋರ್ಟಿ ಲುಕ್ ಹೆಚ್ಚಿಸಲು ಡ್ಯುಯಲ್ ಆಕ್ಸೆಂಟ್ ನೀಡುತ್ತಿರುವುದು ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದ್ದು, ಹೊಸ ಕಾರು ಒಟ್ಟು ಆರು ಸಿಂಗಲ್ ಟೋನ್ ಮತ್ತು ನಾಲ್ಕು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದಿಲಿದೆ.

ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ

ಹೊಸ ಸಿ3 ಮಾದರಿಯಲ್ಲಿ ಸಿಟ್ರನ್ ಕಂಪನಿಯು ಎರಡು ಎಂಜಿನ್ ಆಯ್ಕೆಗಳನ್ನು ನೀಡಿದ್ದು, ಮೂಲ ರೂಪಾಂತರವು 1.2-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಮೂರು-ಸಿಲಿಂಡರ್ ಪ್ಯೂರ್‌ಟೆಕ್ 82 ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಬೆಸ್ ಮಾದರಿಯು 80.8 ಬಿಎಚ್‌ಪಿ ಪವರ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಗರಿಷ್ಠ 115 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಬೆಸ್ ವೆರಿಯೆಂಟ್‌ನಲ್ಲಿ ಕಂಪನಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆ ಮಾತ್ರ ನೀಡಲಾಗಿದೆ.

ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ

ಹೊಸ ಕಾರಿನಲ್ಲಿ ಮತ್ತೊಂದು ಶಕ್ತಿಶಾಲಿ ಮಾದರಿಯೆಂದರೆ ಅದು ಟರ್ಬೊ ಚಾರ್ಜ್ ವೈಶಿಷ್ಟ್ಯತೆ 1.2 ಲೀಟರ್ ಎಂಜಿನ್. ಇದನ್ನು ತಾಂತ್ರಿಕವಾಗಿ ಪ್ಯೂರ್‌ಟೆಕ್ 110 ಎಂಜಿನ್ ಎಂದು ಹೆಸರಿಸಲಾಗಿದ್ದು, ಇದು 108.4 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಈ ಎಂಜಿನ್‌ನಲ್ಲಿ ಕಂಪನಿಯು 6-ಸ್ಪೀಡ್ ಗೇರ್‌ಬಾಕ್ಸ್‌ ಜೋಡಿಸಿದೆ.

ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ

ಸಿಟ್ರನ್ ಕಂಪನಿಯು ಸದ್ಯಕ್ಕೆ ಹೊಸ ಕಾರಿನಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಮ್ಯಾನುವಲ್ ಮಾದರಿಯನ್ನು ಮಾತ್ರ ಪರಿಚಯಿಸುತ್ತಿದ್ದು, ಗ್ರಾಹಕರ ಬೇಡಿಕೆ ಆಧರಿಸಿ ಮುಂಬರುವ ದಿನಗಳಲ್ಲಿ ಆಟೋಮ್ಯಾಟಿಕ್ ಆವೃತ್ತಿಗಳು ಸಹ ಮಾರುಕಟ್ಟೆ ಪ್ರವೇಶಿಸಬಹುದಾಗಿದೆ.

ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ

ಇನ್ನು ಹೊಸ ಕಾರಿನಲ್ಲಿ ಹಲವಾರು ಸುರಕ್ಷತಾ ವೈಶಿಷ್ಟ್ಯತೆಗಳನ್ನು ನೀಡಲಾಗಿದ್ದು, ಚಾಲಕ ಮತ್ತು ಪ್ರಯಾಣಿಕರ ಏರ್‌ಬ್ಯಾಗ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಹಿಂದಿನ ಬಾಗಿಲುಗಳಲ್ಲಿ ಚೈಲ್ಡ್ ಲಾಕ್, ಎಂಜಿನ್ ಇಮೊಬಿಲೈಜರ್ ಮತ್ತು ಸ್ಪೀಡ್-ಸೆನ್ಸಿಟಿವ್ ಡೋರ್ ಲಾಕ್ ಸೌಲಭ್ಯಗಳಿವೆ.

ಬಿಡುಗಡೆಗೂ ಮುನ್ನ ಸಿಟ್ರನ್ ಸಿ3 ಕಾರಿನ ಬೆಲೆ ಮಾಹಿತಿ ಸೋರಿಕೆ

ಸಿ3 ಮಾದರಿಯೊಂದಿಗೆ ಹೆಚ್ಚಿನ ಬೇಡಿಕೆಯ ನೀರಿಕ್ಷೆಯಲ್ಲಿರುವ ಕಂಪನಿಯು ಹೊಸ ಕಾರನ್ನು ಸ್ಪರ್ಧಾತ್ಮಕ ಬೆಲೆಗಳಿಗೆ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಮಾದರಿಯ ಯಶಸ್ವಿ ಆಧರಿಸಿ ಕಂಪನಿಯು ಮುಂಬರುವ ಹೊಸ ಮಾದರಿಗಳ ಕುರಿತು ನಿರ್ಧರಿಸಲಿದೆ.

More from DriveSpark

Article Published On: Monday, July 4, 2022, 19:41 [IST]
English summary
Citroen c3 price details leaked ahead of india launch details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+