ದುಬಾರಿ ಬೆಲೆಯ ಐಷಾರಾಮಿ ರೇಂಜ್ ರೋವರ್ ಕಾರು ಖರೀದಿಸಿದ ಏಷ್ಯಾದ ಕುಬೇರ ಗೌತಮ್ ಅದಾನಿ
ಕಾಲೇಜು ಅರ್ಧಕ್ಕೆ ನಿಲ್ಲಿಸಿ ಬಳಿಕ ವಜ್ರದ ವ್ಯಾಪಾರ ಆರಂಭಿಸಿದ್ದ ಈ ವ್ಯಕ್ತಿ ಮುಂದೊಂದು ದಿನ ವಿಶ್ವದ ಎರಡನೇ ಶ್ರೀಮಂತನಾಗುತ್ತಾನೆ ಎಂದು ಬಹುಶಃ ಯಾರೂ ನಿರೀಕ್ಷಿಸಿರಲಿಕ್ಕಿಲ್ಲ. ಕಲ್ಲಿದ್ದಲು ಉದ್ಯಮದಲ್ಲಿ ಅದಾನಿ ಅಕ್ಷರಶಃ ಉದ್ಯಮ ಜಗತ್ತಿನಲ್ಲಿ ಮ್ಯಾಜಿಕನ್ನೇ ಸೃಷ್ಟಿಸಿದರು.

ಪರಿಣಾಮ ಬಿಲ್ ಗೇಟ್ಸ್, ವಾರೆನ್ ಬಫೆಟ್, ಬರ್ನಾರ್ಡ್ ಅರ್ನಾಲ್ಟ್ ಮೊದಲಾದ ದಿಗ್ಗಜರನ್ನೇ ಹಿಂದಿಕ್ಕಿ ವಿಶ್ವದ ಎರಡನೇ ಅತೀ ಶ್ರೀಮಂತ ವ್ಯಕ್ತಿಯ ಸ್ಥಾನವನ್ನು ಗಳಿಸಿದ್ದಾರೆ. ಗೌತಮ್ ಅದಾನಿ ಅವರು ಕಳೆದ ಕೆಲವು ವರ್ಷಗಳಿಂದ ತಮ್ಮ ಕಲ್ಲಿದ್ದಲು-ಬಂದರು ಕೇಂದ್ರಿತ ಉದ್ಯಮದ ವಿಸ್ತರಣೆಯಲ್ಲಿ ತೊಡಗಿದ್ದಾರೆ. ಇದರಿಂದ ಅದಾನಿ ಸಮೂಹವಿಂದು ಡೇಟಾ ಕೇಂದ್ರಗಳಿಂದ ಸಿಮೆಂಟ್, ಮಾಧ್ಯಮ ಮತ್ತು ಅಲ್ಯೂಮೀನಿಯಂ ಕ್ಷೇತ್ರಗಳಿಗೂ ವಿಸ್ತರಿಸಿದೆ. 5ಜಿ ಹರಾಜಿನಲ್ಲಿ ತರಂಗಾಂತರಗಳನ್ನು ಖರೀದಿಸುವ ಸೂಚನೆಗಳನ್ನು ನೀಡಿದೆ.

ಕಳೆದ ಐದು ವರ್ಷಗಳಲ್ಲಿ ಗೌತಮ್ ಅದಾನಿ ಎಷ್ಟು ಸಾಧ್ಯವೋ ಅಷ್ಟು ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದಾರೆ. ಅದಾನಿ ಗ್ರೂಪ್ ಪ್ರಸ್ತುತ ಭಾರತದ ಅತೀದೊಡ್ಡ ಖಾಸಗಿ ವಲಯದ ಬಂದರು ಹಾಗೂ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಯಾಗಿದೆ. ಅದಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

ಅಂಬಾನಿ ಫ್ಯಾಮಿಲಿಯ ಕಾರುಗಳು ಆಗಾಗ ಸುದ್ದಿಯಾಗುತ್ತಿರುತ್ತದೆ. ಆದರೆ ಗೌತಮ್ ಅದಾನಿಯವರ ಕಾರುಗಳ ಸುದ್ದಿ ಅಪರೂಪ. ಗೌತಮ್ ಅದಾನಿಯವರು ಕೂಡ ರೋಲ್ಸ್ ರಾಯ್ಸ್, ಫೆರಾರಿ, ಬಿಎಂಡಬ್ಲ್ಯು ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಇತ್ತೀಚೆಗೆ ಗೌತಮ್ ಅದಾನಿಯವರು ಹೊಸ ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಗೌತಮ್ ಅದಾನಿ ಅವರು ರೇಂಜ್ ರೋವರ್ ಎಸ್‍ಯುವಿಯನ್ನು ಖರೀದಿಸಿದ್ದಾರೆ ಎಂದು 'hottestcarsin.india' ಚಿತ್ರಗಳೊಂದಿಗೆ ಮಾಹಿತಿ ಬಹಿರಂಗಪಡಿಸಿದ್ದಾರೆ.

ಈ ಪೋಸ್ಟ್ ಅದಾನಿ ಹೊಸದಾಗಿ ಖರೀದಿಸಿದ ರೇಂಜ್ ರೋವರ್‌ನ ಸೂಕ್ಷ್ಮ ಮತ್ತು ಸಾಮಾನ್ಯ ಬಿಳಿ ಛಾಯೆಯ ಕೆಲವು ಚಿತ್ರಗಳನ್ನು ಒಳಗೊಂಡಿದೆ. ಗೌತಮ್ ಅದಾನಿ ಖರೀದಿಸಿದ ರೇಂಜ್ ರೋವರ್‌ನ ರೂಪಾಂತರವು ಲಾಂಗ್ ವ್ಹೀಲ್ ಬೇಸ್ ಆಗಿದೆ, ಇದು , ಏಳು-ಆಸನಗಳ ಆಟೋಬಯೋಗ್ರಫಿ 3.0 ಡೀಸೆಲ್ ಆವೃತ್ತಿಯಾಗಿದೆ ಎಂದು ಹೇಳಲಾಗುತ್ತಿದೆ.

ಇದು ಭಾರತದಲ್ಲಿ ಲಭ್ಯವಿರುವ ರೇಂಜ್ ರೋವರ್‌ನ ಮಿಡ್-ಸ್ಪೆಕ್ ರೂಪಾಂತರಗಳಲ್ಲಿ ಒಂದಾಗಿದೆ. 2022ರ ರೇಂಜ್ ರೋವರ್ ಅನ್ನು ಹೊಸ ಎಂಎಲ್ಎ-ಫ್ಲೆಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹೊಸ ಮಾದರಿಯು ಅದರ ಹೆಚ್ಚಿನ ಶೈಲಿಯನ್ನು ಉಳಿಸಿಕೊಂಡಿದೆ. ಆದರೆ ಕೆಲವು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿದೆ,

ಇನ್ನು ಈ ಹೊಸ ರೇಂಜ್ ರೋವರ್ ಎಸ್‌ಯುವಿಯು ಪರಿಚಿತವಾಗಿ ಕಾಣುತ್ತದೆ ಮತ್ತು ವಿಭಿನ್ನ ಸಿಲೂಯೆಟ್ ಅನ್ನು ತಕ್ಷಣವೇ ಗುರುತಿಸಬಹುದಾಗಿದೆ. ಈ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿಯ ಹೊಸ ಗ್ರಿಲ್ ಮತ್ತು ಹೆಡ್‌ಲ್ಯಾಂಪ್‌ನೊಂದಿಗೆ ಇದು ಹೆಚ್ಚು ಹೊಳಪು ತೋರುತ್ತಿದೆ.

ಈ ರೇಂಜ್ ರೋವರ್ ಎಸ್‍ಯುವಿಯಲ್ಲಿ ಸಮತಟ್ಟಾದ ಮೇಲ್ಮೈಗಳು ಕೇವಲ 0.30 ಸಿಡಿಯ ಪ್ರಭಾವಶಾಲಿ ಡ್ರ್ಯಾಗ್ ಅಂಶವವನ್ನು ಒಳಗೊಂಡಿದೆ. ಈ ಮಾದರಿಯು 23-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಆದರೆ ಇದರ ಸಣ್ಣ ಓವರ್‌ಹ್ಯಾಂಗ್‌ಗಳು ಬೃಹತ್ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದನ್ನು ಖಚಿತಪಡಿಸುತ್ತದೆ.

ಈ ಎಸ್‍ಯುವಿಯ ಟರ್ನ್ ಇಂಡಿಕೇಟರ್‌ಗಳನ್ನು ಸಂಯೋಜಿಸುವ ಟೈಲ್‌ಗೇಟ್‌ನಲ್ಲಿನ ಬ್ಲ್ಯಾಕ್ ಅಸ್ಸೆಂಟ್ ಗಳನ್ನು ಸಂಪರ್ಕಗೊಂಡಿರುವ ಹಿಂಭಾಗದ ಸ್ಪೋರ್ಟ್ಸ್ ಬ್ಲ್ಯಾಕ್ಡ್-ಔಟ್ ಟೈಲ್‌ಲೈಟ್‌ಗಳಾಗಿವೆ. ಈ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ 13.7-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಇನ್ನು ಸೆಂಟರ್ ಕನ್ಸೋಲ್ ದೊಡ್ಡ 13.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಹ್ಯಾಪ್ಟಿಕ್ ಪ್ರತಿಕ್ರಿಯೆಯೊಂದಿಗೆ ಹೊಂದಿದೆ. ಇದು ಗೊಂದಲ-ಮುಕ್ತ ವಿನ್ಯಾಸವಾಗಿದೆ ಮತ್ತು ವಿನ್ಯಾಸದ ವಿಷಯದಲ್ಲಿ ಬಹಳ ಪರಿಚಿತವಾಗಿದೆ. ಈ ಎಸ್‍ಯುವಿಯ ಹಿಂಭಾಗದಲ್ಲಿ ಪ್ರಯಾಣಿಕರು 11.4-ಇಂಚಿನ ಮನರಂಜನಾ ಡಿಸ್ ಪ್ಲೇಯನ್ನು ಪಡೆಯುತ್ತಾರೆ.

ಇದರ ಮುಂಭಾಗದ ಸೀಟ್‌ಬ್ಯಾಕ್‌ಗಳಿಗೆ ಜೋಡಿಸಲಾಗಿದೆ. ಇನ್ನು ಎಕ್ಸಿಕ್ಯುಟಿವ್ ಕ್ಲಾಸ್ ಹಿಂಬದಿಯ ಸೀಟುಗಳೊಂದಿಗೆ, ಸೆಂಟರ್ ಆರ್ಮ್‌ರೆಸ್ಟ್‌ನಲ್ಲಿ 8.0-ಇಂಚಿನ ಟಚ್‌ಸ್ಕ್ರೀನ್ ಕೂಡ ಇದೆ, ಇದರೊಂದಿಗೆ ನ್ಯೂ ಜನರೇಷನ್ ರೇಂಜ್ ರೋವರ್ 1600-ವ್ಯಾಟ್, 35-ಸ್ಪೀಕರ್ ಮೆರಿಡಿಯನ್ ಸಿಗ್ನೇಚರ್ ಸೌಂಡ್ ಸಿಸ್ಟಂ ಅನ್ನು ಸಹ ಪಡೆಯುತ್ತದೆ,

ಆದರೆ ಆಟೋಬಯೋಗ್ರಫಿ ಟ್ರಿಮ್ ಹೆಡ್‌ರೆಸ್ಟ್‌ನಲ್ಲಿ ಎಂಬೆಡ್ ಮಾಡಲಾದ ವಿಶ್ವದ ಮೊದಲ ಆಕ್ಟಿವ್ ಸ್ಪೀಕರ್‌ಗಳನ್ನು ಹೊಂದಿದೆ. ಈ ಹೊಸ ರೇಂಜ್ ರೋವರ್ ಕ್ಯಾಬಿನ್‌ನಲ್ಲಿ ಹೆಚ್ಚು ಸಮರ್ಥನೀಯ ಐಷಾರಾಮಿ ವಸ್ತುಗಳನ್ನು ಬಳಸುತ್ತದೆ.ಹೊಸ ರೇಂಜ್ ರೋವರ್ ಎಸ್‍ಯುವಿಯು ಹೊಸ ಐದು-ಲಿಂಕ್ ಹಿಂಬದಿಯ ಆಕ್ಸಲ್‌ನೊಂದಿಗೆ ಅಡಾಪ್ಟಿವ್ ಏರ್ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇದು ನ್ಯಾವಿಗೇಷನ್ ಸಿಸ್ಟಂ ಅನ್ನು ಮುಂದಿನ ರಸ್ತೆಗೆ ಅನುಗುಣವಾಗಿ ಹೊಂದಿಸಲು ಬಳಸುತ್ತದೆ.

ಈ ಯುನಿಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ರೈಡ್ ಗುಣಮಟ್ಟವನ್ನು ಮತ್ತಷ್ಟು ಸುಗಮಗೊಳಿಸಲು ಸ್ಟೀರಿಂಗ್ ಅಸಿಸ್ಟ್ ಅನ್ನು ಸಹ ನಿರ್ವಹಿಸುತ್ತದೆ. ಈ ಎಸ್‍ಯುವಿಯ ನಿಯಂತ್ರಿತ ಆ್ಯಂಟಿ-ರೋಲ್ ಬಾರ್‌ಗಳನ್ನು ಸಹ ಪಡೆಯುತ್ತದೆ, ಅದು ಈಗ ವೇಗವಾದ ರೆಸ್ಪಾನ್ಸ್ ಹೊಂದಿದೆ. ಈ ಐದನೇ ತಲೆಮಾರಿನ ರೇಂಜ್ ರೋವರ್ ಆಲ್-ವ್ಹೀಲ್ ಸ್ಟೀರಿಂಗ್ ಅನ್ನು ಹೊಂದಿದೆ,

ಇದು ಹಿಂದಿನ ಚಕ್ರಗಳನ್ನು 7.3 ಡಿಗ್ರಿಗಳವರೆಗೆ ಎಲೆಕ್ಟ್ರಿಕಲ್ ಆಗಿ ಚಲಿಸುತ್ತದೆ. ವಿಶೇಷವಾಗಿ ಬಿಗಿಯಾದ ಸ್ಥಳಗಳಲ್ಲಿ ಮತ್ತು ಟರ್ನಿಂಗ್ ವೇಳೆ 11 ಮೀಟರ್‌ಗಿಂತಲೂ ಕಡಿಮೆಗೊಳಿಸುತ್ತದೆ. ಹೊಸ ರೇಂಜ್ ರೋವರ್ ಎಸ್‍ಯುವಿಯ ನೈಟ್‌ಶಿಫ್ಟ್ ಮೋಡ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾವನ್ನು ಮತ್ತು ಆ್ಯಪ್-ಆಧಾರಿತ ಪಾರ್ಕಿಂಗ್ ವೈಶಿಷ್ಟ್ಯವನ್ನು ಸಹ ಪಡೆಯುತ್ತದೆ,

ಇದು ವಾಹನದಿಂದ ಹೊರಬರಲು ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ವಾಹನ ಫಾರ್ಕಿಂಗ್ ಮಾಡಬಹುದು, ಐದನೇ ತಲೆಮಾರಿನ ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‍ಯುವಿ ನವೀಕರಿಸಿದ ಟೆರೈನ್ ರೆಸ್ಪಾನ್ಸ್ 2 ಸಿಸ್ಟಮ್‌ನೊಂದಿಗೆ ಸೇರಿಸಿದೆ, ಆದರೆ ನೀರಿನ ವೇಡಿಂಗ್ ಸಾಮರ್ಥ್ಯವು ಈಗ 900 ಎಂಎಂ ನಲ್ಲಿ ನಿಂತಿದೆ ಮತ್ತು ಸೋನಾರ್ ತಂತ್ರಜ್ಞಾನ ಹೊಂದಿದೆ.

ಎಂಜಿನ್‌ಗಳಿಗೆ ಸಂಬಂಧಿಸಿದಂತೆ, 2022ರ ರೇಂಜ್ ರೋವರ್ ಎಸ್‍ಯುವಿಯಲ್ಲಿ 3 ಎಂಜಿನ್ ಆಯ್ಕೆಗಳಲ್ಲಿ ನೀಡಲಾಗಿದೆ. ಇದು 3.0-ಲೀಟರ್ ಪೆಟ್ರೋಲ್ ಮೈಲ್ಡ್-ಹೈಬ್ರಿಡ್, 3.0-ಲೀಟರ್ ಟರ್ಬೊ-ಡೀಸೆಲ್ ಮತ್ತು 4.4-ಲೀಟರ್ ಟ್ವಿನ್-ಟರ್ಬೊ ವಿ8 ಎಂಜಿನ್ ಗಳಾಗಿವೆ. ಇದರಲ್ಲಿ 3.0-ಲೀಟರ್ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ 394 ಬಿಹೆಚ್‍ಪಿ ಪವರ್ ಮತ್ತು 550 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಟರ್ಬೊ-ಡೀಸೆಲ್ ಎಂಜಿನ್ 346 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, ಟ್ವಿನ್-ಟರ್ಬೊ ವಿ8 ಎಂಜಿನ್ 523 ಬಿಹೆಚ್‍ಪಿ ಪವರ್ ಮತ್ತು 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.


Click it and Unblock the Notifications








