ಭಾರತದಲ್ಲಿ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ತನ್ನ ಹೊಸ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ.

ಭಾರತದಲ್ಲಿ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಇದು ಕಾರ್ಪೊರೇಟ್ ಎಡಿಷನ್ 1.2 ಲೀಟರ್ ಕಪ್ಪಾ ಪೆಟ್ರೋಲ್ ಎಂಟಿ ಮತ್ತು ಎಎಂಟಿ ರೂಪಾಂತರಗಳಾಗಿದೆ. ಈ ರೂಪಾಂತರಗಳ ಬೆಲೆಗಳು ಕ್ರಮವಾಗಿ ಎಕ್ಸ್ ಶೋರೂಂ ಪ್ರಕಾರ ರೂ.6.29 ಲಕ್ಷ ಮತ್ತು ರೂ.6.98 ಲಕ್ಷಗಳಾಗಿದೆ. ಹೊಸ ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ಕಾರ್ಪೊರೇಟ್ ಎಡಿಷನ್ ಹೊಸ ಸ್ಪೋರ್ಟಿ ಮತ್ತು ಹೈ-ಟೆಕ್ ವಿನ್ಯಾಸವನ್ನು ಒಳಗೊಂಡಿದೆ. ಇದರಿಂದ ಈ ಹೊಸ ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಹೆಚ್ಚು ಯುವ ಖರೀದಿದಾರರನ್ನು ಸೆಳೆಯಬಹುದು.

ಭಾರತದಲ್ಲಿ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ 15-ಇಂಚಿನ ಅಲಾಯ್ ವ್ಹೀಲ್ ಗಳನ್ನು ಪಡೆಯುತ್ತದೆ. ಇದು ರೂಫ್ ರೈಲ್‌ಗಳು, ಹಿಂಭಾಗದ ಕ್ರೋಮ್ ಅಲಂಕರಣ, ORVM ಗಳಲ್ಲಿ ಕಪ್ಪು ಫಿನಿಶ್ (ಇಂಟಿಗ್ರೇಟೆಡ್ LED ಟರ್ನ್ ಇಂಡಿಕೇಟರ್‌ಗಳೊಂದಿಗೆ) ಮತ್ತು ಮುಂಭಾಗದ ಗ್ರಿಲ್‌ನಲ್ಲಿ ಕಪ್ಪು ಫಿನಿಶ್ ಅನ್ನು ಸಹ ಪಡೆಯುತ್ತದೆ.

ಭಾರತದಲ್ಲಿ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಕ್ಯಾಬಿನ್‌ನಲ್ಲಿರುವ ಪ್ರಮುಖ ವೈಶಿಷ್ಟ್ಯಗಳು 6.75-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ಸ್ಮಾರ್ಟ್‌ಫೋನ್ ಮಿರರಿಂಗ್ ಮೂಲಕ ನ್ಯಾವಿಗೇಷನ್‌ನೊಂದಿಗೆ) ಮತ್ತು ORVM ಗಳಿಗೆ ಎಲೆಕ್ಟ್ರಿಕ್ ಕಂಟ್ರೋಲ್ ಗಳನ್ನು ಒಳಗೊಂಡಿದೆ. ಡ್ಯಾಶ್‌ಬೋರ್ಡ್ ಸೇರಿದಂತೆ ಕ್ಯಾಬಿನ್ ವಿನ್ಯಾಸವು ಒಂದೇ ಆಗಿರುತ್ತದೆ.

ಭಾರತದಲ್ಲಿ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಆದರೆ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಸಂಪೂರ್ಣ ಕಪ್ಪು ಆಂತರಿಕ ಥೀಮ್ ಅನ್ನು ಪಡೆಯುತ್ತದೆ, ಎಸಿ ವೆಂಟ್‌ಗಳು, ಸೀಟ್‌ಗಳು ಮತ್ತು ಗೇರ್ ಲಿವರ್‌ನ ಸುತ್ತಲೂ ಕೆಂಪು ಬಣ್ಣದ ಅಸ್ಸೆಟ್ ಗಳನ್ನು ಹೊಂದಿದೆ.

ಭಾರತದಲ್ಲಿ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಇದನ್ನು ಉಳಿದ ಶ್ರೇಣಿಯಿಂದ ಪ್ರತ್ಯೇಕಿಸಲು, ಇದು 'ಕಾರ್ಪೊರೇಟ್' ಲೋಗುವನ್ನು ಸಹ ಪಡೆಯುತ್ತದೆ. ಕ್ಯಾಬಿನ್‌ನಲ್ಲಿರುವ ಪ್ರಮುಖ ವೈಶಿಷ್ಟ್ಯಗಳು 6.75-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ಸ್ಮಾರ್ಟ್‌ಫೋನ್ ಮಿರರಿಂಗ್ ಮೂಲಕ ನ್ಯಾವಿಗೇಷನ್‌ನೊಂದಿಗೆ) ಮತ್ತು ORVM ಗಳಿಗೆ ಎಲೆಕ್ಟ್ರಿಕ್ ಕಂಟ್ರೋಲ್ ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ನಿರ್ದೇಶಕ (ಸೇಲ್ಸ್, ಮಾರ್ಕೆಟಿಂಗ್ ಮತ್ತು ಸರ್ವಿಸ್) ತರುಣ್ ಗಾರ್ಗ್ ಅವರು ಮಾತನಾಡಿ, ಹ್ಯುಂಡೈ ಭಾರತದಲ್ಲಿ ಪ್ರಗತಿಶೀಲ ಮತ್ತು ಯುವ ಹೊಸ ಯುಗದ ಗ್ರಾಹಕರಿಗಾಗಿ ಗ್ರ್ಯಾಂಡ್ ಐ10 ನಿಯೋಸ್ಅನ್ನು ಪರಿಕಲ್ಪನೆ ಮಾಡಿದೆ.

ಭಾರತದಲ್ಲಿ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಪ್ರಾರಂಭವಾದಾಗಿನಿಂದ ಟ್ರೇಲ್‌ಬ್ಲೇಜಿಂಗ್ ಮಾರಾಟವನ್ನು ಕಂಡ ನಂತರ, ಗ್ರ್ಯಾಂಡ್ ಐ10 ನಿಯೋಸ್ ನಲ್ಲಿ ಸ್ಪೋರ್ಟಿ ಮತ್ತು ಹೈಟೆಕ್ ಕೇಂದ್ರೀಕೃತ ಕಾರ್ಪೊರೇಟ್ ಆವೃತ್ತಿಯನ್ನು ಪರಿಚಯಿಸಲು ನಾವು ಸಂತೋಷಪಡುತ್ತೇವೆ ಮತ್ತು ಹೊಸ ವಯಸ್ಸಿನ ಖರೀದಿದಾರರಿಗೆ ನೀಡಲಾಗುವ ಮೌಲ್ಯವನ್ನು ಹೆಚ್ಚಿಸಲು ಮತ್ತು ಸಂತೋಷವನ್ನು ಉಂಟುಮಾಡುತ್ತದೆ.

ಭಾರತದಲ್ಲಿ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಅನನ್ಯ ಮತ್ತು ನವೀನ ಸೌಂದರ್ಯದ ವರ್ಧನೆಗಳು ಮತ್ತು ತಂತ್ರಜ್ಞಾನದೊಂದಿಗೆ, ಕಾರ್ಪೊರೇಟ್ ಆವೃತ್ತಿಯು ಸ್ಪೋರ್ಟಿ, ಫೀಚರ್ ಲೋಡ್ ಮತ್ತು ದಕ್ಷ ಹ್ಯಾಚ್‌ಬ್ಯಾಕ್‌ಗಾಗಿ ಹುಡುಕುತ್ತಿರುವ ಗ್ರಾಹಕರ ಆಕಾಂಕ್ಷೆಗಳನ್ನು ಆಕರ್ಷಿಸುತ್ತದೆ ಎಂದು ನಮಗೆ ಖಾತ್ರಿಯಿದೆ ಎಂದು ಹೇಳಿದರು.

ಭಾರತದಲ್ಲಿ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ನಲ್ಲಿ 1.2 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 82 ಬಿಹೆಚ್‍ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನಿವಲ್ ಮತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಿಸಲಾಗಿದೆ,

ಭಾರತದಲ್ಲಿ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಇನ್ನೂ ಹಿಂದಿನ ಜನರೇಷನ್ ಮಾದರಿಯನ್ನು ಮಾರಾಟದಲ್ಲಿದೆ. ಇದೀಗ ಹ್ಯುಂಡೈ ಕಂಪನಿಯು ತನ್ನ ನ್ಯೂ ಜನರೇಷನ್ ಟ್ಯೂಸಾನ್ ಎಸ್‍ಯುವಿಯನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ ಎಂದು ಹೇಳಿದೆ. ಈ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಆವೃತ್ತಿಯು ಹಲವಾರು ಹೊಸ ಅಪ್ದೇಟ್ ಗಳೊಂದಿಗೆ ಬಿಡುಗಡೆಯಾಗಲಿದೆ. ಪ್ರಸ್ತುತ ಅಂತಿಮ ಪರೀಕ್ಷೆಯ ಹಂತದಲ್ಲಿರುವ ಹ್ಯುಂಡೈ ಟ್ಯೂಸಾನ್ ಮಾದರಿಯು ಗಮನಾರ್ಹ ವಿನ್ಯಾಸ ಮತ್ತು ವೈಶಿಷ್ಟ್ಯದ ನವೀಕರಣಗಳನ್ನು ಪಡೆಯುತ್ತದೆ

ಭಾರತದಲ್ಲಿ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.25 ಲಕ್ಷದಿಂದ 35 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಎಸ್‍ಯುವಿಯನ್ನು ಸಿಕೆಡಿ (ಸಂಪೂರ್ಣವಾಗಿ ನಾಕ್ಡ್ ಡೌನ್) ಯುನಿಟ್ ಆಗಿ ಬರುತ್ತದೆ. ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಭಾರತದಲ್ಲಿ ಕಾಣಿಸಿಕೊಂಡ ಸ್ಪೈ ಚಿತ್ರಗಳು ಇತ್ತೀಚೆಗೆ ಬಹಿರಂಗವಾಗಿತ್ತು. ಈ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಮುಂಭಾಗ ಆಕರ್ಷಕ ಲುಕ್ ಅನ್ನು ಹೊಂದಿದ, ಈ ಹೊಸ ಎಸ್‍ಯುವಿಯು ಸ್ಪೋರ್ಟಿ ಲುಕ್ ನಲ್ಲಿ ಕಾಣುವಂತೆ ಅಗ್ರೇಸಿವ್ ವಿನ್ಯಾಸದಿಂದ ಕೂಡಿದೆ. ಈ ಹೂಸ ಟ್ಯೂಸಾನ ಹೆಡ್‌ಲ್ಯಾಂಪ್ ಯುನಿಟ್ ಹೆಚ್ಚು ಆಕರ್ಷಕವಾಗಿದೆ.

ಭಾರತದಲ್ಲಿ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಈಗಾಗಲೇ ಹಲವು ವಿದೇಶಗಳಲ್ಲಿನ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಇದೀಗ ಈ ಹೊಸ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಇನ್ನು ಹೊಸದಾಗಿ ಬಿಡುಗಡೆಗೊಂಡ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಹೆಚ್ಚು ಯುವ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
Hyundai launched grand i10 nios corporate edition in india specs features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X