ಸುಡುವ ಬಿಸಿಲಿನಲ್ಲು AC ಇಲ್ಲದೇ ಕಾರನ್ನು ತಂಪಾಗಿರಿಸುವ ಕೂಲಿಂಗ್ ಪೇಂಟ್ ಅಭಿವೃದ್ಧಿಪಡಿಸಿದ ಇಸ್ರೇಲ್

ಇಸ್ರೇಲ್‌ ಮೂಲದ ಸ್ಟಾರ್ಟ್ ಅಪ್ ಕಂಪನಿಯೊಂದು ಕಾರಿನಲ್ಲಿ ಎಸಿಯ ಜಾಗವನ್ನು ತುಂಬುವ ಪೇಂಟ್ ಅನ್ನು ಅಭಿವೃದ್ಧಿಪಡಿಸಿದೆ. ಈ ಪೇಂಟ್ ಅನ್ನು ಕಾರಿಗೆ ಲೇಪನ ಮಾಡಿದರೆ ಸುಡುವ ಬಿಸಿಲಿನಲ್ಲು ಕಾರ್ ತಂಪಾಗಿರುವಂತೆ ಮಾಡುತ್ತದೆ.

ಸುಡುವ ಬಿಸಿಲಿನಲ್ಲು AC ಇಲ್ಲದೇ ಕಾರನ್ನು ತಂಪಾಗಿರಿಸುವ ಕೂಲಿಂಗ್ ಪೇಂಟ್ ಅಭಿವೃದ್ಧಿಪಡಿಸಿದ ಇಸ್ರೇಲ್

ಕಾರಿನೊಳಗೆ ಇರಬೇಕಾದ ಪ್ರಮುಖ ವೈಶಿಷ್ಟ್ಯಗಳಲ್ಲಿ ಎಸಿ ಕೂಡ ಒಂದು. ಪ್ರಪಂಚದಾದ್ಯಂತ ಹೆಚ್ಚಾಗುತ್ತಿರುವ ತಾಪಮಾನದಿಂದ ಎಸಿ ಅನಿವಾರ್ಯವಾಗಿಬಿಟ್ಟಿದೆ. ಆದ್ದರಿಂದ, ಅನೇಕ ಜನರು ಕಾರಿನಲ್ಲಿ ಪ್ರಯಾಣಿಸುವಾಗ ಎಸಿಯೊಂದಿಗೆ ಪೂರ್ಣ ವೇಗದಲ್ಲಿ ಪ್ರಯಾಣಿಸುತ್ತಿದ್ದಾರೆ. ಎಸಿಯ ಅತಿಯಾದ ಬಳಕೆಯು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಸುಡುವ ಬಿಸಿಲಿನಲ್ಲು AC ಇಲ್ಲದೇ ಕಾರನ್ನು ತಂಪಾಗಿರಿಸುವ ಕೂಲಿಂಗ್ ಪೇಂಟ್ ಅಭಿವೃದ್ಧಿಪಡಿಸಿದ ಇಸ್ರೇಲ್

ಅಲ್ಲದೇ ಎಸಿಯು ಪರಿಸರಕ್ಕೂ ಮಾರಕವಾದ್ದರಿಂದ ಪರಿಸರವಾದಿಗಳು ಎಸಿ ಬಳಕೆಯನ್ನು ಕಡಿಮೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ವಾಹನಗಳಲ್ಲಿ ಎಸಿ ಸಾಧನವನ್ನು ಅನಗತ್ಯವಾಗಿಸುವ ಪೇಂಟ್ ಲೇಪನವನ್ನು ವಿದೇಶಿ ಕಂಪನಿಯು ಕಂಡುಹಿಡಿದಿದೆ. ಇದು ಮಾರುಕಟ್ಟೆಯಲ್ಲಿ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಎಸಿ ಬಳಕೆಯು ಬಹುತೇಕ ಕಡಿಮೆಯಾಗಲಿದೆ.

ಸುಡುವ ಬಿಸಿಲಿನಲ್ಲು AC ಇಲ್ಲದೇ ಕಾರನ್ನು ತಂಪಾಗಿರಿಸುವ ಕೂಲಿಂಗ್ ಪೇಂಟ್ ಅಭಿವೃದ್ಧಿಪಡಿಸಿದ ಇಸ್ರೇಲ್

ಇಸ್ರೇಲ್ ಮೂಲದ ಸೋಲ್ಕೋಲ್ಡ್ ಎಂಬ ಸ್ಟಾರ್ಟ್ ಅಪ್ ಸ್ವತಃ ಎಫ್ಸಿಲ್ಮ್ ಕೋಟಿಂಗ್ ಎಂಬ ಪೇಂಟ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಎಸಿ ಇಲ್ಲದೆ ಕಾರನ್ನು ತಂಪಾಗಿರಿಸುತ್ತದೆ. ವಾಹನಗಳನ್ನು ಪರಿಸರ ಸ್ನೇಹಿಯನ್ನಾಗಿ ಮಾಡುವ ಪ್ರಯತ್ನದ ಭಾಗವಾಗಿ ಸೋಲ್ಕೋಲ್ಡ್ ಫಿಲ್ಮ್ ಕೋಟಿಂಗ್ ಪೇಂಟ್ ಅನ್ನು ತಯಾರಿಸಿದೆ. ಪ್ರಸ್ತುತ ಕೆಲವು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಸುಡುವ ಬಿಸಿಲಿನಲ್ಲು AC ಇಲ್ಲದೇ ಕಾರನ್ನು ತಂಪಾಗಿರಿಸುವ ಕೂಲಿಂಗ್ ಪೇಂಟ್ ಅಭಿವೃದ್ಧಿಪಡಿಸಿದ ಇಸ್ರೇಲ್

ಈ ಲೇಪನದಲ್ಲಿ ಆಂಟಿ-ಸ್ಟೋಕ್ಸ್ ಫ್ಲೋರೋಸೆನ್ಸ್ ಎಂದು ಕರೆಯಲ್ಪಡುವ ರಸಾಯನವನ್ನು ಬಳಸಲಾಗಿದೆ. ಇದು ಸುಡು ಬಿಸಿಲಿನಲ್ಲಿಯೂ ಸಹ ಕಾರನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಸ್ಪಷ್ಟವಾಗಿ ಹೇಳುವುದಾದರೆ ಕಾರಿನ ಮೇಲೆ ಬೀಳುವ ಸೂರ್ಯನ ಹೆಚ್ಚುವರಿ ಶಾಖವನ್ನು ಹೀರಿಕೊಳ್ಳದೆ, ಹೊರಹಾಕುವ ತಂತ್ರಜ್ಞಾನದೊಂದಿಗೆ ಈ ಲೇಪನವನ್ನು ಅಭಿವೃದ್ಧಿಪಡಿಸಲಾಗಿದೆ.

ಸುಡುವ ಬಿಸಿಲಿನಲ್ಲು AC ಇಲ್ಲದೇ ಕಾರನ್ನು ತಂಪಾಗಿರಿಸುವ ಕೂಲಿಂಗ್ ಪೇಂಟ್ ಅಭಿವೃದ್ಧಿಪಡಿಸಿದ ಇಸ್ರೇಲ್

ಈ ಲೇಪನವು ಶಾಖವನ್ನು ಹೊರಹಾಕುವ ಜೊತೆಗೆ ಕಾರಿನ ಕ್ಯಾಬಿನ್ ಅನ್ನು ಸ್ವಲ್ಪ ತಂಪಾಗಿಡುವ ಕೆಲಸವನ್ನು ಸಹ ಮಾಡುತ್ತದೆ. ಇದನ್ನು ದೃಢೀಕರಿಸುವ ಸಲುವಾಗಿ, ಸೊಲ್ಕೋಲ್ಡ್ ಎರಡು ವೋಕ್ಸ್ ವ್ಯಾಗನ್ ಕಾರುಗಳನ್ನು ಬಿಸಿಲಿನಲ್ಲಿ ನಿಲ್ಲಿಸಿ ಪರಿಶೋಧನೆ ನಡೆಸಲಾಗಿದೆ. ಒಂದು ಕಾರಿನ ಛಾವಣಿಯ ಮೇಲೆ ಮಾತ್ರ ಕಂಪನಿಯ ಕೂಲಿಂಗ್ ಕೋಟಿಂಗ್ ಮಾಡಲಾಗಿತ್ತು.

ಸುಡುವ ಬಿಸಿಲಿನಲ್ಲು AC ಇಲ್ಲದೇ ಕಾರನ್ನು ತಂಪಾಗಿರಿಸುವ ಕೂಲಿಂಗ್ ಪೇಂಟ್ ಅಭಿವೃದ್ಧಿಪಡಿಸಿದ ಇಸ್ರೇಲ್

ಇನ್ನೊಂದು ಕಾರಿನ ಮೇಲೆ ಅದೇ ಸಾಮಾನ್ಯ ಬಣ್ಣದ ಲೇಪನವನ್ನು ಹಾಕಲಾಗಿತ್ತು. ಈ ಹಂತದಲ್ಲಿ, ಎರಡೂ ಕಾರುಗಳನ್ನು ದೀರ್ಘಕಾಲದವರೆಗೆ ಬಿಸಿಲಿನಲ್ಲಿ ನಿಲ್ಲಿಸಿ ಪರಿಶೀಲಿಸಲಾಯಿತು. ಈ ಅಧ್ಯಯನದಲ್ಲಿ, ಸಾಮಾನ್ಯ ಬಣ್ಣದಿಂದ ಚಿತ್ರಿಸಲಾದ ಕಾರಿನ ಒಳಭಾಗವು 55 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿರುವುದು ಕಂಡುಬಂದಿದೆ.

ಸುಡುವ ಬಿಸಿಲಿನಲ್ಲು AC ಇಲ್ಲದೇ ಕಾರನ್ನು ತಂಪಾಗಿರಿಸುವ ಕೂಲಿಂಗ್ ಪೇಂಟ್ ಅಭಿವೃದ್ಧಿಪಡಿಸಿದ ಇಸ್ರೇಲ್

ಇದರರ್ಥ ಸುಡುವ ಬಿಸಿಲಿನಿಂದಾಗಿ ಕಾರಿನ ಕ್ಯಾಬಿನ್ ಮೈಕ್ರೋಓವನ್ ಆಗಿ ಬದಲಾಗಿದೆ. ಅದೇ ಸಮಯದಲ್ಲಿ, ಸೋಲ್ಕೋಲ್ಡ್ ಕೂಲಿಂಗ್ ಲೇಪನದಿಂದ ಲೇಪಿತವಾದ ಕಾರಿನ ಒಳಭಾಗವು ಕೇವಲ 37 ಡಿಗ್ರಿ ಸೆಲ್ಸಿಯಸ್ನೊಂದಿಗೆ ಮಾತ್ರ ಕಾಣುತ್ತಿತ್ತು. ಇದು ಸಾಮಾನ್ಯ ಕಾರಿನೊಂದಿಗೆ ಹೋಲಿಸಿಕೊಂಡರೆ 20 ಡಿಗ್ರಿಗಳಷ್ಟು ಕಡಿಮೆ ತಾಪಮಾನವಾಗಿದೆ.

ಸುಡುವ ಬಿಸಿಲಿನಲ್ಲು AC ಇಲ್ಲದೇ ಕಾರನ್ನು ತಂಪಾಗಿರಿಸುವ ಕೂಲಿಂಗ್ ಪೇಂಟ್ ಅಭಿವೃದ್ಧಿಪಡಿಸಿದ ಇಸ್ರೇಲ್

ಈ ಮೂಲಕ ನೋಡುವುದಾದರೆ 37 ಡಿಗ್ರಿ ಸೆಲ್ಸಿಯಸ್‌ ಇದ್ದಲ್ಲಿ ಕಾರಿನಲ್ಲಿ ಎಸಿ ಹೊಂದುವ ಅಗತ್ಯವಿಲ್ಲ. ಪೇಂಟ್ ಲೇಪನವು ಇನ್ನೂ ಮೂಲಮಾದರಿ ರೂಪದಲ್ಲಿದೆ ಎಂದು ಕಂಪನಿ ತಿಳಿಸಿದೆ. ಇದಲ್ಲದೆ, ಶೀಘ್ರದಲ್ಲೇ ವೋಕ್ಸ್ ವ್ಯಾಗನ್ ಮತ್ತು ಟೊಯೊಟಾ ಎರಡೂ ತನ್ನ ಭವಿಷ್ಯದ ಉತ್ಪನ್ನಗಳಲ್ಲಿ ಈ ಬಣ್ಣವನ್ನು ಬಳಸಲಿವೆ ಎಂದು ಸೋಲ್ಕೋಲ್ಡ್ ಹೇಳಿದೆ.

ಸುಡುವ ಬಿಸಿಲಿನಲ್ಲು AC ಇಲ್ಲದೇ ಕಾರನ್ನು ತಂಪಾಗಿರಿಸುವ ಕೂಲಿಂಗ್ ಪೇಂಟ್ ಅಭಿವೃದ್ಧಿಪಡಿಸಿದ ಇಸ್ರೇಲ್

ಈ ಕೂಲಿಂಗ್ ಪೇಂಟ್ ಅನ್ನು ಬಳಸುವ ಕೆಲಸ ಬಂದರೆ ಆಟೋಮೋಟಿವ್ ಜಗತ್ತಿನಲ್ಲಿ ಅತಿದೊಡ್ಡ ಕ್ರಾಂತಿ ಸಂಭವಿಸುತ್ತದೆ. ಅಲ್ಲದೇ ಕೆಲವು ಕಂಪನಿಗಳಿಗೆ ಈ ಬಣ್ಣವು ಗೇಮ್-ಚೇಂಜರ್ ಆಗಿ ಬದಲಾಗಲಿದೆ. ಪ್ರಸ್ತುತ ವಾಹನಗಳಲ್ಲಿ ಬಳಸಲಾಗುತ್ತಿರುವ ಎಸಿಯನ್ನು ಗ್ರಾಹಕರು ಸಂಪೂರ್ಣವಾಗಿ ಮರೆಯಬಹುದು. ಈಗಾಗಲೇ ಸೋಲ್ಕೋಲ್ಡ್ ಆಗಮನಕ್ಕಾಗಿ ಹಲವು ಕಂಪನಿಗಳು ಕಾಯುತ್ತಿವೆ.

ಸುಡುವ ಬಿಸಿಲಿನಲ್ಲು AC ಇಲ್ಲದೇ ಕಾರನ್ನು ತಂಪಾಗಿರಿಸುವ ಕೂಲಿಂಗ್ ಪೇಂಟ್ ಅಭಿವೃದ್ಧಿಪಡಿಸಿದ ಇಸ್ರೇಲ್

ಸಾಮಾನ್ಯವಾಗಿ ಎಸಿಯನ್ನು ಬೇಸಿಗೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇನ್ನು ಮಳೆ, ಚಳಿಗಾಲದಲ್ಲಿ ಬಳಸುವುದು ತೀರಾ ಕಡಿಮೆ. ಬಿಸಿಲಿನಲ್ಲೇ ಆ ಮಟ್ಟದ ಶಾಖವನ್ನು ತಡೆಯುವ ಈ ಕೂಲಿಂಗ್ ಪೇಂಟ್ ಚಳಿಗಾಲದಲ್ಲಿ ಕಾರ್ ಕ್ಯಾಬಿನ್ ಹೆಚ್ಚು ಕೋಲ್ಡ್ ಆಗಿ ಇರಲಿದೆಯೇ ಎಂಬ ಗೊಂದಲಗಳು ಹಲವರಲ್ಲಿದೆ. ಆದರೆ ಈ ಬಗ್ಗೆ ಕಂಪನಿ ವಿವರಣೆ ನೀಡಬೇಕಿದೆ.

ಸುಡುವ ಬಿಸಿಲಿನಲ್ಲು AC ಇಲ್ಲದೇ ಕಾರನ್ನು ತಂಪಾಗಿರಿಸುವ ಕೂಲಿಂಗ್ ಪೇಂಟ್ ಅಭಿವೃದ್ಧಿಪಡಿಸಿದ ಇಸ್ರೇಲ್

ಏನೇ ಆಗಲಿ ಬೇಸಿಗೆಯಿಂದ ಹೆಚ್ಚಾಗುತ್ತಿರುವ ಎಸಿ ಬಳಕೆಯು ಹೆಚ್ಚು ಇಂಧನವನ್ನು ದಹಿಸುತ್ತದೆ. ಇದರಿಂದ ಸಾಮಾನ್ಯಕ್ಕಿಂತ ಹೆಚ್ಚಾಗಿ ಇಂಧನಕ್ಕೆ ವ್ಯಯಿಸಬೇಕಾದ ಅನಿವಾರ್ಯತೆ ಇದೆ. ಇಂತಹ ಕೂಲಿಂಗ್ ಪೇಂಟ್‌ಗಳು ಬಂದರೆ ಗ್ರಾಹಕರ ಹಲವು ಸಮಸ್ಯೆಗಳಿಗೆ ಪರಿಹಾರವಾಗಲಿದೆ.

Most Read Articles

Kannada
English summary
Israeli startup developed film coating can keep your car cool
Story first published: Wednesday, June 1, 2022, 11:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X