ಜಿಮ್ನಿ, ಬಲೆನೊ ಕ್ರಾಸ್ ಮಾದರಿ ಬೆಲೆ 10 ಲಕ್ಷಕ್ಕಿಂತ ಕಡಿಮೆಯಂತೆ: ಮಾರುತಿ ಸುಜುಕಿ ದೊಡ್ಡ ಪ್ಲ್ಯಾನ್?

ಮಾರುತಿ ಸುಜುಕಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಭಾರತದ ಪ್ರಮುಖ ಆಟೋಮೊಬೈಲ್ ತಯಾರಕ ಕಂಪನಿಯಾಗಿ ಮುನ್ನುಗ್ಗಿತ್ತಿದೆ. ನವೆಂಬರ್ 2022ರ ಹೊತ್ತಿಗೆ, ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಶೇ.41.30% ಪಾಲನ್ನು ಹೊಂದಿದೆ. ಇಷ್ಟೊಂದು ದೊಡ್ಡ ಪಾಲನ್ನು ಹೊಂದಿದ್ದರೂ ಕಂಪನಿಯು ಮತ್ತಷ್ಟು ಪ್ರಾಬಲ್ಯ ಸಾಧಿಸುವ ಗುರಿ ಹೊಂದಿದ್ದು, ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿದೆ.

ಇತ್ತೀಚಿನ ವರದಿಗಳ ಪ್ರಕಾರ, ಕಂಪನಿಯು ತನ್ನ ಮುಂಬರುವ ಎಸ್‌ಯುವಿಗಳಾದ ಜಿಮ್ನಿ 5-ಡೋರ್ ಮತ್ತು ಬಲೆನೊ ಕ್ರಾಸ್‌ಗಳನ್ನು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು 10 ಲಕ್ಷ ರೂ. ಒಳಗೆ ಬಿಡುಗಡೆ ಮಾಡಿ, ಮಾರುಕಟ್ಟೆಯ ಈ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಲು ಯೋಜಿಸುತ್ತಿದೆ. ಪ್ರಸ್ತುತ, ಕಂಪನಿಯ ಎಲ್ಲಾ ಮಾದರಿಗಳು ಮಾರಾಟದ ಅಂಕಿಅಂಶದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ದೇಶದಲ್ಲಿ ಬಿಡುಗಡೆಯಾದ ಬಳಿಕ, 5-ಡೋರ್ ಜಿಮ್ನಿ ಮಾದರಿಗಳನ್ನು ತಿಂಗಳಿಗೆ ಸುಮಾರು 5000-6000 ಯುನಿಟ್‌ಗಳನ್ನು ಉತ್ಪಾದಿಸುವ ಗುರಿಯನ್ನು ಮಾರುತಿ ಸುಜುಕಿ ಹೊಂದಿದೆ ಎಂದು ಈ ಹಿಂದೆ ವರದಿಯಾಗಿತ್ತು.

ಜಿಮ್ನಿ, ಬಲೆನೊ ಕ್ರಾಸ್ ಮಾದರಿ ಬೆಲೆ 10 ಲಕ್ಷಕ್ಕಿಂತ ಕಡಿಮೆಯಂತೆ: ಮಾರುತಿ ಸುಜುಕಿ ದೊಡ್ಡ ಪ್ಲ್ಯಾನ್?

ಜಿಮ್ನಿ 5-ಡೋರ್ ಮತ್ತು ಬಲೆನೊ ಕ್ರಾಸ್ (YTB) ಮುಂಬರುವ 2023 ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಪ್ರಸ್ತುತ, ಕಂಪನಿಯು ಕೇವಲ ಎರಡು ಎಸ್‌ಯುವಿ ಮಾದರಿಗಳನ್ನು ಹೊಂದಿದೆ. ಅವುಗಳೆಂದರೆ, ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ ಬ್ರೆಝಾ ಮತ್ತು ಮಧ್ಯಮ ಗಾತ್ರದ ಎಸ್‌ಯುವಿ ಗ್ರಾಂಡ್ ವಿಟಾರಾ. ಇವೆರಡೂ ಈ ವರ್ಷ ಬಿಡುಗಡೆಯಾಗಿವೆ. ಲಾಂಚ್ ಆದ ಬಳಿಕ, ಎರಡು ಎಸ್‌ಯುವಿಗಳು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಮಾರುತಿ ಸುಜುಕಿ ಎಸ್‌ಯುವಿ ಮಾರುಕಟ್ಟೆ ವಿಭಾಗದಲ್ಲಿ ಶೇಕಡ 10.4ರಷ್ಟು ಪಾಲನ್ನು ಹೊಂದಲು ಇವು ಸಹಾಯ ಮಾಡಿವೆ.

ಮಾರುತಿ ಸುಜುಕಿ 2024ರ ಆರ್ಥಿಕ ವರ್ಷದಲ್ಲಿ ದಾಖಲೆ ಸಂಖ್ಯೆಯ ವಾಹನಗಳನ್ನು ಉತ್ಪಾದಿಸಲು ಸಜ್ಜಾಗುತ್ತಿದೆ. ವರದಿಗಳ ಪ್ರಕಾರ, ಕಂಪನಿಯು ಸುಮಾರು 2.50 ಮಿಲಿಯನ್ ಯುನಿಟ್ ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಇದನ್ನು ನಿರ್ದಿಷ್ಟ ಸಮಯದಲ್ಲಿ ಸಾಧಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ತನ್ನ ಸಿಬ್ಬಂದಿಗೆ ಮಾರುತಿ ಸುಜುಕಿ ತಿಳಿಸಿದೆ. ಮೂಲಗಳ ಪ್ರಕಾರ, ಕಂಪನಿಯು ದೇಶದಲ್ಲಿ ಸುಮಾರು 750,000 ಎಸ್‌ಯುವಿಗಳನ್ನು ತಯಾರಿಸಲು ಯೋಜಿಸುತ್ತಿದ್ದು, ಇದರಲ್ಲಿ ಮುಂಬರುವ ಬಲೆನೊ ಕ್ರಾಸ್ ಮತ್ತು ಜಿಮ್ನಿ 5-ಡೋರ್ ಸಹ ಸೇರಿದೆ.

YTB ಎಂಬ ಕೋಡ್ ನೇಮ್ ಹೊಂದಿರುವ ಬಲೆನೊ ಕ್ರಾಸ್ ಅನ್ನು ಆಟೋ ಎಕ್ಸ್‌ಪೋದಲ್ಲಿ ಅಧಿಕೃತವಾಗಿ ಪರಿಚಯಿಸಬಹುದು. ಆದರೆ, ಮಾರಾಟವು ಬಹುತೇಕ ಹಬ್ಬದ ಸೀಸನ್‌ನಲ್ಲಿ ನಡೆಯುವ ನಿರೀಕ್ಷೆಯಿದೆ. ವಾಹನವನ್ನು ಐಚ್ಛಿಕ ಆಲ್-ವೀಲ್ ಡ್ರೈವ್ (AWD) ವ್ಯವಸ್ಥೆಯೊಂದಿಗೆ ಹೊಂದಿರಲಿದೆಯಂತೆ. ಮುಂಬರುವ ಬಲೆನೊ ಕ್ರಾಸ್, ಹಿಂದಿನ ಮಾದರಿ ಮಾರುತಿ ಸುಜುಕಿ ಬಲೆನೊ ಹ್ಯಾಚ್‌ಬ್ಯಾಕ್‌ ರೀತಿಯೇ 1.2-ಲೀಟರ್, 4-ಸಿಲಿಂಡರ್, ನ್ಯಾಚುರಲ್- ಆಸ್ಪಿರೇಟೆಡ್, ಪೆಟ್ರೋಲ್ ಎಂಜಿನ್ ಹೊಂದಿರಬಹುದು. ಇದು 88 bhp ಪವರ್ ಮತ್ತು 113 Nm ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಬಲೆನೊ ಕ್ರಾಸ್, ಸ್ಟ್ಯಾಂಡರ್ಡ್ ಬಲೆನೊ ಹ್ಯಾಚ್‌ಬ್ಯಾಕ್‌ನಂತೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿರಬಹುದು. ಬೆಲೆ ವಿಚಾರವಾಗಿ ಹೇಳುವುದಾದರೆ, ಮುಂಬರುವ ಮಾರುತಿ ಸುಜುಕಿ ಬಲೆನೊ ಕ್ರಾಸ್, ಸುಮಾರು 7.5 ಲಕ್ಷ ರೂ. (ಎಕ್ಸ್ ಶೋರೂಂ) ಆರಂಭಿಕ ಬೆಲೆ ಹೊಂದುವ ಸಾಧ್ಯತೆಯಿದೆ. ಕ್ರಾಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ ದೊಡ್ಡ 9.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ಕನೆಕ್ಟ್ದ್ ಕಾರ್ ಟೆಕ್ ವೈಶಿಷ್ಟ್ಯಗಳನ್ನು ಹೊಂದಿರಬಹುದು.

ಮಾರುತಿ ಸುಜುಕಿ ಜಿಮ್ನಿ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಜೊತೆ ಬಿಡುಗಡೆಯಾಗಬುಹುದಾದರೂ, ಹಿಂದಿನ ಮಾದರಿಯಂತೆ ಅದೇ 1.5-ಲೀಟರ್, ನಾಲ್ಕು-ಸಿಲಿಂಡರ್ K15B ಎಂಜಿನ್ ಅನ್ನು ಪಡೆಯಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ (ಐಚ್ಛಿಕ 4-ಸ್ಪೀಡ್ ಆಟೋಮ್ಯಾಟಿಕ್) ಜೋಡಿಸಲಾಗಿದ್ದು, ಈ ಎಂಜಿನ್ 105 hp ಗರಿಷ್ಠ ಪವರ್ ಉತ್ಪಾದಿಸುತ್ತದೆ. ಬ್ರೆಝಾ ಮತ್ತು ಗ್ರ್ಯಾಂಡ್ ವಿಟಾರಾದಂತಹ ಮೊನೊಕಾಕ್ ಮಾದರಿಗಳಿಗಿಂತ ಭಿನ್ನವಾಗಿರುವ ಜಿಮ್ನಿಯು ಅದರ ಹಿಂದಿನ ಜಿಪ್ಸಿಯಂತೆಯೇ ಬಾಡಿ-ಆನ್-ಫ್ರೇಮ್ ಎಸ್‌ಯುವಿ ಆಗಿದೆ. ಇದು ಗ್ರ್ಯಾಂಡ್ ವಿಟಾರಾಕ್ಕಿಂತ ಹೆಚ್ಚು ಆಫ್-ರೋಡ್ ವಾಹನವಾಗಿದೆ.

2023ರ ಮಧ್ಯಭಾಗದಲ್ಲಿ ಮಾರುಕಟ್ಟೆ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಜಿಮ್ನಿ 5-ಡೋರ್ ಜನವರಿ 12 ರಂದು ಆಟೋ ಎಕ್ಸ್‌ಪೋದಲ್ಲಿ ಅನಾವರಣಗಳಿಸಬಹುದು. 5-ಡೋರ್ ಥಾರ್ ಆಗಮನದವರೆಗೆ, ಜಿಮ್ನಿಯು ಬಹುಶಃ ಸ್ಕಾರ್ಪಿಯೊವನ್ನು ಹೊರತುಪಡಿಸಿ ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿರುವುದಿಲ್ಲ. ಜಿಪ್ಸಿಯಂತೆ ಇದನ್ನು ಕೂಡ ಆಫ್-ರೋಡ್ ಪ್ರಿಯರು ಹೆಚ್ಚು ಲೈಕ್ ಮಾಡಬಹುದು. ಆದರೆ, ಬೆಲೆಯ ಬಗ್ಗೆ ಈವರೆಗೆ ಮಾಹಿತಿ ಲಭ್ಯವಾಗಿಲ್ಲ. ಜಿಮ್ನಿ 5-ಡೋರ್ 2023ರಲ್ಲಿ ಉತ್ಪಾದನೆಗೆ ಹೋಗಲು ಸಿದ್ಧವಾಗಿದೆ.

Most Read Articles

Kannada
English summary
Jimny baleno cross models priced under rs 10 lakh maruti suzuks big plan
Story first published: Saturday, December 31, 2022, 16:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X