ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಟೈರ್ ಅನಾವರಣಗೊಳಿಸಿದ ಜೆಕೆ ಟೈರ್

ದೇಶಿಯ ಮಾರುಕಟ್ಟೆಯಲ್ಲಿನ ಟೈರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಜೆಕೆ ಟೈರ್ ಕಂಪನಿಯು ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಸ್ಮಾರ್ಟ್ ರೇಡಿಯಲ್ ಟೈರ್ ಶ್ರೇಣಿಯನ್ನು ಅನಾವರಣಗೊಳಿಸಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಆಟೋ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಜೆಕೆ ಟೈರ್ ಕಂಪನಿಯು ಹೊಸ ಬಗೆಯ ಟೈರ್ ಶ್ರೇಣಿಯನ್ನು ಅನಾವರಣ ಮಾಡಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿ ಅಭಿವೃದ್ದಿಪಡಿಸಲಾಗಿದೆ. ಹೊಸ ಟೈರ್ ಮಾದರಿಗಳನ್ನು ಎಲೆಕ್ಟ್ರಿಕ್ ಬಸ್, ಕಾರು ಮತ್ತು ವಾಣಿಜ್ಯ ವಾಹನಗಳಿಗಾಗಿ ಸಿದ್ದಪಡಿಸಿದ್ದು, ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಸ್ಮಾರ್ಟ್ ರೇಡಿಯಲ್ ಟೈರ್‌ಗಳು ಉತ್ತಮ ಕಾರ್ಯಕ್ಷಮತೆಗೆ ಸಹಕಾರಿಯಾಗಲಿವೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಸ್ಮಾರ್ಟ್ ರೇಡಿಯಲ್ ಟೈರ್‌ಗಳು ಅಲ್ಟ್ರಾ-ಲೋ ರೋಲಿಂಗ್ ಪ್ರತಿರೋಧ, ಸುಧಾರಿತಗೊಂಡಿರುವ ಆರ್ದ್ರ ಮತ್ತು ಒಣ ಸವಾರಿಯ ಎಳೆತ, ಹೆಚ್ಚಿನ ಬಾಳಿಕೆ ಮತ್ತು ಕಡಿಮೆ ಶಕ್ತಿಯ ಬಳಕೆಯನ್ನು ಖಚಿತಪಡಿಸಲಿದ್ದು, ಎಲೆಕ್ಟ್ರಿಕ್ ವಾಹನಗಳ ಕ್ಯಾಬಿನ್ ಪ್ರವೇಶಿಸುವ ಟೈರ್ ಶಬ್ದವು ಪರಿಣಾಮಕಾರಿ ತಗ್ಗಲಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಇ-ಟ್ರಕ್‌ಗಳು, ಇ-ಬಸ್, ಇ-ಎಲ್‌ಸಿವಿ, ಇ-ಪಿವಿ, ಇ-ಎಸ್‌ಯುವಿ ವಾಹನಗಳ ಬೇಡಿಕೆಯ ಕಾರ್ಯಕ್ಷಮತೆಯ ಅವಶ್ಯಕತೆಗಳನ್ನು ಪೂರೈಸಲು ಈ ಸ್ಮಾರ್ಟ್ ಟೈರ್‌ ಸಾಕಷ್ಟು ಸಹಕಾರಿಯಾಗಲಿದ್ದು, 17.5 ಇಂಚು ಮತ್ತು 22.5 ಇಂಚಿನ ಟ್ಯೂಬ್‌ಲೆಸ್ ಗಾತ್ರಗಳಲ್ಲಿ ಎಲ್ಲಾ ವರ್ಗದ ಬಸ್‌ಗಳು, ಟ್ರಕ್‌ಗಳು ಮತ್ತು ಲಘು ವಾಣಿಜ್ಯ ವಾಹನಗಳಿಗೆ ಅಭಿವೃದ್ಧಿಪಡಿಸಲಾಗಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಪ್ರಸ್ತುತ ಮಾರುಕಟ್ಟೆಯ ಇವಿ ಶ್ರೇಣಿಯ ಟೈರ್‌ಗಳನ್ನು (255/70R22.5 ಮತ್ತು 295/80R22.5) ಜೆಬಿಎಂ ಇ-ಬಸ್‌ಗಳಿಗೆ ಸರಬರಾಜು ಮಾಡಲಾಗುತ್ತಿದ್ದು, ಕಂಪನಿಯು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಹೊಸ ಸ್ಮಾರ್ಟ್ ರೇಡಿಯಲ್ ಟೈರ್‌ಗಳನ್ನು ಪ್ರದರ್ಶಿಸಲಾಗಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಹೊಸ ಟೈರ್ ಬಿಡುಗಡೆ ಕುರಿತು ಮಾತನಾಡಿರುವ ಜೆಕೆ ಟೈರ್ ಮತ್ತು ಇಂಡಸ್ಟ್ರೀಸ್‌ನ ತಾಂತ್ರಿಕ ನಿರ್ದೇಶಕ ವಿಕೆ ಮಿಶ್ರಾ ಮಾತನಾಡಿದ್ದು, ಸುಧಾರಿತ, ಶಾಂತ, ಬಾಳಿಕೆ ಬರುವ ಮತ್ತು ಶಕ್ತಿಯ ದಕ್ಷತೆಯನ್ನು ಹೆಚ್ಚಳ ಮಾಡಲು ವಿಶಿಷ್ಟವಾದ ಸ್ಮಾರ್ಟ್ ಟೈರ್‌ಗಳು ಗ್ರಾಹಕರನ್ನು ಸೆಳೆಯುವ ವಿಶ್ವಾಸವಿದೆ ಎಂದಿದ್ದಾರೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಇನ್ನು ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ಹೆಚ್ಚುತ್ತಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಟೋ ಉಪಕರಣ ತಯಾರಕರು ಸುಧಾರಿತ ತಂತ್ರಜ್ಞಾನದೊಂದಿಗೆ ಹೊಸ ಬಿಡಿಭಾಗಗಳನ್ನು ಅಭಿವೃದ್ದಿಪಡಿಸುತ್ತಿವೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಅದರಲ್ಲೂ ವಾಹನಗಳ ಸುರಕ್ಷತೆ ಮತ್ತು ಮೈಲೇಜ್‌ನಲ್ಲಿ ಮುಖ್ಯ ಪಾತ್ರ ವಹಿಸುವ ಟೈರ್‌ಗಳು ಸುಧಾರಿತ ತಂತ್ರಜ್ಞಾನ ಹೊಂದುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಭಾರತದಲ್ಲಿ ಸದ್ಯ ಬಜೆಟ್ ಇವಿ ಮಾದರಿಗಳಿಂದ ಹಿಡಿದು ಹಲವಾರು ಐಷಾರಾಮಿ ಇವಿ ಕಾರುಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಗ್ರಾಹಕರ ಬೇಡಿಕೆಗೆ ಪೂರಕವಾಗಿ ಸಿಯೆಟ್ ಕಂಪನಿಯು ಹೊಸ ಟೈರ್ ಪರಿಚಯಿಸಿರುವ ಗ್ರಾಹಕರಿಗೆ ಆಯ್ಕೆ ಹೆಚ್ಚಿಸಲಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಇನ್ನು ದೇಶದಲ್ಲಿ ಮಾರಾಟವಾಗುವ ಟೈರ್‌ಗಳಿಗೆ ಹೊಸ ಮಾನದಂಡಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಹೊಸ ಮಾನದಂಡಗಳನ್ನು ಸಿದ್ದಪಡಿಸಿದ್ದು, ಹೊಸ ಕ್ರಮದೊಂದಿಗೆ ಭಾರತದಲ್ಲಿ ಗುಣಮಟ್ಟ ಮತ್ತು ಸುರಕ್ಷಿತ ಟೈರ್‌ಗಳ ಉತ್ಪಾದನೆಗೆ ಅನುವು ಮಾಡಿಕೊಡುತ್ತಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಹೊಸ ಟೈರ್ ಉತ್ಪಾದನಾ ಮಾನದಂಡಗಳು ಮುಂಬರುವ ಅಕ್ಟೋಬರ್ 1ರಿಂದಲೇ ಅಧಿಕೃತವಾಗಿ ಜಾರಿಗೆ ಬರಲಿದ್ದು, ಹೊಸ ಮಾನದಂಡಗಳೊಂದಿಗೆ ಹೊಸ ವಾಹನಗಳಲ್ಲಿ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲಿದೆ. ಟೈರ್‌ಗಳು ಒಂದು ವಾಹನದ ಪ್ರಮುಖ ಅಂಶವಾಗಿದ್ದು, ಟೈರ್ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡದಿದ್ದರೆ ವಾಹನವು ಎಷ್ಟೇ ಉತ್ತಮವಾಗಿದ್ದರೂ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.

ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಅದು ಸೂಪರ್‌ಕಾರ್ ಆಗಿರಲಿ ಅಥವಾ ಟ್ರಕ್ ಆಗಿರಲಿ ಅದರ ಟೈರ್‌ಗಳು ರಸ್ತೆಯ ಸಂಪರ್ಕದ ಏಕೈಕ ಬಿಂದುವಾಗಿರುತ್ತದೆ. ಆದ್ದರಿಂದ ವಾಹನಗಳಲ್ಲಿ ಉತ್ತಮ ಟೈರ್‌ಗಳನ್ನು ಹೊಂದಿರುವುದು ಮುಖ್ಯ ಅಂಶವಾಗಿದ್ದು, ಮಾರುಕಟ್ಟೆಯಲ್ಲಿ ಹಲವಾರು ಮಾದರಿಗಳು ಲಭ್ಯವಿವೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಕೆಲವು ಟೈರ್ ಮಾದರಿಗಳು ಉತ್ತಮ ತಂತ್ರಜ್ಞಾನ ಪ್ರೇರಣೆಯೊಂದಿಗೆ ನಿರ್ಮಾಣಗೊಂಡಿದ್ದರೆ ಇನ್ನು ಕೆಲವು ಟೈರ್ ಮಾದರಿಗಳು ಕಳಪೆ ಗುಣಮಟ್ಟದೊಂದಿಗೆ ಅಗ್ಗದ ದರದಲ್ಲೂ ಖರೀದಿಗೆ ಲಭ್ಯವಿವೆ. ಕಳಪೆ ಟೈರ್ ಮಾದರಿಗಳು ಕೆಲವೊಮ್ಮೆ ಗುಣಮಟ್ಟದ ಕೊರತೆಯಿಂಗಾಗಿ ಅಪಘಾತಗಳಿಗೆ ಎಡೆಮಾಡಿಕೊಡುವ ಸಾಧ್ಯತೆಗಳಿದ್ದು, ಇದರಿಂದ ಹೊಸ ಸುರಕ್ಷಾ ಮಾನದಂಡಗಳೊಂದಿಗೆ ಕೇಂದ್ರ ಸರ್ಕಾರವು ಟೈರ್ ಉತ್ಪಾದನೆ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಭಾರತದಲ್ಲಿ ಟೈರ್ ಮಾರುಕಟ್ಟೆಯು ಹೆಚ್ಚಾಗಿ ಅಸಂಘಟಿತವಾಗಿದ್ದು, ಅದನ್ನು ನಿಯಂತ್ರಿಸಲಾಗುತ್ತಿಲ್ಲ. ಇದರಿಂದ ಹೊಸ ಮಾನದಂಡಗಳ ಮೂಲಕ ಟೈರ್ ಉತ್ಪಾದನೆಗೆ ಕನಿಷ್ಠ ಗುಣಮಟ್ಟಗಳ ಅಳವಡಿಕೆ ಖಚಿತಪಡಿಸಲು ಮುಂದಾಗಿರುವ ಕೇಂದ್ರ ಸಾರಿಗೆ ಇಲಾಖೆಯು ಟೈರ್ ಉತ್ಪಾದಕರಿಗೆ ಹೊಸ ಮಾನದಂಡಗಳನ್ನು ಪರಿಚಯಿಸುತ್ತಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಹೊಸ ಮಾನದಂಡಗಳ ಪ್ರಕಾರ, ಟೈರ್ ಉತ್ಪಾದನೆಗಾಗಿ ಕಾರು, ಬಸ್ ಮತ್ತು ಟ್ರಕ್ ಟೈರ್ ತಯಾರಕರು ರೋಲಿಂಗ್ ರೆಸಿಸ್ಟೆನ್ಸ್, ರೋಲಿಂಗ್ ಸೌಂಡ್ ಮತ್ತು ವೆಟ್ ಗ್ರಿಪ್ ಮಾನದಂಡಗಳನ್ನು ಟೈರ್‌ನಲ್ಲಿ ಅಳವಡಿಸುವುದು ಕಡ್ಡಾಯವಾಗಲಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ (AMI) 142:2019 ರಲ್ಲಿ ವ್ಯಾಖ್ಯಾನಿಸಲಾದ ಉದ್ಯಮದ ಮಾನದಂಡಗಳು ವಾಹನದ ಟೈರ್ ಗುಣಮಟ್ಟವನ್ನು ವ್ಯಾಖ್ಯಾನಿಸಲಿದ್ದು, ಟೈರ್ ರೆಸಿಸ್ಟೆನ್ಸ್ ಮೂಲಕ ಟೈರ್ ಎಲ್ಲಾ ಭೂಪ್ರದೇಶಗಳಿನ ಹವಾಮಾನವನ್ನು ತಡೆದುಕೊಳ್ಳುವುದನ್ನು ಖಚಿತಪಡಿಸುತ್ತದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ತಂತ್ರಜ್ಞಾನ ಪ್ರೇರಿತ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಹಾಗೆಯೇ ರೋಲಿಂಗ್ ಸೌಂಡ್ ಮೂಲಕ ಟೈರ್ ಮೂಲಕ ಟೈರ್ ಘರ್ಷಣೆಯಿಂದಾಗಿ ಉಂಟಾಗುವ ಶಬ್ದ ಮಾಲಿನ್ಯವನ್ನು ತಗ್ಗಿಸಲಿದ್ದು, ವೆಟ್ ಗ್ರಿಪ್ ಮಾನದಂಡವು ಒದ್ದೆಯಾದ ರಸ್ತೆಗಳಲ್ಲೂ ಟೈರ್‌ನ ಬ್ರೇಕಿಂಗ್ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

Most Read Articles

Kannada
English summary
Jk tyres india launched smart radial tyres for electric mobility detail
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X