ಬಿಡುಗಡೆಗೂ ಮುನ್ನವೇ 50 ಸಾವಿರ ಯುನಿಟ್ ಬುಕಿಂಗ್ ಪಡೆದುಕೊಂಡ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಬಹುನಿರೀಕ್ಷಿತ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿ ಬಿಡುಗಡೆಗೆ ಸಜ್ಜಾಗುತ್ತಿದ್ದು, ಈ ಹೊಸ ಎಸ್‌ಯುವಿ ಮಾದರಿಯು ಬಿಡುಗಡೆಗೂ ಮುನ್ನವೇ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಬಿಡುಗಡೆಗೂ ಮುನ್ನವೇ 50 ಸಾವಿರ ಯುನಿಟ್ ಬುಕಿಂಗ್ ಪಡೆದುಕೊಂಡ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ಗ್ರ್ಯಾಂಡ್ ವಿಟಾರಾ ಎಸ್‌ಯುವಿಗಾಗಿ ಕಂಪನಿಯು ಕಳೆದ ತಿಂಗಳು ರೂ. 11 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕಿಂಗ್ ಆರಂಭಿಸಿದ ನಂತರ ಇದುವರೆಗೆ ಸುಮಾರು 50 ಸಾವಿರಕ್ಕೂ ಹೆಚ್ಚು ಗ್ರಾಹಕರಿಂದ ಬೇಡಿಕೆ ಪಡೆದುಕೊಂಡಿದ್ದು, ಇದರಲ್ಲಿ ಶೇ. 55ಕ್ಕಿಂತಲೂ ಹೆಚ್ಚಿನ ಗ್ರಾಹಕರು ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಯ ಖರೀದಿಗೆ ಆದ್ಯತೆ ನೀಡಿದ್ದಾರೆ.

ಬಿಡುಗಡೆಗೂ ಮುನ್ನವೇ 50 ಸಾವಿರ ಯುನಿಟ್ ಬುಕಿಂಗ್ ಪಡೆದುಕೊಂಡ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ಗ್ರ್ಯಾಂಡ್ ವಿಟಾರಾ ಎಸ್‌ಯುವಿಯು ಮಾರುತಿ ಸುಜುಕಿ ಕಂಪನಿಯ ಇದುವರೆಗಿನ ಕಾರು ಮಾದರಿಗಳಲ್ಲಿಯೇ ಹಲವು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಗ್ರ್ಯಾಂಡ್ ವಿಟಾರಾದ ಸ್ಟ್ರಾಂಗ್ ಹೈಬ್ರಿಡ್ ರೂಪಾಂತರಗಳಲ್ಲಿ ಇದೀಗ ಡೀಸೆಲ್ ಖರೀದಿ ಬಯಸುವ ಖರೀದಿದಾರರಿಗೆ ಸೂಕ್ತವಾದ ಪರ್ಯಾಯವನ್ನು ಆಯ್ಕೆಯಾಗಿದೆ.

ಬಿಡುಗಡೆಗೂ ಮುನ್ನವೇ 50 ಸಾವಿರ ಯುನಿಟ್ ಬುಕಿಂಗ್ ಪಡೆದುಕೊಂಡ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ಹೊಸ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಹಲವಾರು ಹೊಸ ಸ್ಟ್ಯಾಂಡರ್ಡ್ ವೈಷಿಶಿಷ್ಟ್ಯತೆಗಳೊಂದಿಗೆ ಎನಿಗ್ಮ್ಯಾಕ್ಸ್ ಎಕ್ಸ್ ಮತ್ತು ಎನಿಗ್ನ್ಯಾಕ್ಸ್ ಕಲೆಕ್ಷನ್ ಎನ್ನುವ ಎರಡು ಆಕ್ಸೆಸರಿಸ್ ಪ್ಯಾಕೇಜ್ ಸಹ ಪರಿಚಯಿಸುತ್ತಿದ್ದು, ಹೊಸ ಕಾರು ಮುಂಬರುವ ಸೆಪ್ಟೆಂಬರ್ ಕೊನೆಯಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಬಿಡುಗಡೆಗೂ ಮುನ್ನವೇ 50 ಸಾವಿರ ಯುನಿಟ್ ಬುಕಿಂಗ್ ಪಡೆದುಕೊಂಡ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ವಿಟಾರಾ ಎಸ್‌ಯುವಿ ಮೂಲಕ ಈಗಾಗಲೇ ಜಾಗತಿಕವಾಗಿ ಮಹತ್ವದ ಬೆಳವಣಿಗೆ ಸಾಧಿಸುತ್ತಿರುವ ಸುಜುಕಿ ಕಂಪನಿಯು ಇದೀಗ ಐದನೇ ತಲೆಮಾರಿನ ಮಾದರಿಯನ್ನು ಹೈಬ್ರಿಡ್ ಮಾದರಿಯೊಂದಿಗೆ ಭಾರತದಲ್ಲಿ ತನ್ನ ಸಹಭಾಗಿತ್ವ ಕಂಪನಿಯಾಗಿರುವ ಮಾರುತಿಯೊಂದಿಗೆ ಗ್ರ್ಯಾಂಡ್ ವಿಟಾರಾ ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಮಾದರಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಟೊಯೊಟಾ ಹೈರೈಡರ್ ಮಾದರಿಯಲ್ಲಿ ಎಂಜಿನ್ ಆಯ್ಕೆಯನ್ನು ಪರಿಚಯಿಸುತ್ತಿದೆ.

ಬಿಡುಗಡೆಗೂ ಮುನ್ನವೇ 50 ಸಾವಿರ ಯುನಿಟ್ ಬುಕಿಂಗ್ ಪಡೆದುಕೊಂಡ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ಪೆಟ್ರೋಲ್ ಹೈಬ್ರಿಡ್ ಎಂಜಿನ್ ಅಭಿವೃದ್ದಿಯಲ್ಲಿ ಈಗಾಗಲೇ ಸಾಕಷ್ಟು ಮುನ್ನಡೆ ಸಾಧಿಸಿರುವ ಟೊಯೊಟಾ ಕಂಪನಿಯು ಇದೀಗ ಹೈರೈಡರ್ ಮತ್ತು ಗ್ರಾಂಡ್ ವಿಟಾರಾ ಮಾದರಿಗಳಾಗಿ ವಿವಿಧ ಟ್ಯೂನ್ ಹೊಂದಿರುವ 1.5 ಲೀಟರ್ ಟಿಎನ್‌ಜಿಎ ಅಟ್ಕಿನ್ಸನ್ ಸೈಕಲ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ.

ಬಿಡುಗಡೆಗೂ ಮುನ್ನವೇ 50 ಸಾವಿರ ಯುನಿಟ್ ಬುಕಿಂಗ್ ಪಡೆದುಕೊಂಡ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ಬಿಡುಗಡೆಗೆ ಮುಂಚಿತವಾಗಿ ಮುಂಬರುವ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಎಸ್‍ಯುವಿಯ ಬೆಲೆಯು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಮಾಹಿತಿಯ ಪ್ರಕಾರ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ ಆರಂಭಿಕ ಬೆಲೆಯು ರೂ. 9.50 ಲಕ್ಷವಾಗಿದೆ.

ಬಿಡುಗಡೆಗೂ ಮುನ್ನವೇ 50 ಸಾವಿರ ಯುನಿಟ್ ಬುಕಿಂಗ್ ಪಡೆದುಕೊಂಡ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ಈ ಹೊಸ ಮಾರುತಿ ಗ್ರಾಂಡ್ ವಿಟಾರಾವನ್ನು 3 ಗೇರ್‌ಬಾಕ್ಸ್ ಸಂಯೋಜನೆಯೊಂದಿಗೆ ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಈಗ ಅದರ ವಿಭಾಗದಲ್ಲಿ ಹೆಚ್ಚು ಇಂಧನ-ಸಮರ್ಥ ಮಾದರಿಯಾಗಿದೆ, ಕಂಪನಿಯು ಹೊಸ ಗ್ರ್ಯಾಂಡ್ ವಿಟಾರಾ ಬ್ರೋಷರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ, ಇದು ವಿಭಿನ್ನ-ವಾರು ವೈಶಿಷ್ಟ್ಯಗಳು, ಆಯಾಮಗಳು ಮತ್ತು ವಿಶೇಷಣಗಳನ್ನು ಬಹಿರಂಗಗೊಂಡಿದೆ.

ಬಿಡುಗಡೆಗೂ ಮುನ್ನವೇ 50 ಸಾವಿರ ಯುನಿಟ್ ಬುಕಿಂಗ್ ಪಡೆದುಕೊಂಡ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ಮಾರುತಿ ಗ್ರ್ಯಾಂಡ್ ವಿಟಾರಾ ಸ್ಮಾರ್ಟ್ ಹೈಬ್ರಿಡ್ ಸಿಸ್ಟಂನೊಂದಿಗೆ ಹೊಸ ಗ್ರಾಂಡ್ ವಿಟಾರಾ ಪೆಟ್ರೋಲ್ ಆವೃತ್ತಿಯು 4 ರೂಪಾಂತರಗಳಲ್ಲಿ ಲಭ್ಯವಿದೆ. ಇದು ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಆಗಿದೆ. ಈ ಎಲೆಕ್ಟ್ರಿಕ್ ಹೈಬ್ರಿಡ್ ಆವೃತ್ತಿಯು Zeta+ ಮತ್ತು Alpha ಎರಡು ಟ್ರಿಮ್‌ಗಳಲ್ಲಿ ಲಭ್ಯವಿದೆ. ಈ ಹೊಸ ಎಸ್‌ಯುವಿಯನ್ನು ಸುಜುಕಿಯ ಗ್ಲೋಬಲ್-ಸಿ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಿದೆ.

ಬಿಡುಗಡೆಗೂ ಮುನ್ನವೇ 50 ಸಾವಿರ ಯುನಿಟ್ ಬುಕಿಂಗ್ ಪಡೆದುಕೊಂಡ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ಇದು ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿರುವ ಹೊಸ ಜನರೇಷನ್ ಎಸ್-ಕ್ರಾಸ್‌ಗೆ ಆಧಾರವಾಗಿದೆ. ಅನುಪಾತದಲ್ಲಿ, ಹೊಸ ಗ್ರಾಂಡ್ ವಿಟಾರಾ 4,345 ಎಂಎಂ ಉದ್ದ, 1,795 ಎಂಎಂ ಅಗಲ ಮತ್ತು 1,645 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಈ 5-ಸೀಟರ್ ಎಸ್‍ಯುವಿಯು 45-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿರಲಿದೆ.

ಬಿಡುಗಡೆಗೂ ಮುನ್ನವೇ 50 ಸಾವಿರ ಯುನಿಟ್ ಬುಕಿಂಗ್ ಪಡೆದುಕೊಂಡ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ಈ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು 1.5-ಲೀಟರ್, 4-ಸಿಲಿಂಡರ್ ನ್ಯಾಚುರಲ್-ಆಸ್ಪೈರಡ್ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 103 ಬಿಹೆಚ್€‌ಪಿ ಪವರ್ ಮತ್ತು 136.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆವೃತ್ತಿಯು AWD (ಆಲ್-ವೀಲ್-ಡ್ರೈವ್) ಸಿಸ್ಟಂನೊಂದಿಗೆ ಬರುತ್ತದೆ.

ಬಿಡುಗಡೆಗೂ ಮುನ್ನವೇ 50 ಸಾವಿರ ಯುನಿಟ್ ಬುಕಿಂಗ್ ಪಡೆದುಕೊಂಡ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ಇದು ಸುಜುಕಿಯ AllGrip AWD ಯುನಿಟ್ ಆಗಿದೆ. ಇದು 4 ಡ್ರೈವಿಂಗ್ ಮೋಡ್‌ಗಳನ್ನು ನೀಡುತ್ತದೆ. ಇದು ಆಟೋ, ಸ್ಯಾಂಡ್, ಸ್ನೋ ಮತ್ತು ಲಾಕ್.ಆಗಿದೆ. ಆಟೋ ಮೋಡ್‌ನಲ್ಲಿ AWD ಸಿಸ್ಟಂ ಬುದ್ಧಿವಂತಿಕೆಯಿಂದ ಭೂಪ್ರದೇಶವನ್ನು ಗ್ರಹಿಸುತ್ತದೆ ಮತ್ತು ಬೇಡಿಕೆಯ ಮೇಲೆ ಚಕ್ರಗಳಿಗೆ ಟಾರ್ಕ್ ಬದಲಾಗುತ್ತದೆ.ಹೈಬ್ರಿಡ್ ಆವೃತ್ತಿಯು ಟೊಯೊಟಾ ಮೂಲದ 1.5 ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಸಿಂಕ್ರೊನಸ್ ಎಸಿ ಮೋಟಾರ್‌ಗೆ ಜೋಡಿಸಲಾಗಿದೆ.

ಬಿಡುಗಡೆಗೂ ಮುನ್ನವೇ 50 ಸಾವಿರ ಯುನಿಟ್ ಬುಕಿಂಗ್ ಪಡೆದುಕೊಂಡ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ಈ ಅಟ್ಕಿನ್ಸನ್ ಸೈಕಲ್ ಎಂಜಿನ್ 92.45 ಬಿಹೆಚ್‍ಪಿ ಪವರ್ ಮತ್ತು 122 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಗ್ರಾಂಡ್ ವಿಟಾರಾ ಹೈಬ್ರಿಡ್ ಎಸ್‍ಯುವಿಯು ARAI ಪ್ರಕಾರ, 27.97 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ. ಮತ್ತೊಂದೆಡೆ, 1.5 ಲೀಟರ್ ಪೆಟ್ರೋಲ್ ಮ್ಯಾನುವಲ್ 21.11 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಆಟೋಮ್ಯಾಟಿಕ್ ಮಾದರಿಯು 20.58 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಮತ್ತು ಆಟೋಮ್ಯಾಟಿಕ್ AWD ಯುನಿಟ್ 19.38 ಕಿ,ಮೀ ಮೈಲೇಜ್ ಅನ್ನು ಒದಗಿಸುತ್ತದೆ.

ಬಿಡುಗಡೆಗೂ ಮುನ್ನವೇ 50 ಸಾವಿರ ಯುನಿಟ್ ಬುಕಿಂಗ್ ಪಡೆದುಕೊಂಡ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ಹೊಸ ಮಾರುತಿ ಎಸ್‍ಯುವಿಯನ್ನು 6 ಮೊನೊಟೋನ್ ಮತ್ತು 3 ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುವುದು. ಮೊನೊಟೋನ್ ಬಣ್ಣ ಆಯ್ಕೆಗಳಲ್ಲಿ ನೆಕ್ಸಾ ಬ್ಲೂ, ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಗ್ರ್ಯಾಂಡ್ಯೂರ್ ಗ್ರೇ, ಚೆಸ್ಟ್ನಟ್ ಬ್ರೌನ್ (ಸಿಗ್ಮಾದಲ್ಲಿ ನೀಡಲಾಗಿಲ್ಲ) ಮತ್ತು ಒಪ್ಯುಲೆಂಟ್ ರೆಡ್ (ಡೆಲ್ಟಾ ಮತ್ತು ಝೀಟಾ ಮಾತ್ರ) ಸೇರಿವೆ. ಡ್ಯುಯಲ್-ಟೋನ್ ಆಯ್ಕೆಗಳಲ್ಲಿ ಆರ್ಕ್ಟಿಕ್ ವೈಟ್ + ಕಪ್ಪು (ಝೀಟಾ+/ಆಲ್ಫಾ/ಆಲ್ಫಾ+), ಸ್ಪ್ಲೆಂಡಿಡ್ ಸಿಲ್ವರ್ + ಬ್ಲ್ಯಾಕ್ (ಝೀಟಾ+/ಆಲ್ಫಾ/ಆಲ್ಫಾ+) ಮತ್ತು ಒಪ್ಯುಲೆಂಟ್ ರೆಡ್ + ಬ್ಲ್ಯಾಕ್ (ಝೀಟಾ+/ಆಲ್ಫಾ/ಆಲ್ಫಾ+) ಬಣ್ಣಗಳಾಗಿವೆ.

ಬಿಡುಗಡೆಗೂ ಮುನ್ನವೇ 50 ಸಾವಿರ ಯುನಿಟ್ ಬುಕಿಂಗ್ ಪಡೆದುಕೊಂಡ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ಈ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯಲ್ಲಿ ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ನೀಡಿದೆ. ಇದರಲ್ಲಿ 6 ಏರ್ ಬ್ಯಾಗ್ ಗಳು, 360 ಕ್ಯಾಮೆರಾ ವ್ಯೂ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಹೋಲ್ಡ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, 3-ಪಾಯಿಂಟ್ ELR ಸೀಟ್ ಬೆಲ್ಟ್‌ಗಳು ಮತ್ತು ಇಂಜಿನ್ ಇಮೊಬಿಲೈಸರ್ ಅನ್ನು ಹೊಂದಿದೆ.

Most Read Articles

Kannada
English summary
Maruti grand vitara bookings cross 50 000 strong hybrid varient in high demand
Story first published: Monday, September 5, 2022, 22:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X