ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ಅಧಿಕ ಮೈಲೇಜ್, ವಿಭಿನ್ನ ವಿನ್ಯಾಸ, ಅದೇ ಫೀಚರ್ಸ್

ಮಾರುತಿ ಸುಜುಕಿ ಅಂತಿಮವಾಗಿ ತನ್ನ ಬಹುನಿರೀಕ್ಷಿತ ಗ್ರಾಂಡ್ ವಿಟಾರಾ ಎಸ್‌ಯುವಿಯನ್ನು ಅನಾವರಣಗೊಳಿಸಿದೆ, ಇದು ಬಹುತೇಕ ಟೊಯೋಟಾದ ಅರ್ಬನ್ ಕ್ರೂಸರ್ ಹೈರೈಡರ್‌ಗೆ ಹತ್ತಿರದ ಹೋಲಿಕೆಗಳನ್ನು ಹೊಂದಿದ್ದು, ಜುಲೈ 1 ರಂದು ಈ ಹೈರೈಡರ್ ಅನ್ನು ಬಹಿರಂಗಪಡಿಸಲಾಗಿತ್ತು. ಈ ಎರಡೂ ಎಸ್‌ಯುವಿಗಳನ್ನು ಟೊಯೋಟಾದ ಕರ್ನಾಟಕದ ಸ್ಥಾವರದಲ್ಲಿ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ.

ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ಅಧಿಕ ಮೈಲೇಜ್, ವಿಭಿನ್ನ ವಿನ್ಯಾಸ, ಅದೇ ಫೀಚರ್ಸ್

ಈ ಎರಡು ಮಾಡಲ್‌ಗಳು ಸರಳವಾದ ಬ್ಯಾಡ್ಜ್-ಸ್ವಾಪ್ ಹೊಂದಿದ್ದರೂ, ಗ್ರ್ಯಾಂಡ್ ವಿಟಾರಾವನ್ನು ಹೈರಿಡರ್‌ನಿಂದ ಪ್ರತ್ಯೇಕಿಸುವ ಹಲವಾರು ಅಂಶಗಳನ್ನು ನಾವು ನೋಡಬಹುದು. ಹಾಗಾದರೇ ಈ ಎರಡು ಮಾಡಲ್‌ಗಳ ನಡುವೆ ಯಾವೆಲ್ಲಾ ವ್ಯತ್ಯಾಸಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ...

ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ಅಧಿಕ ಮೈಲೇಜ್, ವಿಭಿನ್ನ ವಿನ್ಯಾಸ, ಅದೇ ಫೀಚರ್ಸ್

ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್‌ನ ವೇರಿಯೆಂಟ್‌ಗಳು

ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಆರು ವೇರಿಯೆಂಟ್‌ಗಳನ್ನು ಹೊಂದಿದೆ. ಅವುಗಳೆಂದರೆ ಸಿಗ್ಮಾ, ಡೆಲ್ಟಾ, ಝೀಟಾ, ಆಲ್ಫಾ, ಝೀಟಾ ಪ್ಲಸ್ ಮತ್ತು ಆಲ್ಫಾ ಪ್ಲಸ್. ಮೊದಲ ನಾಲ್ಕು ವೇರಿಯೆಂಟ್‌ಗಳು ಮೈಲ್ಡ್ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದ್ದರೆ, ಉಳಿದವು ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಬರುತ್ತವೆ.

ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ಅಧಿಕ ಮೈಲೇಜ್, ವಿಭಿನ್ನ ವಿನ್ಯಾಸ, ಅದೇ ಫೀಚರ್ಸ್

ಮತ್ತೊಂದೆಡೆ, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್‌ನಲ್ಲಿ ಇ, ಎಸ್, ಜಿ, ವಿ ಟ್ರಿಮ್‌ಗಳು ಮಾತ್ರ ಮೈಲ್ಡ್ ಹೈಬ್ರಿಡ್ ಪವರ್‌ಟ್ರೇನ್ ಹೊಂದಿದದ್ದರೇ, ಎಸ್, ಜಿ ಮತ್ತು ವಿ ಟ್ರಿಮ್‌ಗಳಲ್ಲಿ ಮಾತ್ರ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ.

ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ಅಧಿಕ ಮೈಲೇಜ್, ವಿಭಿನ್ನ ವಿನ್ಯಾಸ, ಅದೇ ಫೀಚರ್ಸ್

ಟೊಯೊಟಾ ಆಗಸ್ಟ್‌ನಲ್ಲಿ ಹೈರೈಡರ್‌ನ ಬೆಲೆಯನ್ನು ಪ್ರಕಟಿಸಲಿದೆ, ಆದರೆ ಮಾರುತಿ ಶೀಘ್ರದಲ್ಲೇ ಗ್ರ್ಯಾಂಡ್ ವಿಟಾರಾ ಬೆಲೆಯನ್ನು ಘೋಷಿಸುವ ನಿರೀಕ್ಷೆಯಿದೆ. ಮುಂಬರುವ ಹಬ್ಬದ ವೇಳೆಗೆ ವಿತರಣೆಗಳು ಕೂಡ ಪ್ರಾರಂಭವಾಗಲಿವೆ.

ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ಅಧಿಕ ಮೈಲೇಜ್, ವಿಭಿನ್ನ ವಿನ್ಯಾಸ, ಅದೇ ಫೀಚರ್ಸ್

ಗ್ರ್ಯಾಂಡ್ ವಿಟಾರಾ vs ಹೈರೈಡರ್: ಇಂಟೀರಿಯರ್ ಮತ್ತು ಎಕ್ಸ್‌ಟೀರಿಯರ್

ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್ ಮುಂಭಾಗದ ಗ್ರಿಲ್ ಮತ್ತು ಹೆಡ್‌ಲೈಟ್‌ಗಳಲ್ಲಿ ತಮ್ಮದೇ ವಿಭಿನ್ನ ಸ್ಟೈಲ್ ಅನ್ನು ಪಡೆದುಕೊಂಡಿವೆ. ಹೈರೈಡರ್ ಹೊಸ ಟೊಯೋಟಾ ಗ್ರಿಲ್ ಅನ್ನು ಪಡೆದು ತೆಳುವಾದ ಓಪನಿಂಗ್ ಮತ್ತು ಮಧ್ಯದಲ್ಲಿ ದೊಡ್ಡ ಟೊಯೋಟಾ ಬ್ಯಾಡ್ಜ್ ಅನ್ನು ಪಡೆದುಕೊಂಡಿದೆ. ಮಾರುತಿ SUV ಗ್ಲಾಸ್‌ ಬ್ಲ್ಯಾಕ್ ಅಕ್ಸೆಂಟ್‌ಗಳೊಂದಿಗೆ ವಿಶಾಲವಾದ ಗ್ರಿಲ್ ಅನ್ನು ಪಡೆದುಕೊಂಡಿದೆ.

ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ಅಧಿಕ ಮೈಲೇಜ್, ವಿಭಿನ್ನ ವಿನ್ಯಾಸ, ಅದೇ ಫೀಚರ್ಸ್

ಜೊತೆಗೆ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು (ಡಿಆರ್‌ಎಲ್) ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ಬಲೆನೊದಲ್ಲಿ ನೀಡಲಾಗಿದ್ದ ಅದೇ 3 ಪಾಡ್ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಗ್ರ್ಯಾಂಡ್ ವಿಟಾರಾದಲ್ಲೂ ನೀಡಲಾಗಿದೆ. ಇನ್ನು ಹೈರೈಡರ್ ಸ್ಪೋರ್ಟ್ಸ್ ಟ್ವಿನ್ ಎಲ್ಇಡಿ ಸ್ಟ್ರಿಪ್‌ಗಳನ್ನು ಗ್ರಿಲ್‌ಗೆ ಸಂಪರ್ಕಿಸಲಾದ ಕ್ರೋಮ್ ಪಟ್ಟಿಯಿಂದ ಬೇರ್ಪಡಿಸಲಾಗಿದೆ.

ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ಅಧಿಕ ಮೈಲೇಜ್, ವಿಭಿನ್ನ ವಿನ್ಯಾಸ, ಅದೇ ಫೀಚರ್ಸ್

ಇನ್ನು ಪ್ರೊಫೈಲ್‌ನಲ್ಲಿ ಎರಡೂ ಒಂದೇ ರೀತಿ ಕಂಡರೂ ಅಲಾಯ್ ವೀಲ್ ಡಿಸೈನ್ ಮತ್ತು ಮಾರುತಿ ಸುಜುಕಿ ಎಸ್‌ಯುವಿಯಲ್ಲಿರುವ ಡಿ ಪಿಲ್ಲರ್‌ನಲ್ಲಿನ ಕ್ರೋಮ್‌ನ ಸ್ಪ್ಲಾಶ್‌ಗಳ ನಡುವೆ ವ್ಯತ್ಯಾಸವಿದೆ. ಗ್ರ್ಯಾಂಡ್ ವಿಟಾರಾವನ್ನು ಮೂರು ಡ್ಯುಯಲ್-ಟೋನ್ ಆಯ್ಕೆಗಳೊಂದಿಗೆ ಆರು ಬಣ್ಣಗಳಲ್ಲಿ ನೀಡಲಾಗುತ್ತದೆ, ಆದರೆ ಅರ್ಬನ್ ಕ್ರೂಸರ್ ಹೈರೈಡರ್ ನಾಲ್ಕು ಡ್ಯುಯಲ್-ಟೋನ್ ಆಯ್ಕೆಗಳೊಂದಿಗೆ ಏಳು ಬಣ್ಣಗಳನ್ನು ಪಡೆದುಕೊಂಡಿದೆ.

ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ಅಧಿಕ ಮೈಲೇಜ್, ವಿಭಿನ್ನ ವಿನ್ಯಾಸ, ಅದೇ ಫೀಚರ್ಸ್

ಹಿಂಭಾಗದಲ್ಲಿ, ಎರಡೂ ಮಾದರಿಗಳು ಸ್ಲಿಮ್ ಟೈಲ್-ಲೈಟ್‌ಗಳನ್ನು ಪಡೆದುಕೊಂಡಿವೆ. ಗ್ರ್ಯಾಂಡ್ ವಿಟಾರಾದ ಟೈಲ್-ಲೈಟ್‌ಗಳನ್ನು ಲೈಟ್ ಬಾರ್‌ನಿಂದ ಬೇರ್ಪಡಿಸಿದರೆ, ಹೈರೈಡರ್‌ಗೆ ಕ್ರೋಮ್ ಸ್ಟ್ರಿಪ್‌ನಿಂದ ಬೇರ್ಪಡಿಸಲಾಗುತ್ತದೆ. ಟೊಯೊಟಾ ಸ್ಪೋರ್ಟ್ಸ್ ಟ್ವಿನ್ ಸಿ-ಆಕಾರದ ಎಲ್‌ಇಡಿ ಲ್ಯಾಂಪ್, ಮಾರುತಿ ಸುಜುಕಿ 3-ಬ್ಲಾಕ್ ಡಿಸೈನ್‌ ಅನ್ನು ಹೊಂದಿದ್ದು ಮುಂಭಾಗದಲ್ಲಿ ಡಿಆರ್‌ಎಲ್‌ಗಳನ್ನು ಅನುಕರಿಸುತ್ತದೆ. ಈ ಎರಡೂ ಮಾದರಿಗಳು ಟೈಲ್‌ಗೇಟ್‌ನ ಪಕ್ಕದಲ್ಲಿ ರಿವರ್ಸ್ ಲೈಟ್‌ಗಳು ಮತ್ತು ಇಂಡಿಕೇಟರ್‌ಗಳನ್ನು ಪಡೆಯುತ್ತವೆ.

ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ಅಧಿಕ ಮೈಲೇಜ್, ವಿಭಿನ್ನ ವಿನ್ಯಾಸ, ಅದೇ ಫೀಚರ್ಸ್

ಎರಡು SUVಗಳು ಒಳಭಾಗದಲ್ಲಿ ಬುತೇಕ ಒಂದೇ ರೀತಿ ಕಾಣುತ್ತವೆ, ಆದರೆ ಒಳಗಿನ ಬಣ್ಣದ ವಿಷಯದಲ್ಲಿ ಮಾತ್ರ ವ್ಯತ್ಯಾಸವಿದೆ. ಇತ್ತೀಚಿನ ಮಾರುತಿ ಸುಜುಕಿ ಮಾದರಿಗಳಲ್ಲಿ ಕಂಡುಬರುವ ಅದೇ ಸ್ಟೀರಿಂಗ್ ವೀಲ್ ವಿನ್ಯಾಸವನ್ನು ಎರಡೂ ಮಾದರಿಗಳು ಪಡೆದುಕೊಂಡಿವೆ. ಇನ್ನು ಎಸಿ ಕಂಟ್ರೋಲ್, ವೆಂಟ್‌ಗಳು ಮತ್ತು ಪವರ್ ವಿಂಡೋ ಸ್ವಿಚ್‌ಗಳು ಸಹ ಒಂದೇ ಆಗಿವೆ.

ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ಅಧಿಕ ಮೈಲೇಜ್, ವಿಭಿನ್ನ ವಿನ್ಯಾಸ, ಅದೇ ಫೀಚರ್ಸ್

ಗ್ರ್ಯಾಂಡ್ ವಿಟಾರಾ vs ಹೈರೈಡರ್: ಫೀಚರ್ಸ್

ಮಾರುತಿ ಸುಜುಕಿ ಮತ್ತು ಟೊಯೊಟಾದ ಹೊಸ ಹೈಬ್ರಿಡ್ ಎಸ್‌ಯುವಿಗಳು ಒಂದೇ ರೀತಿಯ ಫೀಚರ್ಸ್‌ ಪಟ್ಟಿಯನ್ನು ಒಳಗೊಂಡಿವೆ. ಕನೆಕ್ಟೆಡ್ ಕಾರ್ ಟೆಕ್, ಪನೋರಮಿಕ್ ಸನ್‌ರೂಫ್, ಹೈ ಎಂಡ್ ವೇರಿಯೆಂಟ್‌ಗಳಲ್ಲಿ 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ (ಬಲವಾದ ಹೈಬ್ರಿಡ್‌ಗಳಲ್ಲಿ ಮಾತ್ರ), ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಜೊತೆಗೆ 9-ಇಂಚಿನ ಸ್ಮಾರ್ಟ್ ಪ್ರೊ ಪ್ಲೇ ಪ್ಲಸ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಎರಡೂ ಮಾಡಲ್‌ಗಳು ಪಡೆದುಕೊಂಡಿವೆ. ISOFIX ಚೈಲ್ಡ್-ಸೀಟ್ ಮೌಂಟ್‌ಗಳು ಮತ್ತು AWD ವರ್ಷನ್‌ನಲ್ಲಿ ಡ್ರೈವ್ ಮೋಡ್ ಸೆಲೆಕ್ಟರ್ ಅನ್ನುಬ ಎರಡೂ ಪಡೆಯುತ್ತವೆ.

ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ಅಧಿಕ ಮೈಲೇಜ್, ವಿಭಿನ್ನ ವಿನ್ಯಾಸ, ಅದೇ ಫೀಚರ್ಸ್

ಗ್ರ್ಯಾಂಡ್ ವಿಟಾರಾ vs ಹೈರೈಡರ್: ಪವರ್‌ಟ್ರೇನ್ ಮತ್ತು ಇಂಧನ ದಕ್ಷತೆ

ಹೊಸ ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್ ಒಂದೇ ಪವರ್‌ಟ್ರೇನ್ ಮತ್ತು ಡ್ರೈವ್‌ಟ್ರೇನ್ ಆಯ್ಕೆಗಳನ್ನು ಹಂಚಿಕೊಂಡಿವೆ. ಈ ಎರಡೂ ಹೈಬ್ರಿಡ್ ಎಸ್‌ಯುವಿಗಳು ಮೈಲ್ಡ್ ಹೈಬ್ರಿಡ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ಎಂಜಿನ್‌ಗಳನ್ನು ಪಡೆದಿವೆ. ಮೊದಲನೆಯದು ಮಾರುತಿ ಸುಜುಕಿಯ ನಾಲ್ಕು ಸಿಲಿಂಡರ್ K15C ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ISG) ಜೊತೆಗೆ 103hp ಮತ್ತು 137Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ಅಧಿಕ ಮೈಲೇಜ್, ವಿಭಿನ್ನ ವಿನ್ಯಾಸ, ಅದೇ ಫೀಚರ್ಸ್

ಸ್ಟ್ರಾಂಗ್ ಹೈಬ್ರಿಡ್ ಸ್ಪೋರ್ಟ್ ಟೊಯೋಟಾದ ಮೂರು-ಸಿಲಿಂಡರ್ 1.5-ಲೀಟರ್ TNGA ಅಟ್ಕಿನ್ಸನ್ ಸೈಕಲ್ ಎಂಜಿನ್ 177.6V ಲಿಥಿಯಂ-ಐಯಾನ್ ಬ್ಯಾಟರಿಗೆ ಜೋಡಿಸಲಾಗಿದೆ. ಇದು 115hp ಮತ್ತು 122Nm ಟಾರ್ಕ್ ಅನ್ನು ಹೊರಹಾಕುತ್ತದೆ. ಇದನ್ನು ಟೊಯೋಟಾದ e-CVT ಟ್ರಾನ್ಸ್ಮಿಷನ್ಗೆ ಜೋಡಿಸಲಾಗಿದೆ. ಮೈಲ್ಡ್ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಮಾತ್ರ ಆಲ್-ವೀಲ್ ಡ್ರೈವ್ ಎರಡೂ SUV ಗಳಲ್ಲಿ ಲಭ್ಯವಿದೆ.

ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ಅಧಿಕ ಮೈಲೇಜ್, ವಿಭಿನ್ನ ವಿನ್ಯಾಸ, ಅದೇ ಫೀಚರ್ಸ್

ಗ್ರ್ಯಾಂಡ್ ವಿಟಾರಾದ ಮೈಲ್ಡ್ ಹೈಬ್ರಿಡ್ ವರ್ಷನ್ 21.11kpl ಇಂಧನ ದಕ್ಷತೆಯನ್ನು ಹೊಂದಿದೆ ಎಂದು ಮಾರುತಿ ಸುಜುಕಿ ಹೇಳಿಕೊಂಡಿದೆ. ಆದರೆ ಇಂಟಲಿಜೆಂಟ್ ಎಲೆಕ್ಟ್ರಿಕ್ ಹೈಬ್ರಿಡ್ ವರ್ಷನ್ ಇಂಧನ ದಕ್ಷತೆಯು 27.97kpl ಆಗಿದೆ. ಟೊಯೋಟಾ ನಿಯೋ ಡ್ರೈವ್ ಮತ್ತು ಹೈಬ್ರಿಡ್ ವರ್ಷನ್‌ಗಳಿಗೆ ಇಂಧನ ದಕ್ಷತೆಯ ಅಂಕಿಅಂಶಗಳನ್ನು ಘೋಷಿಸಿಲ್ಲ, ಆದರೆ ಹೈರೈಡರ್ ಇದೇ ಅಂಕಿಅಂಶಗಳನ್ನು ಹೊಂದಿದೆ ಎಂದು ನಿರೀಕ್ಷಿಸಲಾಗಿದೆ.

ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ಅಧಿಕ ಮೈಲೇಜ್, ವಿಭಿನ್ನ ವಿನ್ಯಾಸ, ಅದೇ ಫೀಚರ್ಸ್

ಗ್ರ್ಯಾಂಡ್ ವಿಟಾರಾ vs ಹೈರೈಡರ್: ವಾರಂಟಿ

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್‌ನಲ್ಲಿ 3 ವರ್ಷ/1,00,000 ಕಿ.ಮೀ ವಾರಂಟಿಯನ್ನು ನೀಡುತ್ತಿದ್ದು, ಇದನ್ನು 5 ವರ್ಷ/2,20,000 ಕಿ.ಮೀವರೆಗೆ ವಿಸ್ತರಿಸಬಹುದು. ಸ್ಟ್ರಾಂಗ್ ಹೈಬ್ರಿಡ್ ಹೈರೈಡರ್‌ನ ಬ್ಯಾಟರಿಯನ್ನು 8 ವರ್ಷ/1,60,000 ಕಿ.ಮೀ ವಾರಂಟಿಯೊಂದಿಗೆ ನೀಡಲಾಗುತ್ತದೆ. ಮಾರುತಿ ಸುಜುಕಿ ಇನ್ನೂ ಗ್ರ್ಯಾಂಡ್ ವಿಟಾರಾಗೆ ವಾರಂಟಿ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ಅಧಿಕ ಮೈಲೇಜ್, ವಿಭಿನ್ನ ವಿನ್ಯಾಸ, ಅದೇ ಫೀಚರ್ಸ್

ಗ್ರ್ಯಾಂಡ್ ವಿಟಾರಾ vs ಹೈರೈಡರ್: ಪ್ರತಿಸ್ಪರ್ಧಿಗಳು

ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಪರಸ್ಪರ ಸ್ಪರ್ಧಿಸಲಿವೆ. ಜೊತೆಗೆ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗುನ್‌ಗಳೊಂದಿಗೆ ಸೆಣಸಾಡಲಿವೆ.

Article Published On: Thursday, July 21, 2022, 11:22 [IST]
English summary
Maruti Grand Vitara vs Toyota Highrider Same Features Different Design Higher Mileage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+