Just In
- 1 hr ago
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್ಜಿ
- 1 hr ago
ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...
- 2 hrs ago
ಕಡಿಮೆ ಮೊತ್ತಕ್ಕೆ ಲೀಸ್ಗೆ ಸಿಗಲಿದೆ ಫೋಕ್ಸ್ವ್ಯಾಗನ್ ವರ್ಟಸ್ ಕಾರು
- 4 hrs ago
ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ನಡೆಸಿದ ಮಹೀಂದ್ರಾ ಥಾರ್ 5 ಡೋರ್ ವರ್ಷನ್
Don't Miss!
- Technology
ವಿಶ್ವ ಛಾಯಾಗ್ರಹಣ ದಿನ: ಈ ಸ್ಮಾರ್ಟ್ಫೋನ್ಗಳು ಫೋಟೋಗ್ರಫಿಗೆ ಸೂಕ್ತ ಎನಿಸಲಿವೆ!
- Sports
ಯುಎಇ ಟಿ20 ಲೀಗ್: 14 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ದುಬೈ ಕ್ಯಾಪಿಟಲ್ಸ್
- Lifestyle
ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಕೆಲಸಕ್ಕಂತೂ ಅಲ್ಪ ವಿರಾಮ ನೀಡಲೇಬೇಕು..!
- Movies
ಹೊಸ ಬಿಗ್ಬಾಸ್ಗೆ ನಾಗಾರ್ಜುನ ಪಡೆಯುತ್ತಿರುವ ಸಂಭಾವನೆ ಇಷ್ಟೋಂದಾ?
- Travel
ಮೋಜಿನ ವಾರಾಂತ್ಯದ ಪ್ರವಾಸಕ್ಕಾಗಿ ಇಲ್ಲಿಗೆ ಭೇಟಿ ನೀಡಿ
- News
ಕೃಷ್ಣ ಜನ್ಮಾಷ್ಟಮಿ: ಮುಂಬೈನಲ್ಲಿ ವಿಶ್ವ ದಾಖಲೆ ಬರೆದ ಅತಿ ಎತ್ತರದ ಮಾನವ ಪಿರಮಿಡ್
- Education
Karnataka High Court Recruitment 2022 : 129 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಫೋನ್ ಪೇ, ಗೂಗಲ್ ಪೇ, ಭೀಮ್ App ಬಳಕೆಗೆ ಪೇಮೆಂಟ್ ಶುಲ್ಕ?
ಭಾರತ್ ಎನ್‌ಸಿಎಪಿ ಜಾರಿಗೆ ತರುತ್ತಿರುವ ಕೇಂದ್ರದ ಹೊಸ ಯೋಜನೆಗೆ ಮಾರುತಿ ಸುಜುಕಿ ವಿರೋಧ
ಭಾರತದಲ್ಲಿ ವಾಹನಗಳ ಸುರಕ್ಷತೆಯ ರೇಟಿಂಗ್ ಅನ್ನು ನಿಗದಿಪಡಿಸಲು ಭಾರತ್ ಎನ್‌ಸಿಎಪಿ(ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ) ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿದ್ದು, ಇದು ಸುರಕ್ಷಿತ ಕಾರುಗಳನ್ನು ತಯಾರಿಸಲು ಕಾರು ಕಂಪನಿಗಳಿಗೆ ಪ್ರೇರಣೆ ನೀಡಲಿದೆ.

ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ ಅಡಿಯಲ್ಲಿ ಕ್ರ್ಯಾಶ್ ಟೆಸ್ಟ್‌ಗೆ ಒಳಗಾಗುವ ಕಾರುಗಳಿಗೆ ಸೇಫ್ಟಿ ರೇಟಿಂಗ್ಸ್ ನೀಡಲಾಗುತ್ತಿದ್ದು, ಭಾರತದಲ್ಲಿ ನಿರ್ಮಾಣವಾಗುತ್ತಿರುವ ಪ್ರಮುಖ ಕಾರುಗಳು ಕ್ರ್ಯಾಶ್ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿವೆ. ಸದ್ಯ ಭಾರತದಲ್ಲಿ ನಿರ್ಮಾಣದ ಕಾರುಗಳು ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗಾಗಿ ಜಾಗತಿಕ ಮಾರುಕಟ್ಟೆಯಲ್ಲಿನ ಮಾನದಂಡಗಳನ್ನು ಅನುಸರಿಸುತ್ತಿದ್ದು, ಶೀಘ್ರದಲ್ಲಿಯೇ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಭಾರತದಲ್ಲಿ ಆರಂಭಗೊಳ್ಳುವುದು ಬಹುತೇಕ ಖಚಿತವಾಗಿದೆ.

ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಎನ್‌ಸಿಎಪಿ) ಆರಂಭಕ್ಕೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಈಗಾಗಗಲೇ ಹೊಸ ಯೋಜನೆಯ ಕರಡು ಅಧಿಸೂಚನೆಯನ್ನು ಅನುಮೋದಿಸಿದ್ದು, ಆತ್ಮನಿರ್ಭರ ಭಾರತ ಅಭಿಯಾನ ಯೋಜನೆ ಅಡಿ ಹೊಸ ಟೆಸ್ಟಿಂಗ್ ಪ್ರಕ್ರಿಯೆ ಚಾಲನೆ ನೀಡಲಾಗುತ್ತಿದೆ.

NCAP ಎಂದು ಕರೆಯಲ್ಪಡುವ ಹೊಸ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ ಆಟೋಮೊಬೈಲ್‌ಗಳ ಸುರಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು, ಮೊಟ್ಟ ಮೊದಲ ಬಾರಿಗೆ ಇದನ್ನು ಯುಎಸ್ ಎನ್‌ಸಿಎಪಿ ಹೆಸರಿನಲ್ಲಿ ಪರಿಚಯಿಸಲಾಯ್ತು. ತದನಂತರ ಹಲವಾರು ಮಾರ್ಪಾಡುಗಳೊಂದಿಗೆ ಇಂದು ಒಂಬತ್ತು ವಿವಿಧ ಬಗೆಯ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗಳು ಅಸ್ತಿತ್ವಕ್ಕೆ ಬಂದಿದ್ದು, ಸದ್ಯ ಭಾರತದಲ್ಲಿ ನಿರ್ಮಾಣವಾಗುವ ಕಾರುಗಳು ಗ್ಲೋಬಲ್ ಎನ್‌ಸಿಎಪಿ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಒಳಪಡುತ್ತಿವೆ.

ಗ್ಲೋಬಲ್ ಎನ್‌ಸಿಎಪಿ ಅಡಿಯಲ್ಲಿ ವಿಶ್ವದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ತಮ್ಮದೆ ಆದ ಕೆಲವು ಸುರಕ್ಷಾ ಮಾನದಂಡಗಳೊಂದಿಗೆ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ಗೆ ಒಳಗಾಗುತ್ತಿದ್ದು, ಗ್ಲೋಬಲ್ ಎನ್‌ಸಿಎಪಿ ಜೊತೆ ಯುಎಸ್ ಎನ್‌ಸಿಎಪಿ, ಯುರೋ ಎನ್‌ಸಿಎಪಿ, ಏಷಿಯನ್ ಎನ್‌ಸಿಎಪಿ, ಜಪಾನ್ ಎನ್‌ಸಿಎಪಿ, ಚೀನಾ ಎನ್‌ಸಿಎಪಿ, ಕೊರಿಯನ್ ಎನ್‌ಸಿಎಪಿ, ಲ್ಯಾಟಿನ್ ಎನ್‌ಸಿಎಪಿ ಕಾರ್ಯನಿರ್ವಹಣೆಯಲ್ಲಿವೆ.

ಅದೇ ರೀತಿಯಾಗಿ ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಕಾರುಗಳ ಸುರಕ್ಷತೆಯನ್ನು ಬಲಪಡಿಸಲು ಕೇಂದ್ರ ಸರ್ಕಾರವು ದೇಶಿಯ ಮಾರುಕಟ್ಟೆಯಲ್ಲಿ ಕಾರುಗಳಿಗೆ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ಪರಿಚಯಿಸಲಾಗುತ್ತಿದ್ದು, ಭಾರತ್ ಎನ್‌ಸಿಎಪಿ ಜಾರಿಗೆ ಬಂದಲ್ಲಿ ಭಾರತದಲ್ಲಿ ಮಾರಾಟಗೊಳ್ಳುವ ಮತ್ತು ರಫ್ತುಗೊಳ್ಳುವ ಪ್ರತಿ ಕಾರು ಮಾದರಿಯು ಕೂಡಾ ಹೊಸ ಸುರಕ್ಷಾ ಮಾನದಂಡಗಳನ್ನು ಪಾಲನೆ ಮಾಡಬೇಕಾಗುತ್ತದೆ.

ಕೇಂದ್ರದ ಹೊಸ ಯೋಜನೆಗೆ ಪ್ರಮುಖ ಕಾರು ಕಂಪನಿಗಳು ಬೆಂಬಲ ಸೂಚಿಸಿದರೆ ಕಾರು ಉತ್ಪಾದನಾ ದಿಗ್ಗಜ ಕಂಪನಿ ಮಾರುತಿ ಸುಜುಕಿ ಕಂಪನಿ ವಿರೋಧ ವ್ಯಕ್ತಪಡಿಸಿದೆ. ಬ್ಯುಸಿನೆಸ್ ಟುಡೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕಂಪನಿಯ ಅಧ್ಯಕ್ಷ ಆರ್‌ಸಿ ಭಾರ್ಗವ ಅವರು ಭಾರತವು ಪಶ್ಚಿಮ ರಾಷ್ಟ್ರಗಳಿಂತಲೂ ಸಂಪೂರ್ಣವಾಗಿ ವಿಭಿನ್ನ ಮಾರುಕಟ್ಟೆಯಾಗಿದ್ದು, ಅಲ್ಲಿ ಎನ್‌ಸಿಎಪಿಯಂತಹ ಪರೀಕ್ಷೆಗಳು ಮಾನದಂಡವಾಗಿವೆ. ಆದರೆ ಭಾರತದಲ್ಲಿರುವ ನಮ್ಮ ಎಲ್ಲಾ ವಾಹನಗಳಲ್ಲಿ ನಾವು ಯುರೋಪಿಯನ್ ಮಾನದಂಡಗಳನ್ನು ಅನುಸರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ದೇಶಿಯ ಮಾರುಕಟ್ಟೆಯಲ್ಲಿ ಉತ್ಪಾದನೆಗೊಳ್ಳುವ ಹೊಸ ಕಾರುಗಳಲ್ಲಿ ಯುರೋಪಿನ್ ಸುರಕ್ಷಾ ಮಾನದಂಡಗಳನ್ನು ಅನುಸರಿಸುವುದಾದರೆ ದ್ವಿಚಕ್ರ ವಾಹನಗಳ ಮಾಲೀಕರ ವಿರುದ್ಧ ಇದು ತಾರತಮ್ಯ ಮಾಡಿದಂತಾಗುತ್ತದೆ. ಕಾರುಗಳಲ್ಲಿನ ಸುರಕ್ಷತೆ ಸುಧಾರಿಸುವ ಮೊದಲು ದ್ವಿಚಕ್ರ ವಾಹನಗಳನ್ನು ಬಳಸುವ ಜನರಿಗೆ ಉತ್ತಮ ಸಾರಿಗೆಯನ್ನು ಒದಗಿಸಲು ಏನು ಮಾಡಬಹುದು ಎಂಬುದನ್ನು ನಾವು ನೋಡಬೇಕಿದೆ ಎಂದು ಕೇಂದ್ರ ಸರ್ಕಾರದ ಯೋಜನೆಗೆ ಟೀಕೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಕಾರ ಭಾರತ್ ಎನ್‌ಸಿಎಪಿಯು ಮುಂಬರುವ ದಿನಗಳಲ್ಲಿ ಭಾರತವನ್ನು ವಿಶ್ವದ ನಂ. 1 ಆಟೋಮೊಬೈಲ್ ಹಬ್ ಮಾಡುವ ಗುರಿಸಾಧನೆಗೆ ಮಹತ್ವದ ನಿರ್ಧಾರವಾಗಿದೆ ಎಂದಿದ್ದು, 2022ರ ಏಪ್ರಿಲ್ 1ರಿಂದಲೇ ಹೊಸ ಕಾರುಗಳನ್ನು ಭಾರತ್ ಎನ್‌ಸಿಎಪಿ ಅಡಿ ಕ್ರ್ಯಾಶ್ ಟೆಸ್ಟ್ ಆರಂಭಿಸಲು ಯೋಜಿಸಲಾಗಿದೆ.

ಸದ್ಯ ಭಾರತದಲ್ಲಿ ಕೆಲವೇ ಕೆಲವು ಕಾರು ತಯಾರಕ ಕಂಪನಿಯು ಮಾತ್ರವೇ ಸ್ವಯಂಪ್ರೇರಣೆಯಿಂದ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಒಳಗಾಗುತ್ತಿದ್ದು, ಭಾರತ್ ಎನ್‌ಸಿಎಪಿ ಜಾರಿ ನಂತರ ಹೊಸದಾಗಿ ಮಾರಾಟಗೊಳ್ಳಲಿರುವ ಪ್ರತಿ ಕಾರು ಮಾದರಿಯು ಕ್ರ್ಯಾಶ್ ಟೆಸ್ಟಿಂಗ್‌ಗೆ ಒಳಗಾಗಬೇಕಾಗುತ್ತದೆ.

ಭಾರತದಲ್ಲಿ ಹೆಚ್ಚುತ್ತಿರುವ ವಾಹನಗಳ ಪರಿಣಾಮ ಅಪಘಾತಗಳ ಸಂಖ್ಯೆ ಕೂಡಾ ಸಾಕಷ್ಟು ಹೆಚ್ಚಳವಾಗುತ್ತಿದ್ದು, ಅಪಘಾತಗಳಲ್ಲಿ ಪ್ರಾಣಹಾನಿಯನ್ನು ತಗ್ಗಿಸಲು ಹೊಸ ಕಾರುಗಳಲ್ಲಿ ಸುರಕ್ಷಾ ಸೌಲಭ್ಯಗಳನ್ನು ನಿರಂತರವಾಗಿ ಸುಧಾರಣೆಗೊಳಿಸಲಾಗುತ್ತಿದೆ.

ಆದರೆ ಸುರಕ್ಷಾ ಮಾನದಂಡಗಳು ಕಾರುಗಳಿಗೆ ಮಾತ್ರವೇ ಏಕೆ ಎನ್ನುತ್ತಿರುವ ಮಾರುತಿ ಸುಜುಕಿಯು ಸುರಕ್ಷಾ ಮಾನದಂಡಗಳನ್ನು ಕಡ್ಡಾಯವಾಗಿ ಕಡ್ಡಾಯವಾಗಿ ಪಾಲನೆ ಮಾಡುವುದಾರೆ ದ್ವಿಚಕ್ರ ವಾಹನಗಳಿಗೆ ಅನ್ವಯಿಸಲಿ ಎಂದಿದ್ದಾರೆ. ಇತ್ತೀಚೆಗೆ ಮಾರುತಿ ಸುಜುಕಿ ಪ್ರಮುಖ ಕಾರುಗಳು ಕ್ರ್ಯಾಶ್ ಟೆಸ್ಟಿಂಗ್ ಸಾಕಷ್ಟು ಕಳಪೆ ಪ್ರದರ್ಶನ ತೋರುತ್ತಿದ್ದು, ಮಾರಾಟದಲ್ಲಿ ಇತರೆ ಕಾರುಗಳಿಂತಲೂ ಮುಂದಿದ್ದರೂ ಕೂಡಾ ಗ್ರಾಹಕರಿಂದ ಟೀಕೆಗೆ ಒಳಗಾಗುತ್ತಿದೆ.

ಇದರಿಂದ ಕಳೆದ ಕೆಲ ತಿಂಗಳಿನಿಂದ ಹೊಸ ಕಾರು ಖರೀದಿದಾರರು ಹೆಚ್ಚು ಸುರಕ್ಷತೆ ಹೊಂದಿರುವ ಕಾರು ಮಾದರಿಗಳತ್ತ ಒಲವು ತೋರುತ್ತಿದ್ದು, ಇದು ಮಾರುತಿ ಸುಜುಕಿ ಕಾರುಗಳಿಗೆ ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ. ಹೀಗಾಗಿ ಕಂಪನಿಯು ಕೇವಲ ಸುರಕ್ಷತೆ ಒತ್ತುನೀಡುವುದಾರೇ ಎಲ್ಲಾ ವಾಹನಗಳಿಗೆ ಒಂದೇ ರೀತಿಯಾಗಿರಬೇಕೆಂಬ ವಾದ ಮಂಡಿಸುತ್ತಿದ್ದು, ಕಡ್ಡಾಯ ಏರ್‌ಬ್ಯಾಗ್ ನಿಯಮಕ್ಕೂ ಮಾರುತಿ ಸುಜುಕಿ ವಿರೋಧಿಸಿತ್ತು.

ನಿರಂತರವಾಗಿ ಹೊಸ ಸುರಕ್ಷಾ ಮಾನದಂಡಗಳ ಪರಿಷ್ಕರಣೆಯಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದ್ದು, ಇದು ಸಣ್ಣ ಕಾರುಗಳ ಮಾರಾಟದ ಮೇಲೆ ಸಾಕಷ್ಟು ಹಿನ್ನಡೆ ಉಂಟುಮಾಡುತ್ತಿದೆ ಎನ್ನುವುದು ಮಾರುತಿ ಸುಜುಕಿ ಅಳಲು. ಆದರೆ ದೇಶದಲ್ಲಿ ದಿನನಿತ್ಯ ನೂರಾರು ಜನರು ವಾಹನಗಳಲ್ಲಿ ಸೂಕ್ತ ಸುರಕ್ಷಾ ಸೌಲಭ್ಯಗಳಿಲ್ಲದೆ ಸಾವನ್ನಪ್ಪುತ್ತಿದ್ದು, ಈ ಕಾರಣಕ್ಕಾಗಿ ಕಾರುಗಳಲ್ಲಿನ ಸುರಕ್ಷತೆ ಮಾನದಂಡಗಳನ್ನು ಹೆಚ್ಚಿಸಲಾಗುತ್ತಿದೆ.

ಇನ್ನು ಕಳೆದ ಒಂದು ದಶಕದ ಅವಧಿಯಲ್ಲಿ ಪ್ರಯಾಣಿಕ ಕಾರುಗಳಲ್ಲಿ ಹಲವಾರು ಸುರಕ್ಷಾ ಮಾನದಂಡಗಳು ಸಾಕಷ್ಟು ಸುಧಾರಣೆಗೊಂಡಿದ್ದು, ಹೊಸ ವಾಹನಗಳಲ್ಲಿ ಗರಿಷ್ಠಿ ಸುರಕ್ಷತೆಗಾಗಿ ಅಂತರ್‌ರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಲೆ ಆಧಾರದ ಮೇಲೆ ಅತ್ಯುತ್ತಮ ಸುರಕ್ಷಾ ಫೀಚರ್ಸ್ ಹೊಂದಿರುವ ಹಲವಾರು ಪ್ರಯಾಣಿಕ ಬಳಕೆಯ ವಾಹನಗಳು ಖರೀದಿ ಲಭ್ಯವಿದ್ದರೂ ಎಂಟ್ರಿ ಲೆವಲ್ ಮತ್ತು ಮಧ್ಯಮ ಗಾತ್ರದ ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.