Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2022ರ ಮಾರುತಿ ಡಿಜೈರ್ ಸಿಎನ್‌ಜಿ ಕಾರು ಖರೀದಿಗೆ ಡೀಲರ್ ಮಟ್ಟದ ಬುಕ್ಕಿಂಗ್ ಆರಂಭ
ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇತ್ತೀಚೆಗೆ ತನ್ನ ಹೊಸ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು ದೇಶದಲ್ಲಿ ಬಿಡುಗಡೆಗೊಳಿಸಿತ್ತು. ಮಾರುತಿ ಸುಜುಕಿ ಕಂಪನಿಯು ಮುಂಬರುವ ದಿನಗಳಲ್ಲಿ 2022ರ ಮಾರುತಿ ಡಿಜೈರ್ ಸಿಎನ್‌ಜಿ ರೂಪಾಂತರವನ್ನು ಪರಿಚಯಿಸಲು ಯೋಜಿಸುತ್ತಿದೆ.

ಆಯ್ದ ಮಾರುತಿ ಸುಜುಕಿ ಡೀಲರ್‌ಗಳು 2022ರ ಮಾರುತಿ ಡಿಜೈರ್ ಸಿಎನ್‌ಜಿ ಮಾದರಿ ಖರೀದಿಗಾಗಿ ಬುಕ್ಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ವಾಸ್ತವವಾಗಿ, ಕಂಪನಿಯು ತನ್ನ ಶೋರೂಮ್‌ಗಳಲ್ಲಿ ಡೀಲರ್ ತರಬೇತಿಯನ್ನು ಪ್ರಾರಂಭಿಸಿದೆ. ಎಮಿಷನ್ ಟೆಸ್ಟಿಂಗ್ ಕಿಟ್ ಅನ್ನು ಒಳಗೊಂಡಿರುವ ಸೆಡಾನ್‌ನ ಸಿಎನ್‌ಜಿ ಮಾದರಿಯ ಸ್ಪೈ ಚಿತ್ರಗಳನ್ನು ನಾವು ಈಗಾಗಲೇ ಬಹಿರಂಗವಾಗಿವೆ.ಕಾಂಪ್ಯಾಕ್ಟ್ ಸೆಡಾನ್‌ನ ಫ್ಲೀಟ್ ಕ್ಯಾಬ್ ಆವೃತ್ತಿಯಾದ ಮಾರುತಿ ಡಿಜೈರ್ ಟೂರ್ ಎಸ್ ಅನ್ನು ಈಗಾಗಲೇ ಫ್ಯಾಕ್ಟರಿ ಫಿಟೆಡ್ ಸಿಎನ್‌ಜಿ ಕಿಟ್‌ನೊಂದಿಗೆ ಚಿಲ್ಲರೆ ಮಾರಾಟ ಮಾಡಲಾಗಿದೆ

ಹೊಸ ಮಾದರಿಯು 1.2L, K12M VVT ಪೆಟ್ರೋಲ್ ಎಂಜಿನ್ ಅನ್ನು ಸಿಎನ್‌ಜಿ ಕಿಟ್‌ಗೆ ಜೋಡಿಸಿ, ಈ ಎಂಜಿನ್ 71 ಬಿಹೆಚ್‍ಪಿ ಪವರ್ ಮತ್ತು ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇನ್ನು ಸಾಮಾನ್ಯ ಗ್ಯಾಸೋಲಿನ್ ಯುನಿಟ್ 82 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಡಿಜೈರ್‌ನ ಸಿಎನ್‌ಜಿ ರೂಪಾಂತರಕ್ಕೆ ಪೆಟ್ರೋಲ್ ಡಿಜೈರ್ ಮಾದರಿಗಿಂತ ಸುಮಾರು ರೂ,70,000 - ರೂ.80,000 ವರೆಗೆ ಹೆಚ್ಚು ಬೆಲೆಯನ್ನು ಹೊಂದಿರಬಹುದು. ಡಿಜೈರ್ ಸಿಎನ್‌ಜಿಯ ಬೂಟ್ ಸ್ಪೇಸ್ ಸಾಮಾನ್ಯ ಡಿಜೈರ್‌ಗಿಂತ ಕಡಿಮೆ ಇರುತ್ತದೆ.

ಏಕೆಂದರೆ ಸಿಎನ್‌ಜಿ ಟ್ಯಾಂಕ್ ಅನ್ನು ಬೂಟ್‌ನಲ್ಲಿ ಇರಿಸಲಾಗುತ್ತದೆ ಆದ್ದರಿಂದ ಅದು ಸ್ವಲ್ಪ ಜಾಗವನ್ನು ಕಸಿದುಕೊಳ್ಳುತ್ತದೆ. ಸಾಮಾನ್ಯ ಡಿಜೈರ್ 378 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಸಿಎನ್‌ಜಿ ಟ್ಯಾಂಕ್‌ನ ಹೆಚ್ಚುವರಿ ತೂಕವನ್ನು ನಿರ್ವಹಿಸಲು ಸಸ್ಪೆಂಕ್ಷನ್ ಮರುಸಂಪರ್ಕಿಸುವ ನಿರೀಕ್ಷೆಯಿದೆ. ಇದಲ್ಲದೆ, ಮಾರುತಿ ಸುಜುಕಿ ಅವರು ಸುರಕ್ಷತೆಯ ಬಗ್ಗೆಯೂ ವಿಶೇಷ ಗಮನ ಹರಿಸುತ್ತಾರೆ.

ಅವರು ಬ್ರೇಕ್ ಮತ್ತು ಚಾಸಿಸ್ ಅನ್ನು ನವೀಕರಿಸಬಹುದು ಎಂದು ಹೇಳಾಗುತ್ತಿದೆ. ಅವರು ಕ್ರ್ಯಾಶ್ ಟೆಸ್ಟ್ ನಲ್ಲಿ ಸಿಎನ್‌ಜಿ ವಾಹನಗಳನ್ನು ಮೌಲ್ಯಮಾಪನ ಮಾಡುತ್ತಾರೆ. ಇದಲ್ಲದೆ, ಸಿಎನ್‌ಜಿ ಸಿಸ್ಟಂ ವೈರಿಂಗ್ ಅನ್ನು ವಾಹನದ ವೈರಿಂಗ್‌ನೊಂದಿಗೆ ಸಂಯೋಜಿಸಲಾಗಿದೆ. ಹಾಗಾಗಿ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆ ಇಲ್ಲ.

2022ರ ಮಾರುತಿ ಡಿಜೈರ್ ಸಿಎನ್‌ಜಿ ಕಾರಿನಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್, ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್ ಮತ್ತು ಪವರ್-ಹೊಂದಾಣಿಕೆ ಮಾಡಬಹುದಾದ ORVM ಗಳಂತಹ ವೈಶಿಷ್ಟ್ಯಗಳೊಂದಿಗೆ ಬರಬಹುದು.

ಇನ್ನು ಈ ಹೊಸ ಮಾದರಿಯಲ್ಲಿ ಸುರಕ್ಷತಾ ವೈಶಿಷ್ಟ್ಯಗಳ ಪಟ್ಟಿಯಲ್ಲಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳಂತಹ ವೈಶಿಷ್ಟ್ಯಗಳನ್ನು ಸ್ಟ್ಯಾಂಡರ್ಡ್ ಫಿಟ್‌ಮೆಂಟ್‌ಗಳಾಗಿ ಒಳಗೊಂಡಿರುತ್ತದೆ.

ವರದಿಗಳ ಪ್ರಕಾರ, ಮಾರುತಿ ಸುಜುಕಿ ತನ್ನ ಜನಪ್ರಿಯ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಮತ್ತು ವಿಟಾರಾ ಬ್ರೆಝಾ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯನ್ನು CNG ರೂಪಾಂತರಗಳನ್ನು ಸಹ ತರುತ್ತದೆ. ಎರಡನೆಯದು ಏಪ್ರಿಲ್ 2022 ರಲ್ಲಿ ಅದರ ಎರಡನೇ ತಲೆಮಾರಿನೊಳಗೆ ಪ್ರವೇಶಿಸಲು ಸಿದ್ಧವಾಗಿದೆ. ಹೊಸ ಮಾದರಿಯನ್ನು ಮಾರುತಿ ಬ್ರೆಝಾ ಎಂದು ಹೆಸರಿಸಲಾಗುವುದು ಮತ್ತು ಇದು ಹೊಸ 6-ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ ಒಳಗೆ ಮತ್ತು ಹೊರಗೆ ಸಮಗ್ರ ಬದಲಾವಣೆಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.

ಮಾರುತಿ ಸುಜುಕಿ ಇಂಡಿಯಾ 2022ರ ಫೆಬ್ರವರಿ ತಿಂಗಳ ಮಾರಾಟದ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿದೆ. ವರದಿ ಪ್ರಕಾರ, ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು 164,056 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 164,469 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಸ್ಥಿರವಾಗಿದೆ. 2022ರ ಜನವರಿ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 154,379 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು.

ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.6.2 ಪ್ರತಿಶತದಷ್ಟು ತಿಂಗಳ-ಮಾಸಿಕ ಬೆಳವಣಿಗೆಯನ್ನು ಕಂಡಿದ್ದಾರೆ. ಎಲೆಕ್ಟ್ರಾನಿಕ್ ಯುನಿಟ್ ಗಳ ಕೊರತೆಯು ಉತ್ಪಾದನೆಯ ಮೇಲೆ ಅಲ್ಪ ಪರಿಣಾಮ ಬೀರುತ್ತಿದೆ ಎಂದು ಕಾರು ತಯಾರಕರು ಹೇಳಿದರು. ದೇಶೀಯ ಮಾರುಕಟ್ಟೆಗೆ ಸಂಬಂಧಿಸಿದಂತೆ, ಕಳೆದ ತಿಂಗಳು ಭಾರತದಲ್ಲಿ ಮಾರುತಿ ಸುಜುಕಿಯ ಒಟ್ಟು ಮಾರಾಟ, ಪಿವಿ ಮತ್ತು ಎಲ್ಸಿವಿ ವಿಭಾಗದಲ್ಲಿ ಮಾರಾಟವು 137,607 ಯುನಿಟ್‌ಗಳಷ್ಟಿದೆ

2021ರ ಫೆಬ್ರವರಿ ತಿಂಗಳಿನಲ್ಲಿ 47,483 ವಾಹನಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.7 ರಷ್ಟು ಇಳಿಕೆಯಾಗಿದೆ. ಇನ್ನು 2022ರ ಫೆಬ್ರವರಿ ತಿಂಗಳಿನಲ್ಲಿ ಒಟ್ಟು ಪ್ರಯಾಣಿಕ ವಾಹನಗಳ ಮಾರಾಟವು 133,948 ಯುನಿಟ್‌ಗಳಷ್ಟಿತ್ತು, ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 144,761 ವಾಹನಗಳಿಗೆ ಹೋಲಿಸಿದರೆ ಶೇಕಡಾ 7.4 ರಷ್ಟು ಕುಸಿತವನ್ನು ಕಂಡಿದೆ.