ತಾಂತ್ರಿಕ ದೋಷದಿಂದ 9 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆದ ಮಾರುತಿ ಸುಜುಕಿ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಜೊತೆಗೆ ನವೀಕರಿಸಿದ ಎರ್ಟಿಗಾ ಮತ್ತು ಎಕ್ಸ್ಎಲ್6 ಎಂಪಿವಿಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆಯಲ್ಲಿ ಹಿಂಪಡೆದಿದೆ. 2022ರ ನವೆಂಬರ್ 2 ರಿಂದ 28ರ ನಡುವೆ ತಯಾರಿಸಲಾದ ಒಟ್ಟು 9,125 ಯೂನಿಟ್‌ಗಳನ್ನು ಹಿಂಪಡೆಯಲಾಗುತ್ತಿದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಎರ್ಟಿಗಾ ಮತ್ತು ಎಕ್ಸ್ಎಲ್6 ಎಂಪಿವಿಗಳ ಮುಂಭಾಗದ ಸೀಟ್‌ಬೆಲ್ಟ್‌ಗಳ ಭುಜದ ಎತ್ತರ ಹೊಂದಾಣಿಕೆಯ ಜೋಡಣೆಯಲ್ಲಿ ಸಂಭವನೀಯ ದೋಷವಿದ್ದು ಅದು ಸೀಟ್ ಬೆಲ್ಟ್ ಡಿಸ್ಅಸೆಂಬಲ್‌ಗೆ ಕಾರಣವಾಗಬಹುದು ಎಂದು ಕಂಪನಿ ಹೇಳಿದೆ. ಅಧಿಕೃತ ಮಾರುತಿ ಸುಜುಕಿ ಡೀಲರ್‌ಗಳು ತಮ್ಮ ವಾಹನಗಳನ್ನು ಪರಿಶೀಲಿಸಲು ಮತ್ತು ದೋಷದ ಭಾಗವನ್ನು ಉಚಿತವಾಗಿ ಬದಲಾಯಿಸಲು ಮೇಲೆ ತಿಳಿಸಿದ ದಿನಾಂಕಗಳ ನಡುವೆ ನಿರ್ಮಿಸಲಾದ ಮಾರುತಿ ಗ್ರ್ಯಾಂಡ್ ವಿಟಾರಾ, ಎರ್ಟಿಗಾ ಮತ್ತು ಎಕ್ಸ್ಎಲ್6 ಮಾಲೀಕರನ್ನು ಸಂಪರ್ಕಿಸುತ್ತಾರೆ.

9 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆದ ಮಾರುತಿ ಸುಜುಕಿ

ಮೊದಲಿಗೆ ಎರ್ಟಿಗಾ ಎಂಪಿವಿ ಬಗ್ಗೆ ಹೇಳುವುದಾದರೆ, ಇತ್ತೀಚೆಗೆ ಅತ್ಯಾಧುನಿಕ ವೈಶಿಷ್ಟ್ಯ ವ್ಯವಸ್ಥೆಗಳೊಂದಿಗೆ ಕಿಯಾ ಕಾರೆನ್ಸ್‌ನ ಆಗಮನದೊಂದಿಗೆ ಕಾಂಪ್ಯಾಕ್ಟ್ ಎಂಪಿವಿ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗಿದೆ. ಮಾರುತಿ ಸುಜುಕಿ ಎರ್ಟಿಗಾ ದೇಶದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಗಿಂತ ಸ್ಥಳೀಯವಾಗಿ ಹೆಚ್ಚು ಮಾರಾಟವಾಗುವ ಎಂಪಿವಿ ಆಗಿ ಗುರುತಿಸಿಕೊಂಡಿದೆ. ಎರ್ಟಿಗಾ ಕೆಲವು ಸೂಕ್ಷ್ಮ ಮಾರ್ಪಾಡುಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. ಆದರೆ ಮೂಂದಿನ ಮಾದರಿಯಲ್ಲಿ ಮಾರುತಿ ಸುಜುಕಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಒಳಾಂಗಣಕ್ಕೆ ಪರಿಚಯಿಸುತ್ತಿದೆ.

ಎರ್ಟಿಗಾ ಫೇಸ್‌ಲಿಫ್ಟ್ ಎಂಪಿವಿ ಪ್ರಗತಿಶೀಲ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಹೊಸ 1.5-ಲೀಟರ್ K15C ನಾಲ್ಕು ಸಿಲಿಂಡರ್ ಡ್ಯುಯಲ್-ಜೆಟ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 103 ಬಿಹೆಚ್‍ಪಿ ಪವರ್ ಮತ್ತು 136 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಅಥವಾ ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಹೊಸ ಸಿಕ್ಸ್‌-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಇದನ್ನು ಆಯ್ಕೆ ಮಾಡಬಹುದು. ಮಾರುತಿ ಸುಜುಕಿಯು ಫೇಸ್‌ಲಿಫ್ಟ್ ಎರ್ಟಿಗಾ ಉತ್ತಮ ಮೈಲೇಜ್ ನೀಡುತ್ತದೆ,

ಮಾರುತಿ ಸುಜುಕಿ ಎಕ್ಸ್‌ಎಲ್6 ಬಗ್ಗೆ ಹೇಳುವುದಾದರೆ, ಈ ಎಂಪಿವಿ 1462ಸಿಸಿ, ನಾಲ್ಕು ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 101.6 ಬಿಹೆಚ್‌ಪಿ ಪವರ್ ಮತ್ತು 136.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅಥವಾ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಆಲ್-ಬ್ಲಾಕ್ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ ಆದರೆ ಅದರಲ್ಲಿ ಇತರ ಅಂಶಗಳೂ ಇವೆ.

ಈ ವುಡ್ ಟ್ರಿಮ್ ಅಡಿಯಲ್ಲಿ ಸಿಲ್ವರ್ ಸ್ಟ್ರಿಪ್ ಇದೆ. ಎಸಿ ವೆಂಟ್‌ಗಳು ತುಂಬಾ ಸೊಗಸಾದ ಮತ್ತು ಡ್ಯಾಶ್‌ಬೋರ್ಡ್ ಮೂರು ಅಡ್ಡ ಲೈನ್ ಗಳನು ಹೊಂದಿದ್ದು ಅದು ಎಸಿ ವೆಂಟ್‌ಗಳನ್ನು ಸಂಪರ್ಕಿಸುತ್ತದೆ. ಡ್ಯಾಶ್‌ಬೋರ್ಡ್‌ನಲ್ಲಿ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್ ಇದೆ. ಇದು Apple CarPlay ಮತ್ತು Android Auto ಅನ್ನು ಹೊಂದಿದೆ, ಇನ್ಫೋಟೈನ್‌ಮೆಂಟ್ ಯುನಿಟ್ ಮಾರುತಿ ಸುಜುಕಿಯ ಸ್ಮಾರ್ಟ್‌ಪ್ಲೇ ಪ್ರೊ ಘಟಕವಾಗಿದೆ ಮತ್ತು ಆದ್ದರಿಂದ ಸಾಕಷ್ಟು ಸಂಪರ್ಕಿತ ಕಾರು ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಇನ್ನು ಈ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ಸುಜುಕಿ ತನ್ನ ಗ್ಲೋಬಲ್-ಸಿ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿದೆ ಮತ್ತು ವಿನ್ಯಾಸಗೊಳಿಸಿದೆ. ಈ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯನ್ನು ನೆಕ್ಸಾ ಔಟ್‌ಲೆಟ್‌ಗಳ ಮೂಲಕ ಮಾತ್ರ ಮಾರಾಟ ಮಾಡಲಾಗುತ್ತಿದೆ. ಈ ಎಸ್‍ಯುವಿಯನ್ನು ಆರು ವಿಭಿನ್ನ ರೂಪಾಂತರ ಹಂತಗಳಲ್ಲಿ ನೀಡಲಾಗುತ್ತದೆ. ಈ ಹೊಸ ಎಸ್‍ಯುವಿ ಸಿಗ್ಮಾ, ಡೆಲ್ಟಾ, ಝೀಟಾ, ಝೀಟಾ+, ಆಲ್ಫಾ ಮತ್ತು ಆಲ್ಫಾ+. ಆಗಿದೆ. ಝೀಟಾ, ಝೀಟಾ+, ಆಲ್ಫಾ ಮತ್ತು ಆಲ್ಫಾ+ ರೂಪಾಂತರಗಳನ್ನು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ಸಹ ಲಭ್ಯವಿದೆ.

ಈ ಹೊಸ ಮಾರುತಿ ಎಸ್‍ಯುವಿಯು ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಎಸ್‍ಯುವಿಯು 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ ಮತ್ತು 1.5-ಲೀಟರ್ TNGA ಪೆಟ್ರೋಲ್ ಮೋಟರ್ ಸ್ಟ್ರಾಂಗ್-ಹೈಬ್ರಿಡ್ ಸಿಸ್ಟಂ ಅನ್ನು ಒಳಗೊಂಡಿದೆ. ಇದರಲ್ಲಿ 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ 102 ಬಿಹೆಚ್‍ಪಿ ಪವರ್ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಯುನಿಟ್ ಅನ್ನು ಜೋಡಿಸಲಾಗಿದೆ.

Most Read Articles

Kannada
English summary
Maruti suzuki recalled over 9000 units of ertiga xl6 grand vitara
Story first published: Wednesday, December 7, 2022, 10:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X