Just In
- 2 hrs ago
ಎಲೆಕ್ಟ್ರಿಕ್, ಹೈಬ್ರಿಡ್ ಕಾರುಗಳಲ್ಲಿ ಮಾತ್ರ ರಿಜನರೇಟಿವ್ ಬ್ರೇಕಿಂಗ್ ಏಕೆ ಲಭ್ಯವಿದೆ: ಇದರ ಉಪಯೋಗವೇನು?
- 3 hrs ago
ಹೊಸ ನವೀಕರಣಗಳೊಂದಿಗೆ ಸಿಎಫ್ಮೋಟೋ 150ಎನ್ಕೆ ಬೈಕ್ ಬಿಡುಗಡೆ
- 5 hrs ago
ಏಪ್ರಿಲ್ ತಿಂಗಳ ಟಿವಿಎಸ್ ವಾಹನ ಮಾರಾಟ ವರದಿ: ರಫ್ತಿನಲ್ಲಿ ದಾಖಲೆ ನಿರ್ಮಾಣ
- 5 hrs ago
ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತನೆಗೊಂಡು ಮಿಂಚುತ್ತಿದೆ 1954ರ ಫಿಯೆಟ್ ಕಾರು
Don't Miss!
- News
ವಿಡಿಯೋ: ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಕಾರು ಅಪಘಾತ
- Lifestyle
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
- Sports
ಹೀರೋ ಏಷ್ಯಾ ಕಪ್ 2022: ಜಪಾನ್ ವಿರುದ್ಧ ಮುಗ್ಗರಿಸಿದ ಭಾರತ, 2-5 ಅಂತರದಲ್ಲಿ ಸೋಲು
- Finance
ಮೇ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
'ಯುಗಾಂತರ' ಧಾರಾವಾಹಿಗೆ ಪ್ರಾಮಾಣಿಕ ಐಎಎಸ್ ಅಧಿಕಾರಿ ಪ್ರೇರಣೆ: ವಾಹಿನಿ ಮುಖ್ಯಸ್ಥರ ಸ್ಪಷ್ಟನೆಯೇನು?
- Technology
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಹೋಂಡಾ ಸಿಟಿ ಹೈಬ್ರಿಡ್ ಕಾರು
ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಿಟಿ ಹೈಬ್ರಿಡ್ ಕಾರನ್ನು ಬಿಡುಗಡೆಗೊಳಿಸಲಿದೆ. ಹೋಂಡಾ ಕಂಪನಿಯು ಸಿಟಿ ಹೈಬ್ರಿಡ್ ಕಾರನ್ನು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಗಾಲೇ ಮಾರಾಟ ಮಾಡುತ್ತಿದೆ.

ಹೋಂಡಾ ಸಿಟಿ ಹೈಬ್ರಿಡ್ ಕಾರು ಕಳೆದ ವರ್ಷದ ಹಬ್ಬದ ಸೀಸನ್ ನಲ್ಲಿ ಬಿಡುಗಡೆಗೊಳಿಸಲು ಉದ್ದೇಶಿಸಿತ್ತು. ಆದರೆ ಕರೋನಾ ಆತಂಕದಿಂದ ಈ ಹೈಬ್ರಿಡ್ ಕಾರಿನ ಬಿಡುಗಡೆಯನ್ನು ಮುಂದೂಡಲಾಗಿದೆ. ಈ ಹೊಸ ಹೋಂಡಾ ಸಿಟಿ ಹೈಬ್ರಿಡ್ ಕಾರು ಈ ವರ್ಷದ ಬಹುಶಃ ಏಪ್ರಿಲ್-ಮೇ ತಿಂಗಳಲ್ಲಿ ಬಿಡುಗಡೆಗೊಳಿಸಬಹುದು. ಹೊಸ ವರದಿಗಳ ಪ್ರಕಾರ,ಹೊಸ ಹೋಂಡಾ ಸಿಟಿ ಹೈಬ್ರಿಡ್ ಬಹುತೇಕ ಉತ್ಪಾದನೆಗೆ ಸಿದ್ಧವಾಗಿದೆ ಹೋಂಡಾ ಕಾರ್ಸ್ ಇಂಡಿಯಾ ಮ್ಯಾನೇಜ್‌ಮೆಂಟ್ ಸಿಟಿ ಹೈಬ್ರಿಡ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಹೋಂಡಾದ ಎಂಜಿನಿಯರ್‌ಗಳಿಗೆ ಹೋಂಡಾ ಸಿಟಿಯ ಹೈಬ್ರಿಡ್ ಆವೃತ್ತಿಯ ವಿವಿಧ ಗುಣಲಕ್ಷಣಗಳನ್ನು ಭಾರತೀಯ ರಸ್ತೆಗಳಿಗೆ ಸರಿಹೊಂದುವಂತೆ ಮತ್ತು ಇತರ ಹಲವು ಅಂಶಗಳನ್ನು ನವೀಕರಿಸುತ್ತಿದೆ. ಹೊಸ ಹೋಂಡಾ ಸಿಟಿ ಹೈಬ್ರಿಡ್ ಮಾದರಿಯಲ್ಲಿ ಮಲ್ಟಿ-ಮೋಡ್ ಡ್ರೈವ್ (ಐ-ಎಂಎಂಡಿ) ಪವರ್‌ಟ್ರೇನ್ ಆಗಿದ್ದು ಅದು ಐ-ಡಿಸಿಡಿಯನ್ನು ಬದಲಾಯಿಸಿದೆ.

ಇದರೊಂದಿಗೆ 1.5-ಲೀಟರ್ ಅಟ್ಕಿನ್ಸನ್-ಸೈಕಲ್ ಡಿಒಹೆಚ್‌ಸಿ ಐ-ವಿಟಿಇಸಿ ನಾಲ್ಕು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 98 ಬಿಹೆಚ್‍ಪಿ ಮತ್ತು 127 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ಎರಡು ಮೋಟರ್‌ಗಳಿಗೆ ಹೊಂದಿಕೆಯಾಗುತ್ತದೆ. ಇನ್ನು ಎಲೆಕ್ಟ್ರಿಕ್ ಮೋಟರ್ ಅಸಿಸ್ಟ್ ಜನರೇಟರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದು ಸ್ಟಾರ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ.

ಇನ್ನು ದೊಡ್ಡದಾದ ಎರಡನೇ ಮೋಟರ್ 108 ಬಿಹೆಚ್‍ಪಿ ಪವರ್ ಮತ್ತು 253 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೆಚ್ಚಿನ ಪರ್ಫಾಮೆನ್ಸ್ ಸ್ಥಿತಿಗತಿಗಳಂತೆ ಎಂಜಿನ್ ಹೆಚ್ಚಿನ ವೇಗದಲ್ಲಿ ನೇರ ಡ್ರೈವ್ ನೀಡಬಲ್ಲದು, ಇದು ಮೋಟಾರ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿರಲಿದೆ.

ಇನ್ನು ಈ ಎಲೆಕ್ಟ್ರಿಕ್-ಹೈಬ್ರಿಡ್ ಸೆಟಪ್ ಸಿಟಿ ಕಾರು ಕೇವಲ 9.9 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಹೊಸ ಹೋಂಡಾ ಸಿಟಿ ಆರ್‌ಎಸ್ ಇ:ಹೆಚ್‌ಇವಿ ಕಾರು 173 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿರುತ್ತದೆ. ಈ ಹೈಬ್ರಿಡ್ ಕಾರು 27 ಕಿ.ಮೀ.ಗೂ ಹೆಚ್ಚು ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಂಡಾ ಸಿಟಿ ಹೈಬ್ರಿಡ್ ಕಾರು ಕೂಡ ಉತ್ತಮ ಮೈಲೇಜ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಹೋಂಡಾ ಸಿಟಿ ಹೈಬ್ರಿಡ್ ಬೆಸ್ಪೋಕ್ ಸ್ಟೈಲಿಂಗ್ ಪ್ಯಾಕ್ ಅನ್ನು ಒಳಗೊಂಡಿದೆ, ಇದು ಗ್ಲೋಸ್-ಬ್ಲ್ಯಾಕ್ ಫ್ರಂಟ್ ಗ್ರಿಲ್, ಫ್ರಂಟ್ ಮತ್ತು ರಿಯರ್ ಡಿಫ್ಯೂಸರ್ನಲ್ಲಿ ಕಾರ್ಬನ್-ಪ್ಯಾಟರ್ನ್ ಟ್ರಿಮ್, ಹೊಸ ಫಾಗ್ ಲ್ಯಾಂಪ್, ಹೊಸ ಮಿರರ್ ಕವರ್ ಮತ್ತು ಗ್ಲೋಸ್-ಬ್ಲ್ಯಾಕ್ ಫಿನಿಶ್‌ನಲ್ಲಿ ಡಕ್‌ಟೇಲ್ ಸ್ಪಾಯ್ಲರ್ ಅನ್ನು ಹೊಂದಿದೆ.

ಹೊಸ ಹೋಂಡಾ ಸಿಟಿ ಹೈಬ್ರಿಡ್ ಡ್ಯುಯಲ್-ಟೋನ್ 16-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಸ್ಟ್ಯಾಂಡರ್ಡ್ ಆಗಿ ಆಟೋಮ್ಯಾಟಿಕ್ ಎಲ್ಇಡಿ ಹೆಚ್ ಲ್ಯಾಂಪ್ ಗಳು, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಎಲ್ಇಡಿ ರಿಯರ್ ಲೈಟ್ಸ್, ಪುಶ್ ಸ್ಟಾರ್ಟ್ ನೊಂದಿಗೆ ಕೀಲೆಸ್ ಎಂಟ್ರಿ, ಸಿಂಗಲ್-ಜೋನ್ ಆಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ಒಳಗೊಂಡಿದೆ.

ಸಿಟಿ ಹೈಬ್ರಿಡ್ ಕಾರಿನ ಹಿಂಭಾಗದ ಏರ್-ಕಾನ್ ವೆಂಟ್ಸ್, ಸ್ಟೀಯರಿಂಗ್ ಆಡಿಯೊ ಬಟನ್ ಮತ್ತು 8.0-ಇಂಚಿನ ಟಚ್ಸ್ಕ್ರೀನ್ ಹೆಡ್ ಯುನಿಟ್ ಅನ್ನು ಕೂಡ ಒಳಗೊಂಡಿದೆ. ಇದರೊಂದಿಗೆ ಎಂಟು ಸ್ಪೀಕರ್ ಆಡಿಯೊ ಸಿಸ್ಟಂನೊಂದಿಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿದೆ.

ಹೊಸ ಹೋಂಡಾ ಸಿಟಿ ಹೈಬ್ರಿಡ್ ಕಾರಿನಲ್ಲಿ ಹೆಚ್ಚುವರಿಯಾಗಿ, ಅಲ್ಟ್ರಾಸ್ಯೂಡ್ ಸೀಟುಗಳು, ಐ-ಎಂಎಂಡಿಗೆ ಡಿಕ್ಲೀರೇಶನ್ ಸೆಲೆಕ್ಟರ್ ಪ್ಯಾಡಲ್, ಲೆದರ್ ಸ್ಟೀರಿಂಗ್ ವ್ಹೀಲ್, ಗೇರ್ ಲಿವರ್ ಕನ್ಸೋಲ್, ಸೆಂಟರ್ ಟನಲ್ ಮತ್ತು ಡ್ಯಾಶ್‌ಬೋರ್ಡ್, ಮತ್ತು ಅಲ್ಯೂಮಿನಿಯಂ ಸ್ಪೋರ್ಟ್ ಪೆಡಲ್‌ಗಳು. ಆರು ಏರ್‌ಬ್ಯಾಗ್‌ಗಳು, ವಿಎಸ್‌ಎ, ಹಿಲ್ ಸ್ಟಾರ್ಟ್ ಅಸಿಸ್ಟ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಮತ್ತು ಇತರ ಫೀಚರ್ ಗಳನ್ನು ಕೂಡ ಹೊಂದಿದೆ.

ಹೋಂಡಾ ಕಾರ್ಸ್ ಇಂಡಿಯಾ 2022ರ ಫೆಬ್ರವರಿ ತಿಂಗಳ ಮಾಸಿಕ ಕಾರು ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ವರದಿ ಪ್ರಕಾರ, ಕಳೆದ ತಿಂಗಳು ಹೋಂಡಾ ಕಂಪನಿಯು ಒಟ್ಟು 9,524 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಕಂಪನಿಯು 10,311 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.7.6 ರಷ್ಟು ಕುಸಿತವನ್ನು ಕಂಡಿದೆ. ಇನ್ನು 2022ರ ಜನವರಿ ತಿಂಗಳಿನಲ್ಲಿ ಹೋಂಡಾ ಕಂಪನಿಯು 12,149 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಹೋಂಡಾ ಕಾರ್ಸ್ ಇಂಡಿಯಾವು ತಿಂಗಳಿನಿಂದ ತಿಂಗಳಿಗೆ ಶೇಕಡಾ 21.6 ರಷ್ಟು ಕುಸಿತವನ್ನು ಕಂಡಿದೆ.

ದೇಶೀಯ ಮಾರುಕಟ್ಟೆಗೆ ಸಂಬಂಧಿಸಿದಂತೆ, ಹೋಂಡಾ 2022ರ ಫೆಬ್ರವರಿ ತಿಂಗಳಿನಲ್ಲಿ ಭಾರತದಲ್ಲಿ 7,187 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2021 ರಲ್ಲಿ ಅದೇ ತಿಂಗಳಲ್ಲಿ ಮಾರಾಟವಾದ 9,324 ವಾಹನಗಳಿಗೆ ಹೋಲಿಸಿದರೆ, ಕಾರು ತಯಾರಕರು 30 ಪ್ರತಿಶತದಷ್ಟು ಭಾರಿ ಕುಸಿತವನ್ನು ಕಂಡಿದ್ದಾರೆ. ಇನ್ನುಕಳೆದ ತಿಂಗಳು, ಹೋಂಡಾ ಭಾರತದಿಂದ 2,337 ಕಾರುಗಳನ್ನು ರಫ್ತು ಮಾಡಿದೆ, 2021 ರಲ್ಲಿ ಅದೇ ತಿಂಗಳಲ್ಲಿ ರಫ್ತು ಮಾಡಿದ 987 ವಾಹನಗಳಿಗೆ ಹೋಲಿಸಿದರೆ 137 ಶೇಕಡಾ ಬೃಹತ್ ಬೆಳವಣಿಗೆಯಾಗಿದೆ. 2022 ರ ಜನವರಿಯಲ್ಲಿ ರಫ್ತು ಮಾಡಿದ 1,722 ಯುನಿಟ್‌ಗಳಿಗೆ ಹೋಲಿಸಿದರೆ, ಬೆಳವಣಿಗೆಯು ಸುಮಾರು 36 ಪ್ರತಿಶತದಷ್ಟಿದೆ.

ಸೆಮಿಕಂಡಕ್ಟರ್ ಚಿಪ್‌ಗಳ ನಿರಂತರ ಕೊರತೆಯು ವಾಹನ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಎಂದು ಹೋಂಡಾ ಹೇಳುತ್ತದೆ, ಡೀಲರ್‌ಗಳಿಗೆ ರವಾನೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಯಿಂದ ಕಳೆದ ತಿಂಗಳ ಕಾರುಗಳ ಮಾರಾಟದ ಮೇಲೆಯು ಪರಿಣಾಮ ಬೀರಿದೆ.