ಟಿವಿಸಿ ಮೂಲಕ ಹೊಸ ಏಸ್ ಇವಿ ಕುರಿತಾದ ಮತ್ತಷ್ಟು ಮಾಹಿತಿ ಹಂಚಿಕೊಂಡ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಏಸ್ ಇವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸುವ ಮೂಲಕ ಮುಂದಿನ ಕೆಲವೇ ದಿನಗಳಲ್ಲಿ ವಿತರಣೆ ಆರಂಭಿಸುವ ಸುಳಿವು ನೀಡಿದ್ದು, ಇದೀಗ ಹೊಸ ಇವಿ ವಾಹನ ಟಿವಿಸಿ ಮೂಲಕ ಮತ್ತಷ್ಟು ಮಾಹಿತಿ ಹಂಚಿಕೊಂಡಿದೆ.

ಟಿವಿಸಿ ಮೂಲಕ ಹೊಸ ಏಸ್ ಇವಿ ಕುರಿತಾದ ಮತ್ತಷ್ಟು ಮಾಹಿತಿ ಹಂಚಿಕೊಂಡ ಟಾಟಾ ಮೋಟಾರ್ಸ್

ಸದ್ಯ ಪ್ರಯಾಣಿಕರ ಬಳಕೆಯ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಏಸ್ ಇವಿ ಮೂಲಕ ಇವಿ ವಾಣಿಜ್ಯ ವಾಹನಗಳ ವಿಭಾಗದಲ್ಲೂ ಹೊಸ ಅಧ್ಯಾಯ ಆರಂಭಿಸಿದ್ದು, ಹೊಸ ಎಲೆಕ್ಟ್ರಿಕ್ ವಾಣಿಜ್ಯ ವಾಹನವು ಕಂಪನಿಯ ಸುಧಾರಿತ ತಂತ್ರಜ್ಞಾನ ಪ್ರೇರಿತ ಇವೊಜೆನ್(Evogen) ಪ್ಲಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಪಡಿಸಿದೆ.

ಟಿವಿಸಿ ಮೂಲಕ ಹೊಸ ಏಸ್ ಇವಿ ಕುರಿತಾದ ಮತ್ತಷ್ಟು ಮಾಹಿತಿ ಹಂಚಿಕೊಂಡ ಟಾಟಾ ಮೋಟಾರ್ಸ್

ಹೊಸ ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನವು ಸುಧಾರಿತ ತಂತ್ರಜ್ಞಾನ ಪ್ರೇರಿತ 27kW ಮೋಟಾರ್ ಜೋಡಣೆ ಹೊಂದಿದ್ದು, 130 ಎನ್ಎಂ ಪೀಕ್ ಟಾರ್ಕ್‌ನೊಂದಿಗೆ 208 ಎಫ್‌ಟಿ3 ಅತ್ಯಧಿಕ ಕಾರ್ಗೋ ಖಚಿತಪಡಿಸುತ್ತದೆ.

ಟಿವಿಸಿ ಮೂಲಕ ಹೊಸ ಏಸ್ ಇವಿ ಕುರಿತಾದ ಮತ್ತಷ್ಟು ಮಾಹಿತಿ ಹಂಚಿಕೊಂಡ ಟಾಟಾ ಮೋಟಾರ್ಸ್

ಹೊಸ ತಂತ್ರಜ್ಞಾನ ಪರಿಣಾಮ ಹೊಸ ವಾಹನದ ಕಂಟೈನರ್ ಸಾಕಷ್ಟು ಹಗುರವಾಗಿದ್ದು, ಇ-ಕಾಮರ್ಸ್ ಲಾಜಿಸ್ಟಿಕ್ಸ್‌ ಅಪ್ಲಿಕೇಶನ್‌ಗಳಿಗೆ ಇದು ಲಾಭದಾಯಕ ಅಂಶವಾಗಿದೆ. ಜೊತೆಗೆ ಸಂಪೂರ್ಣವಾಗಿ ಲೋಡ್ ಮಾಡಲಾದ ಪರಿಸ್ಥಿತಿಗಳಲ್ಲೂ ಹೊಸ ಇವಿ ವಾಹನ ಸುಲಭವಾಗಿ ಚಾಲನೆಯಾಗಲಿದ್ದು, ಇದು ಪ್ರತಿ ಚಾರ್ಜ್‌ಗೆ 154 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಟಿವಿಸಿ ಮೂಲಕ ಹೊಸ ಏಸ್ ಇವಿ ಕುರಿತಾದ ಮತ್ತಷ್ಟು ಮಾಹಿತಿ ಹಂಚಿಕೊಂಡ ಟಾಟಾ ಮೋಟಾರ್ಸ್

ಹೊಸ ವಾಹನ ಕೇವಲ ಸರಕು ಸಾಗಾಣಿಕೆ ವೇಳೆಯೂ ಕೇವಲ 7 ಸೆಕೆಂಡುಗಳಲ್ಲಿ ಸೊನ್ನೆಯಿಂದ 30 ಕಿ.ಮೀ ವೇಗಪಡೆದುಕೊಳ್ಳಲಿದ್ದು, ಸ್ಟ್ಯಾಂಡರ್ಡ್ ಆಗಿ ಐಪಿ67 ವಾಟರ್‌ಪ್ರೂಫಿಂಗ್ ಸೇರಿದಂತೆ ಪ್ರಮುಖ ತಾಂತ್ರಿಕ ಅಂಶಗಳನ್ನು ಹೊಂದಿದೆ.

ಟಿವಿಸಿ ಮೂಲಕ ಹೊಸ ಏಸ್ ಇವಿ ಕುರಿತಾದ ಮತ್ತಷ್ಟು ಮಾಹಿತಿ ಹಂಚಿಕೊಂಡ ಟಾಟಾ ಮೋಟಾರ್ಸ್

ಏಸ್ ಎಲೆಕ್ಟ್ರಿಕ್ ವಾಹನವು ಸಾಮಾನ್ಯ ಇವಿ ಚಾರ್ಜಿಂಗ್‌ ಮಾತ್ರವಲ್ಲದೇ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಸಹ ಹೊಂದಿದ್ದು, ಕೊನೆಯ ಮೈಲಿ ಸರಕು ಸಾಗಾಣಿಕೆಗೆ ಅನೂಕರವಾಗುವಂತೆ ಚಾರ್ಜಿಂಗ್ ನಿಲ್ದಾಣಗಳನ್ನು ಅಳವಡಿಸಿಕೊಳ್ಳಲು ಇದು ಗ್ರಾಹಕರಿಗೆ ನೆರವಾಗಲಿದೆ.

ಟಿವಿಸಿ ಮೂಲಕ ಹೊಸ ಏಸ್ ಇವಿ ಕುರಿತಾದ ಮತ್ತಷ್ಟು ಮಾಹಿತಿ ಹಂಚಿಕೊಂಡ ಟಾಟಾ ಮೋಟಾರ್ಸ್

ಜೊತೆಗೆ ಟಾಟಾ ಮೋಟಾರ್ಸ್ ಕಂಪನಿಯು ಹೊಸ ವಾಣಿಜ್ಯ ವಾಹನ ಇವಿ ಬ್ಯಾಟರಿಯಲ್ಲಿ ಅಡ್ವಾನ್ಸ್ ಬ್ಯಾಟರಿ ಕೂಲಿಂಗ್ ಸಿಸ್ಟಂ ಜೋಡಣೆ ಮಾಡಿದ್ದು, ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಹಿನ್ನಲೆಯಲ್ಲಿ ಹೊಸ ವಾಹನ ಮೈಲೇಜ್ ಪ್ರಮಾಣವು ಗಣನೀಯವಾಗಿ ಹೆಚ್ಚಳವಾಗಲಿದೆ.

ಟಿವಿಸಿ ಮೂಲಕ ಹೊಸ ಏಸ್ ಇವಿ ಕುರಿತಾದ ಮತ್ತಷ್ಟು ಮಾಹಿತಿ ಹಂಚಿಕೊಂಡ ಟಾಟಾ ಮೋಟಾರ್ಸ್

ಹೊಸ ಇವಿ ವಾಣಿಜ್ಯ ವಾಹನ ಬಿಡುಗಡೆಗೂ ಮುನ್ನ ಹಲವಾರು ಮಾರುಕಟ್ಟೆ ಅಧ್ಯಯನಗಳನ್ನು ಕೈಗೊಂಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಗ್ರಾಹಕರ ಸ್ನೇಹಿ ಇವಿ ಮಾದರಿಯನ್ನು ಸಿದ್ದಗೊಳಿಸಿದ್ದು, ಹೊಸ ವಾಹನ ಇಂಟಿರಿಯರ್ ಸೌಲಭ್ಯಗಳು ಸಹ ಅತ್ಯುತ್ತಮವಾಗಿವೆ.

ಟಿವಿಸಿ ಮೂಲಕ ಹೊಸ ಏಸ್ ಇವಿ ಕುರಿತಾದ ಮತ್ತಷ್ಟು ಮಾಹಿತಿ ಹಂಚಿಕೊಂಡ ಟಾಟಾ ಮೋಟಾರ್ಸ್

ವಾಹನ ಚಾಲಕರಿಗೆ ಅರಾಮದಾಯಕ ಪ್ರಯಾಣಿಸಲು ಅನುಕೂಲಕರವಾಗುವಂತಹ ಹಲವಾರು ಸುಧಾರಿತ ತಾಂತ್ರಿಕ ಅಂಶಗಳನ್ನು ಸೇರ್ಪಡೆಗೊಳಿಸಿದ್ದು, 7 ಇಂಚಿನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ರಿಯರ್ ವ್ಯೂ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ನ್ಯೂ ಜನರೇಷನ್ ಇನ್‌ಟ್ರುಮೆಂಟ್ ಕ್ಲಸ್ಟರ್ ಮತ್ತು ಸಾಕಷ್ಟು ಸ್ಥಳಾವಕಾಶ ಹೊಂದಿರುವ ಡ್ಯಾಶ್‌ಬೋರ್ಡ್ ಹೊಂದಿದೆ.

ಟಿವಿಸಿ ಮೂಲಕ ಹೊಸ ಏಸ್ ಇವಿ ಕುರಿತಾದ ಮತ್ತಷ್ಟು ಮಾಹಿತಿ ಹಂಚಿಕೊಂಡ ಟಾಟಾ ಮೋಟಾರ್ಸ್

ಜೊತೆಗೆ ಹೊಸ ಇವಿ ವಾಹನದಲ್ಲಿ ಫ್ಲಿಟ್ ಮ್ಯಾನೆಜ್ಮೆಂಟ್ ಕನೆಕ್ಟೆಡ್ ಸೌಲಭ್ಯವನ್ನು ಜೋಡಿಸಲಾಗಿದ್ದು, ವಾಹನ ಮಾಹಿತಿಯನ್ನು ತಿಳಿಯಲು ಜಿಯೋ ಫೆನ್ಸಿಂಗ್, ನ್ಯಾವಿಗೇಷನ್ ಸೌಲಭ್ಯಗಳು ಮಾಲೀಕರಿಗೆ ಸಹಕಾರಿಯಾಗಲಿವೆ.

ಟಿವಿಸಿ ಮೂಲಕ ಹೊಸ ಏಸ್ ಇವಿ ಕುರಿತಾದ ಮತ್ತಷ್ಟು ಮಾಹಿತಿ ಹಂಚಿಕೊಂಡ ಟಾಟಾ ಮೋಟಾರ್ಸ್

ಹೀಗಾಗಿ ಇದು ಸಾಮಾನ್ಯ ಡೀಸೆಲ್ ಮಾದರಿಗಿಂತಲೂ ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಸದ್ಯಕ್ಕೆ ಹೊಸ ವಾಹನದ ಅಧಿಕೃತ ಬೆಲೆ ಮಾಹಿತಿಯನ್ನು ಬಹಿರಂಗಪಡಿಸದ ಕಂಪನಿಯು ಮುಂಬರುವ ತ್ರೈಮಾಸಿಕ ವೇಳೆಗೆ ಬೆಲೆ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದೆ.

ಟಿವಿಸಿ ಮೂಲಕ ಹೊಸ ಏಸ್ ಇವಿ ಕುರಿತಾದ ಮತ್ತಷ್ಟು ಮಾಹಿತಿ ಹಂಚಿಕೊಂಡ ಟಾಟಾ ಮೋಟಾರ್ಸ್

ದುಬಾರಿ ಇಂಧನಗಳ ಪರಿಣಾಮ ಸಾರಿಗೆ ವೆಚ್ಚವು ದಿನಂಪ್ರತಿ ಹೆಚ್ಚುತ್ತಲೇ ಇದ್ದು, ನಿಗದಿತ ನಿರ್ವಹಣಾ ವೆಚ್ಚ ಹೊಂದಿರುವ ಇವಿ ಮಾದರಿಗಳು ಇ-ಕಾಮರ್ಸ್ ಕಂಪನಿಗಳು ಅತ್ಯಧಿಕ ಲಾಭ ತಂದುಕೊಡಲಿವೆ ಎನ್ನಬಹುದು.

ಟಿವಿಸಿ ಮೂಲಕ ಹೊಸ ಏಸ್ ಇವಿ ಕುರಿತಾದ ಮತ್ತಷ್ಟು ಮಾಹಿತಿ ಹಂಚಿಕೊಂಡ ಟಾಟಾ ಮೋಟಾರ್ಸ್

ಹೊಸ ಏಸ್ ಇವಿ ಮಾದರಿಗಾಗಿ ಈಗಾಗಲೇ ಅಮೆಜಾನ್, ಫ್ಲಿಪ್‌ಕಾರ್ಟ್, ಬಿಗ್ ಬಾಸ್ಕೆಟ್, ಸಿಟಿ ಲಿಂಕ್, ಮೂವಿಂಗ್, ಡಾಟ್, ಲೆಟ್ಸ್‌ಟ್ರಾನ್ಸ್‌ಪೋರ್ಟ್, ಯೆಲೂ -ಕಾಮರ್ಸ್ ಕಂಪನಿಗಳು ಟಾಟಾ ಜೊತೆಗೆ ಹೊಸ ಒಡಂಬಡಿಕೆ ಮಾಡಿಕೊಂಡಿದ್ದು, ಹೊಸ ಒಡಂಬಡಿಕೆಯೊಂದಿಗೆ ಟಾಟಾ ಕಂಪನಿಯು ಈ ಎಂಟು ಕಂಪನಿಗಳಿಗೆ ಒಟ್ಟು 39 ಸಾವಿರ ಏಸ್ ಇವಿ ಮಾದರಿಗಳನ್ನು ವಿತರಿಸಲಿದೆ.

ಟಿವಿಸಿ ಮೂಲಕ ಹೊಸ ಏಸ್ ಇವಿ ಕುರಿತಾದ ಮತ್ತಷ್ಟು ಮಾಹಿತಿ ಹಂಚಿಕೊಂಡ ಟಾಟಾ ಮೋಟಾರ್ಸ್

ಇ-ಕಾರ್ಮಸ್ ನಿರ್ವಹಣಾ ವೆಚ್ಚ ತಗ್ಗಿಸಲು ಪ್ರಮುಖ ಕಂಪನಿಗಳು ಡೀಸೆಲ್ ವಾಹನಗಳ ಬದಲಾಗಿ ಇವಿ ವಾಣಿಜ್ಯ ವಾಹನಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಇದೀಗ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಮಾದರಿಯ ಮೂಲಕ ಆರಂಭಿಕ ಹಂತದಲ್ಲಿಯೇ ಭಾರೀ ಬೇಡಿಕೆ ಪಡೆದುಕೊಂಡಿದೆ.

Most Read Articles

Kannada
English summary
New tata ace electric full detailed in first official tvc
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X