ನಿಜ ಜೀವನದಲ್ಲೂ ಹೀರೋ ಎನಿಸಿಕೊಂಡ ನಟ ಸೂರ್ಯ: ನಿರ್ಗತಿಕರ ಸೇವೆಗಾಗಿ ವಾಹನ ಉಡುಗೊರೆ

ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟ ಸೂರ್ಯ ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ಜನರಿಗೆ ಸಹಾಯ ಮಾಡುವ ಮೂಲಕ ರಿಯಲ್ ಹೀರೋ ಆಗಿದ್ದಾರೆ. ಆಗಂ ಫೌಂಡೇಶನ್ ಮೂಲಕ ಈಗಾಗಲೇ ನೂರಾರು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿರುವ ಅವರು, ಇದೀಗ ಬಡವರು ಹಾಗೂ ನಿರ್ಗತಿಕರ ಸಹಾಯಕ್ಕೆ ಮುಂದಾಗಿದ್ದಾರೆ.

ನಿಜ ಜೀವನದಲ್ಲೂ ಹೀರೋ ಎನ್ನಿಸಿಕೊಂಡ ನಟ ಸೂರ್ಯ: ನಿರ್ಗತಿಕರ ಸೇವೆಗಾಗಿ ವಾಹನ ಉಡುಗೊರೆ

ಇದೊಂದೆ ಅಲ್ಲದೇ ಇತ್ತೀಚೆಗೆ ತಮಿಳುನಾಡು ಪೊಲೀಸರು ಆರಂಭಿಸಿರುವ ಮಹತ್ವಾಕಾಂಕ್ಷೆಯ 'ಕಾವಲ್ ಕರಂಗಲ್' ಎಂಬ ಕಾರ್ಯಕ್ರಮಕ್ಕೆ ನಟ ಸೂರ್ಯ ಅವರ ನಿರ್ಮಾಣ ಸಂಸ್ಥೆಯಾದ 6 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಸುಜುಕಿ ಇಕೋ ವ್ಯಾನ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ನಿಜ ಜೀವನದಲ್ಲೂ ಹೀರೋ ಎನ್ನಿಸಿಕೊಂಡ ನಟ ಸೂರ್ಯ: ನಿರ್ಗತಿಕರ ಸೇವೆಗಾಗಿ ವಾಹನ ಉಡುಗೊರೆ

ತಮಿಳುನಾಡು ಪೊಲೀಸರು ಆಯೋಜಿಸಿರುವ 'ಕಾವಲ್ ಕರಂಗಲ್' ಕಾರ್ಯಕ್ರಮಕ್ಕೆ ನಟ ಸೂರ್ಯ ಅವರ ನಿರ್ಮಾಣ ಸಂಸ್ಥೆಯಾದ 2ಡಿ ಎಂಟರ್‌ಟೈನ್‌ಮೆಂಟ್‌ನಿಂದ 6 ಲಕ್ಷ ರೂಪಾಯಿ ಮೌಲ್ಯದ ವಾಹನವನ್ನು ನೀಡಿದೆ. ನಿರಾಶ್ರಿತರು, ನಿರ್ಗತಿಕರಿಗೆ ನೆರವು ನೀಡುವ ಉದ್ದೇಶದಿಂದ ತಮಿಳುನಾಡು ಪೊಲೀಸರು ‘ಕಾವಲ್ ಕರಂಗಲ್' ಎಂಬ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ.

ನಿಜ ಜೀವನದಲ್ಲೂ ಹೀರೋ ಎನ್ನಿಸಿಕೊಂಡ ನಟ ಸೂರ್ಯ: ನಿರ್ಗತಿಕರ ಸೇವೆಗಾಗಿ ವಾಹನ ಉಡುಗೊರೆ

ಸಂಸ್ಥೆಯು ಹಲವಾರು ಎನ್‌ಜಿಒಗಳ ಜೊತೆಯಲ್ಲಿ ಬೀದಿಗಳಲ್ಲಿ ವಾಸಿಸುವ ನಿರಾಶ್ರಿತರಿಗೆ ಮತ್ತು ನಿರ್ಗತಿಕರಿಗೆ ನೆರವು ನೀಡುತ್ತದೆ. ಸೂರ್ಯ ಅವರ 2ಡಿ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ಹೌಸ್ ಕೊಡುಗೆಯಾಗಿ ನೀಡಿದ ಮಾರುತಿ ಸುಜುಕಿ ಇಕೋವನ್ನು ಮನೆಯಿಲ್ಲದವರಿಗೆ ಮತ್ತು ಬಡವರಿಗೆ ಆಹಾರಕ್ಕಾಗಿ ಬಳಸಲಾಗುತ್ತದೆ.

ನಿಜ ಜೀವನದಲ್ಲೂ ಹೀರೋ ಎನ್ನಿಸಿಕೊಂಡ ನಟ ಸೂರ್ಯ: ನಿರ್ಗತಿಕರ ಸೇವೆಗಾಗಿ ವಾಹನ ಉಡುಗೊರೆ

ಚೆನ್ನೈ ಕಾರ್ಪೊರೇಷನ್ ಕಮಿಷನರ್ ಗಗನ್‌ದೀಪ್ ಸಿಂಗ್, ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಮತ್ತು ಶರಣ್ಯ ರಾಜಶೇಖರ್ ವಾಹನಕ್ಕೆ ಚಾಲನೆ ನೀಡಿದರು. ಸೂರ್ಯ ಈಗಾಗಲೇ ತನ್ನ ಆಗಮ ಫೌಂಡೇಶನ್ ಮೂಲಕ ನಿರ್ಗತಿಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದ್ದಾರೆ.

ನಿಜ ಜೀವನದಲ್ಲೂ ಹೀರೋ ಎನ್ನಿಸಿಕೊಂಡ ನಟ ಸೂರ್ಯ: ನಿರ್ಗತಿಕರ ಸೇವೆಗಾಗಿ ವಾಹನ ಉಡುಗೊರೆ

ಇತ್ತೀಚೆಗಷ್ಟೇ ತಮಿಳುನಾಡು ಪೊಲೀಸರು ಬಡವರಿಗಾಗಿ ಆಯೋಜಿಸಿದ್ದ ಕಾವಲ್ ಕರಂಗಲ್ ಕಾರ್ಯಕ್ರಮದ ಅಂಗವಾಗಿ ಮಾರುತಿ ಇಕೋ ವ್ಯಾನ್ ಅನ್ನು ದಾನವಾಗಿ ನೀಡಿದ ಅವರನ್ನು ನೆಟಿಟ್ಟಿಗರು ಶ್ಲಾಘಿಸಿದ್ದಾರೆ. ತಮಿಳುನಾಡಿನಲ್ಲಿ ಕಾವಲ್ ಕರಂಗಲ್ ಕಾರ್ಯಕ್ರಮ ಆರಂಭವಾಗಿ ಒಂದು ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ಚೆನ್ನೈ ಎಗ್ಮೋರ್‌ನ ರಾಜರತ್ನಂ ಕ್ರೀಡಾಂಗಣದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.

ನಿಜ ಜೀವನದಲ್ಲೂ ಹೀರೋ ಎನ್ನಿಸಿಕೊಂಡ ನಟ ಸೂರ್ಯ: ನಿರ್ಗತಿಕರ ಸೇವೆಗಾಗಿ ವಾಹನ ಉಡುಗೊರೆ

ಸಮಾರಂಭದಲ್ಲಿ 2ಡಿ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ಹೌಸ್ ಈ ಕಾರನ್ನು ಕೊಡುಗೆಯಾಗಿ ನೀಡಿದೆ. ಹೀರೋ ಸೂರ್ಯ ಫ್ಯಾಮಿಲಿ ಸನ್ನಿವೇಶ ಏನಿದ್ದರೂ ಕಷ್ಟದಲ್ಲಿರುವವರಿಗೆ ಬೆಂಬಲ ನೀಡುವುದರಲ್ಲಿ ಸದಾ ಮುಂದು. ಈ ಸ್ಟಾರ್ ಹೀರೋ ಫ್ಯಾಮಿಲಿ ಪ್ರಾಕೃತಿಕ ವಿಕೋಪಗಳಲ್ಲಷ್ಟೇ ಅಲ್ಲ, ಎಲ್ಲಾ ಸಮಯದಲ್ಲೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ.

ನಿಜ ಜೀವನದಲ್ಲೂ ಹೀರೋ ಎನ್ನಿಸಿಕೊಂಡ ನಟ ಸೂರ್ಯ: ನಿರ್ಗತಿಕರ ಸೇವೆಗಾಗಿ ವಾಹನ ಉಡುಗೊರೆ

ಆಗಮ್ ಫೌಂಡೇಶನ್ ಈಗಾಗಲೇ ಸಾವಿರಾರು ನಿರ್ಗತಿಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳನ್ನು ಒದಗಿಸುತ್ತಿದೆ. ಸೂರ್ಯ ಅವರ ತಂದೆ ಶಿವಕುಮಾರ್ ಮತ್ತು ಕಿರಿಯ ಸಹೋದರ ಕಾರ್ತಿ ಕೂಡ ಬಡ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ. ಸದ್ಯ ಮೀನುಗಾರರ ಕಥಾವಸ್ತುವನ್ನಿಟ್ಟುಕೊಂಡು ಮಕ್ಕಳ ವಿಷಯದ ಚಿತ್ರವೊಂದನ್ನು ಮಾಡುತ್ತಿದ್ದಾರೆ ಸೂರ್ಯ.

ನಿಜ ಜೀವನದಲ್ಲೂ ಹೀರೋ ಎನ್ನಿಸಿಕೊಂಡ ನಟ ಸೂರ್ಯ: ನಿರ್ಗತಿಕರ ಸೇವೆಗಾಗಿ ವಾಹನ ಉಡುಗೊರೆ

ಅದ್ಧೂರಿ ವೆಚ್ಚದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಥೇಟ್‌ ಮೀನುಗಾರರ ಮನೆಗಳನ್ನು ಹೋಲುವ ಬೃಹತ್ ಸೆಟ್ ಹಾಕಲಾಗಿದೆ. ಸಾಮಾನ್ಯವಾಗಿ ಶೂಟಿಂಗ್ ಕಂಪ್ಲೀಟ್ ಆದಮೇಲೆ ಇದೇ ಸೆಟ್‌ಗಳು ಮತ್ತು ಮನೆಗಳನ್ನು ಕೆಡವಲಾಗುತ್ತದೆ. ಆದರೆ, ಹಾಗೆ ಮಾಡದಿರಲು ನಿರ್ಧರಿಸಿದ ಸೂರ್ಯ ಈಗ ನಿರಾಶ್ರಿತ ಮೀನುಗಾರರಿಗೆ ಮನೆಗಳನ್ನು ನೀಡಲು ನಿರ್ಧರಿಸಿದ್ದಾರೆ. ಸೂರ್ಯ ತೆಗೆದುಕೊಂಡ ನಿರ್ಧಾರದಿಂದ ಮೀನುಗಾರರು ಸಂತಸಗೊಂಡಿದ್ದಾರೆ.

ನಿಜ ಜೀವನದಲ್ಲೂ ಹೀರೋ ಎನ್ನಿಸಿಕೊಂಡ ನಟ ಸೂರ್ಯ: ನಿರ್ಗತಿಕರ ಸೇವೆಗಾಗಿ ವಾಹನ ಉಡುಗೊರೆ

ಮಾರುತಿ ಸುಜುಕಿ ಇಕೋ ಕುರಿತು ಸಂಕ್ಷಿಪ್ತ ಮಾಹಿತಿ

ಮಾರುತಿ ಸುಜುಕಿ ಇಕೋ MPV ಗೆ ಬಂದಾಗ, ಇದು ದೇಶದಲ್ಲಿ ಖಾಸಗಿ ಮತ್ತು ವಾಣಿಜ್ಯ ವಾಹನ ಬಳಕೆದಾರರಿಗೆ ಲಭ್ಯವಿದೆ. ಕಂಪನಿಯು 2010 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ Eco MPV ಅನ್ನು ಮೊದಲು ಬಿಡುಗಡೆ ಮಾಡಿತು. ದೇಶದಲ್ಲಿ ಮೊದಲ ಎರಡು ವರ್ಷಗಳಲ್ಲಿ 1 ಲಕ್ಷ ಯೂನಿಟ್ ಮಾರಾಟ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಪ್ರಸ್ತುತ, ದೇಶದಲ್ಲಿ 7 ಲಕ್ಷಕ್ಕೂ ಹೆಚ್ಚು ಮಾರುತಿ ಸುಜುಕಿ ಇಕೋ ವಾಹನಗಳು ಸಂಚರಿಸುತ್ತಿವೆ.

ನಿಜ ಜೀವನದಲ್ಲೂ ಹೀರೋ ಎನ್ನಿಸಿಕೊಂಡ ನಟ ಸೂರ್ಯ: ನಿರ್ಗತಿಕರ ಸೇವೆಗಾಗಿ ವಾಹನ ಉಡುಗೊರೆ

ಮಾರುತಿ ಸುಜುಕಿ ಇಕೋ ಪ್ರಯಾಣಿಕ ವಾಹನ ವಿಭಾಗಕ್ಕಿಂತ ವಾಣಿಜ್ಯ ಬಳಕೆಯಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದು ಸರಕು ಸಾಗಣೆಗೆ ಸೂಕ್ತವಾದ ವಾಹನ ಎಂದು ಖ್ಯಾತಿಯನ್ನು ಹೊಂದಿದೆ. ಈ ಮಾದರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಮಾರುತಿ ಸುಜುಕಿ 2015 ರಲ್ಲಿ ವಾಣಿಜ್ಯ ಬಳಕೆಗಾಗಿ ಇಕೋ ಕಾರ್ಗೋ ಎಂಬ ರೂಪಾಂತರವನ್ನು ಪ್ರಾರಂಭಿಸಿತು.

ನಿಜ ಜೀವನದಲ್ಲೂ ಹೀರೋ ಎನ್ನಿಸಿಕೊಂಡ ನಟ ಸೂರ್ಯ: ನಿರ್ಗತಿಕರ ಸೇವೆಗಾಗಿ ವಾಹನ ಉಡುಗೊರೆ

ಈ ರೂಪಾಂತರದ ಬಿಡುಗಡೆಯೊಂದಿಗೆ ಮಾರುತಿ ಸುಜುಕಿ ಇಕೋ ಎಂಪಿವಿ ಮಾರಾಟವು ಗಗನಕ್ಕೇರಿದೆ. ಇದು ಐದು ಅಥವಾ ಏಳು ಸೀಟ್ ಕಾನ್ಫಿಗರೇಶನ್‌ಗಳಲ್ಲಿ ಖಾಸಗಿ ಗ್ರಾಹಕರಿಗೆ ಲಭ್ಯವಿದೆ. ಮಾರುತಿ ಸುಜುಕಿ ತನ್ನ ಇಕೋ ವಾಹನವನ್ನು ಸರಕು ಮತ್ತು ಆಂಬ್ಯುಲೆನ್ಸ್ ರೂಪದಲ್ಲಿ ವಾಣಿಜ್ಯ ಬಳಕೆಗಾಗಿ ಮಾರಾಟ ಮಾಡುತ್ತದೆ.

ನಿಜ ಜೀವನದಲ್ಲೂ ಹೀರೋ ಎನ್ನಿಸಿಕೊಂಡ ನಟ ಸೂರ್ಯ: ನಿರ್ಗತಿಕರ ಸೇವೆಗಾಗಿ ವಾಹನ ಉಡುಗೊರೆ

ದೇಶೀಯ ಮಾರುಕಟ್ಟೆಯಲ್ಲಿ ಎಕೋ ಬೆಲೆಯು 4.63 ಲಕ್ಷ ರೂ.ಗಳಿಂದ 7.63 ಲಕ್ಷ ರೂ. ಇದೆ. ಮಾರುತಿ ಸುಜುಕಿ ಇಕೋ MPV ಡ್ಯುಯಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಸೀಟ್-ಬೆಲ್ಟ್ ರಿಮೈಂಡರ್ ಮತ್ತು ಹೈ-ಸ್ಪೀಡ್ ಅಲರ್ಟ್‌ನೊಂದಿಗೆ ಬರುತ್ತದೆ.

Most Read Articles

Kannada
English summary
Tamil actor surya donates maruti suzuki eeco to kaaval karangal intiative by tn police
Story first published: Thursday, April 28, 2022, 19:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X