ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪಲು 'ಅನುಭವ್' ಸಂಚಾರಿ ಶೋರೂಂ ಆರಂಭಿಸಿದ ಟಾಟಾ ಮೋಟಾರ್ಸ್

ಕಾರು ಮಾರಾಟದಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಉಪಕ್ರಮಗಳೊಂದಿಗೆ ನಗರಪ್ರದೇಶಗಳಲ್ಲಿ ಮಾತ್ರವಲ್ಲದೇ ಗ್ರಾಮೀಣ ಭಾಗದಲ್ಲೂ ಸಂಭಾವ್ಯ ಗ್ರಾಹಕರನ್ನು ಸೆಳೆಯುವ ಯೋಜನೆ ರೂಪಿಸಿದ್ದು, ತನ್ನ ಹೊಸ ಕಾರು ಉತ್ಪನ್ನಗಳ ಬಗೆಗೆ ಗ್ರಾಹಕರಿಗೆ ಮಾಹಿತಿ ಒದಗಿಸುವ ಉದ್ದೇಶದಿಂದ 'ಅನುಭವ್' ಹೆಸರಿನಲ್ಲಿ ಸಂಚಾರಿ ಶೋರೂಂಗಳನ್ನು ಆರಂಭಿಸಿದೆ.

ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪಲು 'ಅನುಭವ್' ಸಂಚಾರಿ ಶೋರೂಂ ಆರಂಭಿಸಿದ ಟಾಟಾ

ನ್ಯೂ ಜನರೇಷನ್ ಕಾರು ಮಾದರಿಗಳೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ತಿಂಗಳಿನಿಂದ ಪ್ರಮುಖ ನಗರಗಳಲ್ಲಿ ಕಾರು ಮಾರಾಟ ಜಾಲವನ್ನು ವಿಸ್ತರಿಸಿದೆ. ಜಿಲ್ಲಾ ಮಟ್ಟದಲ್ಲಿ ಕಾರು ಮಾರಾಟ ಮಳಿಗೆಗಳು ಲಭ್ಯವಿದ್ದರೂ ತಾಲೂಕು ಮತ್ತು ಹೋಬಳಿ ಮಟ್ಟದಲ್ಲೂ ಗ್ರಾಹಕರಿಗೆ ಶೋರೂಂ ಭೇಟಿ ಅನುಭವ ನೀಡಲು ಮುಂದಾಗಿರುವ ಟಾಟಾ ಮೋಟಾರ್ಸ್ ಶೋರೂಂ ಆನ್ ವ್ಹೀಲ್ ಪರಿಕಲ್ಪನೆಯನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಮುಂದಾಗಿದೆ.

ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪಲು 'ಅನುಭವ್' ಸಂಚಾರಿ ಶೋರೂಂ ಆರಂಭಿಸಿದ ಟಾಟಾ

ಹೀಗಾಗಿ ಶೋರೂಂ ಲಭ್ಯತೆ ಇಲ್ಲದ ಪ್ರಮುಖ ಕಡೆಗಳಲ್ಲಿ ಸಂಭಾವ್ಯ ಗ್ರಾಹಕರಿಗೆ ತನ್ನ ಹೊಸ ಉತ್ಪನ್ನಗಳ ಮಾಹಿತಿ ತಿಳಿಸಲು 'ಅನುಭವ್' ಹೆಸರಿನಲ್ಲಿ ಸಂಚಾರಿ ಶೋರೂಂಗಳನ್ನು ತೆರೆದಿದ್ದು, ದೇಶಾದ್ಯಂತ ಒಟ್ಟು 103 ಕಡೆಗಳಲ್ಲಿ ಸಂಚಾರಿ ಕಾರ್ ಶೋರೂಂಗಳನ್ನು ಅಳವಡಿಸಿಕೊಳ್ಳಲಾಗಿದೆ.

ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪಲು 'ಅನುಭವ್' ಸಂಚಾರಿ ಶೋರೂಂ ಆರಂಭಿಸಿದ ಟಾಟಾ

ಸಂಚಾರಿ ಶೋರೂಂಗಳಲ್ಲಿ ನುರಿತ ಮಾರಾಟ ಸೇವಾ ಸಿಬ್ಬಂದಿಯು ಸಂಭಾವ್ಯ ಗ್ರಾಹಕರಿಗೆ ಉತ್ಪನ್ನ ಮಾಹಿತಿಯನ್ನು ಹಂಚಿಕೊಳ್ಳುವುದರ ಜೊತೆಗೆ ಹಣಕಾಸು ಸೌಲಭ್ಯಗಳು, ಟೆಸ್ಟ್ ಡ್ರೈವ್ ಬುಕ್ ಮಾಡಲು ಮತ್ತು ಹಳೆಯ ಕಾರುಗಳನ್ನು ವಿನಿಮಯ ಮಾಡಿಕೊಳ್ಳುವ ಗ್ರಾಹಕರಿಗೆ ಮೌಲ್ಯಮಾಪದ ಸಹಾಯ ಮಾಡಲಿದ್ದು, ಆಯಾ ವ್ಯಾಪ್ತಿಯಲ್ಲಿ ಅಧಿಕೃತ ಶೋರೂಂಗಳೇ ಸಂಚಾರಿ ಶೋರೂಂಗಳನ್ನು ಮೇಲ್ವಿಚಾರಣೆ ಮಾಡಲಿವೆ.

ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪಲು 'ಅನುಭವ್' ಸಂಚಾರಿ ಶೋರೂಂ ಆರಂಭಿಸಿದ ಟಾಟಾ

ಕಳೆದ ಐದು ವರ್ಷಗಳಲ್ಲಿ ಪ್ರಮುಖ ಕಾರು ಕಂಪನಿಗಳು ಪ್ಯಾಸೆಂಜರ್ ಕಾರು ವಿಭಾಗದಲ್ಲಿ ಗ್ರಾಮೀಣ ಭಾಗದ ಗ್ರಾಹಕರಿಂದಲೇ ಶೇ. 40ರಷ್ಟು ಬೇಡಿಕೆಯು ಹರಿದುಬಂದಿದ್ದು, ಇದು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ.

ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪಲು 'ಅನುಭವ್' ಸಂಚಾರಿ ಶೋರೂಂ ಆರಂಭಿಸಿದ ಟಾಟಾ

ಅದಕ್ಕಾಗಿಯೇ ಟಾಟಾ ಮೋಟಾರ್ಸ್ ಕಂಪನಿಯು ಸಹ ತನ್ನ ಪ್ರಮುಖ ಕಾರು ಮಾದರಿಗಳೊಂದಿಗೆ ಇನ್ನಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಗ್ರಾಮೀಣ ಭಾಗದ ಗ್ರಾಹಕರಿಗೆ ವಿಶೇಷವಾಗಿ ಬಜೆಟ್ ಕಾರು ಮಾದರಿಗಳೊಂದಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ಯೋಜನೆ ರೂಪಿಸಿದೆ.

ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪಲು 'ಅನುಭವ್' ಸಂಚಾರಿ ಶೋರೂಂ ಆರಂಭಿಸಿದ ಟಾಟಾ

ಅದಕ್ಕಾಗಿ ಗ್ರಾಮೀಣ ಭಾಗದ ಗ್ರಾಹಕರಿಗೆ ಕಾರು ಖರೀದಿಗೆ ಅವಕಾಶ ಮತ್ತು ಸೌಲಭ್ಯಗಳ ಕುರಿತಾಗಿ ನುರಿತ ಮಾರಾಟ ಪ್ರತಿನಿಧಿಗಳ ತಂಡದೊಂದಿಗೆ ಸಂಚಾರಿ ಶೋರೂಂ ಆರಂಭಿಸಿದ್ದು, ಇದು ಮುಂಬರುವ ದಿನಗಳಲ್ಲಿ ಟಾಟಾ ಮೋಟಾರ್ಸ್ ಕಾರು ಮಾರಾಟ ಪ್ರಮಾಣವನ್ನು ಗಣನೀಯ ಹೆಚ್ಚಿಸುವ ಸಾಧ್ಯತೆಗಳಿವೆ.

ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪಲು 'ಅನುಭವ್' ಸಂಚಾರಿ ಶೋರೂಂ ಆರಂಭಿಸಿದ ಟಾಟಾ

ಭಾರತದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಕಾರು ಮಾರಾಟ ಆರಂಭಿಸಿದ ನಂತರ ಮೊದಲ ಬಾರಿಗೆ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಟಾಟಾ ಕಂಪನಿಯು ಕಳೆದ ವರ್ಷ ಈ ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿದೆ.

ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪಲು 'ಅನುಭವ್' ಸಂಚಾರಿ ಶೋರೂಂ ಆರಂಭಿಸಿದ ಟಾಟಾ

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಹೊಸ ಬದಲಾವಣೆ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಪ್ರಯಾಣಿಕರ ಕಾರು ಮಾರಾಟ ವಿಭಾಗದಲ್ಲಿ ತನ್ನ ಪ್ರತಿಸ್ಪರ್ಧಿ ಕಂಪನಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಕಂಪನಿಯು 2021ರ ಅವಧಿಯಲ್ಲಿ ಒಟ್ಟು 3.31 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ.

ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪಲು 'ಅನುಭವ್' ಸಂಚಾರಿ ಶೋರೂಂ ಆರಂಭಿಸಿದ ಟಾಟಾ

ಭಾರತದಲ್ಲಿ ಕಾರು ಉತ್ಪಾದನೆಯನ್ನು ಆರಂಭಿಸಿದ 31 ವರ್ಷಗಳ ನಂತರ ಟಾಟಾ ಮೋಟಾರ್ಸ್ ಕಂಪನಿಯು ವಾರ್ಷಿಕವಾಗಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, 2021ರಲ್ಲಿ ಕಂಪನಿಯು 2020ರ ಅವಧಿಯಲ್ಲಿನ ಕಾರು ಮಾರಾಟಕ್ಕಿಂತಲೂ ಶೇ. 94.6 ರಷ್ಟು ಬೆಳವಣಿಗೆ ಸಾಧಿಸಿದೆ.

ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪಲು 'ಅನುಭವ್' ಸಂಚಾರಿ ಶೋರೂಂ ಆರಂಭಿಸಿದ ಟಾಟಾ

2020ರಲ್ಲಿ 1,61,031 ಕಾರುಗಳನ್ನು ಮಾರಾಟ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು 2021ರಲ್ಲಿ 3,31,182 ಕಾರುಗಳನ್ನು ಮಾರಾಟ ಮಾಡಿದೆ. ಟಾಟಾ ಕಾರುಗಳ ಮಾರಾಟದಲ್ಲಿ ಸದ್ಯ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಅಗ್ರಸ್ಥಾನದಲ್ಲಿದೆ.

ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪಲು 'ಅನುಭವ್' ಸಂಚಾರಿ ಶೋರೂಂ ಆರಂಭಿಸಿದ ಟಾಟಾ

2021ರಲ್ಲಿ ಟಾಟಾ ಕಂಪನಿಯು ಮಾರಾಟ ಮಾಡಿರುವ 3.31 ಲಕ್ಷ ಕಾರುಗಳಲ್ಲಿ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯೊಂದೆ 1,08,577 ಯುನಿಟ್ ಒಳಗೊಂಡಿದ್ದು, ತದನಂತರದಲ್ಲಿ ಆಲ್‌ಟ್ರೊಜ್, ಟಿಯಾಗೋ, ಟಿಗೋರ್, ಪಂಚ್, ಹ್ಯಾರಿಯರ್ ಮತ್ತು ಸಫಾರಿ ಕಾರು ಮಾದರಿಗಳು ಸಹ ಉತ್ತಮ ಬೇಡಿಕೆ ಪಡೆದುಕೊಂಡಿವೆ.

ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪಲು 'ಅನುಭವ್' ಸಂಚಾರಿ ಶೋರೂಂ ಆರಂಭಿಸಿದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು 1991ರಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಿದ ಸಿಯೆರಾ ಕಾರು ಮಾದರಿಯ ನಂತರ ಎಸ್ಟೇಟ್​, ಸುಮೊ, ಇಂಡಿಕಾ, ನ್ಯಾನೊ, ವಿಸ್ತಾ, ಇಂಡಿಗೋ ಮಾಂಜಾ, ಜೆಸ್ಟ್, ಆರಿಯಾ, ಸಫಾರಿ, ಬೊಲ್ಟ್, ಹೆಕ್ಸಾ ಕಾರುಗಳು ಕೂಡಾ ಕಂಪನಿಗೆ ಉತ್ತಮ ಬೇಡಿಕೆ ತಂದುಕೊಟ್ಟರೂ ಪ್ರತಿಸ್ಪರ್ಧಿ ಮಾದರಿಗಳಿಂದ ತೀವ್ರ ಪೈಪೋಟಿ ಎದುರಿಸಿತ್ತು.

ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪಲು 'ಅನುಭವ್' ಸಂಚಾರಿ ಶೋರೂಂ ಆರಂಭಿಸಿದ ಟಾಟಾ

ಆದರೆ 2015ರ ನಂತರ ಮಾರುಕಟ್ಟೆಗೆ ಪ್ರವೇಶಿಸಿದ ಟಿಯಾಗೋ, ಟಿಗೋರ್ ತದನಂತರ 2017ರಲ್ಲಿ ಬಿಡುಗಡೆಯಾದ ನೆಕ್ಸಾನ್, 2019ರಲ್ಲಿ ಬಿಡುಗಡೆಯಾದ ಹ್ಯಾರಿಯರ್, 2020ರಲ್ಲಿ ಬಿಡುಗಡೆಯಾದ ಆಲ್‌ಟ್ರೊಜ್, ನೆಕ್ಸಾನ್ ಫೇಸ್‌ಲಿಫ್ಟ್, ನೆಕ್ಸಾನ್ ಇವಿ, 2021ರಲ್ಲಿ ಬಿಡುಗಡೆಯಾದ ನ್ಯೂ ಜನರೇಷನ್ ಸಫಾರಿ, ಪಂಚ್, ಟಿಗೋರ್ ಇವಿ ಕಾರು ಮಾದರಿಗಳು ಟಾಟಾ ಮೋಟಾರ್ಸ್ ಕಂಪನಿಯ ಕಾರು ಮಾರಾಟವನ್ನು ದುಪ್ಪಟ್ಟುಗೊಳಿಸಿವೆ.

ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪಲು 'ಅನುಭವ್' ಸಂಚಾರಿ ಶೋರೂಂ ಆರಂಭಿಸಿದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಟಿಯಾಗೋ, ಟಿಗೋರ್, ಪಂಚ್, ನೆಕ್ಸಾನ್, ಹ್ಯಾರಿಯರ್, ಸಫಾರಿ, ಟಿಗೋರ್ ಇವಿ ಮತ್ತು ನೆಕ್ಸಾನ್ ಇವಿ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, ನಿಕಟ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ ಕಂಪನಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

Article Published On: Friday, March 4, 2022, 8:50 [IST]
English summary
Tata launches anubhav mobile showrooms to offer enhanced customer experience in rural india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+