ಏಳು ನವೀಕೃತ ಟ್ರಕ್‌ಗಳೊಂದಿಗೆ ಐದು ಹೊಸ ಸಿಎನ್‌ಜಿ ಟ್ರಕ್ ಮಾದರಿಗಳನ್ನು ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್‌ ಕಂಪನಿಯು ತನ್ನ ಹೊಸ ಟ್ರಕ್‌ ಸರಣಿಗಳನ್ನು ಬಿಡುಗಡೆ ಮಾಡಿದ್ದು, ತನ್ನ ಸರಣಿಯಲ್ಲಿರುವ ಪ್ರಮುಖ ಟ್ರಕ್‌ಗಳಲ್ಲಿ ಸಿಎನ್‌ಜಿ ಆವೃತ್ತಿಗಳ ಜೊತೆಗೆ ಹೊಸ ಎಫ್‌ಇ ಶ್ರೇಣಿ, ಹೊಸ ಸಿಗ್ನಾ ಮತ್ತು ಪಿಮಾ ಕ್ಯಾಬಿನ್‌ಗಳನ್ನು ಒಳಗೊಂಡ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಏಳು ನವೀಕೃತ ಟ್ರಕ್‌ಗಳೊಂದಿಗೆ ಐದು ಹೊಸ ಸಿಎನ್‌ಜಿ ಟ್ರಕ್ ಮಾದರಿಗಳನ್ನು ಪರಿಚಯಿಸಿದ ಟಾಟಾ ಮೋಟಾರ್ಸ್

ಹೊಸದಾಗಿ ಬಿಡುಗಡೆಯಾಗಿರುವ ಟಾಟಾ ಹೊಸ ಮಧ್ಯಂತರ ಶ್ರೇಣಿಯ ಟಿಪ್ಪರ್ ಟ್ರಕ್‌ಗಳು ಭಾರತದಲ್ಲಿ ಲಭ್ಯವಿರುವ ಸ್ಮಾರ್ಟ್ ಶ್ರೇಣಿ ಟ್ರಕ್‌ ಮಾದರಿಗಳಾಗಿ ಗುರುತಿಸಿಕೊಂಡಿದ್ದು, ಹೊಸ ಟ್ರಕ್‌ ಮಾದರಿಗಳು ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ತಲೆಮಾರಿನ ತಾಂತ್ರಿಕ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ಏಳು ನವೀಕೃತ ಟ್ರಕ್‌ಗಳೊಂದಿಗೆ ಐದು ಹೊಸ ಸಿಎನ್‌ಜಿ ಟ್ರಕ್ ಮಾದರಿಗಳನ್ನು ಪರಿಚಯಿಸಿದ ಟಾಟಾ ಮೋಟಾರ್ಸ್

2022ರ ಟಾಟಾ ಟ್ರಕ್ ಮಾದರಿಗಳು ಡೀಸೆಲ್ ಎಂಜಿನ್ ಜೊತೆ ಸಿಎನ್‌ಜಿ ಮಾದರಿಗಳಲ್ಲೂ ಖರೀದಿಗೆ ಲಭ್ಯವಿದ್ದು, ಬಿಡುಗಡೆಯಾದ ಏಳು ಹೊಸ ಟ್ರಕ್‌ಗಳಲ್ಲಿ ಹೊಸದಾಗಿ ಐದು ಮಾದರಿಯಲ್ಲಿ ಸಿಎಸ್‌ಜಿ ಆವೃತ್ತಿಗಳು ಸಹ ಖರೀದಿಗೆ ಲಭ್ಯವಿವೆ.

ಏಳು ನವೀಕೃತ ಟ್ರಕ್‌ಗಳೊಂದಿಗೆ ಐದು ಹೊಸ ಸಿಎನ್‌ಜಿ ಟ್ರಕ್ ಮಾದರಿಗಳನ್ನು ಪರಿಚಯಿಸಿದ ಟಾಟಾ ಮೋಟಾರ್ಸ್

ಭಾರತದಲ್ಲಿ ಸದ್ಯ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಲಘು ವಾಣಿಜ್ಯ ವಾಹನಗಳು, ಮಧ್ಯಮ ಕ್ರಮಾಂಕದ ವಾಣಿಜ್ಯ ವಾಹನಗಳು ಮತ್ತು ಭಾರೀ ಗಾತ್ರದ ವಾಣಿಜ್ಯ ವಾಹನಗಳ ವಿಭಾಗದಲ್ಲಿ ತಮ್ಮದೆ ಹೊಸ ವೈಶಿಷ್ಟ್ಯತೆ ಹೊಂದಿವೆ.

ಏಳು ನವೀಕೃತ ಟ್ರಕ್‌ಗಳೊಂದಿಗೆ ಐದು ಹೊಸ ಸಿಎನ್‌ಜಿ ಟ್ರಕ್ ಮಾದರಿಗಳನ್ನು ಪರಿಚಯಿಸಿದ ಟಾಟಾ ಮೋಟಾರ್ಸ್

ವಾಣಿಜ್ಯ ವಾಹನಗಳ ಶ್ರೇಣಿಗೆ ಹೊಸ ವೈಶಿಷ್ಟ್ಯ ನೀಡುವುದರ ಮೂಲಕ ಗ್ರಾಹಕರನ್ನು ಆಕರ್ಷಿಸಲು ಹೊಸ ವಿನ್ಯಾಸದ ನವೀಕರಣಗಳನ್ನು ನೀಡಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ತಲೆಮಾರಿನ ತಾಂತ್ರಿಕ ಸೌಲಭ್ಯಗಳನ್ನು ಜೋಡಿಸಿದ್ದು, ಹೊಸ ಟ್ರಕ್‌ಗಳಲ್ಲಿ ಇದೀಗ ಹೊಸ ಗೇರ್ ಬದಲಾವಣೆಯ ಸೂಚಕ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಫ್ಲಿಟ್ ಎಡ್ಜ್ ಕನೆಕ್ಟಿವಿಟಿ, ರಿಯಲ್ ಟೈಮ್ ಸರ್ವಿಲೆನ್ಸ್‌ ಸೌಲಭ್ಯಗಳೊಂದಿಗೆ ಗರಿಷ್ಠ ಸುರಕ್ಷೆ ಖಾತ್ರಿಪಡಿಸುತ್ತದೆ.

ಏಳು ನವೀಕೃತ ಟ್ರಕ್‌ಗಳೊಂದಿಗೆ ಐದು ಹೊಸ ಸಿಎನ್‌ಜಿ ಟ್ರಕ್ ಮಾದರಿಗಳನ್ನು ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ಕಂಪನಿಯು 912 LPT, 1012 LPT, 1212 LPT, 1412 LPT ಮತ್ತು 1512 LPT ಗಳನ್ನು ಒಳಗೊಂಡಿರುವ ಎಲ್ಲಾ ಹೊಸ ಮಾದರಿಗಳಲ್ಲಿ ಇಂಧನ ದಕ್ಷತೆಗಾಗಿ FE ಸರಣಿಯನ್ನು ಪರಿಚಯಿಸಿದ್ದು, ಇವು 3.3 ಲೀಟರ್ ಡೀಸೆಲ್ ಎಂಜಿನ್‌ನಿಂದ ಗರಿಷ್ಠ ಇಂಧನ ದಕ್ಷತೆಯ ಗುರಿಯನ್ನು ಹೊಂದಿವೆ.

ಏಳು ನವೀಕೃತ ಟ್ರಕ್‌ಗಳೊಂದಿಗೆ ಐದು ಹೊಸ ಸಿಎನ್‌ಜಿ ಟ್ರಕ್ ಮಾದರಿಗಳನ್ನು ಪರಿಚಯಿಸಿದ ಟಾಟಾ ಮೋಟಾರ್ಸ್

ಈ ಟ್ರಕ್‌ಗಳು ಅತ್ಯತ್ತಮ ಸಸ್ಷೆಂಷನ್ ಮತ್ತು ಲೋಡಿಂಗ್ ಸಾಮರ್ಥ್ಯದ ವಿಷಯದಲ್ಲಿ ವಿಭಿನ್ನ ಲೋಡ್ ಬೇ ಗಾತ್ರಗಳನ್ನು ಹೊಂದಿದ್ದು, ಕಂಪನಿಯು K.14 ಅಲ್ಟ್ರಾ, 710 SK ಮತ್ತು 610 LPK ಶ್ರೇಣಿಯ ಟಿಪ್ಪರ್‌ಗಳನ್ನು ಸಹ ಬಿಡುಗಡೆ ಮಾಡಿದೆ.

ಏಳು ನವೀಕೃತ ಟ್ರಕ್‌ಗಳೊಂದಿಗೆ ಐದು ಹೊಸ ಸಿಎನ್‌ಜಿ ಟ್ರಕ್ ಮಾದರಿಗಳನ್ನು ಪರಿಚಯಿಸಿದ ಟಾಟಾ ಮೋಟಾರ್ಸ್

K.14 ಶ್ರೇಣಿಯು ಈ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದು, ಯಾಂತ್ರಿಕವಾಗಿ ಸಸ್ಷೆಂಷನ್ ಹೊಂದಿರುವ ಆಸನ, ಎಲೆಕ್ಟ್ರಿಕ್ ಟಿಪ್ಪಿಂಗ್ ಸ್ವಿಚ್, 3.3 ಲೀಟರ್ ಎಂಜಿನ್ ಮತ್ತು 9.0X20 ಟೈರ್‌ಗಳನ್ನು ಪಡೆಯುತ್ತದೆ.

ಏಳು ನವೀಕೃತ ಟ್ರಕ್‌ಗಳೊಂದಿಗೆ ಐದು ಹೊಸ ಸಿಎನ್‌ಜಿ ಟ್ರಕ್ ಮಾದರಿಗಳನ್ನು ಪರಿಚಯಿಸಿದ ಟಾಟಾ ಮೋಟಾರ್ಸ್

T.16 CX ಅಲ್ಟ್ರಾ ಟ್ರಕ್ ಮಾದರಿಯಲ್ಲಿ ಲೈವ್ ಫ್ಯೂಲ್ ಮಾನಿಟರಿಂಗ್, ಡ್ಯುಯಲ್ ಇಂಧನ ದಕ್ಷತೆಯ ವಿಧಾನಗಳು ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ಹೊಂದಾಣಿಕೆಯೊಂದಿಗೆ 360-ಡಿಗ್ರಿ ಮಾನಿಟರಿಂಗ್ ಸಿಸ್ಟಂ ಹೊಂದಿರಲಿದೆ.

ಏಳು ನವೀಕೃತ ಟ್ರಕ್‌ಗಳೊಂದಿಗೆ ಐದು ಹೊಸ ಸಿಎನ್‌ಜಿ ಟ್ರಕ್ ಮಾದರಿಗಳನ್ನು ಪರಿಚಯಿಸಿದ ಟಾಟಾ ಮೋಟಾರ್ಸ್

ತದನಂತರ LPT 1918, Cigna 2818 ಮತ್ತು LPT 2818 ಅನ್ನು ಒಳಗೊಂಡಿರುವ ಸಿಗ್ನಾ ಸರಣಿಯ ಟ್ರಕ್‌ಗಳು ಸಿಎನ್‌ಜಿ ಶ್ರೇಣಿಯಲ್ಲಿ ಲಭ್ಯವಿದ್ದು, ಲಾಜಿಸ್ಟಿಕ್ಸ್‌ನಲ್ಲಿ ಬದಲಾವಣೆಗಾಗಿ ಟಾಟಾ ಮೋಟಾರ್ಸ್ ಕಂಪನಿಯು ಹೆಚ್ಚು ಇಂಧನ ದಕ್ಷತೆ ಹೊಂದಿರುವ ಸಿಎನ್‌ಜಿ ಸರಣಿ ಪರಿಚಯಿಸಿದೆ.

ಏಳು ನವೀಕೃತ ಟ್ರಕ್‌ಗಳೊಂದಿಗೆ ಐದು ಹೊಸ ಸಿಎನ್‌ಜಿ ಟ್ರಕ್ ಮಾದರಿಗಳನ್ನು ಪರಿಚಯಿಸಿದ ಟಾಟಾ ಮೋಟಾರ್ಸ್

ಈ ಶ್ರೇಣಿಯಲ್ಲಿರುವ ಟ್ರಕ್‌ಗಳು ವಿವಿಧ ಲೋಡ್ ಬೇ ಗಾತ್ರಗಳನ್ನು ನೀಡಲಿದ್ದು, 19 ಟನ್‌ಗಳಿಂದ 28 ಟನ್‌ಗಳವರೆಗಿನ ಸಾಮರ್ಥ್ಯ ಹೊಂದಿವೆ. ಅಂತಿಮವಾಗಿ ಟಾಟಾದ ಹೆವಿ ಲಿಫ್ಟರ್‌ಗಳನ್ನು ಸಿಗ್ನಾ ಮತ್ತು ಪ್ರೈಮಾ ಟ್ರೈಲರ್ ಟ್ರಾಕ್ಟರ್‌ಗಳ ರೂಪದಲ್ಲಿ ಪರಿಚಯಿಸಲಾಗಿದೆ (ಕೃಷಿ ಟ್ರಾಕ್ಟರ್‌ಗಳಲ್ಲ).

ಏಳು ನವೀಕೃತ ಟ್ರಕ್‌ಗಳೊಂದಿಗೆ ಐದು ಹೊಸ ಸಿಎನ್‌ಜಿ ಟ್ರಕ್ ಮಾದರಿಗಳನ್ನು ಪರಿಚಯಿಸಿದ ಟಾಟಾ ಮೋಟಾರ್ಸ್

ಹೊಸ ಪ್ರೈಮಾ ಸರಣಿಯ ಟ್ರಕ್‌ಗಳಲ್ಲಿ ಲೇನ್ ಡಿಫಾರ್ಚರ್ ಅಲರ್ಟ್, ಫ್ರಂಟ್ ಕೂಲಿಷನ್ ಅಲರ್ಟ್ ಸೇರಿದಂತೆ ಅಡ್ವಾನ್ಸ್ ಡ್ರೈವರ್ ಅಸಿಸ್ಟಂ ಸಿಸ್ಟಂ ವೈಶಿಷ್ಟ್ಯಗಳನ್ನು ಸಹ ಪಡೆಯಲಿದ್ದು, ಸುಧಾರಿತ ಇಂಟಿರಿಯರ್‌ಗಳನ್ನು ಸಹ ಪಡೆಯಲಿದೆ.

ಏಳು ನವೀಕೃತ ಟ್ರಕ್‌ಗಳೊಂದಿಗೆ ಐದು ಹೊಸ ಸಿಎನ್‌ಜಿ ಟ್ರಕ್ ಮಾದರಿಗಳನ್ನು ಪರಿಚಯಿಸಿದ ಟಾಟಾ ಮೋಟಾರ್ಸ್

ಇದರಲ್ಲಿ ಡಿಜಿಟಲ್ ಡಿಸ್‌ಪ್ಲೇಗಳು, ನವೀಕರಿಸಿದ ಕ್ಯಾಬಿನ್‌ ಮೂಲಕ ಚಾಲಕರಿಗೆ ಆಯಾಸ-ಮುಕ್ತ ಚಾಲನೆಯನ್ನು ಖಚಿತಪಡಿಸಲಿದ್ದು, ಹೊಸ ಸೌಲಭ್ಯಗಳೊಂದಿಗೆ ಕಂಪನಿಯು ಚಾಲಕರ ಸುರಕ್ಷತೆ, ಸರಕು ಸುರಕ್ಷತೆ ಮತ್ತು ರಸ್ತೆ ಸುರಕ್ಷತೆಗಾಗಿ ಹಲವಾರು ಹೊಸ ಸೌಲಭ್ಯಗಳನ್ನು ಕಡ್ಡಾಯವಾಗಿ ಅಳವಡಿಸುತ್ತಿದೆ.

ಏಳು ನವೀಕೃತ ಟ್ರಕ್‌ಗಳೊಂದಿಗೆ ಐದು ಹೊಸ ಸಿಎನ್‌ಜಿ ಟ್ರಕ್ ಮಾದರಿಗಳನ್ನು ಪರಿಚಯಿಸಿದ ಟಾಟಾ ಮೋಟಾರ್ಸ್

ಇದಲ್ಲದೆ ಟಾಟಾ ಮೋಟಾರ್ಸ್ ಕಂಪನಿಯು 2023ರಿಂದ ವಾಣಿಜ್ಯ ವಾಗಹನಗಳಲ್ಲಿ ವಿದ್ಯುದೀಕರಣ, ಎಥೆನಾಲ್-ಬ್ಲೆಂಡ್ ಇಂಧನ ಮತ್ತು ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನ ಮಾದರಿಗಳ ಮೇಲೆ ಕಾರ್ಯನಿರ್ವಹಣೆ ಆರಂಭಿಸುತ್ತಿರುವುದಾಗಿ ಹೇಳಿಕೊಂಡಿದ್ದು, 2045 ರ ವೇಳೆಗೆ ಶೂನ್ಯ ಹೊರಸೂಸುವಿಕೆ ಮತ್ತು ಸುಸ್ಥಿರತೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.

Most Read Articles

Kannada
English summary
Tata motors launches new range of trucks with cng version
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X