ಬಹುನಿರೀಕ್ಷಿತ ಮಾರುತಿ ಸುಜುಕಿ S-Presso Xtra ಅನಾವರಣ: ಭಾರೀ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಕಾರು!

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ತನ್ನ ಜನಪ್ರಿಯ ಕಾರು ಎಸ್-ಪ್ರೆಸ್ಸೊದ ನೂತನ ಲಿಮಿಟೆಡ್ ಎಡಿಷನ್ ರೂಪಾಂತರವನ್ನು ಅನಾವರಣಗೊಳಿಸಿದೆ. ಇದಕ್ಕೆ S-Presso Xtra ಎಂದು ಹೆಸರಿಡಲಾಗಿದೆ. ಹಿಂದಿನ ರೂಪಾಂತರಕ್ಕೆ ಹೋಲಿಸಿದರೆ, ಹಲವು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರುತ್ತಿದ್ದು, ಗ್ರಾಹಕರಿಗೆ ನೀರಿಕ್ಷೆಗಳು ಹೆಚ್ಚಾಗಿವೆ.

S-Presso Xtra ಆವೃತ್ತಿಯ ಬೆಲೆಯನ್ನು ಮಾರುತಿ ಸುಜುಕಿ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಈ ಬಗ್ಗೆ ಮುಂಬರುವ ದಿನಗಳಲ್ಲಿ ಮಾಹಿತಿ ನೀಡಲಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಹೊಸ ಮಾದರಿಯು ಹಿಂದಿನ ಸ್ಟ್ಯಾಂಡರ್ಡ್ ಆವೃತ್ತಿಗಿಂತ ಕನಿಷ್ಠ 35,000 ರೂ.ಗಳಷ್ಟು ಅಧಿಕ ಬೆಲೆಯನ್ನು ಹೊಂದಿರಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಲಾಗಿದೆ. ಪ್ರಸ್ತುತ, ಮಿನಿ ಎಸ್‌ಯುವಿ-ಲುಕ್ ಹೊಂದಿರುವ ಎಸ್-ಪ್ರೆಸ್ಸೊದ ಎಕ್ಸ್ ಶೋರೂಂ ಬೆಲೆ 4.25 ಲಕ್ಷದಿಂದ 6.10 ಲಕ್ಷ ರೂಪಾಯಿ ನಡುವೆ ಇದೆ ಎಂದು ಹೇಳಬಹುದು.

ಬಹುನಿರೀಕ್ಷಿತ ಮಾರುತಿ ಸುಜುಕಿ S-Presso Xtra ಅನಾವರಣ

ಸದ್ಯ ಅನಾವರಣಗೊಂಡಿರುವ ಹೊಸ ಮಾರುತಿ ಸುಜುಕಿ S-Presso Xtra ರೂಪಾಂತರದಲ್ಲಿನ ಬದಲಾವಣೆಗಳನ್ನು ನೋಡಿದಾಗ, ಕಾರಿನ ಮುಂಭಾಗದ ಸ್ಕಿಡ್ ಪ್ಲೇಟ್, ಡೋರ್ ಕ್ಲಾಡಿಂಗ್, ಗ್ರಿಲ್ ಹಾಗೂ ವೀಲ್ ಆರ್ಚ್ ಕ್ಲಾಡಿಂಗ್ ರೂಪದಲ್ಲಿ ಹೊರಭಾಗದಲ್ಲಿ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ. ಕಂಪನಿಯು ಈ ಆವೃತ್ತಿಯನ್ನು ಎಲ್ಲಾ ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ನೀಡಲಿದೆ ಎಂದು ವರದಿಯಾಗಿದೆ. ಒಳಭಾಗದಲ್ಲಿ ಈ ಕಾರು, ಬ್ಲ್ಯಾಕ್ ಇಂಟೀರಿಯರ್ ಥೀಮ್ ಹೊಂದಿದ್ದು, ವೈಟ್ ಪೈಪಿಂಗ್ ಮತ್ತು ಹೊಲಿಗೆಯೊಂದಿಗೆ ಹೊಸ ಸೀಟ್‌ಗಳು ಲಭ್ಯವಿದೆ.

ಅದೇರೀತಿ, ಮಾರುತಿ ಸುಜುಕಿ S-Presso Xtra ಲಿಮಿಟೆಡ್ ಎಡಿಷನ್ ರೂಪಾಂತರವು ಹೊಸ ಫ್ಲೋರ್ ಮ್ಯಾಟ್‌ಗಳು, ಡೋರ್ ಪ್ಯಾಡ್‌ಗಳು, ಎಸಿ ವೆಂಟ್‌ಗಳು ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಕಾಂಟ್ರಾಸ್ಟ್ ರೆಡ್ ಆಕ್ಸೆಂಟ್‌ ಹೊಂದಿದ್ದು, ಇವು ಒಳಭಾಗವನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಈ ಕಾಸ್ಮೆಟಿಕ್ ಬದಲಾವಣೆಗಳನ್ನು ಹೊರತುಪಡಿಸಿ, ಕಂಪನಿಯು ಯಾವುದೇ ನವೀಕರಣಗಳನ್ನೂ ಈ S-Presso Xtra ಆವೃತ್ತಿಯಲ್ಲಿ ಮಾಡಿಲ್ಲ ಎಂದು ಹೇಳಬಹುದು. ಅತಿ ಕಡಿಮೆ ಬೆಲೆಯ ಕಾರು ಇದಾಗಿರುವುದರಿಂದ ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತದೆ.

2018ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಫ್ಯೂಚರ್ ಎಸ್ ಎಂಬ ಹೆಸರಿನಲ್ಲಿ ಈ ಕಾರನ್ನು ಅನಾವರಣಗೊಳಿಸಲಾಯಿತು. ಇದು ನೋಡಲು ಬೇಬಿ ಕಾರ್ ರೀತಿ ಕಾಣಿಸಲಿದೆ. ಇದೀಗ ಎಸ್-ಪ್ರೆಸ್ಸೊ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಇದರ ಪೋರ್ಟಬಿಲಿಟಿ ಮತ್ತು ಸಿಟಿ ಡ್ರೈವಿಂಗ್ ಮೋಡ್ ಬಳಸಲು ತುಂಬಾ ಸುಲಭವಾಗಿದೆ ಎಂದು ಹೇಳಬಹುದು. ಇಷ್ಟೇಅಲ್ಲದೆ, ಉತ್ತಮ ಮೈಲೇಜ್ ಮತ್ತು ಮಾರುತಿ ಸುಜುಕಿಯ ವಿಶ್ವಾಸಾರ್ಹತೆಗಳೆಲ್ಲವೂ ಎಸ್-ಪ್ರೆಸ್ಸೊವನ್ನು ಮಾರುಕಟ್ಟೆಯಲ್ಲಿ ಹಿಟ್ ಮಾಡಿದೆ.

ಎಸ್-ಪ್ರೆಸ್ಸೊ ಹ್ಯಾಚ್‌ಬ್ಯಾಕ್ ಬಿಡುಗಡೆಯಾದಾಗಿನಿಂದ ಮಾರುತಿ ಸುಜುಕಿ ಕಂಪನಿ, ಸುಮಾರು 2.50 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. 2022ರಲ್ಲಿ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಅನ್ನು 6 ರೂಪಾಂತರಗಳಲ್ಲಿ ಖರೀದಿಗೆ ನೀಡಲಿದೆ. ಅವುಗಳೆಂದರೇ ಸ್ಟ್ಯಾಂಡರ್ಡ್, LXi, VXi, VXi+, VXi(O) AGS ಮತ್ತು VXi+(O) AGS. ಈ ಕಾರುಗಳನ್ನು ಮಾರುತಿ ಸುಜುಕಿ ಕಂಪನಿಯ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ನ ಬಾಕ್ಸ್ ಡಿಸೈನ್ ಅಡಿ ನಿರ್ಮಿಸಲಾಗಿದೆ. ಇದು ನೋಡಲು ದೊಡ್ಡ ಎಸ್‌ಯುವಿಯಂತೆ ಕಾಣುತ್ತದೆ. ಇದೀಗ ಕಂಪನಿಯು ಇತರೆ ಕೆಲವು ಬದಲಾವಣೆಗಳೊಂದಿಗೆ S-Presso Xtraವನ್ನು ಅನಾವರಣಗೊಳಿಸಿದೆ.

ಮಾರುಕಟ್ಟೆಗೆ ಸದ್ಯದಲ್ಲೇ ಬಿಡುಗಡೆಯಾಗುವ ಮಾರುತಿ ಸುಜುಕಿ S-Presso Xtraದ ಎಂಜಿನ್ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ಇದು 1.0-ಲೀಟರ್, ಮೂರು-ಸಿಲಿಂಡರ್, K10C ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದ್ದು, ಇದು 66 bhp ಪವರ್ ಮತ್ತು 89 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದು. 5-ಸ್ವೀಡ್ ಮ್ಯಾನುಯಲ್ ಯುನಿಟ್ ಮತ್ತು AMT ಯುನಿಟ್ ಟ್ರಾನ್ಸ್ಮಿಷನ್ ಆಯ್ಕೆಗಳನ್ನು ಒಳಗೊಂಡಿದ್ದು, ಖರೀದಿದಾರರು ಖಂಡಿತ ಲೈಕ್ ಮಾಡುತ್ತಾರೆ.

ಹಿಂದಿನ ಎಸ್-ಪ್ರೆಸ್ಸೊದಲ್ಲಿ CNG ರೂಪಾಂತಗಳು ಲಭ್ಯವಿವೆ. LXI S-CNG ಮತ್ತು VXI S-CNG ಎಂಬ ಎರಡು ಆವೃತ್ತಿಗಳಲ್ಲಿ ದೊರೆಯುತ್ತವೆ. ಇವು 1.0-ಲೀಟರ್ ಡ್ಯುಯಲ್ ಜೆಟ್ ಡ್ಯುಯಲ್ ವಿವಿಟಿ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದ್ದು, ಇದು 5,300 rpm ನಲ್ಲಿ 56.69 bhp ಗರಿಷ್ಠ ಪವರ್ ಮತ್ತು 3,400 rpm ನಲ್ಲಿ 82.1 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕಂಪನಿಯು ಇದನ್ನು 5-ಸ್ವೀಡ್ ಮ್ಯಾನುಯಲ್ ಟ್ರಾನ್ಸ್ಮಿಷನ್ನೊಂದಿಗೆ ಮಾತ್ರ ಜೋಡಿಸಲಾಗಿದೆ.

Most Read Articles

Kannada
English summary
The much awaited maruti suzuki s presso xtra is unveiled
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X