ಭಾರತದಲ್ಲಿ ಅತ್ಯಧಿಕ ಮೈಲೇಜ್ ನೀಡುವ ಟಾಪ್ 10 CNG ಕಾರು ಮಾದರಿಗಳಿವು

ದೇಶದಲ್ಲಿ ಸುಮಾರು ಐದು ತಿಂಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತೆ ಏರಲಾರಂಭಿಸಿವೆ. ಕಳೆದ ಎಂಟು ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಈಗಾಗಲೇ ಏಳು ಬಾರಿ ಏರಿಕೆಯಾಗಿದ್ದು, ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ ದಿನಕ್ಕೆ ಕನಿಷ್ಠ 80 ಪೈಸೆಯಂತೆ ಸತತ ಏಳು ದಿನಗಳಲ್ಲೂ ಹೆಚ್ಚಿಸಿವೆ.

ಭಾರತದಲ್ಲಿ ಅತ್ಯಧಿಕ ಮೈಲೇಜ್ ನೀಡುವ ಟಾಪ್ 10 CNG ಕಾರು ಮಾದರಿಗಳಿವು

ಇಂಧನ ಬೆಲೆ ಏರಿಕೆಯು ಹೀಗೆ ಮುಂದುವರಿಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಪೆಟ್ರೋಲ್/ಡೀಸೆಲ್ ಬೆಲೆ ಲೀಟರ್‌ಗೆ ಸುಮಾರು 15-20 ರೂ.ಗಳಷ್ಟು ಹೆಚ್ಚಾಗಬಹುದು ಎನ್ನಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿ ದಾಟಿದೆ. ಇನ್ನು ಕೆಲವು ರಾಜ್ಯಗಳಲ್ಲಿ 110 ರೂ. ಇದೆ. ಈ ಪರಿಸ್ಥಿತಿಯಲ್ಲಿ ಖರೀದಿದಾರರು ಈಗ ಪರ್ಯಾಯ ಇಂಧನದಲ್ಲಿ ಚಲಿಸುವ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಪ್ರಸ್ತುತ ನಮ್ಮ ದೇಶದಲ್ಲಿ ಪೆಟ್ರೋಲ್ ಎಂಜಿನ್ ಹೊಂದಿರುವ ಮತ್ತು ಸಿಎನ್‌ಜಿ ಇಂಧನದಿಂದ ಚಲಿಸುವ ಬಹಳಷ್ಟು ಕಾರುಗಳಿವೆ. ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಸಿಎನ್‌ಜಿ ಇಂಧನವು ಅಗ್ಗವಾಗಿದ್ದು, ಹೆಚ್ಚಿನ ಮೈಲೇಜ್ ಕೂಡ ನೀಡುತ್ತದೆ. ಭಾರತದಲ್ಲಿ ಲಭ್ಯವಿರುವ ಟಾಪ್ 10 ಅತ್ಯುತ್ತಮ ಮೈಲೇಜ್ ನೀಡುವ CNG ಕಾರುಗಳನ್ನು ಇಲ್ಲಿ ನೋಡಬಹುದು.

ಭಾರತದಲ್ಲಿ ಅತ್ಯಧಿಕ ಮೈಲೇಜ್ ನೀಡುವ ಟಾಪ್ 10 CNG ಕಾರು ಮಾದರಿಗಳಿವು

1. ಟಾಟಾ ಟಿಯಾಗೊ ಸಿಎನ್‌ಜಿ (Tata Tiago CNG)

ಭಾರತದಲ್ಲಿ ಸಿಎನ್‌ಜಿ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ನೋಡಿದ ಟಾಟಾ ಮೋಟಾರ್ಸ್ ಈಗ ಮೊದಲ ಬಾರಿಗೆ ಸಿಎನ್‌ಜಿ ಕಾರು ವಿಭಾಗಕ್ಕೆ ಪ್ರವೇಶಿಸಿದೆ. ಈ ಬ್ರಾಂಡ್ ಸದ್ಯ ಎರಡು ಸಿಎನ್‌ಜಿ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇವುಗಳಲ್ಲಿ ಮೊದಲನೆಯದು ಟಾಟಾ ಟಿಯಾಗೊ ಸಿಎನ್‌ಜಿ ಹ್ಯಾಚ್‌ಬ್ಯಾಕ್. ಈ ಕಾರಿನ ಬೆಲೆ ರೂ. 6.09 ಲಕ್ಷದಿಂದ 7.52 ಲಕ್ಷ ರೂ. ಇದ್ದು, ಈ CNG ಆವೃತ್ತಿಯಲ್ಲಿರುವ 1.2-ಲೀಟರ್, ಮೂರು-ಸಿಲಿಂಡರ್ ರೆವೊಟ್ರಾನ್ ಎಂಜಿನ್ ಗರಿಷ್ಠ 73bhp ಮತ್ತು 95Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಕೆಜಿ ಸಿಎನ್‌ಜಿಗೆ ಗರಿಷ್ಠ 26.49 ಕಿ.ಮೀ ಮೈಲೇಜ್ ನೀಡುತ್ತದೆ.

ಭಾರತದಲ್ಲಿ ಅತ್ಯಧಿಕ ಮೈಲೇಜ್ ನೀಡುವ ಟಾಪ್ 10 CNG ಕಾರು ಮಾದರಿಗಳಿವು

2. ಟಾಟಾ ಟಿಗೋರ್ ಸಿಎನ್‌ಜಿ (Tata Tigor CNG)

ಟಾಟಾ ಟಿಗೊರ್ ಸಿಎನ್‌ಜಿ ಕಾಂಪ್ಯಾಕ್ಟ್ ಸೆಡಾನ್ ಟಾಟಾ ಮೋಟಾರ್ಸ್ ನೀಡುವ ಎರಡನೇ ಸಿಎನ್‌ಜಿ ಮಾದರಿಯಾಗಿದೆ. ಕಾರಿನ ಬೆಲೆ ರೂ. 7.69 ಲಕ್ಷದಿಂದ 8.29 ಲಕ್ಷ ರೂ. ಇದ್ದು, ಈ ಸಿಎನ್‌ಜಿ ಆವೃತ್ತಿಯು 1.2-ಲೀಟರ್, ಮೂರು-ಸಿಲಿಂಡರ್ ರೆವೊಟ್ರಾನ್ ಎಂಜಿನ್‌ನೊಂದಿಗೆ ಲಭ್ಯವಿದೆ. ಇದರ ಎಂಜಿನ್ ಗರಿಷ್ಠ 69 bhp ಮತ್ತು 95 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಕೆಜಿ ಸಿಎನ್‌ಜಿಗೆ ಗರಿಷ್ಠ 26.49 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಭಾರತದಲ್ಲಿ ಅತ್ಯಧಿಕ ಮೈಲೇಜ್ ನೀಡುವ ಟಾಪ್ 10 CNG ಕಾರು ಮಾದರಿಗಳಿವು

3. ಹುಂಡೈ ಔರಾ CNG (Hyundai Aura CNG)

ಮಾರುತಿ ಸುಜುಕಿ ನಂತರ ಭಾರತದಲ್ಲಿ ಸಿಎನ್‌ಜಿ ಕಾರುಗಳ ಎರಡನೇ ಅತಿದೊಡ್ಡ ಪೂರೈಕೆದಾರ ಹ್ಯುಂಡೈ ಮೋಟಾರ್ಸ್‌. ಈ ಕೊರಿಯನ್ ಕಾರ್ ಬ್ರ್ಯಾಂಡ್ ಹ್ಯುಂಡೈ ಪರಿಚಯಿಸಿರುವ ಔರಾ ಮಾದರಿಯು ಫ್ಯಾಕ್ಟರಿ ಫಿಟ್ಟೆಡ್ CNG ಕಿಟ್‌ನೊಂದಿಗೆ ಲಭ್ಯವಿದೆ. ಈ ಸಿಎನ್‌ಜಿ ಕಾರಿನ ಮಾರುಕಟ್ಟೆ ಬೆಲೆ 7.74 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಇದು ಸ್ಟ್ಯಾಂಡರ್ಡ್ ಮಾದರಿಯಲ್ಲಿ ಬಳಸಿದ ಅದೇ 1.2 ಲೀಟರ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದೆ. CNG ಇಂಧನದ ಮೇಲೆ ಎಂಜಿನ್ ಗರಿಷ್ಠ 69 bhp ಮತ್ತು 95.2 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು CNG ಇಂಧನದಲ್ಲಿ ಪ್ರತಿ ಕೆಜಿಗೆ ಗರಿಷ್ಠ 28.4 ಕಿ.ಮೀ ಮೈಲೇಜ್ ನೀಡುತ್ತದೆ.

ಭಾರತದಲ್ಲಿ ಅತ್ಯಧಿಕ ಮೈಲೇಜ್ ನೀಡುವ ಟಾಪ್ 10 CNG ಕಾರು ಮಾದರಿಗಳಿವು

4. ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‌ಜಿ (Hyundai Grand i10 Nios CNG)

ಹ್ಯುಂಡೈನಿಂದ ಲಭ್ಯವಿರುವ ಮತ್ತೊಂದು CNG ಮಾದರಿಯು ಗ್ರಾಂಡ್ i10 ನಿಯೋಸ್ CNG ಆಗಿದೆ. ಕಾರಿನ ಬೆಲೆ 7.07 ಲಕ್ಷದಿಂದ 7.60 ಲಕ್ಷ ರೂ. ಇದ್ದು, ಇದು 1.2-ಲೀಟರ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದೆ. CNG ಇಂಧನದಲ್ಲಿ ಎಂಜಿನ್ ಗರಿಷ್ಠ 69 bhp ಮತ್ತು 95.2 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು CNG ಇಂಧನದಲ್ಲಿ ಪ್ರತಿ ಕೆಜಿಗೆ 28.5 ಕಿ.ಮೀ ಮೈಲೇಜ್ ನೀಡುತ್ತದೆ.

ಭಾರತದಲ್ಲಿ ಅತ್ಯಧಿಕ ಮೈಲೇಜ್ ನೀಡುವ ಟಾಪ್ 10 CNG ಕಾರು ಮಾದರಿಗಳಿವು

5. ಹುಂಡೈ ಸ್ಯಾಂಟ್ರೋ CNG (Hyundai Santro CNG)

ಹ್ಯುಂಡೈ ಬ್ರ್ಯಾಂಡ್ ಅಡಿಯಲ್ಲಿ ಲಭ್ಯವಿರುವ ಸಿಎನ್‌ಜಿ ಕಾರುಗಳಲ್ಲಿ ಸ್ಯಾಂಟ್ರೊ ಸಿಎನ್‌ಜಿ ಅತ್ಯಧಿಕ ಮೈಲೇಜ್ ಮಾದರಿಯಾಗಿದೆ. ಮಾರುಕಟ್ಟೆಯಲ್ಲಿ ಈ ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್‌ನ CNG ಶ್ರೇಣಿಯ ಬೆಲೆಯು ರೂ. 6.09 ಲಕ್ಷದಿಂದ ರೂ. 6.38 ಲಕ್ಷ. ಇದೆ. ಈ ಕಾರು 1.1-ಲೀಟರ್ ಎಂಜಿನ್ ಅನ್ನು ಹೊಂದಿದೆ. CNG ಇಂಧನದೊಂದಿಗೆ ಇದು ಗರಿಷ್ಠ 60bhp ಪವರ್ ಮತ್ತು 85.3Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕೆಜಿ ಸಿಎನ್‌ಜಿಯೊಂದಿಗೆ ಈ ಕಾರು 30.48 ಕಿ.ಮೀ. ಮೈಲೇಜ್ ನೀಡುತ್ತದೆ.

ಭಾರತದಲ್ಲಿ ಅತ್ಯಧಿಕ ಮೈಲೇಜ್ ನೀಡುವ ಟಾಪ್ 10 CNG ಕಾರು ಮಾದರಿಗಳಿವು

6. ಮಾರುತಿ ಸುಜುಕಿ ಡಿಜೈರ್ ಸಿಎನ್‌ಜಿ (Maruti Suzuki Dzire CNG)

ಡಿಸೈರ್ S-CNG ಮಾರುತಿ ಸುಜುಕಿಯ ಇತ್ತೀಚಿನ CNG ಮಾದರಿಯಾಗಿದೆ. ಈ ಕಾರಿನ ಬೆಲೆ ರೂ. 8.14 ಲಕ್ಷದಿಂದ ರೂ. 8.82 ಲಕ್ಷ ಇದ್ದು, ಈ ಕಾರು 1.2-ಲೀಟರ್ K12M ಡ್ಯುಯಲ್ ಜೆಟ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ ಗರಿಷ್ಠ 77 ಬಿಎಚ್‌ಪಿ ಮತ್ತು 98.5 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮಾರುತಿ ಸುಜುಕಿ ಪ್ರಕಾರ, ಈ ಕಾರು ಪ್ರತಿ ಕೆ.ಜಿ ಸಿಎನ್‌ಜಿಗೆ 31.12 ಕಿ.ಮೀ ಮೈಲೇಜ್‌ ನೀಡುತ್ತದೆ.

ಭಾರತದಲ್ಲಿ ಅತ್ಯಧಿಕ ಮೈಲೇಜ್ ನೀಡುವ ಟಾಪ್ 10 CNG ಕಾರು ಮಾದರಿಗಳಿವು

7. ಮಾರುತಿ ಸುಜುಕಿ S-ಪ್ರೆಸ್ಸೊ CNG (Maruti Suzuki S-Presso CNG)

ಮಾರುತಿ ಸುಜುಕಿ ನೀಡುವ ಮತ್ತೊಂದು ಸಣ್ಣ CNG ಕಾರು S-Preso CNG ಆಗಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು ರೂ. 5.24 ಲಕ್ಷದಿಂದ ರೂ. 5.56 ಲಕ್ಷ ಇದೆ. ಈ ಕಾರು 1.0-ಲೀಟರ್ K10B ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಎಂಜಿನ್ 58 bhp ಮತ್ತು 78 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಕೆ.ಜಿ ಸಿಜಿಎನ್‌ನೊಂದಿಗೆ 31.2 ಕಿ.ಮೀ ಮೈಲೇಜ್ ನೀಡುತ್ತದೆ.

ಭಾರತದಲ್ಲಿ ಅತ್ಯಧಿಕ ಮೈಲೇಜ್ ನೀಡುವ ಟಾಪ್ 10 CNG ಕಾರು ಮಾದರಿಗಳಿವು

8. ಮಾರುತಿ ಸುಜುಕಿ ಆಲ್ಟೊ 800 ಸಿಎನ್‌ಜಿ (Maruti Suzuki Alto 800 CNG)

ಮಾರುತಿ ಸುಜುಕಿ ಬ್ರಾಂಡ್‌ನಿಂದ ಹೆಚ್ಚು ಮಾರಾಟವಾದ ಕಾರು ಆಲ್ಟೊ ಆಗಿದ್ದು, ಈ ಆವೃತ್ತಿಯಲ್ಲಿ CNGಯನ್ನು ಸಹ ಮಾರಾಟ ಮಾಡುತ್ತದೆ. ಬಹುಕಾಲದಿಂದ ಮಾರುಕಟ್ಟೆಯಲ್ಲಿದ್ದ ಸಿಎನ್‌ಜಿ ಮಾದರಿಯ ಪ್ರಸ್ತುತ ಬೆಲೆಯು ರೂ. 4.89 ಲಕ್ಷದಿಂದ ರೂ. 4.95 ಲಕ್ಷ ಇದೆ. ಕಾರು 796 ಸಿಸಿ, ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. CNG ಯಿಂದ ನಡೆಸಲ್ಪಡುವ ಎಂಜಿನ್ 40bhp ಮತ್ತು 60Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕೆಜಿ ಸಿಎನ್‌ಜಿಯೊಂದಿಗೆ ಈ ಕಾರು 31.59 ಕಿ.ಮೀ ಮೈಲೇಜ್ ನೀಡುತ್ತದೆ.

ಭಾರತದಲ್ಲಿ ಅತ್ಯಧಿಕ ಮೈಲೇಜ್ ನೀಡುವ ಟಾಪ್ 10 CNG ಕಾರು ಮಾದರಿಗಳಿವು

9. ಮಾರುತಿ ಸುಜುಕಿ ವ್ಯಾಗನ್ ಆರ್ ಸಿಎನ್‌ಜಿ (Maruti Suzuki Wagon R CNG)

ಸಿಎನ್‌ಜಿ ಮಾದರಿಯು ವ್ಯಾಗನ್‌ಆರ್‌ನಲ್ಲಿಯೂ ಲಭ್ಯವಿದೆ, ಮಾರುತಿ ಸುಜುಕಿ ಉತ್ಪನ್ನ ಶ್ರೇಣಿಯಲ್ಲಿ ಹೆಚ್ಚು ಮಾರಾಟವಾದ ಟಾಲ್ ಬಾಯ್ ಕಾರಾದ ಇದರ ಬೆಲೆ ರೂ. 6.35 ಲಕ್ಷದಿಂದ ರೂ. 6.81 ಲಕ್ಷ ಇದ್ದು, CNG ರೂಪಾಂತರದಲ್ಲಿ 1.0-ಲೀಟರ್ 3-ಸಿಲಿಂಡರ್, ಡ್ಯುಯಲ್-ಜೆಟ್ ಎಂಜಿನ್ ಗರಿಷ್ಠ 57bhp ಮತ್ತು 82.1Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು KG CNGಗೆ 34.05 ಮೈಲೇಜ್‌ ನೀಡುತ್ತದೆ.

ಭಾರತದಲ್ಲಿ ಅತ್ಯಧಿಕ ಮೈಲೇಜ್ ನೀಡುವ ಟಾಪ್ 10 CNG ಕಾರು ಮಾದರಿಗಳಿವು

10. ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ (Maruti Suzuki Celerio CNG)

ಇತ್ತೀಚೆಗಷ್ಟೇ ಮಾರುಕಟ್ಟೆಗೆ ಬಂದಿರುವ ಹೊಸ ತಲೆಮಾರಿನ ಮಾರುತಿ ಸೆಲೆರಿಯೊದಲ್ಲಿ ಸಿಎನ್‌ಜಿ ರೂಪಾಂತರಗಳು ಸಹ ಲಭ್ಯವಿವೆ. ಅವುಗಳ ಬೆಲೆ ರೂ. 6.58 ಲಕ್ಷ ಇದ್ದು, ಈ ಕಾರು 1.0 ಲೀಟರ್ K10C ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಎಂಜಿನ್ ಸಿಎನ್‌ಜಿ ಇಂಧನದೊಂದಿಗೆ ಗರಿಷ್ಠ 57 ಬಿಎಚ್‌ಪಿ ಪವರ್ ಮತ್ತು 82.1 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಪ್ರತಿ ಕೆ.ಜಿಗೆ ಗರಿಷ್ಠ 35.60 ಕಿ.ಮೀ ಮೈಲೇಜ್ ನೀಡುತ್ತದೆ.

Most Read Articles

Kannada
English summary
Top 10 best mileage cng cars in india maruti suzuki tata motors hyundai
Story first published: Tuesday, March 29, 2022, 19:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X