ಜನವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳಿವು..

2022ರ ಜನವರಿ ತಿಂಗಳ ಮಾರಾಟದ ಅಂಕಿ ಅಂಶಗಳನ್ನು ಕಾರು ತಯಾರಕ ಕಂಪನಿಗಳು ಬಿಡುಗಡೆಗೊಳಿಸಿವೆ. ಕೆಲವು ಕಾರು ತಯಾರಕ ಕಂಪನಿಗಳು ಕಳೆದ ತಿಂಗಳ ಮಾರಾಟದಲ್ಲಿ ಕುಸಿತ ಕಂಡಿದ್ದರೆ, ಕೆಲವು ಕಂಪನಿಗಳು ಲಾಭ ಗಳಿಸಿವೆ. ಜನರು ಒಂದೆಡೆ ಎಸ್‌ಯುವಿ ವಿಭಾಗದತ್ತ ಮುಖ ಮಾಡುತ್ತಿದ್ದರೆ, ಹ್ಯಾಚ್‌ಬ್ಯಾಕ್ ಕಾರುಗಳನ್ನು ಇಷ್ಟಪಡುವ ಜನರು ಕೂಡ ಇದ್ದಾರೆ.

ಜನವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳಿವು..

ಭಾರತೀಯ ಮಾರುಕಟ್ಟೆಯಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳು ಹೆಚ್ಚು ಮಾರಾಟವಾಗುತ್ತಿದೆ. ನಗರ ಪ್ರದೇಶದ ಜನರು ಪಾರ್ಕಿಂಗ್ ಸಮಸ್ಯೆಗಳಿಂದಾಗಿ ಹೆಚ್ಚಾಗಿ ಹ್ಯಾಚ್‌ಬ್ಯಾಕ್ ಕಾರುಗಳು ಮಾರಾಟವಾಗುತ್ತಿದೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಉತ್ತಮ ಬೇಡಿಕೆಯನ್ನು ಹೊಂದಿದೆ. ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಜನವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳಿವು..

ಮಾರುತಿ ಸುಜುಕಿ ವ್ಯಾಗನ್ಆರ್

ಈ ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. 2022ರ ಜನವರಿ ತಿಂಗಳಿನಲ್ಲಿ 20,334 ಯುನಿಟ್‌ಗಳ ಮಾರಾಟವನ್ನು ನೋಂದಾಯಿಸುವ ಮೂಲಕ ಮತ್ತೊಮ್ಮೆ ಭಾರತದಲ್ಲಿ ಹೆಚ್ಚು ಮಾರಾಟವಾದ ಮಾದರಿಯಾಗಿ ಹೊರಹೊಮ್ಮಿದೆ.

ಜನವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳಿವು..

ಕಳೆದ ವರ್ಷದ ಜನವರಿ ತಿಂಗಳಿನಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಮಾದರಿಯ 17,165 ಯುನಿಟ್‌ಗಳ ಮಾರಾಟಗೊಳಿಸಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಸುಮಾರು ಶೇಕಡಾ 18 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಈ ಮಾರುತಿ ಸುಜುಕಿಯ ಹೆಚ್ಚು ಜನಪ್ರಿಯವಾದ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್ ಮಿಡ್-ಲೈಫ್ ನವೀಕರಣವನ್ನು ಸ್ವೀಕರಿಸುತ್ತಿದೆ. ಈ ಹೊಸ ಮಾದರಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ.

ಜನವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳಿವು..

ಮಾರುತಿ ಸುಜುಕಿ ಸ್ವಿಫ್ಟ್

ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಇನ್ನೂ ದೇಶದ ಯುವಕರಲ್ಲಿ ಅಚ್ಚುಮೆಚ್ಚಿನದ್ದಾಗಿದ್ದರೂ, ಸ್ಪೋರ್ಟಿ ಹ್ಯಾಚ್‌ಬ್ಯಾಕ್ 2022ರ ಜನವರಿ ತಿಂಗಳಿನಲ್ಲಿ 17,180 ಯುನಿಟ್ ಮಾರಾಟವನ್ನು ನೋಂದಾಯಿಸುವ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅದರ ಹೊರತಾಗಿ, ಮಾರುತಿ ಸುಜುಕಿ ಸ್ವಿಫ್ಟ್ 2021ರ ಜನವರಿ ತಿಂಗಳಿನ 17,180 ಯುನಿಟ್ ಮಾರಾಟಕ್ಕೆ ಹೋಲಿಸಿದರೆ 11 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.

ಜನವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳಿವು..

ಮಾರುತಿ ಸುಜುಕಿ ಆಲ್ಟೋ

2022ರ ಜನವರಿ ತಿಂಗಳಿನಲ್ಲಿ ಮಾರುತಿ ಸುಜುಕಿ ಆಲ್ಟೋ ಮಾದರಿಯ 12,342 ಯುನಿಟ್ ಮಾರಾಟವನ್ನು ನೋಂದಾಯಿಸುವ ಮೂಲಕ ಹ್ಯಾಚ್‌ಬ್ಯಾಕ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. 2021ರ ಜನವರಿ ತಿಂಗಳಿನಲ್ಲಿ 18,260 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಮಾದರಿಯು ಅದರ ಮಾರಾಟದಲ್ಲಿ ಸುಮಾರು 32 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ.

ಜನವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳಿವು..

ಮಾರುತಿ ಸುಜುಕಿ ಸೆಲೆರಿಯೊ

ಎರಡನೇ ತಲೆಮಾರಿನ ಮಾರುತಿ ಸುಜುಕಿ ಸೆಲೆರಿಯೊವನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. 2022ರ ಜನವರಿ ತಿಂಗಳಿನಲ್ಲಿ 8,279 ಯುನಿಟ್ ಮಾರಾಟವನ್ನು ನೋಂದಾಯಿಸುವ ಮೂಲಕ 18.90 ಪ್ರತಿಶತದಷ್ಟು ಬೆಳವಣಿಗೆಯೊಂದಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡಿದೆ.

ಜನವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳಿವು..

ಹುಂಡೈ ಐ10 ನಿಯೋಸ್

ಹ್ಯುಂಡೈ ಐ10 ನಿಯೋಸ್ ಉತ್ತಮ ಪ್ರದರ್ಶನ ನೀಡಿದೆ.ಹ್ಯಾಚ್‌ಬ್ಯಾಕ್ 2022 ರ ಜನವರಿಯಲ್ಲಿ ಕೇವಲ 6,841 ಯೂನಿಟ್‌ಗಳನ್ನು ಮಾರಾಟವಾಗಿವೆ. ವರ್ಷದಿಂದ ವರ್ಷದ ಮಾರಾಟದಲ್ಲಿ ಶೇಕಡಾ 37 ರಷ್ಟು ಕುಸಿತವಾಗಿದೆ,

ಜನವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳಿವು..

ಮಾರುತಿ ಸುಜುಕಿ ಬಲೆನೊ

2021ರ ಜನವರಿ ತಿಂಗಳಿನಲ್ಲಿ ಬಲೆನೊ ಮಾದರಿಯ 16,648 ಯುನಿಟ್ ಬಲೆನೊ ಹ್ಯಾಚ್‌ಬ್ಯಾಕ್ ಅನ್ನು ಮಾರಾಟ ಮಾಡಿತು. ಆ ಸಂದರ್ಭದಲ್ಲಿ ದೇಶದಲ್ಲಿ 4 ನೇ ಅತಿ ಹೆಚ್ಚು ಮಾರಾಟವಾದ ಕಾರು ಆಗಿತ್ತು. ಆದರೆ ಈ ಈ ವರ್ಷ ಕೇವಲ 6,791 ಯುನಿಟ್ ಮಾರಾಟವನ್ನು ನೋಂದಾಯಿಸುವ ಮೂಲಕ ವರ್ಷದಿಂದ ವರ್ಷದ ಮಾರಾಟದಲ್ಲಿ ಸುಮಾರು 60 ಪ್ರತಿಶತದಷ್ಟು ಕುಸಿತ ದಾಖಲಿಸಿದೆ.

ಜನವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳಿವು..

ಹ್ಯುಂಡೈ ಐ20

ದಕ್ಷಿಣ ಕೊರಿಯಾದ ತಯಾರಕರು ಅದರ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಕೇವಲ 6,505 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾದ ಕಾರಣ ಅದರ ಹಿಂದಿನ ವರ್ಷದ ಕಾರ್ಯಕ್ಷಮತೆಗೆ ಹೋಲಿಸಿದರೆ ಹ್ಯುಂಡೈ ಐ20 ಮಾರಾಟದಲ್ಲಿ ಕುಸಿತವನ್ನು ದಾಖಲಿಸಿದೆ.

ಜನವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳಿವು..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಇಂಡೋ-ಜಪಾನೀಸ್ ತಯಾರಕರಿಗೆ ಯೋಗ್ಯ ಮತ್ತು ಸ್ಥಿರವಾದ ಕಾರ್ಯಕ್ಷಮತೆಯನ್ನು ಹೊಂದಿದೆ. ಎಸ್-ಪ್ರೆಸ್ಸೊ 2022ರ ಜನವರಿ 6,292 ಯುನಿಟ್‌ಗಳನ್ನು ಮಾರಾಟವಾಗಿದ್ದರೂ. ಕಳೆದ ವರ್ಷದ ಜನವರಿ ತಿಂಗಳ ಮಾರಾಟದಲ್ಲಿ ಸುಮಾರು 9 ಪ್ರತಿಶತದಷ್ಟು ಕುಸಿತ ಕಂಡುಬಂದಿದೆ.

ಜನವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳಿವು..

ಟಾಟಾ ಟಿಯಾಗೋ

ಈ ಟಾಟಾ ಟಿಯಾಗೋ ನೀವು ಭಾರತದಲ್ಲಿ ಖರೀದಿಸಬಹುದಾದ ಸುರಕ್ಷಿತ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ. 2022ರ ಜನವರಿ ತಿಂಗಳಿನಲ್ಲಿ ಕೇವಲ 5,195 ಯುನಿಟ್‌ಗಳನ್ನು ಮಾರಾಟ ಮಾಡಲು ನಿರ್ವಹಿಸುವ ಮೂಲಕ ಹ್ಯಾಚ್‌ಬ್ಯಾಕ್ ಸುಮಾರು 25 ಪ್ರತಿಶತದಷ್ಟು ವರ್ಷದ ಮಾರಾಟ ಕುಸಿತವನ್ನು ದಾಖಲಿಸಿದೆ.

ಜನವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳಿವು..

ಟಾಟಾ ಅಲ್ಟ್ರೋಜ್

ಈ ಕಾರಿಗೆ ವಯಸ್ಕರ ರಕ್ಷಣೆಗಾಗಿ 5-ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ ಈ ಪಟ್ಟಿಯಲ್ಲಿರುವ ಸುರಕ್ಷಿತ ಕಾರು .2022ರ ಜನವರಿ ತಿಂಗಳಿನಲ್ಲಿ ಟಾಟಾ ಮೋಟಾರ್ಸ್‌ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯ ಕೇವಲ 4,526 ಯೂನಿಟ್ ಮಾರಾಟವನ್ನು ನೋಂದಾಯಿಸುವ ಮೂಲಕ ಸುಮಾರು ಶೇ.39 ಕುಸಿತವನ್ನು ಕಂಡಿದೆ.

Article Published On: Tuesday, February 8, 2022, 12:50 [IST]
English summary
Top 10 hatchbacks in india in january 2022 find here all details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+