ಇತ್ತೀಚೆಗೆ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿರುವ ಟಾಪ್ 5 ಐಷಾರಾಮಿ ಕಾರುಗಳಿವು!

ಭಾರತೀಯ ಚಿತ್ರರಂಗದಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಬಾಲಿವುಡ್‌ ಆರ್ಥಿಕವಾಗಿ ಹೆಚ್ಚು ಧೃಡವಾಗಿದೆ. ಇದೇ ಕಾರಣಕ್ಕೆ ಎಂಟ್ರಿ ಲೆವಲ್ ಹೀರೋಗಳಿಗೂ ಹಿಂದಿ ನಿರ್ಮಾಪಕರು ಕೋಟಿಗಟ್ಟಲೆ ಸಂಭಾವನೆ ನೀಡುತ್ತಾರೆ. ಹಾಗಾಗಿ ಬಾಲಿವುಡ್ ನಟರು ತಮ್ಮ ಅದ್ದೂರಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ.

ಇತ್ತೀಚೆಗೆ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿರುವ ಟಾಪ್ 5 ಐಷಾರಾಮಿ ಕಾರುಗಳು!

ಹಾಕುವ ಬಟ್ಟೆಯಿಂದ ಹಿಡಿದು ತಿನ್ನುವ ಆಹಾರದವೆರೆಗೆ ಎಲ್ಲವೂ ದುಬಾರಿಯಾಗಿರುತ್ತವೆ. ಇವರ ಜೀವನ ಶೈಲಿಯನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕೂಡ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ. ಇದೇ ಕಾರಣಕ್ಕೆ ನಟರು ತಮ್ಮ ಬಟ್ಟೆ, ಮನೆ, ಕಾರು, ಐಷಾರಾಮಿ ಜೀವನದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

ಇತ್ತೀಚೆಗೆ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿರುವ ಟಾಪ್ 5 ಐಷಾರಾಮಿ ಕಾರುಗಳು!

ಮುಖ್ಯವಾಗಿ ಬಾಲಿವುಡ್‌ ಮಂದಿ ತಮ್ಮ ಹೊಸ ಕಾರುಗಳನ್ನು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ. ಇತ್ತೀಚೆಗೆ ಬಾಲಿವುಡ್‌ನಲ್ಲಿ 5 ಮಂದಿ ಸ್ಟಾರ್‌ಗಳು ತಮ್ಮಿಷ್ಟದ ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. ಆ ನಟರು ಯಾರು, ಯಾವ ಕಾರುಗಳನ್ನು ಖರೀದಿಸಿದ್ದಾರೆ ಹಾಗೂ ಅವುಗಳ ಬೆಲೆಯೆಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಇತ್ತೀಚೆಗೆ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿರುವ ಟಾಪ್ 5 ಐಷಾರಾಮಿ ಕಾರುಗಳು!

ವರುಣ್ ಧವನ್

ಬಾಲಿವುಡ್ ನಟ ವರುಣ್ ಧವನ್ ಇತ್ತೀಚೆಗೆ ಹೊಸ Mercedes-Benz GLS SUV ಮಾದರಿಯನ್ನು ಖರೀದಿಸಿದ್ದಾರೆ. ಅವರು ಸ್ಟೀಲ್ತಿ ಬ್ಲ್ಯಾಕ್ ಬಣ್ಣದ ಕಾರನ್ನು ಆಯ್ಕೆಮಾಡಿದ್ದು, ಇದು ಸ್ಟೈಲಿಷ್ ಲುಕ್‌ನಲ್ಲಿ ಹೆಚ್ಚು ಆಕರ್ಷಣೀಯವಾಗಿದೆ. ಈ GLS ಕಾರನ್ನು 400D, 450 ಮತ್ತು ಮೇಬ್ಯಾಕ್ 600 ಇ ಎಂಬ ಮೂರು ರೂಪಾಂತರಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.

ಇತ್ತೀಚೆಗೆ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿರುವ ಟಾಪ್ 5 ಐಷಾರಾಮಿ ಕಾರುಗಳು!

400D ಮತ್ತು 450 ಮಾದರಿಗಳು 1.14 ಕೋಟಿ ರೂ. ಎಕ್ಸ್ ಶೋ ರೂಂ. ಹಾಗೂ ಮರ್ಸಿಡಿಸ್-ಬೆನ್ಝ್‌ನ ಉನ್ನತ-ಮಟ್ಟದ ಅತ್ಯಂತ ಐಷಾರಾಮಿ SUV ಆಗಿರುವ ಮೇಬ್ಯಾಕ್ 600 ರೂ. 2.47 ಕೋಟಿ ಎಕ್ಸ್ ಶೋ ರೂಂ. ಬೆಲೆಯಹೊಂದಿಗೆ ಮಾರಾಟಕ್ಕೆ ಲಭ್ಯವಿದೆ. ಇವಲ್ಲದೇ ವರುಣ್ ಧವನ್ ಇತರ ಕೆಲವು ಐಷಾರಾಮಿ SUVಗಳಾದ Mercedes Benz GLS 350d 4ಮ್ಯಾಟಿಕ್, ಲ್ಯಾಂಡ್ ರೋವರ್ LR3 ಮತ್ತು Audi Q7 ಕಾರುಗಳನ್ನು ಹೊಂದಿದ್ದಾರೆ.

ಇತ್ತೀಚೆಗೆ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿರುವ ಟಾಪ್ 5 ಐಷಾರಾಮಿ ಕಾರುಗಳು!

ಶಾಹಿದ್ ಕಪೂರ್

ಬಾಲಿವುಡ್‌ನ ಖ್ಯಾತ ನಟರಲ್ಲಿ ಒಬ್ಬರಾಗಿರುವ ಶಾಹಿದ್ ಕಪೂರ್ ಇತ್ತೀಚೆಗೆ ತೆಲುಗಿನ ಜೆರ್ಸಿ ರಿಮೇಕ್ ಮೂಲಕ ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದರು. ಇವರು ಆಗಾಗ್ಗೆ ಮುಂಬೈ ರಸ್ತೆಗಳಲ್ಲಿ ಸ್ವತಃ ಅವರೇ ಕಾರುಗಳನ್ನು ಡ್ರೈವ್‌ ಮಾಡಿ ಕಾರುಗಳೆಂದರೆ ತುಂಬಾ ಇಷ್ಟ ಎಂಬುದನ್ನು ತೋರಿಸಿಕೊಳ್ಳುತ್ತಾರೆ. ಶಾಹಿದ್ ಇತ್ತೀಚೆಗೆ ಕ್ಲಾಸಿ ಡೈಮಂಡ್ ವೈಟ್ ಮರ್ಸಿಡಿಸ್ ಮೇಬ್ಯಾಕ್ ಎಸ್ 580 ಮಾದರಿಯನ್ನು ಖರೀದಿಸಿದ್ದಾರೆ.

ಇತ್ತೀಚೆಗೆ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿರುವ ಟಾಪ್ 5 ಐಷಾರಾಮಿ ಕಾರುಗಳು!

ಈ ಕಾರಿನ ಬೆಲೆ 2.5 ಕೋಟಿ ರೂ.ಗಳಿಂದ ಆರಂಭವಾಗಿ 3.2 ಕೋಟಿ ರೂ.ವರೆಗೆ ಇದೆ. ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಶಾಹಿದ್ ಕಪೂರ್ ಅವರ ಮೇಬ್ಯಾಕ್ S580 ಟಾಪ್ ಆವೃತ್ತಿಯಾಗಿದ್ದು, ಇದು 3 ಕೋಟಿ ರೂ.ಗೂ ಅಧಿಕ ಬೆಲೆಯನ್ನು ಹೊಂದಿದೆ.

ಇತ್ತೀಚೆಗೆ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿರುವ ಟಾಪ್ 5 ಐಷಾರಾಮಿ ಕಾರುಗಳು!

ಅಥಿಯಾ ಶೆಟ್ಟಿ

ಇತ್ತೀಚೆಗೆ ನಟಿ ಅಥಿಯಾ ಶೆಟ್ಟಿ ಅವರು 2022ರ ಆಡಿ ಕ್ಯೂ 7 ಮಾಡಲ್‌ ಅನ್ನು ಖರೀದಿಸಿದ್ದಾರೆ. ಈ ಆಡಿ ಕ್ಯೂ 7 ಮಾದರಿಯು ದೇಶದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು, ಅತಿ ಹೆಚ್ಚು ಸಿನಿಮಾ ನಟರು ಬಳಸುವ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರನ್ನು ಸಿನಿಮಾರಂಗದಲ್ಲಿ ಮಾತ್ರವಲ್ಲದೇ ಭಾರತೀಯ ಅನೇಕ ಉದ್ಯಮಿಗಳು ಕೂಡ ಬಳಸುತ್ತಿದ್ದಾರೆ.

ಇತ್ತೀಚೆಗೆ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿರುವ ಟಾಪ್ 5 ಐಷಾರಾಮಿ ಕಾರುಗಳು!

ಇನ್ನು ನಟಿ ಅಥಿಯಾ ಶೆಟ್ಟಿ ವಿಷಯಕ್ಕೆ ಬಂದರೆ, ನವರ್ರಾ ಮೆಟಾಲಿಕ್ ಬ್ಲೂ ಬಣ್ಣದ 2022 Q7 ವೇರಿಯೆಂಟ್‌ ಅನ್ನು ಖರೀದಿಸಿದ್ದಾರೆ. ಇದು Audi Q7 ಶ್ರೇಣಿಯಲ್ಲಿನ ಟಾಪ್-ಎಂಡ್ ಟ್ರಿಮ್ ಆಗಿದ್ದು, ಇದು ₹88.33 ಲಕ್ಷ (ಎಕ್ಸ್ ಶೋ ರೂಂ) ಬೆಲೆಯೊಂದಿಗೆ ಮಾರಾಟಕ್ಕೆ ಲಭ್ಯವಿದೆ. ಪ್ರವೇಶ ಮಟ್ಟದ Q7 ಪ್ರೀಮಿಯಂ ಪ್ಲಸ್ ₹79.99 ಲಕ್ಷ (ಎಕ್ಸ್ ಶೋ ರೂಂ) ಬೆಲೆಯನ್ನು ಪಡೆದುಕೊಂಡಿದೆ.

ಇತ್ತೀಚೆಗೆ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿರುವ ಟಾಪ್ 5 ಐಷಾರಾಮಿ ಕಾರುಗಳು!

ಕಾರ್ತಿಕ್ ಆರ್ಯನ್

ಬಾಲಿವುಡ್‌ನ ಚಾಕೊಲೆಟ್ ಬಾಯ್ ಎಂದು ಕರೆಸಿಕೊಂಡಿರುವ ಯುವ ನಟ ಕಾರ್ತಿಕ್ ಆರ್ಯನ್ ಇತ್ತೀಚೆಗೆ ಬಿಡುಗಡೆಯಾದ ಭೂಲ್ ಭುಲೈಯಾ 2ನ ಯಶಸ್ಸಿನಲ್ಲಿ ಮುಳುಗಿದ್ದಾರೆ. ಸಿನಿಮಾ ರಿಲೀಸ್ ಆಗಿ ಸಿನಿಮಾ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದರಿಂದ ಖುಷಿಯಾಗಿರುವ ಸಿನಿಮಾ ನಿರ್ಮಾಪಕರು ಆರ್ಯನ್‌ಗೆ ದುಬಾರಿ ಕಾರನ್ನು ಗಿಫ್ಟ ನೀಡಿದ್ದಾರೆ.

ಇತ್ತೀಚೆಗೆ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿರುವ ಟಾಪ್ 5 ಐಷಾರಾಮಿ ಕಾರುಗಳು!

ಭೂಲ್ ಭುಲೈಯಾ 2ನ ನಿರ್ಮಾಪಕರಾದ ಭೂಷಣ್ ಕುಮಾರ್ ಅವರು ಕಾರ್ತಿಕ್ ಆರ್ಯನ್‌ನಗೆ ಭರ್ಜರಿಯಾದ ಮೆಕ್ಲಾರೆನ್ ಜಿಟಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದ ಬೆಲರಯು ಸರಿಸುಮಾರು ರೂ. 4.7 ಕೋಟಿಯಿದೆ. ಇನ್ನೊಂದು ಆಸಕ್ತಿಕರ ವಿಷಯವೆಂದರೆ ಕಾರ್ತಿಕ್ ಆರ್ಯನ್ ಸ್ವಾಂಕಿ ಮೆಕ್ಲಾರೆನ್ ಜಿಟಿಯ ಮೊದಲ ಭಾರತೀಯ ಮಾಲೀಕರಾಗಿದ್ದಾರೆ.

ಇತ್ತೀಚೆಗೆ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿರುವ ಟಾಪ್ 5 ಐಷಾರಾಮಿ ಕಾರುಗಳು!

ಅದಿತಿ ರಾವ್ ಹೈದರಿ

ಕೆಲವೇ ಬಹುಭಾಷಾ ನಟಿಯರಲ್ಲಿ ಅದಿತಿ ರಾವ್ ಹೈದರಿ ಕೂಡ ಒಬ್ಬರು. ಅದಿತಿ ಇತ್ತೀಚೆಗೆ ಹೊಚ್ಚಹೊಸ Audi Q7 ಅನ್ನು ಡೆಲಿವರಿ ಪಡೆದಿದ್ದಾರೆ. ದೇಶದಲ್ಲಿ Q7 ಅನ್ನು ಹೊಂದಿರುವ ಸೆಲೆಬ್ರಿಟಿಗಳ ದೀರ್ಘ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇವರು ನವರ್ರಾ ಮೆಟಾಲಿಕ್ ಬ್ಲೂ ಬಣ್ಣದ ಎಸ್‌ಯುವಿಯನ್ನು ಖರೀದಿಸಿದ್ದಾರೆ. Q7 ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಪ್ರೀಮಿಯಂ ಪ್ಲಸ್ ಮಾದರಿಯ ಬೆಲೆ ₹79.99 ಲಕ್ಷ ಮತ್ತು ಟೆಕ್ನಾಲಜಿ ಟ್ರಿಮ್ ನಿಮಗೆ ₹88.33 ಲಕ್ಷಗಳಷ್ಟು ಪಾವತಿಸಬೇಕಾಗುತ್ತದೆ.

Most Read Articles

Kannada
English summary
Top 5 Luxury Cars recently purchased by Bollywood Stars
Story first published: Wednesday, June 29, 2022, 13:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X