ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರು ಮಾದರಿಗಳಿವು!

ಆಟೋಮೊಬೈಲ್ ವಲಯದಲ್ಲಿ ಸೆಮಿಕಂಡಕ್ಟರ್ ಪೂರೈಕೆಯ ನಡುವೆಯೂ ಹೊಸ ಕಾರು ಬಿಡುಗಡೆ ಪ್ರಕ್ರಿಯೆ ಜೋರಾಗಿದ್ದು, ಮಾರ್ಚ್ ಅವಧಿಯಲ್ಲಿ ಪ್ರಮುಖ ಕಾರು ಕಂಪನಿಗಳು ತಮ್ಮ ಬಹುನೀರಿಕ್ಷಿತ ಕಾರು ಮಾದರಿಗಳ ಬಿಡುಗಡೆ ಯೋಜನೆಯಲ್ಲಿವೆ. ಹಾಗಾದರೆ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವವು? ಮತ್ತು ಅವುಗಳ ನೀರಿಕ್ಷಿತ ಬೆಲೆ, ಎಂಜಿನ್ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರು ಮಾದರಿಗಳಿವು!

ಸ್ಕೋಡಾ ಸ್ಲಾವಿಯಾ

ಭಾರತದಲ್ಲಿ ರ‍್ಯಾಪಿಡ್ ಮಾರಾಟ ಸ್ಥಗಿತಗೊಳಿಸಲು ನಿರ್ಧರಿಸಿರುವ ಸ್ಕೋಡಾ ಕಂಪನಿಯು ಹೊಸ ಸ್ಲಾವಿಯಾ ಸೆಡಾನ್ ಅಭಿವೃದ್ದಿಪಡಿಸಿದೆ. ಸ್ಲಾವಿಯಾ ಸೆಡಾನ್ ಮಾದರಿಯು 1.0-ಲೀಟರ್ ಮತ್ತು 1.5 ಲೀಟರ್ ಎಂಜಿನ್ ಆಯ್ಕೆ ಹೊಂದಿದ್ದು, 1.0 ಲೀಟರ್ ಮಾದರಿಯನ್ನು ಈಗಾಗಲೇ ಬಿಡುಗಡೆ ಮಾಡಿರುವ ಸ್ಕೋಡಾ ಕಂಪನಿಯು ಮಾರ್ಚ್ 3ರಂದು 1.5 ಲೀಟರ್ ಮಾದರಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರು ಮಾದರಿಗಳಿವು!

1.0-ಲೀಟರ್ ಟಿಎಸ್ಐ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10.69 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 15.39 ಲಕ್ಷ ಬೆಲೆ ಹೊಂದಿದ್ದರೆ 1.5 ಲೀಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ನೀರಿಕ್ಷೆಯಿದೆ.

ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರು ಮಾದರಿಗಳಿವು!

ಹಲವು ಪ್ರೀಮಿಯಂ ಹೈ ಎಂಡ್ ಮಾದರಿಯಾಗಿ ಬಿಡುಗಡೆಯಾಗಲಿರುವ 1.5-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 7 ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಆಯ್ಕೆ ಹೊಂದಿರಲಿದ್ದು, 1.5-ಲೀಟರ್ ಎಂಜಿನ್ ಮಾದರಿಯು 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರು ಮಾದರಿಗಳಿವು!

ಟೊಯೊಟಾ ಹೈಲಕ್ಸ್ ಪಿಕ್ಅಪ್

ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿ ಬುಕ್ಕಿಂಗ್ ಆರಂಭಿಸಿರುವ ಟೊಯೊಟಾ ಕಂಪನಿಯು ಮಾರ್ಚ್ ಆರಂಭದಲ್ಲಿ ಹೊಸ ವಾಹನವನ್ನು ಅಧಿಕೃತವಾಗಿ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಹೊಸ ಪಿಕ್ಅಪ್ ಮಾದರಿಯು ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಆಕರ್ಷಕ ವಿನ್ಯಾಸ ಮತ್ತು ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರು ಮಾದರಿಗಳಿವು!

ಹೈಲಕ್ಸ್ ಪಿಕ್ಅಪ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಎಂಪಿವಿ ಮತ್ತು ಫಾರ್ಚೂನರ್ ಎಸ್‌ಯುವಿ ನಡುವಿನ ಸ್ಥಾನದಲ್ಲಿ ಮಾರಾಟಗೊಳ್ಳಲಿದ್ದು, ಫಾರ್ಚೂನರ್ ಮಾದರಿಯಲ್ಲಿರುವ 2.8-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ ಆಯ್ಕೆಯೊಂದಿಗೆ ಬಿಡುಗಡೆಯಾಗುತ್ತಿದೆ.

ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರು ಮಾದರಿಗಳಿವು!

ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸದ್ಯ ಹೈಲಕ್ಸ್ ಮಾದರಿಯು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ 40ಕ್ಕೂ ವೆರಿಯೆಂಟ್‌ಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಭಾರತದಲ್ಲಿ ಹೊಸ ಮಾದರಿಯನ್ನು ರೂ.25 ಲಕ್ಷದಿಂದ ರೂ. 30 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಗಾಗಿ ಕೆಲವು ಕೆಲವು ವೆರಿಯೆಂಟ್‌ನೊಂದಿಗೆ ಮಾತ್ರ ಬಿಡುಗಡೆಯಾಗುತ್ತಿದೆ.

ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರು ಮಾದರಿಗಳಿವು!

2022ರ ಜೆಡ್ಎಸ್ ಎಲೆಕ್ಟ್ರಿಕ್

ಭಾರತದಲ್ಲಿ ಇದುವರೆಗೆ 4 ಸಾವಿರ ಯುನಿಟ್ ಮಾರಾಟ ಗುರಿಸಾಧಿಸಿರುವ ಜೆಡ್ಎಸ್ ಇವಿ ಮಾದರಿಯು ಹೊಸ ಆವೃತ್ತಿಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಸೌಲಭ್ಯಗಳೊಂದಿಗೆ ಮಾರ್ಚ್ ಮಧ್ಯಂತರದಲ್ಲಿ ಬಿಡುಗಡೆಯಾಗಲಿದೆ.

ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರು ಮಾದರಿಗಳಿವು!

ಸದ್ಯ ಮಾರುಕಟ್ಟೆಯಲ್ಲಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು 44.5 kWh ಬ್ಯಾಟರಿ ಪ್ಯಾಕ್ ಮೂಲಕ ಪ್ರತಿ ಚಾರ್ಚ್‌ಗೆ 419 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯ ಹೊಂದಿದ್ದು, 2022ರ ಮಾದರಿಯು 51 kWh ಬ್ಯಾಟರಿ ಪ್ಯಾಕ್ ಮೂಲಕ ಹೊಸ ಕಾರಿನ ಮೈಲೇಜ್ ರೇಂಜ್ ಇದೀಗ ಪ್ರತಿ ಚಾರ್ಜ್‌ಗೆ 480 ಕಿ.ಮೀ ಗೆ ಹೆಚ್ಚಳವಾಗಿದೆ.

ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರು ಮಾದರಿಗಳಿವು!

ಮೈಲೇಜ್ ಹೆಚ್ಚಳದೊಂದಿಗೆ ಕಾರಿನ ಪರ್ಫಾಮೆನ್ಸ್ ಕೂಡಾ ಸಾಕಷ್ಟು ಸುಧಾರಣೆಗೊಂಡಿರುವುದು ಎಲೆಕ್ಟ್ರಿಕ್ ಎಸ್‌ಯುವಿ ಪ್ರಿಯರನ್ನು ಸೆಳೆಯಲಿದ್ದು, ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 21.49 ಲಕ್ಷದಿಂದ ರೂ. 25.18 ಲಕ್ಷ ಬೆಲೆ ಹೊಂದಿರುವ ಜೆಡ್ಎಸ್ ಇವಿ ಹೊಸ ಮಾದರಿಯೊಂದಿಗೆ ಮತ್ತಷ್ಟು ದುಬಾರಿಯಾಗಿರಲಿದೆ.

ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರು ಮಾದರಿಗಳಿವು!

2022ರ ಗ್ಲಾಂಝಾ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬಲೆನೊ ಇತ್ತೀಚೆಗೆ ಬಿಡುಗಡೆಗೊಳಿಸಿತು. ಇದರ ಬೆನ್ನಲ್ಲೇ ಟೊಯೊಟಾ ಕಂಪನಿಯು ಕೂಡಾ ಮಾರುತಿ ಸುಜುಕಿ ಕಂಪನಿಂದ ಪಡೆದುಕೊಳ್ಳಲಾದ ಬಲೆನೊ ಮಾದರಿಯ ರಿಬ್ಯಾಡ್ಜ್ ಆವೃತ್ತಿಯಾದ ಗ್ಲಾಂಜಾವನ್ನು ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರು ಮಾದರಿಗಳಿವು!

ಸ್ಟ್ಯಾಂಡರ್ಡ್ ಬಲೆನೊ ಮಾದರಿಗೆ ಹೋಲಿಸಿದರೆ ಗ್ಲಾಂಝಾ ತುಸು ಹೆಚ್ಚಿನ ಮಟ್ಟದ ವಿನ್ಯಾಸದಲ್ಲಿ ವ್ಯತ್ಯಾಸವನ್ನು ಪಡೆಯುವ ನಿರೀಕ್ಷೆಯಿದೆ. ಹೊಸ ಗ್ಲಾಂಝಾ ಮುಂಭಾಗದ ಬಂಪರ್‌ಗೆ ವಿಭಿನ್ನ ವಿನ್ಯಾಸ ಮತ್ತು ಡೇಟೈಮ್ ರನ್ನಿಂಗ್ ಲೈಟ್‌ಗಾಗಿ ವಿಭಿನ್ನ ಸ್ಟೈಲಿಂಗ್‌ನೊಂದಿಗೆ ವಿಭಿನ್ನ ಗ್ರಿಲ್ ವಿನ್ಯಾಸವನ್ನು ಸಹ ನಿರೀಕ್ಷಿಸಬಹುದು. ಇದರ ಹೊರತಾಗಿ ಹೊಸ ಕಾರಿನ ಎಂಜಿನ್ ಆಯ್ಕೆಯು ಒಂದೇ ಆಗಿರಲಿದ್ದು, ಬಲೆನೊಗಿಂತಲೂ ಗ್ಲಾಂಝಾ ತುಸು ಹೆಚ್ಚುವರಿ ಪ್ರೀಮಿಯಂ ಸೌಲಭ್ಯಗಳೊಂದಿಗೆ ಹೆಚ್ಚುವರಿ ಬೆಲೆ ಹೊಂದಿರಲಿದೆ.

ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರು ಮಾದರಿಗಳಿವು!

2022ರ ಲೆಕ್ಸಸ್ ಎನ್ಎಕ್ಸ್‌ 350ಹೆಚ್

ಐಷಾರಾಮಿ ಕಾರುಗಳ ಉತ್ಪಾದನಾ ಕಂಪನಿಯಾಗಿರುವ ಲೆಕ್ಸಸ್ ತನ್ನ ಎನ್ಎಕ್ಸ್‌350ಎಚ್ ಕ್ರಾಸ್ ಓವರ್ ಮಾದರಿಯನ್ನು ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಇದೀಗ ಭಾರತದಲ್ಲಿ ಮಾರ್ಚ್ ಅಂತ್ಯದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಅದರ ಭಾಗವಾಗಿ ಪ್ರೀ-ಬುಕಿಂಗ್ ಅನ್ನು ತೆರೆದಿದ್ದು ಆಸಕ್ತರು ನೋಂದಾಯಿಸಿಕೊಳ್ಳಬಹುದು ಎಂದು ಲೆಕ್ಸಸ್ ಕಂಪನಿ ತಿಳಿಸಿದೆ.

ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರು ಮಾದರಿಗಳಿವು!

ಜಾಗತಿಕ ಮಾರುಕಟ್ಟೆಯಲ್ಲಿ ಹೊಸ 2.5 ಲೀಟರ್ ನಾಲ್ಕು ಸಿಲಿಂಡರ್ ಹೊಂದಿರುವ ಟರ್ಬೋಚಾರ್ಜ್ 2.4 ಲೀಟರ್ ಪೆಟ್ರೋಲ್ ಮತ್ತು ಹೆಚ್ಚು ಪರಿಣಾಮಕಾರಿಯಾದ 2.5 ಲೀಟರ್ ಎಂಜಿನ್ ಸೇರಿದಂತೆ ವಿವಿಧ ಎಂಜಿನ್ ಆಯ್ಕೆಗಳಲ್ಲಿ ಎನ್‌ಎಕ್ಸ್‌ ಪರಿಚಯಿಸಲಾಗಿದ್ದು, ದೇಶಿಯ ಮಾರುಕಟ್ಟೆಗೂ ಹೊಸ ಕಾರು ವಿವಿಧ ಎಂಜಿನ್ ಆಯ್ಕೆಯೊಂದಿಗೆ ಪ್ರಮುಖ ಐಷಾರಾಮಿ ಎಸ್‌ಯುವಿ ಮಾದರಿಗಳಿಗೆ ಪೈಪೋಟಿ ನೀಡಲಿದೆ.

ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರು ಮಾದರಿಗಳಿವು!

ಬಿಎಂಡಬ್ಲ್ಯು ಎಕ್ಸ್4

ಜನಪ್ರಿಯ ಐಷಾರಾಮಿ ಕಾರು ಕಂಪನಿಯಾದ ಬಿಎಂಡಬ್ಲ್ಯು ಭಾರತದಲ್ಲಿ ತನ್ನ ಹೊಸ 2022ರ ಎಕ್ಸ್‌ 4 ಕೂಪೆ ಮಾದರಿಗಾಗಿ ಪ್ರೀ ಬುಕಿಂಗ್ ಆರಂಭಿಸಿದ್ದು, ಇದು ಬಿಎಂಡಬ್ಲ್ಯು ಎಕ್ಸ್4 ಮಾದರಿಯ ಫೇಸ್‌ಲಿಫ್ಟ್‌ ಆವೃತ್ತಿಯಾಗಿದೆ. ಆಸಕ್ತ ಗ್ರಾಹಕರು ಆನ್ ಲೈನ್ ನಲ್ಲಿ ರೂ. 50,000 ಪಾವತಿಸುವ ಮೂಲಕ 5 ಆಸನಗಳ ಕೂಪೆ ಎಸ್‌ಯುವಿಯನ್ನು ಬುಕ್ ಮಾಡಿಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ. ಮೂಲಗಳ ಪ್ರಕಾರ, ಹೊಸ 2022 ಬಿಎಂಡಬ್ಲ್ಯು ಎಕ್ಸ್‌ 4 ಫೇಸ್‌ಲಿಫ್ಟ್‌ ಮಾದರಿಯು ಮಾರ್ಚ್ ನಲ್ಲಿ ಮಾರುಕಟ್ಟೆಗೆ ಬರಲಿದೆ.

ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರು ಮಾದರಿಗಳಿವು!

ಹೊಸ ಎಕ್ಸ್‌4 ಮಾಡಲ್‌ನ ಹಿಂದಿನ ಮಾದರಿಗೆ ಹೋಲಿಸಿಕೊಂಡರೆ ಗಮನಾರ್ಹ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ನವೀಕರಣಗೊಂಡ ಬಿಎಂಡಬ್ಲ್ಯು ಎಕ್ಸ್‌ 4 ಹೊಸ ವೈಶಿಷ್ಟ್ಯಗಳು ಮತ್ತು ಸ್ಟೈಲಿಂಗ್ ಫೀಚರ್ ಗಳನ್ನು ಹೊಂದಿರುವ ಹೊಸ ಕಾರು 2.0 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್, 2.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 3.0 ಲೀಟರ್ 6-ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ.

Most Read Articles

Kannada
English summary
Upcoming new cars launch in march 2022 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X