2023ರ ಹ್ಯುಂಡೈ ವೆರ್ನಾ Vs 2023ರ ಹೋಂಡಾ ಸಿಟಿ ಯಾವುದು ಬೆಸ್ಟ್: ಇವುಗಳ ನಡುವಿನ ವ್ಯತ್ಯಾಸ

ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಬಹುನಿರೀಕ್ಶಿತ 2023ರ ವೆರ್ನಾ ಸೆಡಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ, ಭಾರತೀಯ ಮಾರುಕಟ್ಟೆಯಲ್ಲಿ ಈ 2023ರ ಹ್ಯುಂಡೈ ವೆರ್ನಾ ಕಾರಿನ ಪ್ರಮುಖ ಪ್ರತಿಸ್ಪರ್ಧಿಯಾದ 2023ರ ಹೋಂಡಾ ಸಿಟಿಯ ಜೊತೆಗಿನ ಹೋಲಿಕೆಯ ಮಾಹಿತಿ ಇಲ್ಲಿದೆ.

ಎಂಜಿನ್: ಮೊದಲಿಗೆ 2023ರ ಹ್ಯುಂಡೈ ವೆರ್ನಾ ಕಾರಿನ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಇದರಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ 113.4 ಬಿಹೆಚ್‍ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ 158bhp ಮತ್ತು 253Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

2023ರ ಹ್ಯುಂಡೈ ವೆರ್ನಾ Vs 2023ರ ಹೋಂಡಾ ಸಿಟಿ ಯಾವುದು ಬೆಸ್ಟ್

ಇನ್ನು ಹೋಂಡಾ ಸಿಟಿ ಕಾರಿನ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ 1.5-ಲೀಟರ್, ನ್ಯಾಚುರಲ್ ಆಸ್ಪರ್ಡ್ ಪೆಟ್ರೋಲ್ ಎಂಜಿನ್ 120bhp ಪವರ್ ಮತ್ತು 145Nm ಟಾರ್ಕ್ ಅನ್ನು ಉತ್ಪಾದಿಸಿದರೆ, ಈ ಕಾರಿನ ಲೀಟರ್ ಅಟ್ಕಿನ್ಸನ್ ಸೈಕಲ್ ಎಂಜಿನ್ ಹೊಂದಿರುವ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್ ಸಂಯೋಜಿತವಾಗಿ 125bhp ಮತ್ತು 253Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಫೀಚರ್ಸ್: ಈ ಹೊಸ ಹ್ಯುಂಡೈ ವೆರ್ನಾ ಕಾರಿನಲ್ಲಿ ಲೆವೆಲ್-2 ADAS ಅನ್ನು ಹೊಂದಿದೆ. ಈ ಕಾರಿನ ಮುಂಭಾಗದ ಸೀಟುಗಳು ಮತ್ತು ಚಾಲಿತ ಡ್ರೈವರ್ ಸೀಟ್‌ಗಳನ್ನು ಒಳಗೊಂಡಂತೆ ಹಲವಾರು ಮೊದಲ-ಇನ್-ಸೆಗ್ಮೆಂಟ್ ಫೀಚರ್ಸ್ ಗಳೊಂದಿಗೆ ಬರುತ್ತದೆ. ಈ ಫೀಚರ್ಸ್ ಜೊತೆಗೆ ಸೆಡಾನ್ 10.25-ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಸನ್‌ರೂಫ್, ಸ್ಮಾರ್ಟ್ ಬೂಟ್, ಕನೆಕ್ಟ್-ಕಾರ್ ಟೆಕ್ ಮತ್ತು ಹೆಚ್ಚಿನವುಗಳೊಂದಿಗೆ ಬರುತ್ತದೆ.

2023ರ ಹ್ಯುಂಡೈ ವೆರ್ನಾ Vs 2023ರ ಹೋಂಡಾ ಸಿಟಿ ಯಾವುದು ಬೆಸ್ಟ್

2023ರ ಹೋಂಡಾ ಸಿಟಿ ಕಾರಿನ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿಯೂ ಲೆವೆಲ್-2 ADAS ಅನ್ನು ನೀಡಲಾಗಿದೆ. ಇನ್ನು ಈ ಕಾರಿನಲ್ಲಿ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಆಟೋ-ಡಿಮ್ಮಿಂಗ್ ಫ್ರೇಮ್‌ಲೆಸ್ ಐಆರ್‌ವಿಎಂ, ಸನ್‌ರೂಫ್, ರೈನ್-ಸೆನ್ಸಿಂಗ್ ವೈಪರ್‌ಗಳು, ಆಂಬಿಯೆಂಟ್ ಲೈಟಿಂಗ್, 8-ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್, 7- ಮುಂತಾದ ಫೀಚರ್ಸ್ ಗಳೊಂದಿಗೆ ಸುಸಜ್ಜಿತವಾಗಿದೆ.

ಬೆಲೆ: ಹೊಸ ಹ್ಯುಂಡೈ ವೆರ್ನಾ ಕಾರಿನ ಬೆಲೆಗಳ ಬಗ್ಗೆ ಹೇಳುವುದಾದರೆ, ಈ ಕಾರಿನ ಪ್ರಾರಂಭಿಕ ಬೆಲೆಯು ರೂ, 10.89 ಲಕ್ಷಗಳಾಗಿದೆ. ಇನ್ನು ಪವರ್ ಫುಲ್ 1.5 ಟರ್ಬೊ'ಎಂಜಿನ್ ಹೊಂದಿರುವ ರೂಪಾಂತರಗಳ ಪ್ರಾರಂಭಿಕ ಬೆಲೆಯು ರೂ.14.83 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಅತ್ಯಾಧುನಿಕ ಪೀಚರ್ಸ್ ಗಳನ್ನು ಹೊಂದಿರುವ ಈ ಸೆಡಾನ್ ಆಕರ್ಷಕ ಬೆಲೆ ಹೊಂದಿದೆ.

2023ರ ಹ್ಯುಂಡೈ ವೆರ್ನಾ Vs 2023ರ ಹೋಂಡಾ ಸಿಟಿ ಯಾವುದು ಬೆಸ್ಟ್

2023ರ ಹೋಂಡಾ ಸಿಟಿ ಸೆಡಾನ್‌ನ ಬೆಲೆಯು ರೂ.11.49 ಲಕ್ಷವಾಗಿದೆ, ಆದರೆ ಸೆಡಾನ್‌ನ ಇ:ಹೆಚ್ಇವಿ (ಸ್ಟ್ರಾಂಗ್ ಹೈಬ್ರಿಡ್) ರೂಪಾಂತರಗಳ ಪ್ರಾರಂಭಿಕ ಬೆಲೆಗಳು ರೂ,18.89 ಲಕ್ಷವಾಗಿದೆ ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಇದರ ಬೆಲೆಯನ್ನು ಪ್ರತಿಸ್ಪರ್ಧಿ ಹ್ಯುಂಡೈ ವೆರ್ನಾ ಕಾರಿಗೆ ಹೋಲಿಸಿದರೆ ತುಸು ಹೆಚ್ಚಾಗಿದೆ ಎಂದೇ ಹೇಳಬಹುದು.

ಆಕರ್ಷಕ ಬೆಲೆ, ಟರ್ಬೋಚಾರ್ಜ್ಡ್ ಪವರ್‌ಟ್ರೇನ್ ಮತ್ತು ಕೆಲವು ಮೊದಲ-ಇನ್-ಸೆಗ್ಮೆಂಟ್ ಫೀಚರ್ಸ್ ಗಳೊಂದಿಗೆ ಭಾರತದಲ್ಲಿ ಸೆಡಾನ್ ಪ್ರಿಯರನ್ನು ಆಕರ್ಷಿಸಲು ಹ್ಯುಂಡೈ ಉತ್ತಮ ಸ್ಥಾನದಲ್ಲಿದೆ. ಇನ್ನು ಹೋಂಡಾ ಕಂಪನಿಯು ತನ್ನ ಸಿಟಿ ತನ್ನ ವಿಭಾಗದಲ್ಲಿ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಏಕೈಕ ಸೆಡಾನ್ ಆಗಿಹೋಂಡಾ ತನ್ನ ಹೋರಾಟ ಮುಂದುವರೆಸುತ್ತದೆ.

Article Published On: Wednesday, March 22, 2023, 11:23 [IST]
English summary
2023 hyundai verna vs 2023 honda city powertrain features more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+