ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಡೀಸೆಲ್ ಕಾರಿನ ಬೆಲೆ ಬಹಿರಂಗ: ಇನೋವಾ ಹೈಕ್ರಾಸ್‌ಗಿಂತ ದುಬಾರಿ
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ಕಂಪನಿಯ ಬಹುನಿರೀಕ್ಷಿತ 2023ರ ಇನೋವಾ ಕ್ರಿಸ್ಟಾ ಎಂಪಿವಿಯ ಬೆಲೆ ಬಹಿರಂಗವಾಗಿದೆ. ಈ ಹೊಸ ಟೊಯೊಟಾ ಇನೋವಾ ಕ್ರಿಸ್ಟಾ (Toyota Innova Crysta) ಎಂಪಿವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಆಸಕ್ತ ಗ್ರಾಹಕರು ಟೋಕನ್ ಮೊತ್ತ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು
ಇತ್ತೀಚೆಗೆ ಬಿಡುಗಡೆಗೊಂಡ ಇನೋವಾ ಹೈಕ್ರಾಸ್ ಜೊತೆಗೆ ಇನೋವಾ ಕ್ರಿಸ್ಟಾ ಕಾರನ್ನು ಮಾರಾಟ ಮಾಡುವುದನ್ನು ಮುಂದುವರಿಸುತ್ತಾರೆ. ನವೀಕರಿಸಿದ ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿಯು ಪ್ರಾರಂಭಿಕ ಬೆಲೆಯು ರೂ.19.13 ಲಕ್ಷವಾಗಿದೆ. ಕಳೆದ ವರ್ಷ ಈ ಇನೋವಾ ಕ್ರಿಸ್ಟಾ ಎಂಪಿವಿಯು ಸ್ಥಗಿತವಾಗುವ ವೇಳೆಯು ಅದೆ ಪ್ರಾರಂಭಿಕ ಬೆಲೆಯನ್ನು ಹೊಂದಿತ್ತು. 2023ರ ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿಯ ಬೆಲೆಯನ್ನು ಅಧಿಕೃತ ಡೀಲರ್‌ಗಳು ಬಹಿರಂಗಪಡಿಸಿದ್ದಾರೆ.

2023ರ ಟೊಯೊಟಾ ಇನೋವಾ ಕ್ರಿಸ್ಟಾ ಜಿ ಬೇಸ್ ರೂಪಾಂತರ ಬೆಲೆಯು ರೂ.19.13 ಲಕ್ಷಗಳಾದರೆ, ಜಿಎಕ್ಸ್ ರೂಪಾಂತರದ ಬೆಲೆಯು ರೂ.19.99 ಲಕ್ಷಗಳಾಗಿದೆ. ಇವುಗಳು 7 ಆಸನಗಳ ಆಯ್ಕೆಯ ಬೆಲೆಗಳಾಗಿವೆ, ಆದರೆ VX ಮತ್ತು ಟಾಪ್ ಎಂಡ್ ZX ರೂಪಾಂತರಗಳ ಬೆಲೆಗಳನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲ. ಈ ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ವಿತರಣೆಯು ಏಪ್ರಿಲ್ ತಿಂಗಳ ಅಂತ್ಯದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.
2005ರಲ್ಲಿ ಹೆಚ್ಚು ಜನಪ್ರಿಯವಾದ ಕ್ವಾಲಿಸ್ ಅನ್ನು ಬದಲಾಯಿಸಿ ಪ್ರೀಮಿಯಂ ಎಂಪಿವಿಯಾಗಿ ಟೊಯೊಟಾ ಇನೋವಾ ಕಾರನ್ನು ಪರಿಚಯಿಸಿದರು. ಅಂದಿನಿಂದ ಇಂದಿನವರೆಗೂ ಈ ಕಾರಿಗೆ ಭಾರೀ ಬೇಡಿಕೆಯನ್ನು ಹೊಂದಿದೆ. ಇದೇ ಕಾರಣದಿಂದ ಟೊಯೊಟಾ ಕಂಪನಿಯು ಡೀಸೆಲ್ ಎಂಜಿನ್ ನೊಂದಿಗೆ ಇನ್ನೋವಾ ಕ್ರಿಸ್ಟಾ ಕಾರನ್ನು ಮರಳಿ ತಂದಿದೆ. 2023ರ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ ಲುಕ್ ಹೆಚ್ಚಾಗಿ ಬದಲಾಗದೆ ಉಳಿದಿದೆ,
ಈ ಹೊಸ ಇನೋವಾ ಕ್ರಿಸ್ಟಾ ಎಂಪಿವಿಯು ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್, ಅವಂತ್-ಗಾರ್ಡ್ ಕಂಚು, ಸಿಲ್ವರ್ ಮತ್ತು ವೈಟ್ ಪರ್ಲ್ ಕ್ರಿಸ್ಟಲ್ ಶೈನ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. 2023ರ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ 2.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು ಆರ್‌ಡಿಇ ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸುತ್ತದೆ ಎಂದು ಕಾರು ತಯಾರಕರು ಖಚಿತಪಡಿಸಿದ್ದಾರೆ.
ಈ ಎಂಜಿನ್ 147.9 ಬಿಹೆಚ್‍ಪಿ ಪವರ್ ಮತ್ತು 343 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಇನೋವಾ ಕ್ರಿಸ್ಟಾ ಕಾರು ಇಕೋ ಮತ್ತು ಪವರ್ ಎಂಬ ಎರಡು ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಈ ಹೊಸ 2023 ಟೊಯೊಟಾ ಇನೋವಾ ಕ್ರಿಸ್ಟಾ ಕಾರು 7 ಮತ್ತು 8 ಸೀಟುಗಳ ಕಾನ್ಫಿಗರೇಶನ್‌ಗಳಲ್ಲಿ ಬರಲಿದೆ.
ಇನ್ನು ಈ ಟೊಯೊಟಾ ಇನೋವಾ ಕ್ರಿಸ್ಟಾ ಕಾರು G, GX, VX ಮತ್ತು ZX ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಈ ಎಲ್ಲಾ ರೂಪಾಂತರಗಳ ಅನುಗುಣವಾಗಿ ವಿಭಿನ್ನ ವೈಶಿಷ್ಟ್ಯದ ವಿವರಗಳನ್ನು ಬಹಿರಂಗವಾಗಿದೆ. ರೂಪಾಂತರಗಳು ಮತ್ತು ಫೀಚರ್ಸ್: ಈ ಎಂಪಿವಿಯ G ಎಂಬ ಮೂಲ ರೂಪಾಂತರವು 7 ಮತ್ತು 8-ಸೀಟುಗಳ ವಿನ್ಯಾಸದಲ್ಲಿ ಮುಂಭಾಗದ ಪ್ರತ್ಯೇಕ ಸೀಟುಗಳು ಮತ್ತು ಸ್ಲೈಡ್ ಮತ್ತು ರಿಕ್ಲೈನ್ ಕಾರ್ಯದೊಂದಿಗೆ ಬರುತ್ತದೆ.
ಈ ಎಂಪಿವಿಯ G ಎಂಬ ಮೂಲ ರೂಪಾಂತರವು 7 ಬ್ಲ್ಯಾಕ್ ಲೈನ್ ನೊಂದಿಗೆ ಇನ್‌ಸ್ಟ್ರುಮೆಂಟ್ ಪೇನ್, ಡ್ರೈವರ್ ಮಾಹಿತಿಯೊಂದಿಗೆ ಡಾಟ್ ಟೈಪ್ MID, ಜ್ಯಾಕ್-ನೈಫ್ ಕೀಯೊಂದಿಗೆ ವೈರ್‌ಲೆಸ್ ಡೋರ್ ಲಾಕ್, 4 ಸ್ಪೀಕರ್‌ಗಳು, Apple CarPlay ಜೊತೆಗೆ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಆಡಿಯೋ ಡಿಸ್ಪ್ಲೇ, ಫ್ಲಿಕ್ & ಡ್ರ್ಯಾಗ್ ಫಂಕ್ಷನ್ ಮತ್ತು ಬ್ಲೂಟೂತ್ ಅನ್ನು ಹೊಂದಿದೆ.
ಇನ್ನು ಕ್ರಿಸ್ಟಾ ಕಾರಿನ VX ರೂಪಾಂತರದಲ್ಲಿ ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಸ್ಟೀರಿಂಗ್ ವೀಲ್, 6-ಸ್ಪೀಕರ್‌ಗಳು, ಸೀಟ್ ಬ್ಯಾಕ್ ಟೇಬಲ್, ಕ್ರೂಸ್ ಕಂಟ್ರೋಲ್, ಸ್ಪೀಡ್ & ಇಂಪ್ಯಾಕ್ಟ್ ಸೆನ್ಸಿಂಗ್ ಡೋರ್ ಅನ್‌ಲಾಕ್, 1 USB ಫಾಸ್ಟ್ ಚಾರ್ಜಿಂಗ್ ಪವರ್, MID ಮುಂಭಾಗದ ಕ್ಲಿಯರೆನ್ಸ್ ಸೋನಾರ್, Isofix X2 ಮುಂತಾದ ಫೀಚರ್ಸ್ ಗಳನ್ನು ಹೊಂದಿದೆ. ಇನ್ನು ಚಾಲಕನಿಗೆ ಮಾಹಿತಿ ನೀಡುವ TFT MID ಯುನಿಟ್ ಅನ್ನು ಹೊಂದಿದೆ.
ಇದರೊಂದಿಗೆ ಸಿಲ್ವರ್ ಮತ್ತು ವುಡ್ ಫಿನಿಶ್‌ನೊಂದಿಗೆ ಯುರೆಥೇನ್‌ನೊಂದಿಗೆ ಸ್ಟೀರಿಂಗ್, ಆಟೋಮ್ಯಾಟಿಕ್ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಎಲ್ಇಡಿ ಕ್ಲಿಯರೆನ್ಸ್ ಲ್ಯಾಂಪ್ ಮತ್ತು ಬ್ಲ್ಯಾಕ್ ಮತ್ತು ಕ್ರೋಮ್ ಗ್ರಿಲ್ನೊಂದಿಗೆ ಬರುತ್ತದೆ. ಈ ಹೊಸ ಇನೋವಾ ಕ್ರಿಸ್ಟಾ ಕಾರಿನ ZX ರೂಪಾಂತರದಲ್ಲಿ 7-ಸೀಟುಗಳ ಲೇಔಟ್‌ನಲ್ಲಿ 8-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಹೀಟ್ ರಿಜೆಕ್ಟಿಂಗ್ ಫ್ರಂಟ್ ಮತ್ತು ಸೈಡ್ ಗ್ಲಾಸ್, 2 ಎನ್‌ಡಿ ರೋ ಆರ್ಮ್‌ರೆಸ್ಟ್ ನಂತಹ ಫೀಚರ್ಸ್ ಗಳೊಂದಿಗೆ ಬರುತ್ತದೆ.


Click it and Unblock the Notifications