Tata - Hyundai: ಬೈಕ್‌ಗೂ ಮೀರಿಸುವ ಮೈಲೇಜ್ ನೀಡುತ್ತವೆ ಟಾಟಾ, ಹ್ಯುಂಡೈನ ಈ ಕಾರುಗಳು
ಪ್ರತಿಯೊಬ್ಬರಿಗೂ ಹೊಸ ಕಾರು ಖರೀದಿಸಬೇಕೆಂಬುದು ದೊಡ್ಡ ಆಸೆಯಾಗಿರುತ್ತದೆ. ಆದರೆ, ಯಾವ ಕಾರು ಅತ್ಯಾಧುನಿಕವಾಗಿದೆ. ಉತ್ತಮ ವೈಶಿಷ್ಟ್ಯವನ್ನು ಪಡೆದಿದೆ ಹಾಗೂ ಮೈಲೇಜ್ ಹೇಗಿರುತ್ತದೆ ಎಂಬ ಗೊಂದಲವಿರುತ್ತದೆ. ಇಲ್ಲಿ ನಿಮ್ಮ ಬಜೆಟ್ ಬೆಲೆಗೆ ಖರೀದಿಗೆ ದೊರೆಯುವ ಟಾಟಾ ಪಂಚ್ ಹಾಗೂ ಹ್ಯುಂಡೈ ಎಕ್ಸ್‌ಟರ್ ಬಗ್ಗೆ ವಿವರಿಸಿದ್ದೇವೆ.
ಮೊದಲಿಗೆ ಜನಪ್ರಿಯ ಮೈಕ್ರೋ ಎಸ್‌ಯುವಿ ಟಾಟಾ ಪಂಚ್ (Tata Punch) ಬಗ್ಗೆ ಮಾತನಾಡೋಣ. ಈ ಕಾರು, ರೂ.6 - 10.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಪ್ಯೂರ್ ಹಾಗೂ ಅಡ್ವೆಂಚರ್ ಸೇರಿದಂತೆ 4 ರೂಪಾಂತರ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಟಾಟಾ ಪಂಚ್ ಎಸ್‌ಯುವಿಯಲ್ಲಿ 5 ಮಂದಿ ಸುಲಭವಾಗಿ ಪ್ರಯಾಣಿಸಬಹುದು.

ಹೊಸ ಟಾಟಾ ಪಂಚ್, 1.2 - ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯೊಂದಿಗೆ ಖರೀದಿದಾರರಿಗೆ ದೊರೆಯಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 5-ಸ್ವೀಡ್ ಮ್ಯಾನುವಲ್/ 5-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಪಡೆದಿದೆ. ಪೆಟ್ರೋಲ್ ವೇರಿಯೆಂಟ್ 18.8 kmpl ರಿಂದ 20.09 kmpl, ಸಿಎನ್‌ಜಿ ವೇರಿಯೆಂಟ್ 26.99 km/kg ಮೈಲೇಜ್ ನೀಡುತ್ತದೆ.
ಈ ಕಾರು, ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಪ್ರಮುಖವಾಗಿ 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 7-ಇಂಚಿನ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಆಟೋ ಕ್ಲೇಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಡಿಫಾಗರ್, ರೇರ್ ಪಾರ್ಕಿಂಗ್ ಸೆನ್ಸರ್ ಹೊಂದಿದೆ.

ಹ್ಯುಂಡೈ ಎಕ್ಸ್‌ಟರ್ (Hyundai Exter) ಕುರಿತು ಹೇಳುವುದಾದರೆ, ಇದು ರೂ.6 ಲಕ್ಷದಿಂದ ರೂ.10.15 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ. ಇಎಕ್ಸ್, ಎಸ್, ಎಸ್ಎಕ್ಸ್ ಸೇರಿದಂತೆ ನಾನಾ ರೂಪಾಂತರ ಆಯ್ಕೆಯಲ್ಲಿ ಸಿಗುತ್ತದೆ. ಜೊತೆಗೆ 2 - ಡ್ಯೂಯಲ್ ಟೋನ್ 5 - ಮೊನೊಟೋನ್ ಬಣ್ಣಗಳನ್ನು ಪಡೆದಿದೆ.
ಈ ಹ್ಯುಂಡೈ ಎಕ್ಸ್‌ಟರ್, 1.2 - ಲೀಟರ್, 4 ಸಿಲಿಂಡರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 5 - ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ. ಎಕ್ಸ್‌ಟರ್ ಪೆಟ್ರೋಲ್ ರೂಪಾಂತರ 19.2 kmpl ಹಾಗೂ ಸಿಎನ್‌ಜಿ ರೂಪಾಂತರ 27.1 km/kg ಮೈಲೇಜ್ ನೀಡುತ್ತದೆ.
ಎಕ್ಸ್‌ಟರ್ ಯುವ ಗ್ರಾಹಕರನ್ನು ಆಕರ್ಷಿಸುವ ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಮುಖ್ಯವಾಗಿ 8 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಎಲೆಕ್ಟ್ರಿಕ್ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಒಳಗೊಂಡಿದೆ. ಸುರಕ್ಷತೆಯ ಸಲುವಾಗಿ 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಪಡೆದಿದೆ.
ಇನ್ನು, ದೇಶೀಯ ಕಾರು ಮಾರುಕಟ್ಟೆಯಲ್ಲಿ ಇವೆರೆಡು ಎಸ್‌ಯುವಿಗಳು ಗರಿಷ್ಠ ಕಾಯುವಿಕೆ ಅವಧಿಯನ್ನು ಹೊಂದಿವೆ. ಗ್ರಾಹಕರು ಕೂಡ ಮುಗಿಬಿದ್ದು ಈ ಕಾರುಗಳನ್ನು ಖರೀದಿಸುತ್ತಿದ್ದಾರೆ. ಟಾಟಾ ಪಂಚ್, ಹ್ಯುಂಡೈ ಎಕ್ಸ್‌ಟರ್ ಸಿಎನ್‌ಜಿ ರೂಪಾಂತರಗಳು ಬೈಕ್‌ನ್ನು ಮೀರಿಸುವ ರೀತಿಯಲ್ಲಿ ಮೈಲೇಜ್ ನೀಡುವುದರಿಂದ ನಿಮ್ಮ ಆಯ್ಕೆಯ ಕಾರಾಗಿ ಇವುಗಳನ್ನು ಪರಿಗಣಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








