Mileage cars: ರೂ. 6 ಲಕ್ಷದೊಳಗಿನ ಕಾರುಗಳು... ಬರೋಬ್ಬರಿ 34 ಕಿ.ಮೀ ಮೈಲೇಜ್!

ಭಾರತದಲ್ಲಿ ಬಜೆಟ್ ಬೆಲೆಯಲ್ಲಿ ಉತ್ತಮ ಮೈಲೇಜ್ ಕೊಡುವ ಕಾರುಗಳಿಗೆ ಭಾರೀ ಬೇಡಿಕೆಯಿದೆ. ಹಾಗಾಗಿಯೇ ಮಾರುತಿ ಸುಜುಕಿ 800, ಆಲ್ಟೊ, ಸ್ಯಾಂಟ್ರೊದಂತಹ ಕಾರುಗಳು ಅವುಗಳ ಮೈಲೇಜ್‌ನಿಂದಾಗಿ ದೇಶದ ಮಧ್ಯಮ ವರ್ಗದವರಲ್ಲಿ ಹೆಚ್ಚು ಜನಪ್ರಿಯವಾಗಿವೆ. ಪ್ರಸ್ತುತ ಭಾರತದಲ್ಲಿ ಅಂತಹ ಕಾರುಗಳು ಯಾವುವು.. ಅವುಗಳ ಬೆಲೆ, ಮೈಲೇಜ್ ಎಷ್ಟು? ನೋಡೋಣ.

ಮಾರುತಿ ಆಲ್ಟೊ ಕೆ10: ಈ ಪಟ್ಟಿಯಲ್ಲಿ ಮೊದಲ ಕಾರು ಮಾರುತಿ ಆಲ್ಟೊ ಕೆ10, ಇದರ ಬೆಲೆಯು ರೂ. 3.99 ಲಕ್ಷ ಎಕ್ಸ್ ಶೋರೂಂನಿಂದ ಪ್ರಾರಂಭವಾಗುತ್ತದೆ. ಕಂಪನಿಯು ಇದನ್ನು ಪೆಟ್ರೋಲ್ ಮತ್ತು ಸಿಎನ್‌ಜಿಯಲ್ಲಿ ನೀಡುತ್ತಿದೆ. ಇದರ ಮೈಲೇಜ್ ಪೆಟ್ರೋಲ್ ಮೇಲೆ 24.39 kmpl ಮತ್ತು CNG ನಲ್ಲಿ 33.85 kmpl ಆಗಿದೆ. ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡುವ ಕಾರುಗಳಲ್ಲಿ ಮೊದಲ ಸ್ಥಾನದಲ್ಲಿದೆ.

best-mileage-cars-under-6-lakhs-maruti-alto-hyundai-i10-renault-kwid

ಮಾರುತಿ ಸೆಲೆರಿಯೊ: ಸೆಲೆರಿಯೊ ತನ್ನ ಅತ್ಯುತ್ತಮ ಮೈಲೇಜ್‌ಗಾಗಿ ಜನಪ್ರಿಯವಾಗಿದೆ. ಉತ್ತಮ ಸ್ಟೈಲಿಂಗ್ ಮತ್ತು ಸ್ಥಳಾವಕಾಶದೊಂದಿಗೆ ಬರುತ್ತಿರುವ ಈ ಕಾರಿನ ಬೆಲೆ ರೂ.5.37 ಲಕ್ಷದಿಂದ ಆರಂಭವಾಗುತ್ತದೆ. ಕಂಪನಿಯು ಇದನ್ನು ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳಲ್ಲಿ ನೀಡುತ್ತಿದೆ. ಇದರ ಮೈಲೇಜ್ ಪೆಟ್ರೋಲ್ ಮೇಲೆ 25.24 kmpl ಮತ್ತು CNG ನಲ್ಲಿ 35 kmpl ಆಗಿದೆ.

ಮಾರುತಿ ಎಸ್ಪ್ರೆಸೊ: ಈ ಪಟ್ಟಿಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಮತ್ತೊಂದು ಮಾರುತಿ ಕಾರಾಗಿ ಮಾರುತಿ ಎಸ್ಪ್ರೆಸೊವನ್ನು ಸೇರಿಸಿದ್ದೇವೆ. ಏಕೆಂದರೆ ಇದರ ಬೆಲೆ ರೂ.4.26 ಲಕ್ಷ ಎಕ್ಸ್ ಶೋರೂಂನಿಂದ ಪ್ರಾರಂಭವಾಗುತ್ತದೆ. ಕಂಪನಿಯು ಪೆಟ್ರೋಲ್ ಮತ್ತು CNG ಆಯ್ಕೆಗಳನ್ನು ನೀಡುತ್ತಿದೆ. ಎಸ್ಪ್ರೆಸೊ ಪೆಟ್ರೋಲ್ ಮೇಲೆ 24 kmpl ಮತ್ತು CNG ಮೇಲೆ 32 kmpl ಮೈಲೇಜ್ ನೀಡುತ್ತದೆ.

best-mileage-cars-under-6-lakhs-maruti-alto-hyundai-i10-renault-kwid

ರೆನಾಲ್ಟ್ ಕ್ವಿಡ್: ಪಟ್ಟಿಯಲ್ಲಿರುವ ಮುಂದಿನ ಮೈಲೇಜ್ ಕಾರು ರೆನಾಲ್ಟ್ ಕ್ವಿಡ್ (kwid), ಬೆಲೆ ರೂ. 4.70 ಲಕ್ಷ ಎಕ್ಸ್ ಶೋರೂಂನಿಂದ ಪ್ರಾರಂಭವಾಗುತ್ತದೆ. ರೆನಾಲ್ಟ್ ಕ್ವಿಡ್ ಅನ್ನು ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಇದು ಭಾರತದಲ್ಲಿ ಕಂಪನಿಯ ಅತ್ಯಂತ ಕೈಗೆಟುಕುವ ಕಾರು, ಸಣ್ಣ ಕುಟುಂಬಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಕ್ವಿಡ್ ಪ್ರತಿ ಲೀಟರ್‌ಗೆ 20-22 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

ಹ್ಯುಂಡೈ i10: ಹ್ಯುಂಡೈನ ಅತ್ಯಂತ ಕೈಗೆಟುಕುವ ಹ್ಯಾಚ್‌ಬ್ಯಾಕ್ i10 ಸಹ ಪಟ್ಟಿಗೆ ಸೇರಿದೆ. ಹುಂಡೈ i10 ಬೆಲೆ ರೂ.5.84 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ). ಇದರ ಪೆಟ್ರೋಲ್ ರೂಪಾಂತರವು 19.2 kmpl ಮತ್ತು CNG ರೂಪಾಂತರವು 28 kmpl ಮೈಲೇಜ್ ನೀಡುತ್ತದೆ.

best-mileage-cars-under-6-lakhs-maruti-alto-hyundai-i10-renault-kwid

ವಾಹನ ಮಾರುಕಟ್ಟೆಯಲ್ಲಿ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚಾದಾಗಿನಿಂದ ಒಂದಷ್ಟು ಜನರು ಮೈಲೇಜ್ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ. ಆದರೆ.. ಹೆಚ್ಚಿನ ಗ್ರಾಹಕರು ಇನ್ನೂ ಉತ್ತಮ ಮೈಲೇಜ್ ಹೊಂದಿರುವ ಕಾರುಗಳನ್ನು ಬಯಸುತ್ತಾರೆ. ಆಲ್ಟೊ, ಟಿಯಾಗೊ, ಸೆಲೆರಿಯೊ ಮುಂತಾದ ಕಾರುಗಳು ಇಂದಿಗೂ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಲು ಇದೇ ಕಾರಣ. ಈ ಲೇಖನದಲ್ಲಿ ನಿಮ್ಮ ಬೆಸ್ಟ್ ಆಯ್ಕೆ ಯಾವುದು ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, November 25, 2023, 16:21 [IST]
English summary
Best mileage cars under 6 lakhs maruti alto hyundai i10 renault kwid
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+