Bharat NCAP: ನಾಳೆಯಿಂದ ಪರೀಕ್ಷೆ ಶುರು.. ಟಾಟಾ, ಹ್ಯುಂಡೈ, ಮಾರುತಿಯ ಯಾವ ಕಾರಿಗೆ 5-ಸ್ಟಾರ್ ರೇಟಿಂಗ್ ಸಿಗುತ್ತೆ?
ದೇಶದ ವಾಹನ ಸುರಕ್ಷತಾ ಪರೀಕ್ಷಾ ಸಂಸ್ಥೆ ಭಾರತ್ ಎನ್‌ಸಿಎಪಿ (Bharat NCAP) ನಾಳೆಯಿಂದ (ಡಿಸೆಂಬರ್ 15) ಕಾರ್ಯಾರಂಭ ಮಾಡಲಿದೆ. ಗ್ಲೋಬಲ್ ಎನ್‌ಸಿಎಪಿ ಮಾದರಿಯಲ್ಲಿ ಸ್ಥಾಪನೆಗೊಂಡಿರುವ ಈ ಏಜೆನ್ಸಿ, ಮೊದಲ ಸೆಟ್ ವಾಹನಗಳನ್ನು ಟೆಸ್ಟ್‌ಗೆ ಒಳಪಡಿಸಲಿದೆ. ಕೇಂದ್ರ ಸರ್ಕಾರವು ಆಗಸ್ಟ್ 22 ರಂದು ಅಧಿಕೃತವಾಗಿ ಭಾರತ್ ಎನ್‌ಸಿಎಪಿಯನ್ನು ಪ್ರಾರಂಭಿಸಿತ್ತು.
ಈಗಾಗಲೇ ಯುನೈಟೆಡ್ ಸ್ಟೇಟ್ಸ್, ಚೀನಾ, ದಕ್ಷಿಣ ಕೊರಿಯಾ ಹಾಗೂ ಜಪಾನ್ ದೇಶಗಳು, ತಮ್ಮದೇ ವಾಹನ ಸುರಕ್ಷತಾ ಪರೀಕ್ಷಾ ಸಂಸ್ಥೆಯನ್ನು ಹೊಂದಿವೆ. ಭಾರತವು ಸ್ಥಳೀಯವಾಗಿ ಕಾರ್ ಕ್ರ್ಯಾಶ್ ಟೆಸ್ಟ್ ಏಜೆನ್ಸಿಯನ್ನು ಪ್ರಾರಂಭಿಸಿರುವ 5ನೇ ದೇಶವಾಗಿದೆ. ಈ ಹಿಂದೆ, ಭಾರತದಲ್ಲಿ ತಯಾರಿಸಲಾದ ಕಾರುಗಳನ್ನು ಗ್ಲೋಬಲ್ ಎನ್‌ಸಿಎಪಿ (Global NCAP) ಪರೀಕ್ಷೆ ನಡೆಸುತ್ತಿತ್ತು.

ಪ್ರಮುಖ ಕಾರು, ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹ್ಯುಂಡೈ ಮೋಟಾರ್ (Hyundai Motor) ತನ್ನ ಕಾರುಗಳನ್ನು ಭಾರತ್ ಎನ್‌ಸಿಎಪಿ ಪರೀಕ್ಷೆಗೆ ಒಳಪಡಿಲಾಗುವುದು ಎಂದು ಈ ಮೊದಲೇ ಖಚಿತಪಡಿಸಿತ್ತು. ಕ್ರ್ಯಾಶ್ ಟೆಸ್ಟ್‌ಗಾಗಿ ಮೂರು ಕಾರುಗಳನ್ನು ಕಳುಹಿಸುವುದಾಗಿ ಕಂಪನಿ ಹೇಳಿದ್ದು, ಜನಪ್ರಿಯ ಎಕ್ಸ್‌ಟರ್ ಎಸ್‌ಯುವಿ, ಮುಂಬರುವ ಹೊಸ ಕ್ರೆಟಾ ಎಸ್‌ಯುವಿ, ವೆರ್ನಾ ಸೆಡಾನ್ ಭಾರತ್ ಎನ್‌ಸಿಎಪಿಯ ಪರೀಕ್ಷೆಗೆ ಒಳಗಾಗಬಹುದು.
ಮಾರುತಿ ಸುಜುಕಿ (Maruti Suzuki), ಟಾಟಾ ಮೋಟಾರ್ಸ್ (Tata Motors) ಮತ್ತು ಮಹೀಂದ್ರಾ (Mahindra) ಕಂಪನಿಯ 10 ಕಾರು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸುವ ಸಾಧ್ಯತೆಯಿದೆ. ಕಿಯಾ (Kia) ಕಂಪನಿ ಕೂಡ ತನ್ನ ಎರಡು ಪ್ರಮುಖ ಎಸ್‌ಯುವಿಗಳಾದ ಸೆಲ್ಟೋಸ್ (Seltos) ಮತ್ತು ಹೊಸ ಸೋನೆಟ್ (Sonet) ಕಾರುಗಳನ್ನು ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸುವ ನೀರಿಕ್ಷೆಯಿದೆ.

ಈ ಹಿಂದೆ, ಕೇಂದ್ರ ಸಚಿವ ನಿತಿನ್ ಗಡ್ಕರಿ (Union Minister Nitin Gadkari) ಅವರು, 6 ಏರ್‌ಬ್ಯಾಗ್‌ಗಳೊಂದಿಗೆ ಬರುವ ಕಾರುಗಳಿಗೆ ಭಾರತ್ ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್ ನೀಡಲಾಗುತ್ತದೆ ಎಂದು ಹೇಳಿದ್ದರು. ಸದ್ಯ, ಭಾರತದಲ್ಲಿ ಪ್ರತಿಯೊಂದು ಕಾರು 2 ಏರ್‌ಬ್ಯಾಗ್ ಹೊಂದುವುದು ಕಡ್ಡಾಯವಾಗಿದೆ. ಸಣ್ಣ ಕಾರುಗಳಲ್ಲಿ ಮುಂಭಾಗದ ಪ್ರಯಾಣಿಕರಿಗೆ ಮಾತ್ರ ಏರ್‌ಬ್ಯಾಗ್ ಲಭ್ಯವಿದ್ದು, ಸ್ಥಳಾವಕಾಶದ ಕೊರತೆಯಿಂದ ಹಿಂಭಾಗ ಏರ್‌ಬ್ಯಾಗ್ ಇಲ್ಲ.
ಭಾರತ್ ಎನ್‌ಸಿಎಪಿ (Bharat NCAP) ವಿವಿಧ ಹಂತಗಳಲ್ಲಿ ಕ್ರ್ಯಾಶ್ ಟೆಸ್ಟ್ ಪರೀಕ್ಷೆಯನ್ನು ನಡೆಸಲಿದೆ. ಅದು ಫ್ರಂಟ್ ಇಂಪ್ಯಾಕ್ಟ್, ಸೈಡ್ ಪೋಲ್ ಇಂಪ್ಯಾಕ್ಟ್, ಸೈಡ್ ಬ್ಯಾರಿಯರ್ ಇಂಪ್ಯಾಕ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಪಾದಚಾರಿ ಸುರಕ್ಷತೆ (Pedestrian Safety), ಲೇನ್ ಡಿಪಾರ್ಚರ್ ವಾರ್ನಿಂಗ್, ರೇರ್ ಕ್ರ್ಯಾಶ್ ಸೇಫ್ಟಿ, ಆಟೊನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್ (AEB) ಮಾನದಂಡಗಳನ್ನು ಒಳಗೊಂಡಿರಲಿದೆ.

ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection - AOP) 27 ಅಂಕ ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection - COP) ಕನಿಷ್ಠ 41 ಅಂಕಗಳನ್ನು ಪಡೆದ ಕಾರು, ಭಾರತ್ ಎನ್‌ಸಿಎಪಿಯಿಂದ 5-ಸ್ಟಾರ್ ರೇಟಿಂಗ್ ಪಡೆಯಲಿದೆ. 3-ಸ್ಟಾರ್ ರೇಟಿಂಗ್ ಹೊಂದಬೇಕಾದರೆ, 6 ಏರ್‌ಬ್ಯಾಗ್, ಫ್ರಂಟ್ & ರೇರ್ ಸೀಟ್ ಗಳಲ್ಲಿ ಸೀಟ್‌ಬೆಲ್ಟ್ ರಿಮೆಂಡರ್ ಸೇರಿದಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನುಪಡೆದಿರಬೇಕು.
ದೇಶದಲ್ಲಿ ಮಾರಾಟವಾಗುವ ಕಾರುಗಳಿಗೆ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಪರೀಕ್ಷೆ ನಡೆಸುವುದರಿಂದ ಯಾವ ಕಾರು ಸುರಕ್ಷಿತೆಯ ದೃಷ್ಟಿಯಿಂದ ಅತ್ಯುತ್ತಮವಾಗಿದೆ ಎಂಬುದು ಸುಲಭವಾಗಿ ತಿಳಿಯುತ್ತದೆ. ಇದನ್ನು ಆಧಾರವಾಗಿಟ್ಟುಕೊಂಡು ನಿಮ್ಮ ಬಜೆಟ್ ಗೆ ತಕ್ಕಂತೆ ಯಾವ ಕಾರು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಪರೀಕ್ಷೆ ಸಂಪೂರ್ಣ ಪಾರದರ್ಶಕತೆಯಿಂದ ನಡೆಯಲಿದೆ ಎಂದು ಹೇಳಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








