Car Sales: ಖಂಡಿತ ತಿಳಿದುಕೊಳ್ಳಬೇಕಾದ ವಿಷಯ... ಹೊಸ ಕಾರು ಮಾರಾಟದಲ್ಲಿ ಯಾರಿಗೆಷ್ಟು ಲಾಭ

ಭಾರತವು ಈಗ ವಿಶ್ವದ ಅತಿದೊಡ್ಡ ಆಟೋ ಮಾರುಕಟ್ಟೆಯಾಗಿ ಗುರ್ತಿಸಿಕೊಂಡಿದೆ. ದೇಶೀಯ ಮಾರಾಟವಾಗಲಿ ರಫ್ತಿನಲ್ಲಾಗಲಿ ದಾಖಲೆಯ ಮಾರಾಟ ಕಾಣುತ್ತಿದ್ದು, ಹೆಸರಿಗೆ ಮಾತ್ರ ಕಂಪನಿಗಳಿಗೆ ಭಾರೀ ಲಾಭ ಎಂದು ಹೇಳಲಾಗುತ್ತದೆ. ಆದರೆ ಇದರಲ್ಲಿ ಯಾವುದೇ ಕಷ್ಟವಿಲ್ಲದೇ ಅತ್ಯಧಿಕ ಲಾಭ ಪಡೆಯುವುದು ಮಾತ್ರ ಡೀಲರ್ ಹಾಗೂ ಸರ್ಕಾರಗಳು.

ಸಾಮಾನ್ಯವಾಗಿ ವಾಹನಗಳನ್ನು ಖರೀದಿಸುವ ಅದೆಷ್ಟೋ ಗ್ರಾಹಕರಿಗೆ ಅವರು ಪಾವತಿಸುವ ಮೊತ್ತ ಹೇಗೆಲ್ಲಾ ಹಂಚಿಕೆಯಾಗುತ್ತದೆ ಎಂಬುದರ ಬಗ್ಗೆ ತಿಳಿದೇ ಇಲ್ಲ. ವಾಹನದ ವಾಸ್ತವಿಕ ಬೆಲೆ ಮತ್ತು ಕಾರು ತಯಾರಕರು ಗ್ರಾಹಕರಿಂದ ತೆಗೆದುಕೊಳ್ಳುವ ಎಕ್ಸ್ ಶೋ ರೂಂ ಬೆಲೆಯ ನಡುವೆ ಗಮನಾರ್ಹ ವ್ಯತ್ಯಾಸವಿದೆ. ಒಂದು ಕಾರು ಕಂಪನಿಯಿಂದ ಹೊರಬಂದ ಬಳಿಕ ಡೀಲರ್ ತಲುಪಿ ಅಲ್ಲಿಂದ ಗ್ರಾಹಕನಿಗೆ ಬರುವಷ್ಟರಲ್ಲಿ ಹೇಗೆಲ್ಲಾ ಬೆಲೆ ವ್ಯತ್ಯಾಸವಾಗುತ್ತದೆ ಹಾಗೂ ಗ್ರಾಹಕರು ವಾಹನಕ್ಕಾಗಿ ಪಾವತಿಸುವ ವೆಚ್ಚದ ಹಿಂದಿನ ಗಣಿತವನ್ನು ಇಲ್ಲಿ ನೋಡೋಣ.

Car Sales: ಖಂಡಿತ ತಿಳಿದುಕೊಳ್ಳಬೇಕಾದ ವಿಷಯ... ಹೊಸ ಕಾರು ಮಾರಾಟದಲ್ಲಿ ಯಾರಿಗೆಷ್ಟು ಲಾಭ

ಮೊದಲಿಗೆ ವಾಹನವನ್ನು ಖರೀದಿಸುವ ಗ್ರಾಹಕರು ಎಷ್ಟು ಮೊತ್ತವನ್ನು ಪಾವತಿಸುತ್ತಾರೆ ಹಾಗೂ ಅದು ಯಾವೆಲ್ಲಾ ಮೂಲಗಳಿಗೆ ಎಷ್ಟು ಭಾಗಗಳಲ್ಲಿ ಹಂಚಿಕೆಯಾಗುತ್ತದೆ ಎಂದು ತಿಳಿದುಕೊಳ್ಳೋಣ. ವಾಹನದ ಗ್ರಾಹಕರು ಪಾವತಿಸುವ ವೆಚ್ಚವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ತಯಾರಕರು, ಅಧಿಕೃತ ಡೀಲರ್ ಮತ್ತು ಸರ್ಕಾರ (ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡೂ ಸೇರಿವೆ). ಉದಾಹರಣೆಗೆ ಟೊಯೊಟಾ ಫಾರ್ಚುನರ್ ಅನ್ನು ತೆಗೆದುಕೊಳ್ಳೋಣ. ಇದರ ಎಕ್ಸ್ ಶೋ ರೂಂ ಬೆಲೆ 39.28 ಲಕ್ಷ ರೂ. ಇದೆ.

ಇಲ್ಲಿ ಗ್ರಾಹಕರು ಎಲ್ಲಾ ತೆರಿಗೆಗಳು ಮತ್ತು ವಿಮಾ ವೆಚ್ಚಗಳನ್ನು ಒಳಗೊಂಡಂತೆ ಟೊಯೊಟಾ ಫಾರ್ಚುನರ್‌ಗಾಗಿ ರೂ. 47.35 ಲಕ್ಷದ ಆನ್-ರೋಡ್ ಬೆಲೆಯನ್ನು ಪಾವತಿಸುತ್ತಾರೆ. ಆದರೆ ವಾಹನವನ್ನು ತಯಾರಿಸಿದ ಟೊಯೊಟಾ ಕಂಪನಿ ಈ ಸಂದರ್ಭದಲ್ಲಿ ಕೇವಲ 35,000 ದಿಂದ 40,000 ರೂ. ನಷ್ಟು ಲಾಭ ಮಾತ್ರ ಪಡೆಯುತ್ತದೆ. ಟೊಯೊಟಾ ಕಾರು ತಯಾರಕರು, ಡೀಲರ್‌ಶಿಪ್‌ನಿಂದ ಮಾರಾಟವಾದ ಕಾರಿನ ಮೇಲೆ ಶೇ 2 ರಿಂದ 2.5 ರಷ್ಟು ಮಾರ್ಜಿನ್ ಗಳಿಸುತ್ತದೆ ಎಂಬುದನ್ನು ಇಲ್ಲಿ ಗಮನಿಸಬೇಕಾದ ಸಂಗತಿ.

Car Sales: ಖಂಡಿತ ತಿಳಿದುಕೊಳ್ಳಬೇಕಾದ ವಿಷಯ... ಹೊಸ ಕಾರು ಮಾರಾಟದಲ್ಲಿ ಯಾರಿಗೆಷ್ಟು ಲಾಭ

ಹಾಗೆಯೇ ಫಾರ್ಚುನರ್ ಕಾರಿಗೆ ಯಾವುದೇ ರಿಯಾಯಿತಿಗಳನ್ನು ನೀಡದಿದ್ದಲ್ಲಿ ಡೀಲರ್ ಔಟ್‌ಲೆಟ್ ರೂ. 1 ಲಕ್ಷದವರೆಗೆ ಮಾರ್ಜಿನ್ ಗಳಿಸಬಹುದು. ಇನ್ನು ಇದರ ಮಾರಾಟದಲ್ಲಿ ಹೆಚ್ಚಿನ ಮೊತ್ತವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೋಗುತ್ತದೆ. ಪ್ರತಿ ಫಾರ್ಚುನರ್ ಮಾರಾಟದ ಮೇಲೆ ಸರ್ಕಾರಗಳು ಸುಮಾರು 18 ಲಕ್ಷ ರೂ. ಗಳಿಸುವ ಸಾಧ್ಯತೆ ಇದೆ. ಈ ಮೊತ್ತವು ಶೇ 28 GST ಮತ್ತು ಶೇ 22 GST ಪರಿಹಾರ ಸೆಸ್ ಎರಡು GST ಘಟಕಗಳನ್ನು ಒಳಗೊಂಡಿದೆ.

ಫಾರ್ಚುನರ್ ಈ ಸಂದರ್ಭದಲ್ಲಿ ಕ್ರಮವಾಗಿ ರೂ. 5.72 ಲಕ್ಷ ಮತ್ತು ರೂ. 7.28 ಲಕ್ಷ ನೋಂದಣಿ, ರಸ್ತೆ ತೆರಿಗೆ, ಗ್ರೀನ್ ಸೆಸ್ ಮತ್ತು ಫಾಸ್ಟ್ ಟ್ಯಾಗ್ ಸೇರಿದಂತೆ ಸರ್ಕಾರದಿಂದ ಉಂಟಾಗುವ ಇತರ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಈ ಎಲ್ಲಾ ವೆಚ್ಚಗಳಿಗೆ ಲೆಕ್ಕ ಹಾಕಿದರೆ ಸರ್ಕಾರಕ್ಕೆ ಬರುತ್ತಿರುವ ಮೊತ್ತವು ಸುಮಾರು 18 ಲಕ್ಷ ರೂ. ಇದೆ. ಕಳೆದೆರಡು ವರ್ಷಗಳಿಂದ ವಾಹನೋದ್ಯಮ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಜಾಗತಿಕ ಮಂದಗತಿಯಿಂದಾಗಿ COVID-19 ಬಿಕ್ಕಟ್ಟು ಉದ್ಯಮಕ್ಕೆ ಹಾನಿಯನ್ನುಂಟುಮಾಡಿದೆ.

ವಾಹನ ಉದ್ಯಮವು ಪೂರೈಕೆ ಸರಪಳಿಯ ಅಡಚಣೆಗಳು ಮತ್ತು ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳಿಂದಾಗಿ ಬಿಡಿಭಾಗಗಳ ಕೊರತೆಯನ್ನು ಎದುರಿಸಬೇಕಾಯಿತು. ಕ್ರಮೇಣ ವಾಹನ ಬೆಲೆಗಳನ್ನು ಹೆಚ್ಚಿಸಲು ಇದು ಮುಖ್ಯ ಕಾರಣವಾಗಿದೆ. ಹಾಗೆಯೇ ವಾಹನ ಖರೀದಿಯ ಕೊನೆಯಲ್ಲಿ, ವಿವಿಧ ವಿಭಾಗಗಳಾಗಿ ಹಂಚಿಕೆಯಾಗುವ ವೆಚ್ಚದಿಂದಾಗಿ ಕಾರನ್ನು ಹೊಂದುವುದು ದುಬಾರಿಯಾಗಬಹುದು. ಹಾಗಾಗಿ ಗ್ರಾಹಕರು ವಾಹನದ ನಿಜವಾದ ಬೆಲೆಗಿಂತ ಹೆಚ್ಚು ಪಾವತಿಸುತ್ತಾರೆ, ಇದರಲ್ಲಿ ಮುಖ್ಯವಾದ ಪಾಲು ಡೀಲರ್ ಹಾಗೂ ಸರ್ಕಾರಗಳಿಗೆ ಹೋಗುತ್ತದೆ.

ಈ ಮೇಲಿನ ವಿವರಗಳನ್ನು CA ಸಾಹಿಲ್ ಜೈನ್ ಎಂಬಾತ YouTube ವೀಡಿಯೊದಲ್ಲಿ ವಿವರಿಸಲಾದ ಮಾಹಿತಿಯನ್ನು ಆಧರಿಸಿ ಬರೆಯಲಾಗಿದೆ. ವಾಹನಕ್ಕಾಗಿ ಪಾವತಿಸುವ ವೆಚ್ಚದ ಹಿಂದಿನ ಗಣಿತವನ್ನು ಈ ವಿಡಿಯೋ ಮೂಲಕ ತಿಳಿದುಕೊಳ್ಳಬಹುದು. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Saturday, April 1, 2023, 10:00 [IST]
English summary
Car sales profit shares explained in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+