Waiting Period: ಟೊಯೊಟಾ ಇನ್ನೋವಾ, ಮಹೀಂದ್ರಾ ಸ್ಕಾರ್ಪಿಯೋಗೆ ಭಾರೀ ಬೇಡಿಕೆ.. ವಿತರಣೆಗೆ ಇಷ್ಟು ಸಮಯ ಬೇಕಂತೆ!

ಭಾರತದ ಮಾರುಕಟ್ಟೆಯಲ್ಲಿ ವಿವಿಧ ಕಂಪನಿ ಕಾರುಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿವೆ. ಈ ಏಪ್ರಿಲ್ ತಿಂಗಳಲ್ಲೂ ಕೆಲವು ಕಾರುಗಳನ್ನು ಇವತ್ತು ಬುಕ್ ಮಾಡಿದರೂ ಕನಿಷ್ಠಪಕ್ಷ 1.5 ವರ್ಷಗಳ ಬಳಿಕ ವಿತರಣೆ ಮಾಡಲಾಗುತ್ತದೆ. ಅದರಲ್ಲೂ ಟೊಯೊಟಾ ಇನ್ನೋವಾ ಹೈಕ್ರಾಸ್, ಮಹೀಂದ್ರಾ ಸ್ಕಾರ್ಪಿಯೋ, ಥಾರ್, ಮಾರುತಿ ಸುಜುಕಿ ಬ್ರೆಜ್ಜಾ ಬಹುಬೇಡಿಕೆ ಹೊಂದಿವೆ.

ಮೊದಲಿಗೆ ಬಹುಬೇಡಿಕೆ ಹೊಂದಿರುವ ಟೊಯೊಟಾ ಇನ್ನೋವಾ ಹೈಕ್ರಾಸ್ ಬಗ್ಗೆ ಮಾತನಾಡೋಣ. ಇದಕ್ಕಾಗಿ ದೊಡ್ಡಮಟ್ಟದಲ್ಲಿ ಗ್ರಾಹಕರು ಬುಕ್ ಮಾಡುತ್ತಿದ್ದು, ಟಾಪ್ ಎಂಡ್ ರೂಪಾಂತರಗಳ ಮಂಗಡ ಬುಕಿಂಗ್ ಅನ್ನೇ ಇತ್ತೀಚೆಗೆ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಆದರೂ ಇನ್ನೋವಾ ಹೈಕ್ರಾಸ್ ಎಂಪಿವಿಯ ಕೆಲವೊಂದು ರೂಪಾಂತರಗಳನ್ನು ವಿತರಣೆ ಪಡೆಯಲು ಕನಿಷ್ಠವೆಂದರೂ 18 ತಿಂಗಳು ಕಾಯಬೇಕು. ಇದು ರೂ.18.30 ಲಕ್ಷದಿಂದ ರೂ.28.97 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

Waiting Period: ಟೊಯೊಟಾ ಇನ್ನೋವಾ, ಮಹೀಂದ್ರಾ ಸ್ಕಾರ್ಪಿಯೋಗೆ ಭಾರೀ ಬೇಡಿಕೆ.. ವಿತರಣೆಗೆ ಇಷ್ಟು ಸಮಯ ಬೇಕಂತೆ!

ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಜಿನ್ ಹಾಗೂ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 2.0 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 21 kmpl ಮೈಲೇಜ್ ನೀಡಲಿದೆ. 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, 6 ಏರ್‌ಬ್ಯಾಗ್ಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಮಹೀಂದ್ರಾ ಕಂಪನಿ ಸ್ಕಾರ್ಪಿಯೋ ಎನ್, XUV700 ಹಾಗೂ ಥಾರ್ ಎಸ್‌ಯುವಿಗಳು ಭಾರೀ ಬೇಡಿಕೆಯನ್ನು ಹೊಂದಿವೆ. ಥಾರ್ ಎಸ್‌ಯುವಿ 17 ತಿಂಗಳು, ಸ್ಕಾರ್ಪಿಯೋ ಎನ್ ಕನಿಷ್ಠವೆಂದರೂ 15 ತಿಂಗಳು ಹಾಗೂ XUV700ಗಾಗಿ 15 ತಿಂಗಳು ವಿತರಣೆ ಪಡೆಯಲು ಕಾಯಬೇಕು. ಸ್ಕಾರ್ಪಿಯೋ ಎನ್ ರೂ.12.74 ಲಕ್ಷದಿಂದ 24.05 ಲಕ್ಷ, ಥಾರ್ ರೂ.9.99 ಲಕ್ಷದಿಂದ ರೂ.16.49 ಲಕ್ಷ ಹಾಗೂ XUV700 ರೂ.13.45 - 25.48 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

Waiting Period: ಟೊಯೊಟಾ ಇನ್ನೋವಾ, ಮಹೀಂದ್ರಾ ಸ್ಕಾರ್ಪಿಯೋಗೆ ಭಾರೀ ಬೇಡಿಕೆ.. ವಿತರಣೆಗೆ ಇಷ್ಟು ಸಮಯ ಬೇಕಂತೆ!

ಟೊಯೊಟಾದ ಮತ್ತೊಂದು ಬೇಡಿಕೆಯಲ್ಲಿರುವ ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ ಎಸ್‌ಯುವಿಗಾಗಿ ಇವತ್ತು ಬುಕ್ ಮಾಡಿದರೆ, 15 ತಿಂಗಳ ಬಳಿಕ, ವಿತರಣೆಯಾಗಲಿದೆ. ಈ ಕಾರು, ರೂ.10.48 ಲಕ್ಷದಿಂದ ರೂ.19.49 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಆಂಬಿಯೆಂಟ್ ಲೈಟಿಂಗ್ ಮತ್ತು ಪ್ಯಾಡಲ್ ಶಿಫ್ಟರ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಭಾರತದಲ್ಲಿ ದಕ್ಷಿಣ ಕೊರಿಯಾದ ಪ್ರಮುಖ ಕಾರು ತಯಾರಕ ಕಿಯಾ ಕೂಡ ಜನಪ್ರಿಯತೆಗಳಿಸಿದ್ದು, ಇದರ ಕ್ಯಾರೆನ್ಸ್ ಎಂಪಿವಿಗೆ 11 ತಿಂಗಳು ಹಾಗೂ ಸೊನೆಟ್ ಕಾರಿಗೆ ಡಿಲೆವರಿ ಪಡೆಯಲು 9 ತಿಂಗಳು ಕಾಯಬೇಕು. ಕಿಯಾ ಕ್ಯಾರೆನ್ಸ್ ರೂ.10.45 ಲಕ್ಷದಿಂದ 18.95 ಲಕ್ಷ, ಸೊನೆಟ್ ರೂ.7.79 - 14.89 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಜೊತೆಗೆ ಇವು ಗ್ರಾಹಕರನ್ನು ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ.

Waiting Period: ಟೊಯೊಟಾ ಇನ್ನೋವಾ, ಮಹೀಂದ್ರಾ ಸ್ಕಾರ್ಪಿಯೋಗೆ ಭಾರೀ ಬೇಡಿಕೆ.. ವಿತರಣೆಗೆ ಇಷ್ಟು ಸಮಯ ಬೇಕಂತೆ!

ದೇಶದಲ್ಲಿ ಅತಿಹೆಚ್ಚು ಗ್ರಾಹಕರು ಇಷ್ಟಪಟ್ಟು ಖರೀದಿಸುವ ಮಾರುತಿ ಸುಜುಕಿಯ ಬ್ರೆಜ್ಜಾ ಹಾಗೂ ಗ್ರ್ಯಾಂಡ್ ವಿಟಾರಾ ಕಾರುಗಳು ಸಹ ದೊಡ್ಡಮಟ್ಟದಲ್ಲಿ ಬೇಡಿಕೆ ಹೊಂದಿವೆ. ಬ್ರೆಜ್ಜಾಗಾಗಿ 10 ತಿಂಗಳು ಹಾಗೂ ಗ್ರ್ಯಾಂಡ್ ವಿಟಾರಾ ಕಾರಿಗಾಗಿ 6 ತಿಂಗಳು ಕಾಯಬೇಕು. ಬ್ರೆಜ್ಜಾ ರೂ.8.29 - 14.14 ಲಕ್ಷ, ಗ್ರ್ಯಾಂಡ್ ವಿಟಾರಾ ರೂ.10.70 - 19.95 ಲಕ್ಷ ಪ್ರಾರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಜೊತೆಗೆ ಹುಂಡೈ ಕ್ರೆಟಾ ಕಾರು 8 ತಿಂಗಳ ಬಳಿಕ ವಿತರಣೆಯಾಗಲಿದೆ.

ಇದನ್ನು ಗಮನಿಸಿದಾಗ ಟೊಯೊಟಾ ಇನ್ನೋವಾ ಹೈಕ್ರಾಸ್ ದೊಡ್ಡ ಮಟ್ಟದಲ್ಲಿ ಬೇಡಿಕೆ ಹೊಂದಿದೆ. ಜೊತೆಗೆ ಮಹೀಂದ್ರಾ ಥಾರ್ ಕೂಡ ಭಾರೀ ಸಂಖ್ಯೆಯಲ್ಲಿ ಭಾರತದ ಗ್ರಾಹಕರನ್ನು ಆಕರ್ಷಿಸಿದೆ. ಅಲ್ಲದೆ, ತಾನೇನು ಕಮ್ಮಿ ಇಲ್ಲವೆಂಬಂತೆ ಸ್ಕಾರ್ಪಿಯೋ ಎನ್ ಕೂಡ ಗರಿಷ್ಠ ಕಾಯುವಿಕೆ ಅವಧಿಯನ್ನು ಹೊಂದಿದ್ದು, ಮಾರುತಿ ಸುಜುಕಿಯ ಬ್ರೆಜ್ಜಾ ಹಾಗೂ ಗ್ರ್ಯಾಂಡ್ ವಿಟಾರಾಗಳನ್ನು ಸಹ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರು ಬುಕ್ ಮಾಡುತ್ತಿದ್ದಾರೆ.

Article Published On: Wednesday, April 19, 2023, 18:11 [IST]
English summary
Cars waiting period india toyota mahindra maruti suzuki kia details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+