ಭಾರತೀಯ ಸೇನೆಗಾಗಿ ಎಲೆಕ್ಟ್ರಿಕ್ ಮಾರುತಿ ಜಿಪ್ಸಿ... ಸೈನಿಕರಿಗೆ ಹೊಂದಿಕೊಳ್ಳುವ ಪವರ್ ಇದಕ್ಕಿದೆಯೇ?
ಭಾರತದಲ್ಲಿ ಈಗ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಭವಿಷ್ಯದಲ್ಲಿ ಇಂಧನ ಚಾಲಿತ ವಾಹನಗಳು ಬಹುತೇಕ ಕಣ್ಮರೆಯಾಗಲಿವೆ. ಇದೀಗ ಭಾರತೀಯ ಸೇನೆಗು ಎಲೆಕ್ಟ್ರಿಕ್ ಕಾರುಗಳನ್ನು ಸೇರಿಸಲು ಸೇನಾ ಕಮಾಂಡರ್‌ಗಳು ಮತ್ತು ಇತರ ಉನ್ನತ ಅಧಿಕಾರಿಗಳು ನಿರ್ಣಯಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿಯೋಣ.
ಪ್ರತಿ ಎರಡು ವರ್ಷಗಳಿಗೊಮ್ಮೆ, ಭಾರತೀಯ ಸೇನೆಯು ಪ್ರಮುಖ ಭದ್ರತೆ-ಸಂಬಂಧಿತ ಸಮಸ್ಯೆಗಳು ಮತ್ತು ಇತರ ಸಂಬಂಧಿತ ವಿಷಯಗಳನ್ನು ಚರ್ಚಿಸಲು ಸೇನಾ ಕಮಾಂಡರ್‌ಗಳ ಸಮ್ಮೇಳನವನ್ನು (ಎಸಿಸಿ) ನಡೆಸಲಾಗುತ್ತದೆ. ಈ ಬಾರಿಯ ಸಮ್ಮೇಳನದಲ್ಲಿ ಸೇನಾ ಕಮಾಂಡರ್‌ಗಳು ಮತ್ತು ಇತರ ಉನ್ನತ ಅಧಿಕಾರಿಗಳು ಡಿಜಿಟಲ್ ಅಧಿವೇಶನದಲ್ಲಿ ಭಾಗವಹಿಸಿದ್ದರು. ಈ ವರ್ಷದ ಉದ್ಘಾಟನಾ ACC ಏಪ್ರಿಲ್ 17 ರಿಂದ ಏಪ್ರಿಲ್ 21 ರವರೆಗೆ ದೆಹಲಿಯಲ್ಲಿ ನಡೆದಿದ್ದು, ಎಲೆಕ್ಟ್ರಿಕ್ ಜಿಪ್ಸಿಯ ಕುರಿತು ಕೂಡ ಚರ್ಚಿಸಲಾಗಿದೆ.

ಎಲೆಕ್ಟ್ರಿಕ್ (ಇವಿ) ಕಾರುಗಳು ವಿಶ್ವದಾದ್ಯಂತ ಜನಪ್ರಿಯವಾಗಿವೆ. ಪ್ರಪಂಚದ ಬಹುತೇಕ ಎಲ್ಲಾ ವಾಹನ ತಯಾರಕರು ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿದ್ದಾರೆ. ಹೀಗಿರುವಾಗ ಮುಂದಿನ ದಿನಗಳಲ್ಲಿ ಇಂಧನ ಚಾಲಿತ ವಾಹನಗಳ ಪರಿಸ್ಥಿತಿ ಏನು? ಪ್ರಸ್ತುತ ರಸ್ತೆಯಲ್ಲಿರುವ ಓಡುತ್ತಿರುವ ಇಂಧನ ಚಾಲಿತ ವಾಹನಗಳನ್ನು ಏನು ಮಾಡುವುದು ಎಂಬ ಪ್ರಶ್ನೆ ಎದ್ದಿದೆ. ಇದನ್ನು ಪರಿಹರಿಸಲೆಂದೇ ಟ್ಯಾಡ್‌ಪೋಲ್ ಪ್ರಾಜೆಕ್ಟ್‌ಗಳು ಇದ್ದು, ಹಳೆಯ ಇಂಧನ ಚಾಲಿತ ವಾಹನಳನ್ನು ಮರುಬಳಕೆ ಮಾಡಲು ಉಪಯುಕ್ತವಾಗಬಹುದು ಎಂದು ನಂಬಲಾಗಿದೆ.
ವಿಷಯಕ್ಕೆ ಬಂದರೆ ಸಮ್ಮೇಳನದ ಕೊನೆಯ ದಿನ ಮಾರುತಿ ಸುಜುಕಿ ಜಿಪ್ಸಿಯ ರಿಟ್ರೋಫಿಟ್ ಮಾಡಿದ ಎಲೆಕ್ಟ್ರಿಕ್ ಆವೃತ್ತಿಯನ್ನು ಪ್ರದರ್ಶಿಸಲಾಯಿತು. ಇದನ್ನು ಇಂಡಿಯನ್ ಆರ್ಮಿ ಸೆಲ್, IIT-ದೆಹಲಿ, ಮತ್ತು ಟ್ಯಾಡ್‌ಪೋಲ್ ಪ್ರಾಜೆಕ್ಟ್ಸ್ ಹೆಸರಿನ ಸ್ಟಾರ್ಟ್-ಅಪ್ ಈ ವಿಂಟೇಜ್ ಮಿಲಿಟರಿ ಜಿಪ್ಸಿ ಎಸ್‌ಯುವಿಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲು ಸಹಕರಿಸಿದೆ. ಟ್ಯಾಡ್‌ಪೋಲ್ ಪ್ರಾಜೆಕ್ಟ್‌ಗಳ ವೆಬ್‌ಸೈಟ್‌ನ ಪ್ರಕಾರ ಇಂಧನ ಚಾಲಿತ ಜಿಪ್ಸಿಗಳ ಎಂಜಿನ್ ಅನ್ನು ತೆಗೆದುಹಾಕಿ ಕಾರನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸುತ್ತದೆ.
ಟ್ಯಾಡ್ಪೋಲ್ ಪ್ರಾಜೆಕ್ಟ್ಸ್ ಐಷಾರಾಮಿ, ವಿಂಟೇಜ್, ಪ್ಯಾಸೆಂಜರ್ ಮತ್ತು ಲಾಜಿಸ್ಟಿಕ್ ವಾಹನಗಳನ್ನು ಒಳಗೊಂಡಂತೆ ಇಲ್ಲಿಯವರೆಗೆ 15 ವಾಹನಗಳನ್ನು ಮಾರ್ಪಡಿಸಿದೆ. ಪ್ರಸ್ತುತ, ಇದು ಹೆವಿ-ಡ್ಯೂಟಿ ಟ್ರಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಿಲಿಟರಿ ಜಿಪ್ಸಿಗಳಲ್ಲಿ ಕೆಲಸ ಮಾಡುವುದು ಮತ್ತು ಅವುಗಳನ್ನು EV ಗಳಾಗಿ ಪರಿವರ್ತಿಸುವುದು ಟ್ಯಾಡ್‌ಪೋಲ್ ಪ್ರಾಜೆಕ್ಟ್‌ಗಳ ಹೆಚ್ಚುವರಿ ಗರಿಯಾಗಿದೆ. ಸಾರ್ವಜನಿಕರು ಕೂಡ ತಮ್ಮ ಹಳೆಯ ಕಾರುಗಳ ಎಂಜಿನ್‌ಗಳನ್ನು ಎಲೆಕ್ಟ್ರಿಕ್ ಕಿಟ್‌ಗಳಿಗೆ ಅಪ್‌ಗ್ರೇಡ್ ಮಾಡಿಕೊಂಡು ಉಳಿಸಿಕೊಳ್ಳಬಹುದು ಎಂದು ಟ್ಯಾಡ್ಪೋಲ್ ಪ್ರಾಜೆಕ್ಟ್ಸ್ ಹೇಳಿಕೊಂಡಿದೆ.
ರಾಷ್ಟ್ರೀಯ ಮೋಟಾರು ವಾಹನ ಕಾನೂನು ಪ್ರಕಾರ ನಮ್ಮ ವೈಯಕ್ತಿಕ ಕಾರನ್ನು 15 ವರ್ಷಗಳವರೆಗೆ ಬಳಸಬಹುದು. ಈ ಅವಧಿಯನ್ನು ಮೀರಿದ ಬಳಿಕ ಕಾರುಗಳು ವಾತಾವರಣವನ್ನು ತುಂಬಾ ಹಾಣಿಗೊಳಿಸುತ್ತವೆ. ಅಂದರೆ ಹೊಸ ಕಾರುಗಳಿಗೆ ಹೋಲಿಸಿಕೊಂಡರೆ ದುಪ್ಪಟ್ಟು ವೇಗವಾಗಿ ಪರಿಸರವನ್ನು ಕಲುಷಿತಗೊಳಿಸುತ್ತವೆ. ಇದೇ ಕಾರಣದಿಂದಲೇ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2015 ರಲ್ಲಿ ದೆಹಲಿ ಎನ್‌ಸಿಆರ್ ಹೆದ್ದಾರಿಗಳಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳನ್ನು ಅನುಮತಿಸಬಾರದು ಎಂದು ಘೋಷಿಸಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)-ದೆಹಲಿಯಲ್ಲಿ ನೆಲೆಗೊಂಡಿರುವ ಸಂಸ್ಥೆಯನ್ನು 2020 ರಲ್ಲಿ ಜವಾದ್ ಖಾನ್ ಎಂಬುವರು ಸ್ಥಾಪಿಸಿದ್ದರು. ಇದು ಎಲೆಕ್ಟ್ರಿಕ್ ರಿಟ್ರೋಫಿಟ್ಟಿಂಗ್‌ನಲ್ಲಿ ಪರಿಣತಿ ಹೊಂದಿದ್ದು, ಇದು ಎಲೆಕ್ಟ್ರಿಕ್ ಆಗಿ ಪರಿವರ್ತಿಸಿದ ಬಳಿಕ ವಾಹನದ ಜೀವಿತಾವಧಿಯನ್ನು ಏಳು ವರ್ಷಗಳವರೆಗೆ ಹೆಚ್ಚಿಸುತ್ತದೆ ಎಂದು ಹೇಳಿಕೊಂಡಿದೆ. ಎರಡು ವರ್ಷಗಳ ಮೋಟಾರ್ ಗ್ಯಾರಂಟಿ ಮತ್ತು ಐದು ಅಥವಾ ಮೂರು ವರ್ಷಗಳ ಬ್ಯಾಟರಿ ವಾರಂಟಿಯನ್ನು ನೀಡುತ್ತದೆ. ಈ ಮೂಲಕ ವಾಹನವನ್ನು ಹೆಚ್ಚುವರಿಯಾಗಿ 5-7 ವರ್ಷಗಳವರೆಗೆ ಜೀವಿತಾವಧಿಯನ್ನು ವಿಸ್ತರಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications