ಕಳಪೆ ಟೈರ್ ಹೊಂದಿದ್ದರೇ ಎಕ್ಸ್‌ಪ್ರೆಸ್‌ವೇಗೆ ಎಂಟ್ರಿ ಇಲ್ಲ: ಉಲ್ಲಂಘಿಸದರೆ ರೂ. 20,000 ದಂಡ

ಸಾರ್ವಜನಿಕರು ಟೋಲ್ ಪಾವತಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಶ್ಚಿಂತೆಯಿಂದ ದೂರದ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಅದೆಷ್ಟೋ ಮಂದಿ ವಾಹನದ ಸುರಕ್ಷತೆ ಕುರಿತಂತೆ ಪರಿಶೀಲಿಸಬೇಕಾದವುಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಅವುಗಳಲ್ಲಿ ಟೈರ್‌ಗಳು ಕೂಡ ಒಂದು. ಹಾಗಾಗಿಯೇ ನಾಗ್ಪುರ ಗ್ರಾಮೀಣ RTO ಅಪಘಾತಗಳನ್ನು ಕಡಿಮೆ ಮಾಡಲು ಹೊಸ ಅಭಿಯಾನ ಪ್ರಾರಂಭಿಸಿದೆ.

ನಾವು ಯಾವುದೇ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ನಮ್ಮ ವಾಹನಗಳ ಸ್ಥಿತಿಯನ್ನು ಪರಿಶೀಲಿಸುವುದು ಅತ್ಯಗತ್ಯ, ಆದರೆ ನಮ್ಮಲ್ಲಿ ಹಲವರು ಇದನ್ನು ನಿರ್ಲಕ್ಷಿಸುತ್ತಾರೆ. ಇದರಿಂದಾಗಿಯೇ ಹೆಚ್ಚಿನ ಅಪಘಾತಗಳು ಆಗುತ್ತವೆ, ಮುಕ್ಯವಾಗಿ ಕೆಟ್ಟ ಟೈರ್ ಗಳು ಅಪಘಾತಗಳಿಗೆ ಪ್ರಮುಖ ಕಾರಣವೆಂದೇ ಹೇಳಬಹುದು. ಈ ನಿಟ್ಟಿನಲ್ಲಿ ಕೆಟ್ಟ ಟೈರ್ ಹೊಂದಿರುವ ವಾಹನಗಳನ್ನು ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಸಿಗುವ ನಾಗ್ಪುರ ಗ್ರಾಮೀಣ RTO ನಿಷೇಧಿಸಿದ್ದು, ಉಲ್ಲಂಘಿಸುವವರಿಗೆ 20,000 ರೂ. ದಂಡ ವಿಧಿಸುತ್ತಿದೆ.

ಕಳಪೆ ಟೈರ್ ಹೊಂದಿದ್ದರೇ ಎಕ್ಸ್‌ಪ್ರೆಸ್‌ವೇಗೆ ಎಂಟ್ರಿ ಇಲ್ಲ: ಉಲ್ಲಂಘಿಸದರೆ ರೂ. 20,000 ದಂಡ

ಇಲ್ಲಿನ RTO ಫ್ಲೈಯಿಂಗ್ ಸ್ಕ್ವಾಡ್ ವಾಹನಗಳ ಟೈರ್ ಸ್ಥಿತಿಯನ್ನು ಪರಿಶೀಲಿಸಲು ಪ್ರಾರಂಭಿಸಿದೆ. ಇತ್ತೀಚೆಗೆ ಈ ಸ್ಕ್ವಾಡ್ ಕೆಟ್ಟ ಟೈರ್‌ಗಳನ್ನು ಹೊಂದಿರುವ ಮೂರು ವಾಹನಗಳನ್ನು ನಿಲ್ಲಿಸಿ ನಾಗ್ಪುರಕ್ಕೆ ಪ್ರವೇಶ ನೀಡಿಲ್ಲ. ಜೊತೆಗೆ ಚಾಲಕರಿಗೆ ದಂಡ ಕೂಡ ವಿಧಿಸಿದೆ. ಈ ವೇಳೆ ಸುರಿಕ್ಷಿತ ಪ್ರಯಾಣಕ್ಕಾಗಿ ಯಾವುದೇ ವಾಹನವಾಗಲಿ ಅದರ ಟೈರ್‌ಗಳನ್ನು ಒಮ್ಮೆ ಪರಿಶೀಲಿಸಬೇಕು. ಹಾಗೆಯೇ ಟೈರ್‌ಗಳು ಉತ್ತಮ ಆಕಾರದಲ್ಲಿರಬೇಕು. ವಾಹನಗಳ ಇತರ ಭಾಗಗಳಂತೆ ನಿಯಮಿತವಾಗಿ ಟೈರ್‌ಗಳನ್ನು ಕೂಡ ಪರಿಶೀಲಿಸಬೇಕು ಎಂದು ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಿದೆ.

ಇಲ್ಲಿನ ಆರ್‌ಟಿಒ ಟೈರ್‌ನತ್ತ ಹೆಚ್ಚಿನ ಗಮನಹರಿಸಲು ಮುಖ್ಯ ಕಾರಣವೆಂದರೆ ಈ ಎಕ್ಸ್‌ಪ್ರೆಸ್‌ವೇನಲ್ಲಿ ಈ ಹಿಂದೆ ಟೈರ್ ಕಳಪೆ ಗುಣಮಟ್ಟದಿಂದಾಗಿ ಅನೇಕ ಅಪಘಾತಗಳಾಗಿವೆ. ಅಧಿಕಾರಿಗಳ ಪ್ರಕಾರ ಈ ಎಕ್ಸ್‌ಪ್ರೆಸ್‌ವೇನಲ್ಲಿ ಶೇ 15 ರಷ್ಟು ಫ್ಲಾಟ್ ಟೈರ್‌ಗಳು ಆಗಿದ್ದರೆ, ಟೈರ್ ಸ್ಫೋಟಗಳ ದರವು ಶೇ 12 ರಷ್ಟಿದೆ. ಈ ಅಂಕಿಅಂಶಗಳು ವಾಹನಗಳ ಟೈರ್ ನಿರ್ವಹಣೆಯಲ್ಲಿ ನಮ್ಮ ನಿರ್ಲಕ್ಷ್ಯವನ್ನು ತೋರುತ್ತವೆ. ಕಳೆದ ನಾಲ್ಕು ತಿಂಗಳಲ್ಲಿ ಈ ಮಹಾಮಾರ್ಗದಲ್ಲಿ 22 ಅಪಘಾತಗಳು ಸಂಭವಿಸಿದ್ದು, 36 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಕಳಪೆ ಟೈರ್ ಹೊಂದಿದ್ದರೇ ಎಕ್ಸ್‌ಪ್ರೆಸ್‌ವೇಗೆ ಎಂಟ್ರಿ ಇಲ್ಲ: ಉಲ್ಲಂಘಿಸದರೆ ರೂ. 20,000 ದಂಡ

ವಾಹನ ತಯಾರಕರು ಕೂಡ ಟೈರ್ ಒತ್ತಡವನ್ನು ಅಗಾಗ್ಗೆ ಉತ್ತಮವಾಗಿ ನಿರ್ವಹಿಸಲು ಹೇಳುತ್ತಾರೆ. ಕಡಿಮೆ ಗಾಳಿ ತುಂಬಿದ ಟೈರ್‌ಗಳು ಬಿಸಿಯಾಗಬಹುದು, ಹಾಗೆಯೇ ಅತಿಯಾಗಿ ಗಾಳಿ ತುಂಬಿದ ಟೈರ್‌ಗಳು ಸಿಡಿಯಬಹುದು. ಅದರಲ್ಲೂ ಬೇಸಿಗೆಯಲ್ಲಿ ದೂರದ ಪ್ರಯಾಣ ಕೈಗೊಂಡರೆ ವಾಹನದ ಇತರ ಭಾಗಗಳಂತೆ ಟೈರ್‌ಗಳನ್ನು ಕೂಡ ಪರಿಶೀಲಿಸಬೇಕು. ಹಾಗೆಯೇ ಅತಿಯಾಗಿ ಟೈರ್‌ಗೆ ಗಾಳಿ ತುಂಬದೆ ಹಾಗೂ ತೀರಾ ಕಡಿಮೆ ಗಾಳಿಯಿರದಂತೆ ನೋಡಿಕೊಳ್ಳುವುದು ಉತ್ತಮ ಎಂದು ವಾಹನ ತಯಾರಕರು ಕೂಡ ಹೇಳುತ್ತಾರೆ.

ಎಕ್ಸ್‌ಪ್ರೆಸ್‌ವೇಗಳಲ್ಲಿ ಚಾಲನೆ ಮಾಡುವಾಗ, ವೇಗದ ಮಿತಿ ಹೆಚ್ಚಾಗಿರುತ್ತದೆ. ವಾಹನಗಳು ಸಾಮಾನ್ಯವಾಗಿ 100 ಕಿ.ಮೀ ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತವೆ. ಈ ವೇಳೆ ವಾಹನಕ್ಕೆ ಸಾಕಷ್ಟು ಹಿಡಿತವನ್ನು ಒದಗಿಸಲು ಟೈರ್‌ಗಳು ಕನಿಷ್ಟ 1.5 ಮಿ.ಮೀ ಚಕ್ರದ ಹೊರಮೈಯನ್ನು ಹೊಂದಿರಬೇಕು. ವಾಹನವನ್ನು ಓವರ್‌ಲೋಡ್ ಮಾಡುವುದರಿಂದ ಟೈರ್‌ಗಳ ಮೇಲಿನ ಹೆಚ್ಚುವರಿ ಒತ್ತಡದಿಂದಾಗಿ ಟೈರ್ ಒಡೆದು ಅಪಘಾತಗಳು ಸಂಭವಿಸಬಹುದು. ಆದ್ದರಿಂದ, ಓವರ್‌ಲೋಡ್ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು.

ಕಳಪೆ ಟೈರ್ ಹೊಂದಿದ್ದರೇ ಎಕ್ಸ್‌ಪ್ರೆಸ್‌ವೇಗೆ ಎಂಟ್ರಿ ಇಲ್ಲ: ಉಲ್ಲಂಘಿಸದರೆ ರೂ. 20,000 ದಂಡ

ಇನ್ನು ಟೈರ್ ಸ್ಥಿತಿಯು ಕಳಪೆಯಾಗಿದ್ದರೆ, ಅದು ಬ್ರೇಕಿಂಗ್ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ. ವಾಹನವು ಸ್ಕಿಡ್ ಆಗುವ ಅಥವಾ ನಿಯಂತ್ರಣವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು. ಅಂತಹ ಎಕ್ಸ್‌ಪ್ರೆಸ್‌ವೇಗಳಲ್ಲಿ ನಿರಂತರ ಚಾಲನೆಯಿಂದಾಗಿ ಟೈರ್‌ಗಳು ಬಿಸಿಯಾಗಲು ಕಾರಣವಾಗುತ್ತದೆ. ಇದು ಟೈರ್ ಸ್ಫೋಟಕ್ಕೆ ಕಾರಣವಾಗುತ್ತದೆ. ಇವೆಲ್ಲವು ದೂರದ ಪ್ರಯಾಣ ಮಾಡಲು ಬಯಸುವ ಪ್ರಯಾಣಿಕರು ನೆನಪಿನಲ್ಲಿಡಬೇಕಾದ ಮುಖ್ಯ ಅಂಶಗಳಾಗಿವೆ. ಮುಖ್ಯವಾಗಿ ಹೊರ ಹೋಗುವ ಮುಖ್ಯ ಟೈರ್ ಅನ್ನು ಒಮ್ಮೆ ಪರಿಶೀಲಿಸಿದರೆ ಉತ್ತಮ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, April 19, 2023, 12:30 [IST]
English summary
Expressway with bad tires no entry here is why
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+