ಪೂಜೆ ಸಲ್ಲಿಸಿ ರಾಯಲ್ ಆಗಿ ಫೋರ್ಸ್ ವ್ಯಾನ್‌ಗಳ ವಿತರಣೆ ಪಡೆದುಕೊಂಡ ಉದಯಪುರದ ರಾಜಕುಮಾರ

ಭಾರತದಲ್ಲಿ ನೂರಾರು ರಾಜಮನೆತನೆಗಳು ರಾಜ್ಯಭಾರ ಮಾಡಿದ್ದಾರೆ. ಇನ್ನು ಭಾರತದಲ್ಲಿ ಉಳಿದಿರುವ ಕೆಲವು ರಾಜಮನೆತನದ ಸದಸ್ಯರುಗಳಲ್ಲಿ, ಉದಯಪುರದ ಲಕ್ಷ್ಯರಾಜ್ ಸಿಂಗ್ ಮೇವಾರ್ ಪ್ರಮುಖರು. ಇತ್ತೀಚೆಗೆ ಮೇವಾರದ ರಾಜಮನೆತನದವರು ಹೊಸ ಎರಡೂ ಫೋರ್ಸ್ ಅರ್ಬೇನಿಯಾ ವಾಹನಗಳ ವಿತರಣೆಯನ್ನು ಪಡೆದುಕೊಂಡಿದ್ದಾರೆ. ಈ ಪ್ರೀಮಿಯಂ ಆಕರ್ಷಣೆಯ ಅರ್ಬೇನಿಯಾ ವ್ಯಾನ್ ರಾಜಮನೆತನಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ.

ಗ್ರಾಹಕರಿಗೆ ಪ್ರೀಮಿಯಂ ಪ್ರಯಾಣದ ಅನುಭವವನ್ನು ಒದಗಿಸುವ ಉದ್ದೇಶದೊಂದಿಗೆ, ಫೋರ್ಸ್ ಮೋಟಾರ್ಸ್ ಅರ್ಬೇನಿಯಾ ಎಂಬ ಪ್ರತ್ಯೇಕ ಸಬ್-ಬ್ರ್ಯಾಂಡ್ ಅನ್ನು ಹುಟ್ಟುಹಾಕಿದೆ. ಇದನ್ನು ಮೊದಲು 2020ರ ಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿತು. ಇದು T1N ಎಂಬ ಕೋಡ್ ನೇಮ್ ಅನ್ನು ಹೊಂದಿತ್ತು. ಈ ವ್ಯಾನ್ ಅನ್ನು ICE ಮತ್ತು EV ರೂಪದಲ್ಲಿ ಪ್ರದರ್ಶಿಸಲಾಯಿತು. ಫೋರ್ಸ್ ಮೋಟಾರ್ಸ್(Force Motors) ತನ್ನ ಬಹುನಿರೀಕ್ಷಿತ ಈ ಅರ್ಬೇನಿಯಾ ವ್ಯಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಿತು.

ಫೋರ್ಸ್ ವ್ಯಾನ್‌ಗಳ ವಿತರಣೆ ಪಡೆದುಕೊಂಡ ಉದಯಪುರದ ರಾಜಕುಮಾರ

ಫೋರ್ಸ್ ಅರ್ಬೇನಿಯಾ ವ್ಯಾನ್‌ನ ಉದ್ದವನ್ನು ಆಧರಿಸಿ ಮೂರು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಇದು ಶಾರ್ಟ್ ವೀಲ್‌ಬೇಸ್, ಮೀಡಿಯಮ್ ವೀಲ್‌ಬೇಸ್ ಮತ್ತು ಲಾಂಗ್ ವೀಲ್‌ಬೇಸ್ ಆಗಿದೆ. ಈ ಫೋರ್ಸ್ ವ್ಯಾನ್‌ನಲ್ಲಿ ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ. ಫೋರ್ಸ್ ಅರ್ಬೇನಿಯಾ ವ್ಯಾನ್‌ನ ಶಾರ್ಟ್ ವೀಲ್‌ಬೇಸ್ ರೂಪಾಂತರವು ಚಾಲಕ ಮತ್ತು 10 ವಯಸ್ಕರ ಸೀಟ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಅರ್ಬೇನಿಯಾ ವ್ಯಾನ್‌ನ ಈ ರೂಪಾಂತರದ ವೀಲ್‌ಬೇಸ್ ಕೇವಲ 3,350 ಎಂಎಂ ಹೊಂದಿದೆ.

ಮತ್ತೊಂದೆಡೆ, ಮೀಡಿಯಮ್ ವೀಲ್ ಬೇಸ್ ರೂಪಾಂತರವು ಚಾಲಕ ಮತ್ತು 13 ವಯಸ್ಕರ ಸೀಟ್ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಈ ರೂಪಾಂತರದ ವೀಲ್‌ಬೇಸ್ ಕೇವಲ 3,615 ಎಂಎಂ ಇರುವ ಅರ್ಬೇನಿಯಾ ವ್ಯಾನ್‌ನ ಶಾರ್ಟ್ ವೀಲ್‌ಬೇಸ್ ರೂಪಾಂತರಕ್ಕಿಂತ ಕೇವಲ 265 ಎಂಎಂ ಉದ್ದವಾಗಿದೆ. ಇನ್ನು ಫೋರ್ಸ್ ಅರ್ಬೇನಿಯಾ ವ್ಯಾನ್‌ನ ಲಾಂಗ್ ವೀಲ್‌ಬೇಸ್ ರೂಪಾಂತರವು ಚಾಲಕ ಸೇರಿದಂತೆ 18 ವಯಸ್ಕರಿಗೆ ಸಂಪೂರ್ಣ ಆರಾಮವಾಗಿ ಕುಳಿತುಕೊಳ್ಳಬಹುದು. ಮಧ್ಯಪ್ರದೇಶದ ಇಂದೋರ್‌ನಲ್ಲಿ ಆಯೋಜಿಸಲಾದ ವಿತರಕರ ಸಭೆಯಲ್ಲಿ ಇತ್ತೀಚೆಗೆ ಫೋರ್ಸ್ ಅರ್ಬೇನಿಯಾ ವ್ಯಾನ್ ಅನ್ನು ಪ್ರದರ್ಶಿಸಲಾಯಿತು

ಫೋರ್ಸ್ ಮೋಟಾರ್ಸ್ ಆಯೋಜಿಸಿದ ಈ ಸಮಾರಂಭದಲ್ಲಿ, ಆಯ್ದ ಡೀಲರ್‌ಗಳು ಅರ್ಬೇನಿಯಾವನ್ನು ತಯಾರಿಸಲು ಮೀಸಲಾಗಿರುವ ಹೊಸ ಅತ್ಯಾಧುನಿಕ ಸೌಲಭ್ಯದ ಪ್ರವಾಸವನ್ನು ಅವಕಾಶವನ್ನು ನೀಡಿದರು. ಇನ್ನು ವ್ಯಾನ್‌ನ ಟೆಸ್ಟ್ ಡ್ರೈವ್‌ನ ಅವಕಾಶವನ್ನು ಸಹ ನೀಡಲಾಯಿತು. ಫೋರ್ಸ್ ಅರ್ಬೇನಿಯಾ ವ್ಯಾನ್ ಸಾರ್ವಜನಿಕರಿಗೆ ಪ್ರದರ್ಶಿಸಿರುವುದು ಇದೇ ಮೊದಲಲ್ಲ. ಈ ಹಿಂದೆ, ಫೋರ್ಸ್ ಅರ್ಬೇನಿಯಾವನ್ನು 2020 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು. ದುರದೃಷ್ಟವಶಾತ್, ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಅರ್ಬೇನಿಯಾ ವ್ಯಾನ್‌ನ ಅಭಿವೃದ್ಧಿ ವಿಳಂಬವಾಯಿತು.

ಫೋರ್ಸ್ ಮೋಟಾರ್ಸ್ ಕಂಪನಿಯ ಹೊಸ ಅರ್ಬೇನಿಯಾ ವ್ಯಾನ್ ದೇಶದ ಮೊದಲ ಸಂಪೂರ್ಣ ಗ್ರೌಂಡ್-ಅಪ್ ಮಾಡ್ಯುಲರ್ ಮೊನೊಕಾಕ್ ಪ್ಯಾನಲ್ ವ್ಯಾನ್ ಪ್ಲಾಟ್‌ಫಾರ್ಮ್ ಎಂದು ಹೇಳಿಕೊಂಡಿದೆ. ಅದರ ಮೇಲೆ, ಫೋರ್ಸ್ ಅರ್ಬೇನಿಯಾವು ಅನೇಕ ಮೊದಲ-ಇನ್-ಸೆಗ್ಮೆಂಟ್ ವೈಶಿಷ್ಟ್ಯಗಳನ್ನು ಹೋಸ್ಟ್ ಮಾಡುವುದಾಗಿ ಹೇಳಿಕೊಂಡಿದೆ. ಫೋರ್ಸ್ ಅರ್ಬೇನಿಯಾದ ಅತ್ಯಂತ ಆಸಕ್ತಿದಾಯಕ ಮತ್ತು ಪ್ರಮುಖ ಯುಎಸ್‌ಪಿ ಎಂದರೆ ಈ ಮಾದರಿಯು ಹೊಸ ಕ್ರ್ಯಾಶ್, ರೋಲ್‌ಓವರ್ ಮತ್ತು ಪಾದಚಾರಿ ಸುರಕ್ಷತಾ ನಿಯಮಗಳ ಅನುಸರಣೆಯನ್ನು ಸಾಧಿಸಲು ಭಾರತದಲ್ಲಿ ಮೊದಲ ವ್ಯಾನ್ ಆಗಿದೆ.

ಇದರ ಸಲುವಾಗಿ, ಫೋರ್ಸ್ ಮೋಟಾರ್ಸ್ ಹೊಸ ಅರ್ಬೇನಿಯಾ ವ್ಯಾನ್ ಅನ್ನು ಹಿಲ್ ಹೋಲ್ಡ್ ಅಸಿಸ್ಟ್, ESP, ABS, EBD, ETDC, ಆಲ್-ವೀಲ್ ವೆಂಟಿಲೇಟೆಡ್ ಡಿಸ್ಕ್ ಬ್ರೇಕ್‌ಗಳು, ಡ್ಯುಯಲ್ ಏರ್‌ಬ್ಯಾಗ್‌ಗಳು ಮತ್ತು ಹೆಚ್ಚಿನವುಗಳಂತಹ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ. ಈ ವ್ಯಾನ್ ನಲ್ಲಿ ಟೆಲಿಸ್ಕೋಪಿಕ್ ಹೊಂದಾಣಿಕೆಯ ಸ್ಟೀಯರಿಂಗ್ ಕಾಲಮ್ ನಂತಹ ಅತ್ಯಾಧುನಿಕ ವಿನ್ಯಾಸಗೊಳಿಸಲಾದ ಕಾಕ್‌ಪಿಟ್, ಡ್ಯಾಶ್‌ಬೋರ್ಡ್-ಮೌಂಟೆಡ್ ಗೇರ್ ಲಿವರ್, ಅಂತರ್ನಿರ್ಮಿತ ಬ್ಲೂಟೂತ್ ಮತ್ತು ಕ್ಯಾಮೆರಾ ಇನ್‌ಪುಟ್‌ಗಳೊಂದಿಗೆ ದೊಡ್ಡ 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಂ ಅನ್ನು ಹೊಂದಿದೆ.

ಫೋರ್ಸ್ ಅರ್ಬೇನಿಯಾದಲ್ಲಿ ಅತ್ಯಂತ ವಿಶ್ವಾಸಾರ್ಹ, ಮರ್ಸಿಡಿಸ್ ಮೂಲದ FM 2.6 CR ED TCIC ಡೀಸೆಲ್ ಎಂಜಿನ್ ಆಗಿದೆ. ಈ ಎಂಜಿನ್ 114 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸದ್ಯಕ್ಕೆ, ಈ ಈ 2.6-ಲೀಟರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಖಾಸಗಿ ಖರೀದಿದಾರರ ಅವಶ್ಯಕತೆಗಳನ್ನು ಪೂರೈಸಲು ಫೋರ್ಸ್ ಮೋಟಾರ್ಸ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಪರಿಚಯಿಸುತ್ತದೆಯೇ ಎಂದು ನಮಗೆ ಖಚಿತವಿಲ್ಲ.

More from DriveSpark

Article Published On: Wednesday, February 15, 2023, 14:30 [IST]
English summary
Force urbania delivery to udaipur prince lakshyaraj singh details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+