ಟಾಟಾ-ಫೋರ್ಡ್‌ನ ಗರಿಷ್ಟ ಸುರಕ್ಷತೆಯ ಎರಡು ಕಾರುಗಳು ಡಿಕ್ಕಿಯಾದರೆ?: ಫಲಿತಾಂಶದ ನೋಡಿ...
ಟಾಟಾ ಮೋಟಾರ್ಸ್ ಹಾಗೂ ಫೋರ್ಡ್ ತಮ್ಮ ವಾಹನಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ತಮ್ಮ ಪ್ರಯಾಣಿಕರಿಗೆ ಗರಿಷ್ಟ ಸುರಕ್ಷತೆಯನ್ನು ಒದಗಿಸುವಲ್ಲಿ ಎರಡೂ ಕಂಪನಿಗಳ ಕಾರುಗಳು ಜನಪ್ರಿಯತೆ ಪಡೆದಿವೆ. ಇತ್ತೀಚೆಗೆ ಈ ಎರಡೂ ಕಂಪನಿಗಳ ಪ್ರಮುಖ ಮಾದರಿಗಳಾದ ಫೋರ್ಡ್ ಎಂಡೀವರ್ ಮತ್ತು ಟಾಟಾ ನೆಕ್ಸಾನ್ ನಡುವೆ ಅಪಘಾತವಾಗಿದೆ.
ಈ ಹಿಂದೆಯೂ ಎರಡೂ SUVಗಳು ಹಲವಾರು ಅಪಘಾತಗಳಲ್ಲಿ ಕಾಣಿಸಿಕೊಂಡಿವೆ, ಘಟನೆಗಳಲ್ಲಿ ತಮ್ಮ ಪ್ರಯಾಣಿಕರನ್ನು ಸುರಕ್ಷಿತವಾಗಿಡುವಲ್ಲಿ ಎರಡೂ ಕಾರುಗಳು ಸೈ ಎನಿಸಿಕೊಂಡಿವೆ. ಈ ಮೂಲಕ ಅವುಗಳ ಬಲವಾದ ನಿರ್ಮಾಣ ಗುಣಮಟ್ಟ ಎಂಥವರನ್ನೂ ಆಶ್ಚರ್ಯಗೊಳಿಸುತ್ತದೆ. ನೆಕ್ಸಾನ್ ಮತ್ತು ಎಂಡೀವರ್ ಎರಡನ್ನೂ ಒಳಗೊಂಡ ಇತ್ತೀಚಿನ ಅಪಘಾತವು ಸುರಕ್ಷತೆಯ ಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಹಾಗೆಯೇ ಯಾವ ವಾಹನ ಹೆಚ್ಚು ಹಾನಿಗೆ ಒಳಗಾಗಿದೆ ಎಂಬುದನ್ನು ಕೂಡ ಈ ಅಪಘಾತದಲ್ಲಿ ನೋಡಬಹುದು.

ಇತ್ತೀಚಿನ ಅಪಘಾತವು ಮಹಾರಾಷ್ಟ್ರದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಈ ಕುರಿತ ವಿವರಗಳನ್ನು ಪ್ರತೀಕ್ ಸಿಂಗ್ ಎಂಬುವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವೀಡಿಯೊದಲ್ಲಿ, ಟಾಟಾ ನೆಕ್ಸಾನ್ EV ಮತ್ತು ಫೋರ್ಡ್ ಎಂಡೀವರ್ ಹೈಸ್ಪೀಡ್ ಕ್ರ್ಯಾಶ್‌ನಲ್ಲಿ ಹೇಗೆ ಸಿಲುಕಿಕೊಂಡಿವೆ ಎಂಬುದನ್ನು ವಿವರಿಸಲಾಗಿದೆ, ಇದರಿಂದಾಗಿ ಎರಡೂ SUV ಗಳ ಮುಂಭಾಗದ ತುದಿಗಳು ಭಾರೀ ಹಾನಿಗೆ ಒಳಗಾಗಿವೆ. ಆದರೂ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೇ ಸುರಕ್ಷಿತವಾಗಿ ಹೊರಬಂದಿರುವುದು ವಿಶೇಷ.
ಈ ಅಪಘಾತದ ಪ್ರತ್ಯಕ್ಷದರ್ಶಿಗಳ ಪ್ರಕಾರ, ವೇಗವಾಗಿ ಬಂದ ಕಪ್ಪು ಬಣ್ಣದ ಫೋರ್ಡ್ ಎಂಡೀವರ್ ರಸ್ತೆ ಛೇದಕವನ್ನು (Road intersection) ದಾಟಲು ಪ್ರಯತ್ನಿಸುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಬಿಳಿ ಬಣ್ಣದ ಟಾಟಾ ನೆಕ್ಸಾನ್ EV ಮತ್ತೊಂದು ಬದಿಯಿಂದ ಸಿಗ್ನಲ್ ಜಂಪ್ ಮಾಡಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. YouTube ವೀಡಿಯೊದಲ್ಲಿ ತೋರಿಸಿರುವ ದೃಶ್ಯಗಳಲ್ಲಿ, ಟಾಟಾ ನೆಕ್ಸನ್ ಮತ್ತು ಫೋರ್ಡ್ ಎಂಡೀವರ್ ಎರಡರ ಮುಂಭಾಗದ ಪ್ರೊಫೈಲ್‌ಗಳು ಕೆಟ್ಟದಾಗಿ ಹಾನಿಗೊಳಗಾಗಿರುವುದನ್ನು ನಾವು ನೋಡಬಹುದು.

ಟಾಟಾ ನೆಕ್ಸಾನ್ EV ಯ ಸಂಪೂರ್ಣ ಪವರ್‌ಟ್ರೇನ್ ಬೇ ಹಾನಿಗೆ ಒಳಗಾದಂತೆ ಕಾಣುತ್ತಿದೆ. ಮುಂಭಾಗದ ವಿಂಡ್ ಸ್ಕ್ರೀನ್ ಕೂಡ ಅಪಘಾತದಲ್ಲಿ ಮುರಿದಿದೆ. ಆದರೂ, ನೆಕ್ಸಾನ್ EV ಯ ಮುಂಭಾಗದ ಬಲವಾದ ನಿರ್ಮಾಣವು ಡಿಕ್ಕಿಯ ಪ್ರಭಾವವನ್ನು ಉತ್ತಮವಾಗಿ ನಿಭಾಯಿಸಿದೆ. ನೆಕ್ಸಾನ್ EV ಯ ಮುಂಭಾಗದ ಏರ್ ಬ್ಯಾಗ್‌ಗಳು ಈ ವೇಳೆ ತೆರೆದುಕೊಂಡಿವೆ ಎಂಬ ಅಂಶವನ್ನು ಹೊರತುಪಡಿಸಿ, ಮುಂಭಾಗದ ಬಾನೆಟ್ ಮೀರಿ ಯಾವುದೇ ಹಾನಿಯು ಕಾಣುತ್ತಿಲ್ಲ.
ಈ ಅಪಘಾತದಲ್ಲಿ ಭಾಗಿಯಾಗಿರುವ ಫೋರ್ಡ್ ಎಂಡೀವರ್ ಮುಂಭಾಗದ ಚಕ್ರದ ಭಾಗವು ದೊಡ್ಡ ಹಾನಿಯನ್ನು ಎದುರಿಸಿದೆ, ಮುಂಭಾಗದ ಬಂಪರ್, ಹೆಡ್‌ಲೈಟ್, ಫೆಂಡರ್ ಮತ್ತು ಡೋರ್ ಪ್ಯಾನೆಲ್‌ಗಳು ಸಂಪೂರ್ಣವಾಗಿ ಹಾನಿಗೆ ಒಳಗಾಗಿರುವುದನ್ನು ನಾವು ನೋಡಬಹುದು. ಪರಿಣಾಮವು ಎಷ್ಟು ತೀವ್ರವಾಗಿತ್ತು ಎಂದರೆ ಎಂಡೀವರ್‌ನ ಎಡ ಮುಂಭಾಗದ ಚಕ್ರವು ಮುರಿದು ಬಿದ್ದಿದೆ. ಅಪಘಾತ ಆಗುತ್ತಿದ್ದಂತೆ ಕ್ಷಣಾರ್ಧದಲ್ಲಿ SUV ಯ ಸೈಡ್ ಮತ್ತು ಕರ್ಟನ್ ಏರ್ ಬ್ಯಾಗ್‌ಗಳು ಸಮಯಕ್ಕೆ ತೆರೆದುಕೊಂಡಿವೆ.
ಅಪಘಾತದ ತೀವ್ರತೆಯ ಹೊರತಾಗಿಯೂ, ಎಂಡೀವರ್‌ನಲ್ಲಿದ್ದವರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಟಾಟಾ ನೆಕ್ಸಾನ್ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಅತ್ಯಧಿಕ 5-ಸ್ಟಾರ್ ರೇಟಿಂಗ್ ಗಳಿಸಿದ ಮೊದಲ ಭಾರತ ನಿರ್ಮಿತ ವಾಹನವಾಗಿದೆ. Nexon EV ಅನ್ನು ಇನ್ನೂ ಗ್ಲೋಬಲ್ NCAP ಕ್ರ್ಯಾಶ್ ಪರೀಕ್ಷೆಗಳಲ್ಲಿ ಪರೀಕ್ಷಿಸಲಾಗಿಲ್ಲ, ಏಕೆಂದರೆ ಅದು ತನ್ನ ಸಂಪೂರ್ಣ ದೇಹವನ್ನು Nexon ನ ICE ಆವೃತ್ತಿಯೊಂದಿಗೆ ಹಂಚಿಕೊಳ್ಳುತ್ತದೆ, ಹಾಗಾಗಿ ಅದೇ ಸುರಕ್ಷತಾ ರೇಟಿಂಗ್‌ಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಇನ್ನು ಏಷ್ಯನ್ NCAP ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಫೋರ್ಡ್ ಎಂಡೀವರ್ ಅನ್ನು ಪರೀಕ್ಷಿಸಲಾಗಿದ್ದು, ಇದು ಶ್ಲಾಘನೀಯ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications