ಸ್ವಾತಂತ್ರ್ಯ ಸಂಭ್ರಮ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಐಕಾನಿಕ್ ಕಾರುಗಳು

77ನೇ ಸ್ವಾತಂತ್ಯ ಸಂಭ್ರಮದಲ್ಲಿರುವಾಗ ದೇಶ ಕಾಯುವ ಯೋಧರ ವಾಹನಗಳ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಣ. ಸೇನೆ ಎಂದರೆ ಸೈನಿಕರು ಮದ್ದುಗುಂಡುಗಳಲ್ಲ, ಕೇವಲ ಶಸ್ತ್ರಾಸ್ತಗಳು ಮಾತ್ರವಲ್ಲ. ಸೇನಾ ವಾಹನಗಳು ಕೂಡ ಒಂದು ಭಾಗವಾಗಿದೆ. ಸೇನ ವಾಹನಗಳೆಂದರೆ ಯುದ್ಧವಿಮಾನಗಳು, ದೊಡ್ಡ ದೊಡ್ಡ ಟ್ಯಾಂಕರ್‌ಗಳು, ಬಲಿಷ್ಟವಾದ ಟ್ರಕ್‌ ಹಾಗೂ ಬಗೆ ಬಗೆಯ ಮಿಲಿಟರಿ ಟ್ರಕ್‌ಗಳು ನೆನಪಾಗುತ್ತದೆ.

ಆದರೆ ಇದೆಲ್ಲದರ ಜೊತೆಗೆ ಭಾರತೀಯ ಸೇನೆಯು (Indian Army) ಹಲವಾರು ನಾಗರೀಕಾ ವಾಹನಗಳನ್ನು ಸಹ ಬಳಸುತ್ತಾ ಬಂದಿದೆ ಎಂದರೆ ನೀವು ನಂಬಲೇ ಬೇಕು. ಹೌದು, ನಾಗರೀಕ ವಾಹನಗಳೆಂದರೆ ನಾಗರೀಕರು ತಮ್ಮ ಅವಶ್ಯಕತೆಗಳನ್ನು ಪೂರೈಸಲು ಬಳಸುವ ವಾಹನಗಳಾಗಿವೆ. ಅದರಲ್ಲಿ ಬಲಿಷ್ಟವಾದ, ಉತ್ತಮ ಆನ್‌ರೋಡ್‌ ಮತ್ತು ಆಫ್‌ ರೋಡ್‌ ಪರ್ಫಾಮೆನ್ಸ್‌ಗಳನ್ನು ನೀಡುವಂತಹ ವಾಹನಗಳನ್ನು ಭಾರತೀಯ ಸೇನೆಯು ಬಳಸಿದೆ. ಹೀಗೆ ಬಳಸಿದ ಕೆಲವೊಂದು ಪ್ರಮುಖ ಕಾರುಗಳ ಮಾಹಿತಿ. ಇಲ್ಲಿದೆ.

 Indian Army

ಹಿಂದುಸ್ಥಾನ್‌ ಅಂಬಾಸಿಡರ್: ದಶಕಗಳ ಕಾಲ ಭಾರತೀಯ ಸೇನೆಯ ಸವಾರಕನಾಗಿದ್ದ ನಂಬಿಕಸ್ಥ ಅಂಬಾಸಿಡರ್ (Ambassador) ಕಾರ್ ಸಹ ಭಾರತೀಯ ಸೇನೆ ಬಳಸುತ್ತಿತ್ತು. ದೇಶ ಕಂಡ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಅಂಬಾಸಿಡರ್‌ ಸಹ ಒಂದು. ಒಂದು ಕಾಲದಲ್ಲಿ ದೇಶದ ಹೆದ್ದಾರಿಗಳನ್ನು ಆಳಿದ್ದ ಈ ಕಾನ್ನು ಸಹ ಭಾರತೀಯ ಸೇನೆಯು ತಮ್ಮ ಅವಶ್ಯಕತೆಗಳನ್ನು ಪೂರೈಸಲು ಬಳಸುತ್ತಿದ್ದರು.

ಈ ಕಾರು ಆಫ್‌ರೋಡ್‌ ನಲ್ಲಿ ಬಳಸಲು ಉಪಯೋಗಿಸಿಕ್ಕೊಳ್ಳಲು ಅಷ್ಟೊಂದು ಸೂಕ್ತವಾಗಿರಲಿಲ್ಲ, ಆದರೂ ಇದನ್ನು ಇತರ ಕೆಲಸಗಳಿಗಾಗಿ ಸೇನೆಯಲ್ಲಿ ಬಳಸಲಾಗುತ್ತಿತ್ತು. ಅದೊಂದು ಕಾಲದಲ್ಲಿ ಅಂಬಾಸಿಡರ್ ಕಾರು ಭಾರತದ ರಸ್ತೆಗಳನ್ನಾಳಿದ ರಾಜ. 5 ದಶಕಗಳಿಗೂ ಹೆಚ್ಚು ಕಾಲ ಅಂಬಾಸಿಡರ್ ಕಾರು ರಸ್ತೆಗಳನ್ನಾಳಿದ ರಾಜ ಎಂದರೆ ಖಂಡಿತಾ ತಪ್ಪಾಗಲ್ಲ. ಕ್ಲಾಸಿಕ್ ಕಾರು ಎಂಬ ಕಲ್ಪನೆಯೊಂದಿಗೆ ಜನರ ಮನದಲ್ಲಿ ಒಂದು ರೀತಿಯ ಭಾವನಾತ್ಮಕ ನಂಟನ್ನು ಹೊಂದಿದೆ.

ಮಾರುತಿ ಜಿಪ್ಸಿ: ಭಾರತೀಯ ಮಾರುಕಟ್ಟೆಯಲ್ಲಿ ಆಫ್‌ರೋಡ್‌ ಪ್ರೀಯರ ಅಚ್ಚುಮೆಚ್ಚಿನ ವಾಹನವಾಗಿತ್ತು ಈ ಮಾರುತಿ ಸುಜುಕಿ ಜಿಮ್ನಿ. ಈ ವಾಹನವನ್ನು ಮೊದಲಿಗೆ 1991 ರಲ್ಲಿ ಪರಿಚಯಿಸಲಾಗಿತ್ತು. ವರ್ಷಗಳು ಕಳೆದಂತೆ ಈ ಕಾರು ತನ್ನ ಜನಪ್ರಿಯತೆಯನ್ನು ಹೆಚ್ಚಿಸುತ್ತಲೇ ಹೋಯಿತು. ಲೈಟ್‌ವೈಟ್‌ ಕಾಂಪಾಕ್ಟ್‌ ಎಸ್‌ಯುವಿ ಆಗಿದ್ದ ಜಿಪ್ಸಿ, ರೋಡುಗಳಿಲ್ಲದ ಕಷ್ಟಕರ ಸ್ಥಳಗಳಲ್ಲಿಯೂ ಭಾರತೀಯ ಸೇನೆಗೆ ತನ್ನ ಸೇವೆಯನ್ನು ಒದಗಿಸುತ್ತಿದೆ.

ಭಾರತದ ರಸ್ತೆಗಳಲ್ಲಿ 34 ವರ್ಷಗಳ ಕಾಲ ರಾಜನಾಗಿ ಮೆರೆದಿದ್ದ ಮಾರುತಿ ಸುಜುಕಿ ಜಿಪ್ಸಿಯನ್ನು ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಮಾರುತಿ ಸುಜುಕಿ ಕಂಪನಿಯ ಈ ಜಿಪ್ಸಿ ಆಫ್ ರೋಡ್ ಪ್ರಿಯರ ಮೆಚ್ಚಿನ ಮಿನಿ ಎಸ್‍ಯುವಿಯಾಗಿತ್ತು. ಅಲ್ಲದೇ ಈ ಜಿಪ್ಸಿ ಭಾರತೀಯ ಸೇನೆಯ ಮೆಚ್ಚಿನ ವಾಹನವಾಗಿದೆ. ಜಿಪ್ಸಿಯನ್ನು ನಿಲ್ಲಿಸಿದ ನಂತರವೂ, ಮಾರುತಿ ಸುಜುಕಿಯು ಹಗುರವಾದ ಪೆಟ್ರೋಲ್ 4X4 ಜಿಪ್ಸಿಯನ್ನು ಭಾರತೀಯ ಸೇನೆಗೆ ಪ್ರತ್ಯೇಕವಾಗಿ ತಯಾರಿಸುವುದನ್ನು ಮುಂದುವರೆಸಿತು.

ಟಾಟಾ ಸುಮೋ 4x4: ಭಾರತದ ಹೆಮ್ಮೆಯ ಕಾರು ತಯಾರಿಕಾ ಕಂಪನಿ ಟಾಟಾ ಮೋಟೋರ್ಸ್‌ನ ಟಾಟಾ ಸುಮೋ 4x4 ಸಹ ಭಾರತೀಯ ಸೇನೆಯಲ್ಲಿ ತನ್ನದೆ ಆದ ಚಾಪನ್ನು ಮೂಡಿಸಿತ್ತು. ಭಾರತೀಯ ಸೇನೆಯ ವೈದ್ಯ ವಿಭಾಗಕ್ಕೆ ಸೇವೆಯನ್ನು ಒದಗಿಸುವುದಕ್ಕಾಗಿ ಈ ಕಾರನ್ನು ವಿಶೇಷವಾಗಿ ನಿರ್ಮಿಸಲಾಗಿತ್ತು. ಟಾಟಾ ಸೊಮೋ ಒಂದು ಕಾಲದ ಬಹು ಜನಪ್ರಿಯ ಎಸ್‍ಯುವಿಯಾಗಿದೆ

ಟಾಟಾ ಮೋಟೋರ್ಸ್‌ ಸಫಾರಿ ಸ್ಟೋರ್ಮ್: ಟಾಟಾ ಮೋಟಾರ್ಸ್‌ನ ಮತ್ತೊಂದು ಬಲಶಾಲಿಯಾದ ಎಸ್‌ಯುವಿ ಈ ಟಾಟಾ ಸಫಾರಿ ಸ್ಟೋರ್ಮ್ ಆಗಿದೆ. ಟಾಟಾ ಮೋಟಾರ್ಸ್‌ ಮೊದಲ ಭಾಗದಲ್ಲಿ ಸುಮಾರು 3192 ಸಫಾರಿ ಸ್ಟೋರ್ಮ್‌ಗಳನ್ನು ಪೂರೈಸಿತ್ತು. ಈಗಲೂ ಸಹ ದೇಶದ ಹಲವೆಡೆ ಸೇನೆಗೆ ಬಳಸಿದ ಈ ಸಫಾರಿ ಸ್ಟೋರ್ಮ್‌ಗಳನ್ನು ಕಾಣಬಹುದಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ 4x4: ನಮ್ಮ ಕಾರು ಪ್ರೀಯರ ನೆಚ್ಚಿನ ಎಸ್‌ಯುವಿಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ 4x4 ಸಹ ಒಂದು. ಸದ್ಯಕ್ಕೆ ಜನತೆಗೆ ಈ ಕಾರಿನ ವೇರಿಯೆಂಟ್‌ಗಳನ್ನು ಮಿತವಾಗಿ ವಿತರಿಸಲಾಗಿದ್ದು, ಭಾರತೀಯ ಸೇನೆಯು ಇತ್ತೀಚೆಗೆ ಸುಮಾರು 1470 ಮಹೀಂದ್ರಾ ಸ್ಕಾರ್ಪಿಯೋ 4x4 ಕಾರಿಗೆ ಬೇಡಿಕೆ ಇಟ್ಟಿರುವುದು ಇದರ ಜನಪ್ರಿಯತೆಯನ್ನು ಇನ್ನೂ ಹೆಚ್ಚಿಸಿದೆ. ಮಹೀಂದ್ರಾ ಸ್ಕಾರ್ಪಿಯೋ ಭಾರತದಲ್ಲಿ ಹಲವು ವರ್ಷಗಳಿಂದ ಮಾರಾಟವಾಗುತ್ತಿರುವ ಜನಪ್ರಿಯ ಎಸ್‍ಯುವಿಯಾಗಿದೆ.

Article Published On: Tuesday, August 15, 2023, 8:30 [IST]
English summary
Independence day indian army iconic cars details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+