ಟೆಸ್ಟಿಂಗ್ ವೇಳೆ ಒಂದುಕ್ಕೊಂದು ಎದುರಾದ ಮಾರುತಿ ಜಿಮ್ನಿ- ಮಹಿಂದ್ರಾ ಥಾರ್‌: ಹೇಗಿವೆ ನೋಡಿ...

ಮಾರುತಿ ಸುಜುಕಿ ಕೆಲವೇ ವಾರಗಳಲ್ಲಿ ತನ್ನ ಹೊಸ ಜಿಮ್ನಿ ಆಫ್ ರೋಡರ್ ಅನ್ನು ಬಿಡುಗಡೆ ಮಾಡಲಿದ್ದು, ಈ ಕಾಂಪ್ಯಾಕ್ಟ್ SUV ಯ ಅಂತಿಮ ಹಂತದ ಪ್ರಯೋಗಗಳನ್ನು ನಡೆಸುತ್ತಿದೆ. ಮಾರುತಿ ಸುಜುಕಿ ಜಿಮ್ನಿಯ ಪರೀಕ್ಷಾರ್ಥ ಮಾದರಿಯನ್ನು ಇತ್ತೀಚೆಗೆ ಉತ್ತರ ಭಾರತದಲ್ಲಿ ಪ್ರಾಯೋಗಿಕ ಚಾಲನೆಯಲ್ಲಿ ಗುರುತಿಸಲಾಗಿದೆ. ಇದೇ ವೇಳೆ ಮಹೀಂದ್ರಾ ಥಾರ್ ಕೂಡ ಎದುರಾಗಿದೆ.

ಮಾರುತಿ ಜಿಮ್ನಿ 5-ಡೋರ್ ವರ್ಷನ್ ಅನ್ನು ಹಿಂಬಾಲಿಸುತ್ತಿದ್ದ ವಾಹನ ಚಾಲಕನೊಬ್ಬ ಸೆರೆಹಿಡಿದ ವೀಡಿಯೊದಲ್ಲಿ, ಜಿಮ್ನಿಗೆ ಮಹೀಂದ್ರಾ ಥಾರ್ ಎದುರು ಬರುತ್ತದೆ. ಇದು ಎರಡು SUV ಗಳ ರಸ್ತೆಯ ಉಪಸ್ಥಿತಿಯು ಪರಸ್ಪರ ಹೇಗೆ ಹೋಲಿಸುತ್ತದೆ ಎಂಬುದರ ಬಗ್ಗೆ ಸುಳಿವು ನೀಡುತ್ತದೆ. ಅಂದಹಾಗೆ ಈ ವಿಡಿಯೋವನ್ನು 'ಹಿಮಾಲಯನ್ ಸಾಲಿಟ್ಯೂಡ್' ಚಾನೆಲ್ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದೆ. ಹಿಮಾಚಲ ಪ್ರದೇಶದ ರಸ್ತೆಗಳಲ್ಲಿ ನೀಲಿ-ಕಪ್ಪು ಬಣ್ಣದ ಮಾರುತಿ ಸುಜುಕಿ ಜಿಮ್ನಿಯ ಪರೀಕ್ಷೆ ನಡೆಸುತ್ತಿರುವುದನ್ನು ಕಾಣಬಹುದು.

ಟೆಸ್ಟಿಂಗ್ ವೇಳೆ ಒಂದುಕ್ಕೊಂದು ಎದುರಾದ ಮಾರುತಿ ಜಿಮ್ನಿ- ಮಹಿಂದ್ರಾ ಥಾರ್‌: ಹೇಗಿವೆ ನೋಡಿ...

ಈ ವಿಡಿಯೋದಲ್ಲಿ ಕಾಣುವಂತೆ ದೃಶ್ಯಗಳನ್ನು ಸೆರೆ ಹಿಡಿದಿರುವ ವ್ಯಕ್ತಿ ಜಿಮ್ನಿಯನ್ನು ಹಿಂಬಾಲಿಸುತ್ತಾ ಇನ್ನೊಂದು ಕಾರಿನಲ್ಲಿದ್ದಾನೆ. ಪರ್ವತ ರಸ್ತೆಗಳಲ್ಲಿ ಪರೀಕ್ಷಾರ್ಥವಾಗಿ ಓಡುತ್ತಿರುವ ಜಿಮ್ನಿ ತನ್ನ ಅಕ್ಕಪಕ್ಕದ ಇತರ ಕಾರುಗಳನ್ನು ಹಿಂದಿಕ್ಕುತ್ತಾ ಮುನ್ನುಗ್ಗುತ್ತಿದ್ದ ವೇಳೆ ಒಂದು ಕಪ್ಪು ಬಣ್ಣದ ಮಹೀಂದ್ರ ಥಾರ್ ಎದುರಾಗಿದೆ. ಜಿಮ್ನಿಯು ಥಾರ್‌ಗಿಂತ ಸುಲಭವಾಗಿ ಹಾಗೂ ಸಲೀಸಾಗಿ ತಿರುವಿನಲ್ಲಿ ಮುನ್ನುಗ್ಗಿದೆ. ಇದರ ಗಾತ್ರ ಮತ್ತು ಅದರ ತೂಕವನ್ನು ಗಮನಿಸಿದರೆ, ಇದು ಬೆಟ್ಟದ ತಿರುವುಗಳ ರಸ್ತೆಗಳಲ್ಲಿ ಥಾರ್ ಅನ್ನು ಮೀರಿಸುವ ಸಾಧ್ಯತೆಯಿದೆ.

ಹೊಸ ಜಿಮ್ನಿ ಮತ್ತು ಮಹೀಂದ್ರಾ ಥಾರ್ ಪರಸ್ಪರ ಹಾದುಹೋಗುವಾಗ, ಎರಡೂ ಆಫ್ ರೋಡರ್ SUV ಗಳ ನಡುವೆ ಕೆಲವು ಮುಖ್ಯಾಂಶಗಳನ್ನು ಇಲ್ಲಿ ಗಮನಿಸಬಹುದು. ರಸ್ತೆಯ ಉಪಸ್ಥಿತಿಗೆ ಸಂಬಂಧಿಸಿದಂತೆ, ಎರಡೂ SUVಗಳು ನಾಲ್ಕು ಮೀಟರ್ ಮಾರ್ಕ್ ಅಡಿಯಲ್ಲಿ ಅಳತೆ ಮಾಡಬಹುದಾದರೂ, ಥಾರ್ ಜಿಮ್ನಿಗಿಂತ ಸ್ವಲ್ಪ ಎತ್ತರ ಮತ್ತು ಹೆಚ್ಚು ಮಸ್ಕುಲರ್ ಆಗಿ ಕಾಣುತ್ತದೆ. ಅಲ್ಲದೆ, ಮಹೀಂದ್ರಾ ಥಾರ್‌ನ ವೀಲ್ ಆರ್ಚ್‌ಗಳು ಮಾರುತಿ ಜಿಮ್ನಿಗಿಂತಲೂ ಅಗಲವಾಗಿ ಕಾಣುತ್ತವೆ.

ಟೆಸ್ಟಿಂಗ್ ವೇಳೆ ಒಂದುಕ್ಕೊಂದು ಎದುರಾದ ಮಾರುತಿ ಜಿಮ್ನಿ- ಮಹಿಂದ್ರಾ ಥಾರ್‌: ಹೇಗಿವೆ ನೋಡಿ...

ಈ ವಿಡಿಯೋದಲ್ಲಿ ಮಾರುತಿ ಸುಜುಕಿ ಜಿಮ್ನಿಯ ಹಿಂಭಾಗ ಮತ್ತು ಮಹೀಂದ್ರಾ ಥಾರ್‌ನ ಮುಂಭಾಗವನ್ನು ಮಾತ್ರ ನೋಡಬಹುದು, ಏಕೆಂದರೆ ಎರಡೂ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿವೆ. ಹಾಗಾಗಿ ಇದು ಪೂರ್ಣ ಪ್ರಮಾಣದ ಹೋಲಿಕೆ ಅಲ್ಲ, ಎರಡೂ SUV ಗಳು ಒಂದಕ್ಕೊಂದು ಪಕ್ಕದಲ್ಲಿ ನಿಂತಾಗ ಮಾತ್ರ ಅವುಗಳ ಸಾಮರ್ಥ್ಯ ಕುರಿತು ನಾವು ಲೆಕ್ಕ ಹಾಕಬಹುದು. ಕಂಪನಿಗಳು ನೀಡಿರುವ ಆಯಾಮಗಳ ಪ್ರಕಾರ ನೋಡುವುದಾದರೆ, ಪ್ರಸ್ತುತ ಎತ್ತರದ ವಿಷಯದಲ್ಲಿ ಥಾರ್ ಮುಂದಿದೆ.

ಜಿಮ್ನಿಯಲ್ಲಿರುವ 15-ಇಂಚಿನ ವೀಲ್‌ಗಳಿಗೆ ಹೋಲಿಸಿದರೆ ಥಾರ್ ದೊಡ್ಡ 18-ಇಂಚಿನ ವೀಲ್‌ಗಳನ್ನು ಪಡೆದಿದೆ. ಎರಡನೇ ತಲೆಮಾರಿನ ಮಹೀಂದ್ರಾ ಥಾರ್ 2020 ರಲ್ಲಿ ಪ್ರಾರಂಭವಾದಾಗಿನಿಂದ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಯಶಸ್ವಿ ಓಟದ ಮೂಲಕ ತನ್ನ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದೆ. ಪ್ರಬಲವಾದ ಪವರ್‌ಟ್ರೇನ್ ಆಯ್ಕೆಗಳು ಮತ್ತು ಸಮರ್ಥ 4-ವೀಲ್ ಡ್ರೈವ್ ಸಿಸ್ಟಮ್‌ನೊಂದಿಗೆ ಹೆಚ್ಚಿನ ಬೇಡಿಕೆ ಪಡೆದಿದೆ. ಜನವರಿ 2023 ರಲ್ಲಿ ಬಿಡುಗಡೆಯಾದ ಥಾರ್‌ನ ಹಿಂಬದಿ-ಚಕ್ರ-ಡ್ರೈವ್ ಆವೃತ್ತಿಗಳು ಥಾರ್‌ನತ್ತ ಜನರ ಆಸಕ್ತಿಯನ್ನು ಹೆಚ್ಚಿಸಿದೆ.

ಇನ್ನು ಹೊಸ ಮಾರುತಿ ಸುಜುಕಿ ಜಿಮ್ನಿ ಬಿಡುಗಡೆಯು ಮುಂದಿನ ಕೆಲವೇ ವಾರಗಳಲ್ಲಿ ಆಗಲಿದೆ. ಈ ಮೂಲಕ ಮಹೀಂದ್ರಾ ಥಾರ್‌ಗೆ ಅಂತಿಮವಾಗಿ ಯೋಗ್ಯ ಪ್ರತಿಸ್ಪರ್ಧಿ ಸಿಕ್ಕಂತಾಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟವಾಗುವ ಥಾರ್‌ಗಿಂತ ಭಿನ್ನವಾಗಿ, ಮಾರುತಿ ಜಿಮ್ನಿ ಕೇವಲ 1.5 ಲೀಟರ್ 104 PS ಪೆಟ್ರೋಲ್ ಎಂಜಿನ್‌ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಆಯ್ಕೆಗಳೊಂದಿಗೆ ನೀಡಲಾಗುವುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Saturday, March 18, 2023, 11:59 [IST]
English summary
Maruti jimny mahindra thar met each other on the road during the test
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+