Bharat NCAP: ಮಾರುತಿ ಸುಜುಕಿಯ ಈ ಜನಪ್ರಿಯ ಕಾರುಗಳು ಪರೀಕ್ಷೆಗೆ ಒಳಗಾಗಲಿವೆ, ದೊಡ್ಡ ಘೋಷಣೆ

ದೇಶದಲ್ಲಿ ಹೊಸ ಕಾರು ಖರೀದಿಸುವವರೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಗಳವಾರ ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಭಾರತ್ ಎನ್‌ಸಿಎಪಿ - Bharat NCAP)ಯನ್ನು ಜಾರಿಗೊಳಿಸಿತು. ಪ್ರಮುಖ ಕಾರು ತಯಾರಕ ಕಂಪನಿಗಳು ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿವೆ.

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ (Maruti Suzuki) ತನ್ನ ಜನಪ್ರಿಯ ಮಾದರಿಗಳಾದ ಬಲೆನೊ, ಬ್ರೆಜ್ಜಾ ಮತ್ತು ಗ್ರ್ಯಾಂಡ್ ವಿಟಾರಾವನ್ನು ಭಾರತ್ ಎನ್‌ಸಿಎಪಿ ಕ್ರ್ಯಾಶ್ ಪರೀಕ್ಷೆಗೆ ನೀಡಲಾಗುವುದು ಎಂದು ಘೋಷಣೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾರುತಿ ಸುಜುಕಿ ಇಂಡಿಯಾದ ರಾಹುಲ್ ಭಾರ್ತಿ ಅವರು, ಪ್ರಸ್ತುತ ದೇಶದಲ್ಲಿ ಬಿಡುಗಡೆಗೊಳ್ಳುವ ಯಾವುದೇ ಕಾರುಗಳು ಸರ್ಕಾರ ನಿಗದಿಪಡಿಸಿರುವ ಕಡ್ಡಾಯ ಸುರಕ್ಷತಾ ಮಾನದಂಡಗಳನ್ನು ಪೂರೈಸಿರುತ್ತವೆ ಎಂದಿದ್ದಾರೆ.

Bharat NCAP: ಮಾರುತಿ ಸುಜುಕಿಯ ಈ ಜನಪ್ರಿಯ ಕಾರುಗಳು ಪರೀಕ್ಷೆಗೆ ಒಳಗಾಗಲಿವೆ, ದೊಡ್ಡ ಘೋಷಣೆ

'ಇದೀಗ, ಭಾರತ್ ಎನ್‌ಸಿಎಪಿ ಜಾರಿಯಾಗಿದೆ. ಇಲ್ಲಿ ವಸ್ತುನಿಷ್ಠವಾಗಿ ಪರೀಕ್ಷೆ ನಡೆಸಿದ ಬಳಿಕ, ವಾಹನಗಳಿಗೆ ಸೇಫ್ಟಿ ರೇಟಿಂಗ್ ನೀಡಲಾಗುತ್ತದೆ. ಗ್ರಾಹಕರು, ತಮಗೆ ಯಾವ ಕಾರು ಸುರಕ್ಷತೆ ದೃಷ್ಟಿಯಿಂದ ಅತ್ಯುನ್ನತವಾಗಿದೆ ಎನ್ನಿಸುತ್ತದೆಯೋ ಆ ಕಾರನ್ನು ಕೊಂಡುಕೊಳ್ಳಬಹುದು' ಎಂದು ರಾಹುಲ್ ಭಾರ್ತಿ ಹೇಳಿದ್ದಾರೆ. ಈಗಾಗಲೇ, ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಯಲ್ಲಿ ಮಾರುತಿ ಸುಜುಕಿ ಕಾರುಗಳು ಕಡಿಮೆ ರೇಟಿಂಗ್‌ ಪಡೆದಿದ್ದು, ಭಾರತ್ ಎನ್‌ಸಿಎಪಿಯಲ್ಲಿ ಯಾವ ರೇಟಿಂಗ್‌ ಗಳಿಸಿವೆ ಎಂಬುದು ಮುಂಬರುವ ದಿನಗಳಲ್ಲಿ ತಿಳಿಯಲಿದೆ.

ಮಾರುತಿ ಸುಜುಕಿ ವಾಗನ್ ಆರ್ ಕೇವಲ 1 ಸ್ಟಾರ್ (5 ಸ್ಟಾರ್) ರೇಟಿಂಗ್ ಪಡೆದಿದೆ. ಆಲ್ಟೊ ಕೆ10, ಸ್ವಿಫ್ಟ್ ಎಸ್-ಪ್ರೆಸ್ಸೊ 2 & 3 ಸ್ಟಾರ್‌ ರೇಟಿಂಗ್ ಗಳಿಸಲು ಶಕ್ತವಾಗಿವೆ. ಹ್ಯುಂಡೈ ಮೋಟಾರ್ ಇಂಡಿಯಾ ಮಾದರಿಗಳು ಕೂಡ ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಯಲ್ಲಿ ಕಡಿಮೆ ರೇಟಿಂಗ್ ಪಡೆದಿದ್ದು, ಹಲವು ಕಾರುಗಳು 2 ಮತ್ತು 3 ಸ್ಟಾರ್‌ ರೇಟಿಂಗ್ ಗಳಿಸಿವೆ.

Bharat NCAP: ಮಾರುತಿ ಸುಜುಕಿಯ ಈ ಜನಪ್ರಿಯ ಕಾರುಗಳು ಪರೀಕ್ಷೆಗೆ ಒಳಗಾಗಲಿವೆ, ದೊಡ್ಡ ಘೋಷಣೆ

ಹುಂಡೈ ಮೋಟಾರ್ ಇಂಡಿಯಾದ ಸಿಇಒ ಅನ್ಸೂ ಕಿಮ್ ಅವರು, ಭಾರತ್ ಎನ್‌ಸಿಎಪಿ ಬಗ್ಗೆ ಮಾತನಾಡಿದ್ದಾರೆ. 'ಸರ್ಕಾರ ಜಾರಿಗೊಳಿಸಿರುವ ವಾಹನಗಳ ಸುರಕ್ಷತಾ ಪರೀಕ್ಷೆಯಾದ ಭಾರತ್ ಎನ್‌ಸಿಎಪಿಯನ್ನು ಸ್ವಾಗತಿಸುತ್ತವೆ. ಇದರಿಂದ ಕಾರುಗಳ ಸೇಫ್ಟಿ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ' ಎಂದು ಹೇಳಿದ್ದಾರೆ. ಭಾರತ್ ಎನ್‌ಸಿಎಪಿ ಪರೀಕ್ಷೆಗೆ ಹುಂಡೈ ಕಂಪನಿಯ ಪ್ರಮುಖ ಮೂರು ಕಾರು ಮಾದರಿಗಳು ಒಳಗಾಗಲಿವೆ ಎಂದು ವರದಿಯಾಗಿದೆ.

ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಯಲ್ಲಿ ತಮ್ಮ ವಿವಿಧ ಕಾರು ಮಾದರಿಗಳಿಗೆ ಟಾಪ್ ರೇಟಿಂಗ್ ಪಡೆದಿರುವ ಪ್ರಮುಖ ದೇಶೀಯ ವಾಹನ ತಯಾರಕ ಕಂಪನಿಗಳಾದ ಟಾಟಾ ಹಾಗೂ ಮಹೀಂದ್ರಾ ಕೂಡ ಭಾರತ್ ಎನ್‌ಸಿಎಪಿಯನ್ನು ಸ್ವಾಗತಿಸಿವೆ. ಆದರೆ, ಈ ಪರೀಕ್ಷೆಗೆ ಯಾವ ಕಾರುಗಳನ್ನು ಕಳುಹಿಸಲಿವೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಕೆಲಸ ದಿನಗಳಲ್ಲಿ ಅದರ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಬಹುದು.

Bharat NCAP: ಮಾರುತಿ ಸುಜುಕಿಯ ಈ ಜನಪ್ರಿಯ ಕಾರುಗಳು ಪರೀಕ್ಷೆಗೆ ಒಳಗಾಗಲಿವೆ, ದೊಡ್ಡ ಘೋಷಣೆ

ಪ್ರಮುಖವಾಗಿ, ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಯಲ್ಲಿ ಟಾಟಾ ಮೋಟಾರ್ಸ್‌ನ ನೆಕ್ಸಾನ್ ಮತ್ತು ಪಂಚ್ ಕಾರುಗಳು 5 ಸ್ಟಾರ್ ರೇಟಿಂಗ್ ಪಡೆದಿವೆ. ಅದೇ ರೀತಿಯಲ್ಲಿ ಮಹೀಂದ್ರಾದ XUV300, ಸ್ಕಾರ್ಪಿಯೋ ಎನ್ ಮತ್ತು XUV700 ಕಾರುಗಳು ಕೂಡ 5 ಸ್ಟಾರ್ ಗಳಿಸಿವೆ. ಕಂಪನಿಯ ಆಫ್-ರೋಡ್ ಎಸ್‌ಯುವಿ ಥಾರ್ 4 ರೇಟಿಂಗ್ ಹೊಂದಿದೆ. ಭಾರತ್ ಎನ್‌ಸಿಎಪಿ ರೇಟಿಂಗ್ ಅನ್ನು ಅಕ್ಟೋಬರ್ 1ರಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಸದ್ಯ, ದೊರೆತ್ತಿರುವ ಮಾಹಿತಿ ಪ್ರಕಾರ, ವಿವಿಧ ಕಂಪನಿಯ 30 ಕಾರು ಮಾದರಿಗಳು, ಭಾರತ್ ಎನ್‌ಸಿಎಪಿ ಪರೀಕ್ಷೆಗೆ ಒಳಗಾಗಲಿವೆ. ಇದು, ಕಠಿಣ ಮಾನದಂಡಗಳನ್ನು ಒಳಗೊಂಡಿರುವ ವಸ್ತುನಿಷ್ಠ ಪರೀಕ್ಷೆಯಾಗಿದ್ದು, ಇಲ್ಲಿ ಕಾರುಗಳನ್ನು ಕೂಲಂಕುಷವಾಗಿ ಪರೀಕ್ಷೆಗೆ ಒಳಪಡಿಸಿ, ಸೇಫ್ಟಿ ರೇಟಿಂಗ್ ನೀಡಲಾಗುತ್ತದೆ. ಇನ್ನು, ಮಾರುತಿ ಸುಜುಕಿ ತನ್ನ ಬಲೆನೊ, ಬ್ರೆಜ್ಜಾ, ಗ್ರ್ಯಾಂಡ್ ವಿಟಾರಾವನ್ನು ಈ ಪರೀಕ್ಷೆಗೆ ಒಳಪಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, August 23, 2023, 12:58 [IST]
English summary
Maruti suzuki baleno brezza grand vitara undergo bharat ncap crash tests
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+