Maruti Swift: ರೂ. 5.13 ಲಕ್ಷಕ್ಕೆ ಹೊಸ ಸ್ವಿಫ್ಟ್ ಕಾರು... ಹೀಗೆ ಖರೀದಿಸಿದರೆ GST ಪಾವತಿಸಬೇಕಿಲ್ಲ!

ದೇಶ ಸೇವೆಗೆ ಬದ್ಧರಾಗಿರುವ ಯುವಕರು CSD ಮೂಲಕ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು. ಮಾರುತಿ ಸುಜುಕಿ ಸ್ವಿಫ್ಟ್ (Maruti Swift) ಈಗ ಕ್ಯಾಂಟೀನ್ ಸ್ಟೋರ್ ಡಿಪಾರ್ಟ್‌ಮೆಂಟ್‌ನಲ್ಲಿಯೂ ಲಭ್ಯವಿದೆ. ಕ್ಯಾಂಟೀನ್ ಸ್ಟೋರ್‌ನಲ್ಲಿ ಸ್ವಿಫ್ಟ್‌ನ ಬೆಲೆ ತಿಳಿಯುವುದಕ್ಕೂ ಮುನ್ನ ಈ CSD ಎಂದರೇನು ನೋಡೋಣ.

CSD (ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್ಮೆಂಟ್) ಅಥವಾ ಆರ್ಮಿ ಕ್ಯಾಂಟೀನ್ ರಕ್ಷಣಾ ಸಿಬ್ಬಂದಿಗೆ ಸಬ್ಸಿಡಿ ದರದಲ್ಲಿ ಸರಕುಗಳನ್ನು ನೀಡುತ್ತದೆ. ಇದರಲ್ಲಿ ಗೃಹೋಪಯೋಗಿ ವಸ್ತುಗಳು, ಮದ್ಯ, ವೈದ್ಯಕೀಯ ವಸ್ತುಗಳು ಮತ್ತು ಹೆಚ್ಚಿನವನ್ನು ಖರೀದಿಸಬಹುದು. ಆರ್ಮಿ ಕ್ಯಾಂಟೀನ್ ಮೂಲಕ ಸಬ್ಸಿಡಿ ದರದಲ್ಲಿ ಕಾರನ್ನು ಸಹ ಖರೀದಿಸಬಹುದು. ದೇಶಾದ್ಯಂತ ಸುಮಾರು 34 ಸಿಎಸ್‌ಡಿ ಡಿಪೋಗಳಿವೆ. ಅರ್ಹ ವ್ಯಕ್ತಿಯು ಹತ್ತಿರದ ಔಟ್‌ಲೆಟ್ ಮೂಲಕ ವಾಹನ ಖರೀದಿಸಬಹುದು.

maruti-swift-canteen-stores-department-price-5-13-lakhs

2023 ರಲ್ಲಿ CSD ಕಾರ್ ಅರ್ಹತೆ: ಭಾರತ ಸರ್ಕಾರದಿಂದ ವೇತನ ಪಡೆದು ರಕ್ಷಣಾ ವಲಯದಲ್ಲಿ ಉದ್ಯೋಗದಲ್ಲಿರುವ ಎಲ್ಲರೂ CSD ಮೂಲಕ ಕಾರುಗಳನ್ನು ಖರೀದಿಸಬಹುದು. ಅಲ್ಲದೆ, ರಕ್ಷಣಾ ಇಲಾಖೆಯ ಎಲ್ಲಾ ನಿಯೋಜಿತ ಅಧಿಕಾರಿಗಳು ಮತ್ತು ಮಾಜಿ ಸೈನಿಕರು ಕ್ಯಾಂಟೀನ್ ಮೂಲಕ ಕಾರನ್ನು ಖರೀದಿಸಬಹುದು. ಇದಲ್ಲದೆ, ಅವರು ಖಾಸಗಿ ಬ್ಯಾಂಕ್‌ಗಳು ಅಥವಾ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ವಾಹನಕ್ಕೆ ಹಣಕಾಸು ಒದಗಿಸಬಹುದು.

ರೂ. 5.13 ಲಕ್ಷಕ್ಕೆ ಸ್ವಿಫ್ಟ್ ಕಾರು: Maruti Swift ಮೇಲೆ ಕ್ಯಾಂಟೀನ್ ಸ್ಟೋರ್ ಡಿಪಾರ್ಟ್ಮೆಂಟ್ (CSD) ನಲ್ಲಿ ರೂ.86,000 ದಿಂದ ರೂ.1.18 ಲಕ್ಷದವರೆಗೆ ಸಬ್ಸಿಡಿ ಲಭ್ಯವಿದೆ. ಸ್ವಿಫ್ಟ್‌ನ ಅತ್ಯಂತ ಕೈಗೆಟುಕುವ 1.2 ಲೀಟರ್ LXI ಮ್ಯಾನುವಲ್ ಬೇಸ್ ವೇರಿಯೆಂಟ್ CSD ನಲ್ಲಿ 5,13,367 ರೂ.ಗೆ ಲಭ್ಯವಿದೆ. ಆದರೆ ಸಾಮಾನ್ಯ ಗ್ರಾಹಕರಿಗೆ ಇದು ರೂ. 5,99,450 ಎಕ್ಸ್ ಶೋರೂಂ ಆಗಿದೆ.

maruti-swift-canteen-stores-department-price-5-13-lakhs

ಅಂದರೆ CSD ಮೂಲಕ ನೀವು ಸ್ವಿಫ್ಟ್ ಮ್ಯಾನುವಲ್ LXI ಖರೀದಿಸಿದರೆ ರೂ. 86,083 ಉಳಿಸಬಹುದು. ಅದೇ ರೀತಿ, 1.2-ಲೀಟರ್ VXI ಆಟೋಮ್ಯಾಟಿಕ್ ಅನ್ನು 6,47,092 ರೂ.ಗಳಲ್ಲಿ ಪಡೆಯಬಹುದು. ಸಾಮಾನ್ಯ ಗ್ರಾಹಕರು ಇದನ್ನು ರೂ. 7,50,000 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಸಬೇಕು. CSD ಯಿಂದ ಖರೀದಿಸುವ ಮೂಲಕ ನೀವು ರೂ. 97,177 ಉಳಿಸಬಹುದು.

Maruti Swift CNG ಆಯ್ಕೆಯ ಕುರಿತು ಮಾತನಾಡುವುದಾದ್ರೆ, VXI CNG ಸಿಎಸ್‌ಡಿಯಿಂದ ರೂ. 6,80,755 ಕ್ಕೆ ಲಭ್ಯವಿದೆ. ಇದು ಸಾಮಾನ್ಯ ಗ್ರಾಹಕರಿಗೆ ರೂ. 7,85,000 ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯವಿದೆ. ಸಿಎಸ್‌ಡಿಯಿಂದ ಸೈನಿಕರು ಇದರ ಮೇಲೆ ರೂ. 1,04,245 ರಿಯಾಯಿತಿ ಪಡೆಯಬಹುದು.

maruti-swift-canteen-stores-department-price-5-13-lakhs

ಸ್ವಿಫ್ಟ್ CNG ZXI ಕುರಿತು ಹೇಳುವುದಾದ್ರೆ, ಸಿಎಸ್‌ಡಿಯಿಂದ ರೂ. 7,35,042 ಕ್ಕೆ ಖರೀದಿಸಬಹುದು. ಇದರ ಎಕ್ಸ್ ಶೋ ರೂಂ ಬೆಲೆ ರೂ. 8,53,000. ಸಿಎಸ್‌ಡಿಯಿಂದ ಖರೀದಿಸುವ ಮೂಲಕ ನೀವು ರೂ. 1,17,958 ಉಳಿಸಬಹುದು. ಮಾರುತಿ ಹೇಳಿಕೊಂಡಿರುವ ಪ್ರಕಾರ, ಸ್ವಿಫ್ಟ್ ಪೆಟ್ರೋಲ್ ವೇರಿಯೆಂಟ್ 22 kmpl ಮತ್ತು CNG ವೇರಿಯೆಂಟ್ 30.90km/kg ಮೈಲೇಜ್ ನೀಡುತ್ತವೆ.

ಲೆವೆಲ್‌ ತಕ್ಕಂತೆ ಕಾರು: CSD ಒದಗಿಸಿದ ಚಾರ್ಟ್‌ನ ಪ್ರಕಾರ, 9ನೇ ಲೆವೆಲ್ವರೆಗಿನ ಯಾವುದೇ ರಕ್ಷಣಾ ಸಿಬ್ಬಂದಿ ಕೆಲಸದ ಸಮಯದಲ್ಲಿ ಒಮ್ಮೆ ಮತ್ತು ನಿವೃತ್ತಿಯ ನಂತರ ಒಮ್ಮೆ ಕಾರನ್ನು ಖರೀದಿಸಬಹುದು. ಎರಡು ಖರೀದಿಗಳ ನಡುವೆ 8 ವರ್ಷಗಳ ಅಂತರವಿರಬೇಕು. ಮತ್ತೊಂದೆಡೆ, 10ನೇ ಲೆವೆಲ್‌ಗಿಂತ ಮೇಲ್ಪಟ್ಟವರು ನಿವೃತ್ತಿಯ ನಂತರವೂ ಪ್ರತಿ 8 ವರ್ಷಗಳಿಗೊಮ್ಮೆ ಕಾರನ್ನು ಖರೀದಿಸಬಹುದು.

maruti-swift-canteen-stores-department-price-5-13-lakhs

ಲೆವೆಲ್ 10 ಕ್ಕಿಂತ ಕಡಿಮೆ ಇರುವವರು 1400cc ಎಂಜಿನ್ ಗಾತ್ರದ ಕಾರನ್ನು ಖರೀದಿಸಬಹುದು. ಲೆವೆಲ್ 10 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೇಲ್ ಇರುವವರು 2500cc ಎಂಜಿನ್ ಗಾತ್ರದ ಕಾರನ್ನು ಖರೀದಿಸಬಹುದು. ಇದರ ಅರ್ಥವೇನೆಂದರೆ ನಿಯಮಗಳಲ್ಲಿನ ಇತ್ತೀಚಿನ ನವೀಕರಣದೊಂದಿಗೆ, ರಕ್ಷಣಾ ಸಿಬ್ಬಂದಿ ಇನ್ನು ಮುಂದೆ ಟೊಯೊಟಾ ಫಾರ್ಚುನರ್ ಅಥವಾ ಟಾಪ್-ಎಂಡ್ ಫೋರ್ಡ್ ಎಂಡೀವರ್‌ನಂತಹ ದುಬಾರಿ ಮಾದರಿಗಳನ್ನು ಆರ್ಮಿ ಕ್ಯಾಂಟೀನ್ ಮೂಲಕ ಖರೀದಿಸಲು ಸಾಧ್ಯವಿಲ್ಲ.

More from DriveSpark

Article Published On: Wednesday, December 6, 2023, 14:22 [IST]
English summary
Maruti swift canteen stores department price 5 13 lakhs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+