MG Comet EV: ಭಾರತದಲ್ಲಿ ಸಣ್ಣ ಕಾರುಗಳ 'ರಾಜ'ನಾಗಲು ಬರುತ್ತಿದೆ ಎಂಜಿ ಕಾಮೆಟ್ ಇವಿ
ಭಾರತದ ವಾಹನ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಕಂಪನಿಯ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳು ಖರೀದಿಗೆ ಲಭ್ಯವಿವೆ. ಆದರೆ, 2 ಡೋರ್ ಆಯ್ಕೆಯೊಂದಿರುವ ಕಾರುಗಳು ಸಿಗುತ್ತಿರಲಿಲ್ಲ. ಬ್ರಿಟನ್ ಮೂಲದ ಎಂಜಿ ಮೋಟಾರ್ಸ್ ತನ್ನ 'ಕಾಮೆಟ್' ಹೆಸರಿನ ಪುಟ್ಟ ಕಾರನ್ನು ಈ ತಿಂಗಳೇ (ಏಪ್ರಿಲ್) ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಈ ಎಂಜಿ ಕಾಮೆಟ್ ಮೈಕ್ರೋ ಇವಿ ದೆಹಲಿಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಮತ್ತೊಮ್ಮೆ ಕಂಡುಬಂದಿದೆ. ಇದು ಅತ್ಯಂತ ಕೈಗೆಟುಕುವ ಬೆಲೆಯ ಕಾರಾಗಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ದರದ ಬಗ್ಗೆ ಎಲ್ಲಿಯೂ ಮಾಹಿತಿ ಬಹಿರಂಗವಾಗಿಲ್ಲ. ಸುಮಾರು ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆ ಹೊಂದಿರಬಹುದು. ಅವೆಲ್ಲವೂ ಈ ಕಾರು ಬಿಡುಗಡೆಯಾದ ಮೇಲೆ ತಿಳಿಯಲಿದೆ. ಅಲ್ಲಿಯವರೆಗೂ ಇವೆಲ್ಲ ಉಹಾಪೋಹಗಳಷ್ಟೇ.

ಎಂಜಿ ಕಾಮೆಟ್ ಇವಿ ನೋಡಲು ಭಾರತದ ರಸ್ತೆಗಳಲ್ಲಿ ಹಲವು ವರ್ಷಗಳ ಹಿಂದೆ ಸಂಚರಿಸುತ್ತಿದ್ದ 'ರೇವಾ' ಕಾರಿನಂತೆ ಕಾಣುತ್ತದೆ. ಆದರೆ, ಅದಕ್ಕೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಈ ಕಾಮೆಟ್ ಇವಿಯನ್ನು ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್ಸ್ (GSEV) ಪ್ಲಾಟ್‌ಫಾರ್ಮ್ ಅಡಿ ತಯಾರಿಸಲಾಗಿದ್ದು, ಚೀನಾ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಹೊಂದಿರುಬವ ವುಲಿಂಗ್ ಏರ್ ಎಲೆಕ್ಟ್ರಿಕ್ ಕಾರನ್ನು ಆಧರಿಸಿರಲಿದೆಯಂತೆ.
ಸದ್ಯಕ್ಕೆ ಈ ಪುಟ್ಟ ಇವಿಯ ಕಾರ್ಯಕ್ಷಮತೆ ಬಗ್ಗೆ ಯಾವುದೇ ವಿವರಗಳು ಲಭ್ಯವಿಲ್ಲ. ಮೂಲಗಳ ಪ್ರಕಾರ, ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಬಹುದು. ಅವುಗಳೆಂದರೆ, 20 kWh ಹಾಗೂ 25 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್. ಕ್ರಮವಾಗಿ 150 km ಹಾಗೂ 200 km ರೇಂಜ್ ನೀಡಬಹುದು. ಆದರೆ, ಟಾಪ್ ಸ್ವೀಡ್ ಹಾಗೂ ಚಾರ್ಜಿಂಗ್ ಆಯ್ಕೆ ಕುರಿತಂತೆ ಮಾಹಿತಿಯಿಲ್ಲ.

ಎಂಜಿ ಕಾಮೆಟ್ ಇವಿ ಬೆಲೆ ತಕ್ಕಂತೆ ಗ್ರಾಹಕರನ್ನು ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಪ್ರಮುಖವಾಗಿ 10.25 ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮೆಟಿಕ್ ಎಸಿ, ಕೀಲೆಸ್ ಎಂಟ್ರಿ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಹಾಗೂ LED ಹೆಡ್ ಲ್ಯಾಂಪ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿರಬಹುದು. ಇದು ಪುಟ್ಟ ಕಾರು ಆಗಿದ್ದು, ನಗರ ಪ್ರಯಾಣಕ್ಕೆ ಸೂಕ್ತವಾಗಿರುವಂತೆ ವಿನ್ಯಾಸ ಮಾಡಲಾಗಿದೆ.
ದೇಶೀಯ ಮಾರುಕಟ್ಟೆಯಲ್ಲಿ 2 ಡೋರ್ ವಿಭಾಗದಲ್ಲಿ ಎಂಜಿ ಕಾಮೆಟ್ ಇವಿಗೆ ಯಾವುದೇ ನೇರ ಪ್ರತಿಸ್ಪರ್ಧಿಯಿಲ್ಲ. ಆದರೆ, ಈಗಾಗಲೇ ಜನಮನ್ನಣೆ ಗಳಿಸಿರುವ ಟಾಟಾ ಟಿಯಾಗೊ ಇವಿ ಹಾಗೂ ಸಿಟ್ರಸ್ ಇಸಿ3 ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಪೈಪೋಟಿ ನೀಡಬಹುದು. ಅಲ್ಲದೆ, ಈ ಕಾಮೆಟ್ ಇವಿ ಕಡಿಮೆ ಬೆಲೆಗೆ ದೊರೆಯಲಿದೆ ಎಂದು ಹೇಳಲು ಬಲವಾದ ಕಾರಣವು ಇದೆ. ಅದೇನೆಂದರೆ ಟಾಟಾ ಸಂಸ್ಥೆಯಿಂದ ಕಾರು ತಯಾರಿಕೆ ಬ್ಯಾಟರಿ ಪ್ಯಾಕ್ ಪಡೆಯುತ್ತಿದೆ.
ಇನ್ನು, ಬಹುತೇಕ ಈ ತಿಂಗಳೇ ಭಾರತದ ಮಾರುಕಟ್ಟೆಗೆ ಬರುವ ಎಂಜಿ ಕಾಮೆಟ್ ಇವಿ, 2 ಡೋರ್ ಗಳ ಪುಟ್ಟ ಕಾರಾಗಿರುವುದರಿಂದ ನಗರದ ಯುವ ಗ್ರಾಹಕರಿಗೆ ಹೆಚ್ಚು ಇಷ್ಟವಾಗಬಹುದು. ಏಕೆಂದರೆ, ಸಂಚಾರ ದಟ್ಟಣೆಯಲ್ಲಿ ಈ ಕಾರನ್ನು ಸುಲಭವಾಗಿ ಓಡಿಸಬಹುದು. ಜೊತೆಗೆ ಸ್ವಲ್ಪ ಸ್ಥಳದಲ್ಲಿಯೇ ಪಾರ್ಕಿಂಗ್ ಮಾಡಬಹುದು. ಅಲ್ಲದೆ, ಕಡಿಮೆ ಬೆಲೆಗೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದು ಖರೀದಿಗೆ ಸಿಗುವುದರಿಂದ ಎಂಟ್ರಿ ಲೆವೆಲ್ ಕಾರು ವಿಭಾಗದಲ್ಲಿ ಈ ಕಾಮೆಟ್ ಇವಿ ಜಾಗ ಪಡೆಯಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








