2024 ರಲ್ಲಿ ಭಾರೀ ಸದ್ದು ಮಾಡಲಿವೆ ಈ ಕಾರುಗಳು! 10 ಲಕ್ಷದೊಳಗಿನ ಪವರ್‌ಫುಲ್ ಎಸ್‌ಯುವಿಗಳು!

ಭಾರತೀಯ ಆಟೋ ಮಾರುಕಟ್ಟೆಯು ಕ್ರಾಂತಿಯ ಅಂಚಿನಲ್ಲಿದ್ದು, ವಿಶೇಷವಾಗಿ ಫ್ಯಾಮಿಲಿ ಕಾರ್ ವಿಭಾಗದಲ್ಲಿ ಹಲವಾರು ಹೊಸ ಮಾದರಿಗಳು ಬಿಡುಗಡೆಗೆ ಸಜ್ಜಾಗಿವೆ. ಮಾರುತಿ ಸುಜುಕಿ, ಕಿಯಾ, ಮಹೀಂದ್ರಾ, ಟಾಟಾ ಮತ್ತು ಟೊಯೊಟಾದಂತಹ ಪ್ರಮುಖ ಬ್ರಾಂಡ್‌ಗಳು ವೆಚ್ಚ-ಪರಿಣಾಮಕಾರಿ, ವೈಶಿಷ್ಟ್ಯ-ಸಮೃದ್ಧ ಮತ್ತು ಸಣ್ಣ ಕುಟುಂಬಗಳಿಗೆ ಸೂಕ್ತವಾದ ವಾಹನಗಳನ್ನು ಪರಿಚಯಿಸಲು ಸಜ್ಜಾಗುತ್ತಿವೆ.

ಈ ಮುಂಬರುವ ಕಾರುಗಳು, ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯೊಂದಿಗೆ, ನಿರೀಕ್ಷಿತ ಖರೀದಿದಾರರಿಗೆ ಅವರ ವಿಭಿನ್ನ ಅಗತ್ಯಗಳು ಮತ್ತು ಆದ್ಯತೆಗಳನ್ನು ಪೂರೈಸಲಿವೆ. ಈ ಆರು ಮಾಡೆಲ್‌ಗಳು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗುತ್ತಿರುವ ಕಾರಣ ಅವುಗಳ ಕುರಿತು ಒಂದಷ್ಟು ಮಾಹಿತಿಯನ್ನು ಇಲ್ಲಿ ತಿಳಿಯೋಣ.

most-awaited-2024-cars-tata-maruti-mahindra-toyota

ಫೇಸ್‌ಲಿಫ್ಟೆಡ್ ಕಿಯಾ ಸಾನೆಟ್: 2020 ರಲ್ಲಿ ಪ್ರಾರಂಭವಾದಾಗಿನಿಂದ ಜನಪ್ರಿಯ ಆಯ್ಕೆಯಾಗಿರುವ ಕಿಯಾ ಸಾನೆಟ್ (kia sonet), ಇದೀಗ ಫೇಸ್‌ಲಿಫ್ಟ್‌ ಪಡೆದು ಬಿಡುಗಡೆಗೆ ಸಜ್ಜಾಗುತ್ತಿದೆ. ಮೂಲಗಳ ಪ್ರಕಾರ ಹೊಸ ಮುಂಭಾಗದ ಬಂಪರ್, ಹೆಡ್‌ಲ್ಯಾಂಪ್ ಜೋಡಣೆ, ಅಲಾಯ್ ವೀಲ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ ಹಿಂದಿನ ಅಂಶಗಳೊಂದಿಗೆ ಬರಲಿದೆ. ಒಳಭಾಗವು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಫೇಸ್‌ಲಿಫ್ಟೆಡ್ ಮಹೀಂದ್ರಾ XUV300: mahindra XUV300 ಗಮನಾರ್ಹವಾದ ಅಪ್‌ಗ್ರೇಡ್‌ನೊಂದಿಗೆ ಬರುತ್ತಿದೆ. 2024 ರ ಆರಂಭದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಹೊಸ LED ಟೈಲ್‌ಲೈಟ್ ಮತ್ತು XUV700 ಅನ್ನು ನೆನಪಿಸುವ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡ ರಿಫ್ರೆಶ್ ಮಾಡಿದ ಹೊರಭಾಗವನ್ನು ಹೊಂದಿರಲಿದೆ. ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಇಮಟೀರಿಯರ್ ಹೊಸ ಮೇಕ್ ಓವರ್ ಪಡೆಯುವ ನಿರೀಕ್ಷೆಯಿದೆ.

most-awaited-2024-cars-tata-maruti-mahindra-toyota

ಮುಂದಿನ ತಲೆಮಾರಿನ ಮಾರುತಿ ಸ್ವಿಫ್ಟ್: ಸುಜುಕಿ ಇತ್ತೀಚೆಗೆ 2023 ರ ಜಪಾನ್ ಮೊಬಿಲಿಟಿ ಶೋನಲ್ಲಿ ಮಿನಿ ಕೂಪರ್‌ನಿಂದ ಪ್ರೇರಿತವಾದ ವಿನ್ಯಾಸದ ಅಂಶಗಳ ಬಗ್ಗೆ ಸುಳಿವು ನೀಡಿದೆ. ಪ್ರಮುಖ ಮುಖ್ಯಾಂಶವೆಂದರೆ ದೃಢವಾದ 1.2-ಲೀಟರ್, ಮೂರು-ಸಿಲಿಂಡರ್, ನ್ಯಾಚುರಲ್ಲಿ-ಆಸ್ಪಿರೇಟೆಡ್, ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಪರ್ಫಾಮೆನ್ಸ್ ಮೇಲೆ ಯಾವುದೇ ರಾಜಿ ಇಲ್ಲದೆ ಭರ್ಜರಿ ಮೈಲೇಜ್ ನೀಡಲಿದೆ.

ಮುಂದಿನ ತಲೆಮಾರಿನ ಮಾರುತಿ ಡಿಜೈರ್: ಹೊಸ ಸ್ವಿಫ್ಟ್ ಜೊತೆಗೆ, ಮಾರುತಿ ಸುಜುಕಿಯು 4ನೇ-ಜನ್ ಡಿಜೈರ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಡಿಜೈರ್ ಸ್ವಿಫ್ಟ್‌ನಂತೆಯೇ ವಿಶೇಷತೆಗಳನ್ನು ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ. ಹೊಸ 1.2-ಲೀಟರ್, ಮೂರು-ಸಿಲಿಂಡರ್, ನ್ಯಾಚುರಲ್ಲಿ-ಆಸ್ಪಿರೇಟೆಡ್ ಮತ್ತು ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ. ಇದು ಸುಧಾರಿತ ವೈಶಿಷ್ಟ್ಯಗಳನ್ನು ಸಹ ಹೊಂದಿರುತ್ತದೆ.

most-awaited-2024-cars-tata-maruti-mahindra-toyota

ಟೊಯೊಟಾ ಟೈಸರ್: ಟೊಯೊಟಾ ತನ್ನ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ಆವೃತ್ತಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದನ್ನು ಟೈಸರ್ ಎಂದು ಹೆಸರಿಸಲಾಗಿದೆ ಎಂಬ ವದಂತಿಗಳಿವೆ. ಎರಡು ಬ್ರಾಂಡ್‌ಗಳ ನಡುವಿನ ಇತರ ಸಹಯೋಗದ ಮಾದರಿಗಳಂತೆ, ಟೊಯೋಟಾದ ಆವೃತ್ತಿಯು ವಿಶಿಷ್ಟವಾದ ಬಾಹ್ಯ ಅಂಶಗಳನ್ನು ಮತ್ತು ವಿಭಿನ್ನ ಇಂಟೀರಿಯರ್ ಥೀಮ್ ಅನ್ನು ಹೊಂದಿದೆ. ಎಂಜಿನ್ ಆಯ್ಕೆಗಳು ಒಂದೇ ಆಗಿರುತ್ತವೆ ಎಂದು ಹೇಳಲಾಗಿದೆ.

ಟಾಟಾ ಪಂಚ್ ಇವಿ: ಟಾಟಾ ತನ್ನ ಎಲೆಕ್ಟ್ರಿಕ್ ವಾಹನ ಶ್ರೇಣಿಯನ್ನು ಪಂಚ್ ಇವಿಯೊಂದಿಗೆ ವಿಸ್ತರಿಸಲು ನೋಡುತ್ತಿದೆ. 10.25 ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸೇರಿದಂತೆ ಪರಿಷ್ಕೃತ ಮುಂಭಾಗ ಮತ್ತು ಆಂತರಿಕ ನವೀಕರಣಗಳನ್ನು ಪಂಚ್ ಇವಿ ಪಡೆಯಲಿದೆ. ಬ್ಯಾಟರಿ ವಿಶೇಷಣಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ, ಆದರೆ ಪಂಚ್ EV 500km ವರೆಗಿನ ರೇಂಜ್ ಒದಗಿಸುವ ನಿರೀಕ್ಷೆಯಿದೆ.

most-awaited-2024-cars-tata-maruti-mahindra-toyota

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

More from DriveSpark

Article Published On: Wednesday, December 6, 2023, 8:30 [IST]
English summary
Most awaited 2024 cars tata maruti mahindra toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+