Reliable Cars: ಟೊಯೊಟಾ ಇನೋವಾ ಸೇರಿ ಭಾರತದ ಅತ್ಯಂತ ವಿಶ್ವಾಸಾರ್ಹ ಕಾರುಗಳಿವು....
ಪ್ರತಿಯೊಬ್ಬರಿಗೂ ಸ್ವಂತವಾಗಿ ಒಂದು ಕಾರು ಖರೀದಿಸಬೇಕೆಂಬುವುದು ಒಂದು ಕನಸಾಗಿರುತ್ತದೆ. ಕಾರು ಖರೀದಿಸುವಾಗ ಅದರ ಬೆಲೆ ಎಷ್ಟು ಎಂದು ಪರಿಶೀಲಿಸಿಸುತ್ತಾರೆ. ನಂತರ ಆ ಕಾರಿನ ವಿಶ್ವಾಸಾರ್ಹತೆಯು ಕೂಡ ಒಂದು ಪ್ರಮುಖ ಅಂಶವಾಗಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ವಿಶ್ವಾಸಾರ್ಹ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಮಾರುತಿ ಸುಜುಕಿ ಆಲ್ಟೋ 800: ಮಾರುತಿ ಸುಜುಕಿ ಆಲ್ಟೋ 800 ವಿಶ್ವಾಸಾರ್ಹತೆಗಾಗಿ ಪರಿಪೂರ್ಣವಾದ ಕಾರ್ ಆಗಿದೆ. ಈ ಕಾರಿನಲ್ಲಿ ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿಲ್ಲದವರು ಕೆಲವು ಅತ್ಯವಶಕವಾದ ಮೂಲಭುತ ಫೀಚರ್ಸ್ ಗಳನ್ನು ಹೊಂದಿವೆ. ಹಲವು ವರ್ಷಗಳಿಂದ ಮಾರಾಟವಾಗುತ್ತಿರುವ ಈ ಮಾರುತಿ ಸುಜುಕಿ ಆಲ್ಟೋ 800 ಕಾರು ಗ್ರಾಹಕರ ವಿಶ್ವಾಸವನ್ನು ಪಡೆದುಕೊಂಡ ಮಾದರಿಯಾಗಿದೆ. ಈ ಮಾರುತಿ ಸುಜುಕಿ ಆಲ್ಟೋ 800 ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3.54 ಲಕ್ಷವಾಗಿದೆ.

ಹೋಂಡಾ ಸಿಟಿ: ಹೋಂಡಾ ಸಿಟಿ ಕಂಪನಿಯ ಜಾಗತಿಕ ಉತ್ಪನ್ನವಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಕಾಲು ಶತಮಾನಕ್ಕೂ ಹೆಚ್ಚು ಕಾಲ ಮಿಂಚುತ್ತಿರುವ ಕಾರ್ ಆಗಿದೆ, ಇದು ಉತ್ತಮವಾದ ಜಪಾನೀಸ್ ಸೆಡಾನ್ ಆಗಿದ್ದು, ಪೆಟ್ರೋಲ್ ಎಂಜಿನ್‌ಗಳನ್ನು ಹೊಂದಿದೆ. ಈ ಇಂಜಿನ್‌ಗಳು ವರ್ಕ್‌ಹಾರ್ಸ್ ಎಂದು ಕರೆಯಲ್ಪಡುತ್ತವೆ. ಇದು ಹಲವಾರು ಲಕ್ಷ ಕಿಲೋಮೀಟರ್‌ಗಳವರೆಗೆ ಬಾಳಿಕೆ ಬಂದಿವೆ. ಈ ಹೋಂಡಾ ಸಿಟಿ ಆರಂಭಿಕ ಎಕ್ಸ್ ಶೋ ರೂಂ ಪ್ರಕಾರ ರೂ. 11.49 ಲಕ್ಷವಾಗಿದೆ.
ಮಹೀಂದ್ರಾ ಬೊಲೆರೋ: ಈ ಮಹೀಂದ್ರಾ ಬೊಲೆರೋ ವಾಹನಕ್ಕೆ ಯಾವುದೇ ಪರಿಚಯ ಅಗತ್ಯವಿಲ್ಲ, ಇದು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಈ ಕಾರು ನಗರಗಳು ಮತ್ತು ಗ್ರಾಮೀಣ ಭಾರತದಲ್ಲಿನ ಮಾರುಕಟ್ಟೆಗಳಲ್ಲಿ ಪ್ರಾಬಲ್ಯ ಸಾಧಿಸಿದೆ. ಇದು ಇಂದು ಭಾರತೀಯ ಮಾರುಕಟ್ಟೆಯಲ್ಲಿ ಇರುವ ಅತ್ಯಂತ ಬಾಳಿಕೆ ಬರುವ ವಾಹನಗಳಲ್ಲಿ ಒಂದಾಗಿದೆ. ಈ ಮಹೀಂದ್ರಾ ಬೊಲೆರೋ ಪ್ರಾರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.9.78 ಲಕ್ಷವಾಗಿದೆ.

ಮಾರುತಿ ಸುಜುಕಿ ಎರ್ಟಿಗಾ: ಈ ಮಾರುತಿ ಸುಜುಕಿ ಕಂಪನಿಯ ಮತ್ತೊಂದು ಕಾರು ಎರ್ಟಿಗಾ. ಈ ಕಾರನ್ನು ಇತ್ತೀಚೆಗೆ ಟ್ಯಾಕ್ಸಿಯಾಗಿ ಉಪಯೋಗಿಸುತ್ತಿದ್ದಾರೆ. ಈ 7-ಸೀಟರ್ ಎಂಪಿವಿಯು ಕೈಗೆಟುಕುವ ದರವಾಗಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆದುಕೊಂಡಿದೆ. ಇನ್ನು ಈ ಮಾರುತಿ ಸುಜುಕಿ ಎರ್ಟಿಗಾ ಕಾರು ಅತ್ಯುತ್ತಮ ಫೀಚರ್ಸ್ ಗಳನ್ನು ಹೊಂದಿವೆ. ಈ ಎಂಪಿವಿಯು ಆರಂಭಿಕ ಬೆಲೆಯು ಎಕ್ಸ್ ಶೋರೂಂ ಬೆಲೆಯು ರೂ.11.49 ಲಕ್ಷವಾಗಿದೆ,
ಟೊಯೊಟೊ ಇನೋವಾ ಕ್ರಿಸ್ಟಾ: ಈ ಟೊಯೊಟಾ ಕ್ರಿಸ್ಟಾವು Hilux ಪಿಕಪ್ ಅನ್ನು ಆಧರಿಸಿದ ಎಂಪಿವಿಯಾಗಿದೆ. ಈ ಎಂಪಿವಿಯಲ್ಲಿಯ ಜನಪ್ರಿಯತೆ ಎಷ್ಟರಮಟ್ಟಿಗಿದೆಯೆಂದರೆ, ಕಳೆದ ವರ್ಷ ಅದನ್ನು ಸ್ಥಗಿತಗೊಳಿಸಿದ ನಂತರ, ಟೊಯೊಟಾ ಕಂಪನಿಯು ಈ ಎಂಪಿವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಮರುಪರಿಚಯಿಸಿದೆ. ಈ ಎಂಪಿವಿಯು ಫ್ಯಾಮಿಲಿ ಕಾರ್ ಆಗಿಯೂ ಹೆಚ್ಚು ಜನಪ್ರಿಯತೆ ಗಳಿಸಿದೆ. ಈ ಟೊಯೊಟೊ ಇನೋವಾ ಕ್ರಿಸ್ಟಾ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.19.99 ಲಕ್ಷವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂದಿಸಿದ ಸುದ್ದಿಗಳನ್ನು ನೀಡುತ್ತೇವೆ. ಸೋಷಿಯಲ್ ಮೀಡಿಯಾಗಳ ಮೂಲಕವು ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡಲು ಮರೆಯದಿರಿ.
ಟೊಯೊಟಾ ಫಾರ್ಚುನರ್: ಈ ಫಾರ್ಚುನರ್ ಎಸ್‍ಯುವಿಯ ಟೊಯೊಟಾ ಕಂಪನಿಯ ಮತ್ತೊಂದು ವಾಹನವಾಗಿದ್ದು ಅದು Hilux ಪಿಕಪ್‌ನ ಆಧಾರವಾಗಿದೆ, ಆದರೆ ಇಲ್ಲಿ ಇದು ದೊಡ್ಡ ಎಂಜಿನ್, ಬಲಿಷ್ಠ ಬಾಡಿ ಮತ್ತು ಸಸ್ಪೆಕ್ಷನ್ ನೊಂದಿಗೆ ಬರುತ್ತಿದೆ. ಈ ಟೊಯೊಟಾ ಫಾರ್ಚುನರ್ ಎಸ್‍ಯುವಿಯು ಗ್ರಾಹಕರ ವಿಶ್ವಾಸರ್ಹ ವಾಹನವಾಗಿದೆ. ಫುಲ್ ಸೈಜ್ ಎಸ್‍ಯುವಿ ವಿಭಾಗದಲ್ಲಿ ಹಲವು ವರ್ಷಗಳಿಂದ ಪಾರುಪತ್ಯ ಸಾಧಿಸುತ್ತಿದೆ. ಈ ಟೊಯೊಟಾ ಫಾರ್ಚುನರ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ, 32.59 ಲಕ್ಷವಾಗಿದೆ.


Click it and Unblock the Notifications