ಜೂನ್‌ನಲ್ಲಿ ಕಂಫಾರ್ಮ್: ಬಹುನೀರಿಕ್ಷಿತ ಮಾರುತಿ, ಹೋಂಡಾ SUVಗಳು ಬರಲಿವೆ.. ಇರುವ ದಾಖಲೆಗಳೆಲ್ಲ ಚಿಂದಿ!

ಭಾರತದ ಕಾರು ಮಾರುಕಟ್ಟೆಯಲ್ಲಿ ಜೂನ್‌ ತಿಂಗಳಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆಯಲಿದೆ. ಎರಡು ಜನಪ್ರಿಯ ಕಂಪನಿಗಳು ತಮ್ಮ ಕಾರುಗಳನ್ನು ಬಿಡುಗಡೆ ಹಾಗೂ ಅನಾವರಣ ಮಾಡಲಿವೆ. ಇವುಗಳ ಮೇಲೆ ಈಗಾಗಲೇ ಭಾರೀ ಕ್ರೇಜ್ ಸೃಷ್ಟಿಯಾಗಿದ್ದು, ಅದರಲ್ಲೊಂದು ಕಾರು ದೊಡ್ಡಮಟ್ಟದಲ್ಲಿ ಬುಕಿಂಗ್ ಪಡೆದುಕೊಂಡಿದೆ.

ಹೋಂಡಾ ತನ್ನ ಹೊಸ ಮಿಡ್ ಸೈಜ್ ಎಸ್‌ಯುವಿ ಎಲಿವೇಟ್ ಅನ್ನು ಜೂನ್ 6ರಂದು ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣ ಮಾಡಲಿದೆ. ಈ ಕಾರು, 1.5 ಲೀಟರ್ ಫೋರ್ ಸಿಲಿಂಡರ್ VTEC ಪೆಟ್ರೋಲ್ ಎಂಜಿನ್ ಹೊಂದಿದ್ದು, 121 PS ಗರಿಷ್ಠ ಪವರ್ ಹಾಗೂ 145 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, 6 ಸ್ವೀಡ್ MT ಅಥವಾ CVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು.

ಜೂನ್‌ನಲ್ಲಿ ಕಂಫಾರ್ಮ್: ಬಹುನೀರಿಕ್ಷಿತ ಮಾರುತಿ, ಹೋಂಡಾ SUVಗಳು ಬರಲಿವೆ.. ಇರುವ ದಾಖಲೆಗಳೆಲ್ಲ ಚಿಂದಿ!

1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ e:HEV ಪವರ್‌ಟ್ರೇನ್ ಆಯ್ಕೆಯನ್ನು ನಂತರ ಪರಿಚಯಿಸಲಿದೆ ಎಂದು ವರದಿಯಾಗಿದೆ. ಈಗಾಗಲೇ ದೇಶದ ರಸ್ತೆಗಳಲ್ಲಿ ಹೊಸ ಎಸ್‌ಯುವಿಯನ್ನು ಹಲವಾರು ಬಾರಿ ಪರೀಕ್ಷಿಸಲಾಗಿದ್ದು, ಇದು ಐದನೇ ತಲೆಮಾರಿನ ಹೋಂಡಾ ಸಿಟಿ ಸೆಡಾನ್ ಪ್ಲಾಟ್‌ಫಾರ್ಮ್ ಆಧರಿಸಿರಲಿದ್ದು, ಅದೇ ರೀತಿಯ ವಿನ್ಯಾಸವನ್ನು ಹೊಂದಿರಲಿದೆ. ಮಿಡ್ ಸೈಜ್ ಎಸ್‌ಯುವಿಯಾಗಿರುವುದರಿಂದ 4.3 ಮೀ. ವರೆಗೆ ಉದ್ಧವಿರಬಹುದು.

ವೈಶಿಷ್ಟ್ಯದ ವಿಚಾರಕ್ಕೆ ಬರುವುದಾದರೆ, ನೂತನ ಹೋಂಡಾ ಎಲಿವೇಟ್ ಎಸ್‌ಯುವಿ, 10 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆತ್ಯಾಧುನಿಕ ಸನ್ ರೂಫ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಸೇರಿದಂತೆ ಹಲವು ಫೀಚರ್ಸ್ ಹೊಂದಿರಲಿದೆ. ರೂ.8 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಖರೀದಿಗೆ ಸಿಗಲಿದ್ದು, ಈ ಕಾರಿಗೆ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಹಾಗೂ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಪ್ರತಿಸ್ಪರ್ಧಿಯಾಗಿವೆ.

ಜೂನ್‌ನಲ್ಲಿ ಕಂಫಾರ್ಮ್: ಬಹುನೀರಿಕ್ಷಿತ ಮಾರುತಿ, ಹೋಂಡಾ SUVಗಳು ಬರಲಿವೆ.. ಇರುವ ದಾಖಲೆಗಳೆಲ್ಲ ಚಿಂದಿ!

ಮಾರುತಿ ಸುಜುಕಿ ಕಂಪನಿ ತನ್ನ ಬಹುನಿರೀಕ್ಷಿತ 'ಜಿಮ್ನಿ 5 ಡೋರ್' ಎಸ್‌ಯುವಿಯನ್ನು ಜೂನ್ 7ರಂದು ಭಾರತದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ಎಸ್‌ಯುವಿಗೆ ಈಗಾಗಲೇ ದೊಡ್ಡಮಟ್ಟದಲ್ಲಿ ಬೇಡಿಕೆ ಸೃಷ್ಟಿಯಾಗಿದ್ದು, 30,000ಕ್ಕೂ ಅಧಿಕ ಬುಕಿಂಗ್ ಪಡೆದುಕೊಂಡಿದೆ. ಆಸಕ್ತ ಗ್ರಾಹಕರು, ಈಗಲೂ ಆರ್ಡರ್ ಮಾಡಬಹುದು. ಇದು ರೂ.10 ರಿಂದ ರೂ.12 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಲಿದೆ.

ಎಂಜಿನ್ ಹಾಗೂ ಮೈಲೇಜ್ ಬಗ್ಗೆ ಮಾತನಾಡುವುದಾದರೆ, ಇದರ 1.5-ಲೀಟರ್ ಪೆಟ್ರೋಲ್ ಎಂಜಿನ್, 103 bhp ಪವರ್, 134 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್/ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ. ಕಂಪನಿ ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ, ಮ್ಯಾನುವಲ್ ರೂಪಾಂತರ 16.94 km/l ಹಾಗೂ ಆಟೋಮೆಟಿಕ್ ರೂಪಾಂತರ 16.39 km/l ಮೈಲೇಜ್ ನೀಡಲಿದೆ.

ಮಾರುತಿ ಸುಜುಕಿ ಜಿಮ್ನಿ 5 ಡೋರ್ ಎಸ್‌ಯುವಿ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇದು, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್ ಬ್ಯಾಗ್ ಹೊಂದಿದೆ. ಜಿಮ್ನಿಗೆ ಮಹೀಂದ್ರಾ ಥಾರ್ ಪ್ರಬಲ ಪೈಪೋಟಿ ನೀಡಲಿದೆ.

ಒಟ್ಟಾರೆ, ಹೋಂಡಾದ ಎಲಿವೇಟ್ ಹಾಗೂ ಮಾರುತಿ ಸುಜುಕಿಯ ಜಿಮ್ನಿ ಈಗಾಗಲೇ ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿವೆ ಅದರಲ್ಲೂ ಎಲಿವೇಟ್ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಹೆಚ್ಚು ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ. ಮಾರುತಿ ಸುಜುಕಿ ಜಿಮ್ನಿ ಆಫ್ ರೋಡ್ ಕಾರಾಗಿರುವುದರಿಂದ ಕೊಂಚ ಕಡಿಮೆ ಮೈಲೇಜ್ ನೀಡಲಿದೆ. ಆದರೆ, ಬೆಲೆಯು ಸ್ಪರ್ಧಾತ್ಮಕವಾಗಿರಲಿದೆ.

Article Published On: Thursday, May 25, 2023, 18:04 [IST]
English summary
Much awaited two suvs coming early june confirmed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+