New Cars: ಮುಂದಿನ ವಾರವೇ ಬರಲಿವೆ ಭಾರತೀಯರ ಹೃದಯ ಗೆದ್ದಿರುವ 3 ಪ್ರಮುಖ ಕಾರುಗಳು

ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮುಂದಿನ ವಾರ ಪ್ರಮುಖ ಕಂಪನಿಗಳು ಮೂರು ಕಾರುಗಳು ಅನಾವರಣ ಹಾಗೂ ಬಿಡುಗಡೆಗೊಳ್ಳಲಿವೆ. ಈಗಾಗಲೇ, ಅವುಗಳ ಮೇಲೆ ಗ್ರಾಹಕರು ದೊಡ್ಡ ಮಟ್ಟದ ನೀರಿಕ್ಷೆ ಇಟ್ಟುಕೊಂಡಿದ್ದಾರೆ. ಎಂಜಿ ಕಾಮೆಟ್ ಇವಿ ಮತ್ತು ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ಲಾಂಚ್ ಆಗಲಿದ್ದು, ಸಿಟ್ರಸ್ ಸಿ3 ಏರ್‌ಕ್ರಾಸ್ ಅನಾವರಣಗೊಳ್ಳಲಿದೆ.

ಎರಡು ದಿನದ ಹಿಂದೆಯಷ್ಟೇ ದೇಶದಲ್ಲಿ ಅನಾವರಣಗೊಂಡಿರುವ ಎಂಜಿ ಕಾಮೆಟ್ ಇವಿ ಏಪ್ರಿಲ್ 26ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಪುಟ್ಟ ಎಲೆಕ್ಟ್ರಿಕ್ ಕಾರು, ತನ್ನ ಆಕರ್ಷಕ ನೋಟದಿಂದ ಈಗಾಗಲೇ ಭಾರತೀಯ ಹೃದಯ ಗೆದ್ದಿದ್ದು, ಇದನ್ನು GSEV (ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್) ಪ್ಲಾಟ್‌ಫಾರ್ಮ್ ಅಡಿ ನಿರ್ಮಿಸಲಾಗಿದೆ. ನೂತನ ಕಾಮೆಟ್ ಇವಿ, ಅತ್ಯಾಧುನಿಕ ಎಲ್ಇಡಿ DRLs, ಎಲ್ಇಡಿ ಹೆಡ್ ಲೈಟ್ಸ್, ಎಲ್ಇಡಿ ಟರ್ನ್ ಸಿಗ್ನಲ್ ಅನ್ನು ಹೊಂದಿದೆ.

New Cars: ಮುಂದಿನ ವಾರದಿಂದಲೇ ಬಿರುಗಾಳಿ ಎಬ್ಬಿಸಲಿವೆ 3 ಪ್ರಮುಖ ಕಾರುಗಳು.. ಈಗಾಗಲೇ ಭಾರತೀಯ ಹೃದಯ ಗೆದ್ದಿವೆ!

ಈ ಕಾರು, ಹತ್ತು ಹಲವು ವೈಶಿಷ್ಟ್ಯವನ್ನು ಹೊಂದಿದ್ದು, ಪ್ರಮುಖವಾಗಿ ಇನ್ಫೋಟೈನ್ಮೆಂಟ್ ಸಿಸ್ಟಮ್, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ 10.25 ಇಂಚಿನ ಟ್ವಿನ್ ಸ್ಕ್ರೀನ್ ಅನ್ನು ಪಡೆದಿದೆ. ಜೊತೆಗೆ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯವನ್ನು ಹೊಂದಿದೆ. ಇದರಲ್ಲಿ ಬಳಕೆ ಮಾಡಿರುವ 7.3 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ 230 km ರೇಂಜ್ ನೀಡಲಿದೆ. ಅರೋರಾ ಸಿಲ್ವರ್, ಸ್ಟಾರ್ರಿ ಬ್ಲಾಕ್ ಸೇರಿದಂತೆ ಐದು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.

ಮಾರುತಿ ಸುಜುಕಿ ಕಂಪನಿ ಬಹುತೇಕ ಮುಂದಿನ ವಾರವೇ 'ಫ್ರಾಂಕ್ಸ್' ಎಸ್‌ಯುವಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಕಳೆದ ಜನವರಿಯಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಇದನ್ನು ಅನಾವರಣ ಮಾಡಿ, ಬುಕ್ಕಿಂಗ್ ಕೂಡ ಪ್ರಾರಂಭಿಸಲಾಗಿತ್ತು. ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಈ ಎಸ್‌ಯುವಿಗಾಗಿ ಗ್ರಾಹಕರು ಆರ್ಡರ್ ಮಾಡಿದ್ದು, ನೆಕ್ಸಾ ಡೀಲರ್‌ಶಿಪ್‌ ಮೂಲಕ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡಲು ಕಂಪನಿ ತೀರ್ಮಾನಿಸಿದೆ. ಸುಮಾರು ರೂ.7 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಬಹುದು.

ಈ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿಯ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 1.2 ಲೀಟರ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ 1 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದೆ. ಜೊತೆಗೆ 9.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆರ್ಕಮಿಸ್ ಸೌಂಡ್ ಸಿಸ್ಟಮ್ ನಂತಹ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದ್ದು, ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ABS, EBDಯನ್ನು ಪಡೆದಿದೆ.

ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ವೋಕ್ಸ್‌ವ್ಯಾಗನ್ ಟೈಗುನ್ ಮತ್ತು ಸ್ಕೋಡಾ ಕುಶಾಕ್‌ಗೆ ಪ್ರತಿಸ್ಪರ್ಧಿಯಾಗಿ, ಸಿಟ್ರಸ್ ಇಂಡಿಯಾ ಏಪ್ರಿಲ್ 27ರಂದು 'ಸಿ3 ಏರ್‌ಕ್ರಾಸ್' ಎಸ್‌ಯುವಿಯನ್ನು ಅನಾವರಣ ಮಾಡಲಿದೆ. ಇದು, ಸಿ5 ಏರ್‌ಕ್ರಾಸ್, ಸಿ3 ಮತ್ತು ಇಸಿ3 ಎಲೆಕ್ಟ್ರಿಕ್ ಕಾರಿನ ಬಳಿಕ, ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿರುವ ಕಂಪನಿಯ ನಾಲ್ಕನೇ ಕಾರಾಗಿದೆ. ಇದು, ನೂತನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಕ್ಲಸ್ಟರ್, ಆಕರ್ಷಕ ವಿನ್ಯಾಸದ ಸ್ಟೀರಿಂಗ್ ವೀಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಸಿಟ್ರಸ್ ಸಿ3 ಏರ್‌ಕ್ರಾಸ್ ಎಸ್‌ಯುವಿ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಎರಡು ಎಂಜಿನ್ ಆಯ್ಕೆಯನ್ನು ಹೊಂದಿರಲಿದ್ದು, 1.2 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ 110 bhp ಗರಿಷ್ಠ ಪವರ್ ಹಾಗೂ 190 Nm ಪೀಕ್ ಟಾರ್ಕ್, 1.2-ಲೀಟರ್ 3 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 82 bhp ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಅಥವಾ 6 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು.

ಒಟ್ಟಾರೆ, ಭಾರತದ ಮಾರುಕಟ್ಟೆಗೆ ಮುಂದಿನ ವಾರ ಬರಲಿರುವ ಎಂಜಿ ಕಾಮೆಟ್ ಇವಿ, ಮಾರುತಿ ಸುಜುಕಿ ಫ್ರಾಂಕ್ಸ್ ಹಾಗೂ ಸಿಟ್ರಸ್ ಸಿ3 ಏರ್‌ಕ್ರಾಸ್ ಎಸ್‌ಯುವಿಗಳು ದೊಡ್ಡಮಟ್ಟದಲ್ಲಿ ನೀರಿಕ್ಷೆ ಹುಟ್ಟುಹಾಕಿದ್ದು, ಸದ್ಯ ಭಾರತದ ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಫ್ರಾಂಕ್ಸ್ ಎಸ್‌ಯುವಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದುಕೊಳ್ಳುವ ಮೂಲಕ ಬಹುಬೇಡಿಕೆಯನ್ನು ಪಡೆದುಕೊಂಡಿದೆ.

Article Published On: Friday, April 21, 2023, 15:19 [IST]
English summary
New cars launch unveil next week india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+