ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹೋಂಡಾ ಹೈಬ್ರಿಡ್ ಎಸ್‍ಯುವಿ

ಜಪಾನಿನ ವಾಹನ ತಯಾರಕ ಕಂಪನಿಯಾದ ಹೋಂಡಾ ತನ್ನ ಎರಡು ಹೊಸ ಎಸ್‍ಯುವಿಗಳನ್ನು ಭಾರತೀಯ ಮಾರುಕಟ್ಟೆಗೆ ಸಿದ್ಧಪಡಿಸುತ್ತಿದೆ. ಹೋಂಡಾ ಕಂಪನಿಯು 2023 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅಮೇಜ್ ಸೆಡಾನ್ ಪ್ಲಾಟ್‌ಫಾರ್ಮ್ ಆಧಾರಿತ ಅಭೂತಪೂರ್ವ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಪರಿಚಯಿಸುತ್ತದೆ. ಹೊಸ ಹೋಂಡಾ ಎಸ್‍ಯುವಿಯು ಬಿಡುಗಡೆಯಾಗಲು ಸಜ್ಜಾಗುತ್ತಿದೆ.

ಹೋಂಡಾ ಕಂಪನಿಯು ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಸುಜುಕಿ ಬ್ರೆಝಾಗೆ ಪೈಪೋಟಿಯಾಗಿ ಹೊಸ ಮಿಡ್ ಸೈಜ್ ಗಾತ್ರದ ಎಸ್‌ಯುವಿ ಮತ್ತು ಸಬ್ -4 ಮೀಟರ್ ಎಸ್‌ಯುವಿಯನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿದ್ದಾರೆ. ಎರಡೂ ಹೊಸ ಮಾದರಿಗಳನ್ನು ಅಮೇಜ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ವಿನ್ಯಾಸಗೊಳಿಸಲಾಗುವುದು. ಹೊಸ ವರದಿಯ ಪ್ರಕಾರ, ಹೋಂಡಾದ ಹೊಸ ಮಧ್ಯಮ ಗಾತ್ರದ ಎಸ್‍ಯುವಿ (ಕೋಡ್ ನೇಮ್ - PF2) ಏಪ್ರಿಲ್ 2023ರ ವೇಳೆಗೆ ಶೋರೂಮ್‌ಗಳನ್ನು ತಲುಪಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹೋಂಡಾ ಹೈಬ್ರಿಡ್ ಎಸ್‍ಯುವಿ

ಸುಮಾರು 4.2 ಮೀಟರ್ ಉದ್ದದ, ಹೊಸ ಹೋಂಡಾ ಎಸ್‍ಯುವಿ ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಹೋಂಡಾ ಕಂಪನಿಯು ಭಾರತದಲ್ಲಿ ಎಸ್‍ಯುವಿ ಮಾದರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿತಿಲ್ಲ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಎಸ್‍ಯುವಿ ಮಾದರಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಹೋಂಡಾ ಕಂಪನಿಯು ಹೊಸ ಎಸ್‍ಯುವಿ ಮಾದರಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ, ಹೋಂಡಾ ಕಂಪನಿಯು ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸುವ ಯೋಜನೆಯ ಬಗ್ಗೆ ವಿವರಗಳನ್ನು ಗೌಪ್ಯವಾಗಿ ಇರಿಸಲಾಗಿದೆ,

ಭಾರತೀಯ ಮಾರುಕಟ್ಟೆಯಲ್ಲಿ, ಹೊಸ ಹೋಂಡಾ ಎಸ್‌ಯುವಿ ನೇರವಾಗಿ ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಾಕ್, ಕಿಯಾ ಸೆಲ್ಟೋಸ್, ವಿಡಬ್ಲ್ಯೂ ಟೈಗುನ್ ಮತ್ತು ಎಂಜಿ ಆಸ್ಟರ್ ಎಸ್‍ಯುವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಇದು ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಸಹ ಪಡೆಯುತ್ತದೆ ಮತ್ತು ಈ ಹೈಬ್ರಿಡ್ ಮಾದರಿಯು ಟೊಯೋಟಾ ಅರ್ಬನ್ ಹೈರೈಡರ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್‌ಗೆ ಪ್ರತಿಸ್ಪರ್ಧಿಯಾಗಲಿದೆ. ಈ ಎರಡು ಮಾದರಿಗಳು ಬಲವಾದ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ.

ಕೆಲವು ವರದಿಗಳ ಪ್ರಕಾರ ಮಿಡ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಬಹುದು. ಭಾರತದಲ್ಲಿ ಬೆಳೆಯುತ್ತಿರುವ ಮತ್ತು ಹೆಚ್ಚು ಸ್ಪರ್ಧಾತ್ಮಕ ಎಸ್‍ಯುವಿ ವಿಭಾಗದಲ್ಲಿ ಹೋಂಡಾ ಹೆಚ್‍ಆರ್-ವಿ ಉತ್ತಮವಾದ ಫಿಟ್ ಆಗಿರಬಹುದು. ಇದಲ್ಲದೆ, ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯು ಬಿಡುಗಡೆಯಾಗುವ ಸಾಧ್ಯತೆಗಳಿದೆ ಎಂದು ಹೇಳಲಾಗುತ್ತಿದೆ. ಹೋಂಡಾ ಕಂಪನಿಯು ಇತ್ತೀಚೆಗೆ, ಯುಎಸ್ ಮಾರುಕಟ್ಟೆಯಲ್ಲಿ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ. ಹೋಂಡಾ ಕಂಪನಿಯು ಎಸ್‍ಯುವಿ ವಿಭಾಗಕ್ಕೆ ಪ್ರಮುಖ ಮರು-ಪ್ರವೇಶಕ್ಕೆ ಭರ್ಜರಿಯಾಗಿ ಸಜ್ಜಾಗುತ್ತಿದೆ.

ಭಾರತದಲ್ಲಿ ಹೋಂಡಾದ ಪ್ರಸ್ತುತ ಉತ್ಪನ್ನ ಪೋರ್ಟ್‌ಫೋಲಿಯೋ ಹೋಂಡಾ ಅಮೇಜ್, ಹೋಂಡಾ ಸಿಟಿ (4ನೇ ಜನರೇಷನ್), ಹೋಂಡಾ ಸಿಟಿ (5ನೇ ಜನರೇಷನ್), ಹೋಂಡಾ ಜಾಝ್ ಮತ್ತು ಹೋಂಡಾ ಡಬ್ಲ್ಯುಆರ್-ವಿ ಒಳಗೊಂಡಿದೆ. ಹೋಂಡಾ ಇತ್ತೀಚೆಗೆ, ಯುಎಸ್ ಮಾರುಕಟ್ಟೆಯಲ್ಲಿ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ. ವಿದೇಶಿ ಮಾರುಕಟ್ಟೆಯಲ್ಲಿ 2022ರ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಬಹು ಡ್ರೈವ್‌ಟ್ರೇನ್ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಿತು. ಈ ಹೈಬ್ರಿಡ್ ವ್ಯವಸ್ಥೆಯು ಭಾರತದಲ್ಲಿ ಹೊಸ ಹೋಂಡಾ ಸಿಟಿ ಇಹೆಚ್‌ಇವಿ ಹೈಬ್ರಿಡ್‌ನಲ್ಲಿ ಬರುವಂತೆಯೇ ಇರುತ್ತದೆ.

2022ರ ಹೋಂಡಾ ಹೆಚ್‍ಆರ್-ವಿ ಕ್ರಾಸ್ಒವರ್ ನವೀಕರಣಗಳಿಗೆ ಸಂಬಂಧಿಸಿದಂತೆ, ಹೊಸ ಮತ್ತು ಹೆಚ್ಚು ಆಧುನಿಕ ಮತ್ತು ಫ್ಯೂಚರಿಸ್ಟಿಕ್-ಕಾಣುವ ವಿನ್ಯಾಸಕ್ಕಾಗಿ ಹಳೆಯ ಬಾಹ್ಯ ಶೈಲಿಯನ್ನು ಹೊಂದಿದೆ. ಈ ವಾಹನದ ಮುಂಭಾಗವು ಹೊಸ ಬಾಡಿ ಬಣ್ಣದ ಮಲ್ಟಿ-ಸ್ಲೇಟೆಡ್ ಗ್ರಿಲ್ ಅನ್ನು ಪಡೆಯುತ್ತದೆ ಅದು ಸ್ವಲ್ಪಮಟ್ಟಿಗೆ ಇವಿ ಕಾರಿನಂತೆ ಕಾಣುತ್ತದೆ. ಇದು ಡಿಆರ್‌ಎಲ್‌ಗಳೊಂದಿಗೆ ನಯವಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಇದರೊಂದಿಗೆ ಮೆಶ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ಲೋವರ್ ಬಂಪರ್ ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಸಹ ಹೊಂದಿದೆ,

ಬದಿಗೆ ಚಲಿಸುವಾಗ, ನೋಟವು ಕೂಪ್ ಎಸ್‍ಯುವಿನಂತೆ ಕಾಣುತ್ತದೆ. ಈ ಎಸ್‍ಯುವಿ ಹಿಂಭಾಗದಲ್ಲಿ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಬಂಪರ್ ಮತ್ತು ಹೆಚ್ಚು ಸ್ಪಷ್ಟವಾದ ಸ್ಕಿಡ್ ಪ್ಲೇಟ್ ಜೊತೆಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಎಲ್ಇಡಿ ಟೈಲ್ ಲ್ಯಾಂಪ್‌ಗಳ ಸೆಟ್ ಅನ್ನು ಹೊಂದಿದೆ. ಈ ಎಸ್‍ಯುವಿ ಇತರ ಫೀಚರ್ಸ್ ಗಳು, ಹೋಂಡಾ ಸೆನ್ಸಿಂಗ್, ಮಧ್ಯದಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಮತ್ತು ಸ್ಟ್ಯಾಂಡರ್ಡ್ ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲೈಟ್‌ಗಳನ್ನು ಒಳಗೊಂಡಿದೆ. ಎರಡು ಮೋಟಾರ್‌ಗಳೊಂದಿಗೆ ಜೋಡಿಸಲಾದ 1.5 ಲೀಟರ್ ನ್ಯಾಚುರಲ್ ಆಸ್ಪರಡ್ ಎಂಜಿನ್ ಮತ್ತು ಚ್ಚುವರಿ 1.5-ಲೀಟರ್ ಎಂಜಿನ್ ಆಯ್ಕೆಗಳನ್ನು ಸಹ ಹೊಂದಿದೆ.

Most Read Articles

Kannada
Read more on ಹೋಂಡಾ honda
English summary
New honda hybrid suv launch to be 2023 details
Story first published: Thursday, January 5, 2023, 9:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X