ನೋಡುಗರನ್ನು ಮಂತ್ರಮುಗ್ಧಗೊಳಿಸುವ ವಿನ್ಯಾಸದಲ್ಲಿ MG ಕಾಮೆಟ್ ಗೇಮರ್ ಎಡಿಷನ್ ಬಿಡುಗಡೆ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ತನ್ನ ಬಹುನಿರೀಕ್ಷಿತ ಹೊಸ ಎಂಜಿ ಕಾಮೆಟ್ ಎಂಬ ಹೊಸ ಪುಟ್ಟ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಬಿರುಗಾಳಿ ಎಬ್ಬಿಸಿತು. ಇದೀಗ ಎಂಜಿ ಮೋಟಾರ್ ಕಂಪನಿಯು ಈ ಕಾಮೆಟ್ ಎಲೆಕ್ಟ್ರಿಕ್ ಕಾರಿನ ವಿಶೇಷ ಗೇಮರ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ.
ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನ ವಿಶೇಷ ಗೇಮರ್ ಆವೃತ್ತಿಯು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಭಾರತದ ಪ್ರಖ್ಯಾತ ನಮನ್ ಮಾಥುರ್ ಅಕಾ ಮಾರ್ಟಲ್ ಸಹಯೋಗದೊಂದಿಗೆ ವಿನ್ಯಾಸಗೊಳಿಸಲಾಗಿದೆ ಮತ್ತು ಪರಿಕಲ್ಪನೆ ಮಾಡಲಾಗಿದೆ. ಎಂಜಿ ಕಾಮೆಟ್ ವಿಶೇಷ ಗೇಮರ್ ಆವೃತ್ತಿಯ ವ್ಹೀಲ್ ಮತ್ತು ಡೋರಿನ ಮೇಲೆ ವಿಶೇಷ ಅಸ್ಸೆಂಟ್ ಗಳನ್ನು ಪಡೆಯುತ್ತದೆ. ಇನ್ನು ಈ ಕಾರಿನಲ್ಲಿ ಬಿ-ಪಿಲ್ಲರ್‌ನಲ್ಲಿ ಸ್ಟಿಕ್ಕರ್‌ಗಳನ್ನು ಪಡೆಯುತ್ತದೆ.

ಇನ್ನು ಈ ಕಾರಿನ ಒಳಗೆ ಸ್ಟಾಕ್ ಇಂಟೀರಿಯರ್‌ಗಳಿಗೆ ಕ್ಯಾಬಿನ್‌ನಲ್ಲಿ ನಿಯಾನ್ ಲ್ಯಾಂಪ್ ಗಳ ವರ್ಧಕವನ್ನು ನೀಡಲಾಗಿದೆ ಮತ್ತು ನಂತರದ ವಿಶೇಷ ವಿನ್ಯಾಸದ ವಸ್ತುಗಳ ಜೊತೆಗೆ ಕೀಯನ್ನು ನೀಡಲಾಗಿದೆ. ಇನ್ನು ಈ ಎಲೆಕ್ಟ್ರಿಕ್ ಕಾರಿನಲ್ಲಿ ಡಾರ್ಕ್ ಕ್ರೋಮ್ ಮತ್ತು ಮೆಟಲ್ ಫಿನಿಶ್‌ನಲ್ಲಿ ಲೈಟ್ ಮತ್ತು ನೆರಳಿನ ಆಟವು ಮೋಡಿಮಾಡುವ ಚಮತ್ಕಾರವನ್ನು ಸೃಷ್ಟಿಸುತ್ತದೆ, ಇದು ಅದ್ಭುತವಾಗಿದೆ. ಈ ವಿಶೇಷ ಗೇಮರ್ ಆವೃತ್ತಿಯ ಗೇಮಿಂಗ್ ಅನ್ನು ಇಷ್ಟಪಡುವವರನ್ನು ಆಕರ್ಷಿಸುತ್ತದೆ.
ಈ ಎಂಜಿ ಕಾಮೆಟ್ ಗೇಮರ್ ಎಡಿಷನ್ (MG Comet Gamer Edition) ಬೆಲೆ ಬಗ್ಗೆ ಹೇಳುವುದಾದರೆ, ಪ್ರಸ್ತುತ ಮಾರಾಟವಾಗುತ್ತಿರುವ ಎಂಜಿಜ್ ಕಾಮೆಂಟ್ ಕಾರಿಗಿಂತ ರೂ.64,999 ಹೆಚ್ಚು ದುಬಾರಿಯಾಗಿದೆ. ಇನ್ನು ಈ ಎಂಜಿ ಕಾಮೆಟ್ ಕಾರಿನ ಬಗ್ಗೆ ಹೇಳುವುದಾದರೆ, ಇದು ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಮಾತ್ತವಲ್ಲದೇ, ಇತರ ದೇಶಗಳಲ್ಲಿಯೂ ಮಾರಾಟದಲ್ಲಿದೆ. ಅವುಗಳಲ್ಲಿ ಒಂದು ಇಂಡೋನೇಷ್ಯಾ, ಅಲ್ಲಿ ಇದನ್ನು ವುಲಿಂಗ್ ಏರ್ ಇವಿ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.

ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಎಂಟ್ರಿ ಲೆವೆಲ್ ಪೇಸ್ ರೂಪಾಂತರದಲ್ಲಿ 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀಲೆಸ್ ಎಂಟ್ರಿ, ಬ್ಲೂಟೂತ್ ಕನೆಕ್ಟಿವಿಟಿ ಸಿಸ್ಟಂ,ಮ್ಯಾನುಯಲ್ ಎಸಿ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, 2 ಸ್ಪೀಕರ್‌ಗಳು, 3 ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು, ಸ್ಪ್ಲಿಟ್ ಫೋಲ್ಡಿಂಗ್ ರಿಯರ್ ಸೀಟ್‌ಗಳು, ಪವರ್ ಹೊಂದಾಣಿಕೆಯಂತಹ ಫೀಚರ್ಸ್ ಹೊಂದಿದೆ.
ಇದರೊಂದಿಗೆ . ORVM ಗಳು, ಬ್ಲ್ಯಾಕ್ ಆಂತರಿಕ ಥೀಮ್, ಫ್ಯಾಬ್ರಿಕ್ ಅಪ್ಹೋಲ್ಸ್ಟರಿ, ಎಲೆಕ್ಟ್ರಿಕ್ ಅಡ್ಜೆಸ್ಟ್ ಮಾಡಬಹುದಾದ ವಿಂಗ್ ಮಿರರ್‌ಗಳು, ರಿಮೋಟ್ ಸೆಂಟ್ರಲ್ ಲಾಕಿಂಗ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, EBD ಜೊತೆಗೆ ABS, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ರಿವರ್ಸ್ ಪಾರ್ಕಿಂಗ್ ಸೀಟ್‌ಗಳು ಮತ್ತು Isofix ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳನ್ನು ಹೊಂದಿವೆ.
ಈ ಕಾರಿನ ಮಿಡ್-ಸ್ಪೆಕ್ ಪ್ಲೇ ರೂಪಾಂತರವು ಬೇಸ್ ಪೇಸ್ ರೂಪಾಂತರದ ಮೇಲೆ ಕೆಲವು ಹೆಚ್ಚುವರಿ ಫೀಚರ್ಸ್ ಗಳನ್ನು ಪಡೆಯುತ್ತದೆ. ಇನ್ನು ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳು , ಕನಕ್ಟಿವಿಟಿ ಮುಂಭಾಗ ಮತ್ತು ಹಿಂಭಾಗದ ಲ್ಯಾಂಪ್ ಗಳು, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಲೆದರ್ ಸುತ್ತಿದ ಸ್ಟೀರಿಂಗ್ ವೀಲ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಹೊಂದಿದೆ,
ಇದರೊಂದಿಗೆ ವಾಯ್ಸ್ ಕಾಮೆಂಡ್, ಫಾಸ್ಟ್ ಚಾರ್ಜಿಂಗ್ ಮತ್ತು ಸಂಪರ್ಕಿತ ಕಾರ್ ತಂತ್ರಜ್ಞಾನದೊಂದಿಗೆ 3 USB ಚಾರ್ಜಿಂಗ್ ಪೋರ್ಟ್‌ಗಳನ್ನು ಹೊಂದಿವೆ. ರೇಂಜ್-ಟಾಪ್ ಪ್ಲಶ್ ಡ್ರೈವರ್ ವಿಂಡೋಗೆ ಆಟೋ ಅಪ್ ಫಂಕ್ಷನ್, ಟಿಲ್ಟ್ ಅಡ್ಜಸ್ಟಬಲ್ (ಅಪ್-ಡೌನ್) ಸ್ಟೀರಿಂಗ್ ವೀಲ್, ಸ್ಮಾರ್ಟ್ ಸ್ಟಾರ್ಟ್ ಸಿಸ್ಟಮ್, ಬ್ಲೂಟೂತ್ ಜೊತೆ ಡಿಜಿಟಲ್ ಕೀ, ಅಪ್ರೋಚ್ ಅನ್‌ಲಾಕ್ ಫಂಕ್ಷನ್ ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ 6 ವಿಶೇಷ ಫೀಚರ್ಸ್ ಗಳನ್ನು ಹೊಂದಿವೆ.
ಎಂಜಿ ಕಂಪನಿಯು ನಾಲ್ಕು ಸ್ಟೈಲಿಂಗ್ ಪ್ಯಾಕೇಜ್‌ಗಳನ್ನು ಎಲ್ಲಾ ರೂಪಾಂತರಗಳನ್ನು ನೀಡುತ್ತಿದೆ. ಇದು ಸೆರಿನಿಟಿ, ಬೀಚ್ ಬೇ, ಫ್ಲೆಕ್ಸ್ ಮತ್ತು ಸನ್‌ಡೌನರ್. ಖರೀದಿದಾರರು ಲೊರೆಸ್ಟಾ, ಬ್ಲಾಸಮ್, ಡೇ ಆಫ್ ಡೆಡ್, ಸ್ಪೇಸ್ ಮತ್ತು ನೈಟ್ ಕೆಫೆಯಂತಹ ಬಹು ಸ್ಟಿಕ್ಕರ್ ಶೈಲಿಗಳಿಂದ ಆಯ್ಕೆ ಮಾಡಬಹುದು. ಈ ಕಾರಿನ ಹೆಸರು ಇಂಗ್ಲೆಂಡ್-ಆಸ್ಟ್ರೇಲಿಯಾ ಮ್ಯಾಕ್‌ರಾಬರ್ಟ್‌ಸನ್ ಏರ್ ರೇಸ್‌ನಲ್ಲಿ ಭಾಗವಹಿಸಿದ 1934 ರ ಸಾಂಪ್ರದಾಯಿಕ ಬ್ರಿಟಿಷ್ ವಿಮಾನದಿಂದ ಸ್ಫೂರ್ತಿ ಪಡೆದುಕೊಂಡಿದೆ.


Click it and Unblock the Notifications








