Just In
- 5 min ago
ರಾಜ್ಯದ ಈ ನಗರಗಳಲ್ಲಿ ಡಬ್ಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ಸೇವೆ: KSRTC ತೀರ್ಮಾನ!
- 54 min ago
ಇನ್ನೋವಾ ಕ್ರಿಸ್ಟಾ ಡೀಸಲ್ ಸೇರಿದಂತೆ ಇದೆ ತಿಂಗಳು ಮಾರುಕಟ್ಟೆ ಪ್ರವೇಶಿಸಲಿವೆ 8 ಹೊಸ ಕಾರುಗಳು
- 4 hrs ago
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- 15 hrs ago
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: 1 ಲಕ್ಷಕ್ಕೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬಹುದು!
Don't Miss!
- Technology
Budget 2023: ಬಜೆಟ್ ಪ್ರತಿಯನ್ನು ಕನ್ನಡದಲ್ಲಿ ಡೌನ್ಲೋಡ್ ಮಾಡಲು ಹೀಗೆ ಮಾಡಿ!
- News
Budget 2023: ಬಜೆಟ್ ಮಂಡನೆಗೆ ಕೆಂಪು ಬಣ್ಣದ ಸೀರೆಯುಟ್ಟು ಬಂದ ನಿರ್ಮಲಾ ಸೀತಾರಾಮನ್, ಕಾರಣ ಇಲ್ಲಿದೆ
- Finance
Budget 2023: ಇದೇ ಮೊದಲ ಬಾರಿಗೆ ಅಪರೂಪದ ವಿದ್ಯಮಾನಕ್ಕೆ ಸಂಸತ್ ಸಾಕ್ಷಿ
- Lifestyle
ಫೆಬ್ರವರಿ ತಿಂಗಳಿನಲ್ಲಿ ಈ 5 ರಾಶಿಯವರಿಗೆ ಲಕ್ಷ್ಮಿ ಕೃಪೆಯಿದೆ
- Sports
ರಣಜಿ ಟ್ರೋಫಿ: ಕ್ವಾ. ಫೈನಲ್ನಲ್ಲಿ ಕರ್ನಾಟಕ vs ಉತ್ತರಾಖಂಡ್ ಸೆಣೆಸಾಟ: 2ನೇ ದಿನದ Live score
- Movies
Ramachari Serial: ಮಾನ್ಯತಾಗೆ ತಿಳಿತು ಸತ್ಯ! ಮುಂದೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೆಚ್ಚಿನ ಮೈಲೇಜ್‌ನೊಂದಿಗೆ ಬಿಡುಗಡೆಗೆ ಸಜ್ಜಾದ ಟೊಯೊಟಾ ಹೈರೈಡರ್ ಸಿಎನ್‌ಜಿ ಎಸ್‍ಯುವಿ
2022ರ ಸೆಪ್ಟೆಂಬರ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿಯು ಹೊಸ ಸಂಚಲವನ್ನು ಸೃಷ್ಟಿಸಿದೆ. ಈ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿಯು ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೊಸ ಫೀಚರ್ಸ್ ಗಳೊಂದಿಗೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿದೆ.
ಇದೇ ವೇಳೆ ಟೊಯೊಟಾ ಶೀಘ್ರದಲ್ಲೇ ಹೊಸ ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿಯ ಸಿಎನ್‌ಜಿ ಆವೃತ್ತಿಯನ್ನು ದೇಶದಲ್ಲಿ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಟೊಯೊಟಾ ಕಂಪನಿಯು ತನ್ನ ಗ್ಲಾಂಝಾ ಸಿಎನ್‌ಜಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆ ಮಾಡಿದೆ. ಟೊಯೊಟಾ ಹೈರೈಡರ್ ಸಿಎನ್‌ಜಿ ಮಿಡ್ ಸೈಜ್ ಎಸ್‍ಯುವಿ ವಿಭಾಗದಲ್ಲಿ ಮೊದಲ ಸಿಎನ್‌ಜಿ ಚಾಲಿತ ಮಾದರಿಯಾಗಲಿದೆ. ಟೊಯೊಟಾ ಕಂಪನಿಯು ಇತ್ತೀಚೆಗೆ ಹೈರೈಡರ್ ಸಿಎನ್‌ಜಿ ಎಸ್‍ಯುವಿಯ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ.
ಈ ಹೊಸ ಸಿಎನ್‌ಜಿ ಎಸ್‍ಯುವಿ ಖರೀದಿಸಲು ಬಯಸುವ ಗ್ರಾಹಕರು ರೂ 25,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು. ಟೊಯೊಟಾ ಹೈರೈಡರ್ ಎಸ್‍ಯುವಿಯು ಶೀಘ್ರದಲ್ಲೇ 3 ಪವರ್‌ಟ್ರೇನ್ ಆಯ್ಕೆಗಳಲ್ಲಿ ನೀಡಲಾಗುವ ಮೊದಲ ಮಾದರಿಯಾಗಲಿದೆ. ಇದರಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5 ಲೀಟರ್ NA ಪೆಟ್ರೋಲ್, ಸ್ಟ್ರಾಂಗ್ ಹೈಬ್ರಿಡ್ ಟೆಕ್ ಮತ್ತು ಸಿಎನ್‌ಜಿ ಆವೃತ್ತಿಯೊಂದಿಗೆ 1.5 ಲೀಟರ್ ಪೆಟ್ರೋಲ್ ಸೇರಿದಂತೆ. ಸಿಎನ್‌ಜಿ ಕಿಟ್ ಅನ್ನು ಮಾರುತಿ ಮೂಲದ 1.5-ಲೀಟರ್ K15C, 4-ಸಿಲಿಂಡರ್ ಎಂಜಿನ್‌ನೊಂದಿಗೆ ಬರಲಿದೆ.
ಈ ಪವರ್‌ಟ್ರೇನ್ ಪ್ರಸ್ತುತ ಎರ್ಟಿಗಾ ಮತ್ತು XL6 ಸಿಎನ್‌ಜಿ ಮಾದರಿಗಳಲ್ಲಿ ಲಭ್ಯವಿದೆ. ಟೊಯೊಟಾ ಅಧಿಕೃತವಾಗಿ ಹೈರೈಡರ್ ಸಿಎನ್‌ಜಿಯ ಪವರ್ ಮತ್ತು ಟಾರ್ಕ್ ಅಂಕಿಅಂಶಗಳನ್ನು ಬಹಿರಂಗಪಡಿಸಿಲ್ಲ. ಸಿಎನ್‌ಜಿ ಮೋಡ್‌ನಲ್ಲಿ, ಪವರ್‌ಟ್ರೇನ್ 88 ಬಿಹೆಚ್‍ಪಿ ಪವರ್ ಮತ್ತು 121.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಆದರೆ ಪೆಟ್ರೋಲ್ ಮೋಡ್‌ನಲ್ಲಿ ಇದು 101 ಬಿಹೆಚ್‍ಪಿ ಪವರ್ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೈರೈಡರ್ ಸಿಎನ್‌ಜಿಯನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುವುದು ಎಂದು ಟೊಯೊಟಾ ಖಚಿತಪಡಿಸಿದೆ.
ಇದು 26.10 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಜಪಾನಿನ ವಾಹನ ತಯಾರಕರು ಹೈರೈಡರ್ ಸಿಎನ್‌ಜಿಯನ್ನು ಸ್ಟ್ಯಾಂಡರ್ಡ್ ಎಸ್‌ಯುವಿಯ ಮಿಡ್-ಸ್ಪೆಕ್ ಎಸ್ ಮತ್ತು ಜಿ ಟ್ರಿಮ್‌ಗಳಲ್ಲಿ ನೀಡಲಾಗುವುದು ಎಂದು ಖಚಿತಪಡಿಸಿದೆ. ಇನ್ನು ಸುರಕ್ಷತಾ ವೈಶಿಷ್ಟ್ಯಗಳ ವಿಷಯದಲ್ಲೂ ಗಮನಸೆಳೆಯಲಿರುವ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿ 6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಇಎಸ್‌ಪಿ, ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಅನ್ನು ಹೊಂದಿರುತ್ತದೆ.
ಈ ಹೊಸ್ ಟೊಯೊಟಾ ಹೈರೈಡರ್ ಎಸ್‍ಯುವಿಯು ಟು ಲೆಯರ್ ಹೊಂದಿರುವ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳನ್ನು ಹೊಂದಿದ್ದು, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಎರಡು ಲೇಯರ್‌ಗಳಾಗಿ ವಿಭಜಿಸಿ ಗ್ರಿಲ್‌ನ ಒಂದು ಮೂಲೆಯಿಂದ ಇನ್ನೊಂದಕ್ಕೆ ವಿಸ್ತರಿಸಿರುವ ಕ್ರೋಮ್ ಸ್ಟ್ರಿಪ್ ಅನ್ನು ಬಳಸಲಾಗಿದೆ. ದೊಡ್ಡ ಗಾತ್ರದ ಎಲ್ಇಡಿ ಹೆಡ್‌ಲ್ಯಾಂಪ್‌ಗಳಿಂದ ಸುತ್ತುವರೆದಿರುವ ಎತ್ತರದ ಏರ್‌ಡ್ಯಾಮ್‌ನೊಂದಿಗೆ ಸ್ಪೋರ್ಟಿ ಮುಂಭಾಗದ ಬಂಪರ್‌ಗಳನ್ನು ಸಹ ಒಳಗೊಂಡಿದ್ದು, ಎರಡು ಬದಿಯಲ್ಲಿ ಹೈರೈಡರ್‌ನ ಪ್ರಬಲ ಹೈಬ್ರಿಡ್ ಬ್ಯಾಡ್ಜಿಂಗ್ ಅನ್ನು ಹೊಂದಿದೆ.
ಟೊಯೊಟಾ ಹೈರೈಡರ್ ಎಸ್‌ಯುವಿ ಹಿಂಭಾಗದಲ್ಲಿ ಸ್ಲಿಮ್ ಸಿ-ಆಕಾರದ ಟೈಲ್-ಲೈಟ್‌ಗಳನ್ನು ಹೊಂದಿದ್ದು, ಡ್ಯುಯಲ್ ಸಿ-ಆಕಾರದ ಪಾರ್ಕಿಂಗ್ ಲ್ಯಾಂಪ್‌ಗಳೊಂದಿಗೆ ಟೈಲ್‌ಗೇಟ್‌ಗೆ ವಿಸ್ತರಿಸುತ್ತದೆ. ಹಾಗೆಯ ಒಂದು ಪ್ರಮುಖ ಕ್ರೋಮ್ ಸ್ಟ್ರಿಪ್ ಮಧ್ಯದಿಂದ ಆರಂಭಗೊಂಡು ಟೈಲ್ ಲ್ಯಾಂಪ್‌ಗಳಲ್ಲಿ ವಿಲೀನಗೊಳ್ಳಲಿದ್ದು, ಇದರಲ್ಲಿ ಟೊಯೊಟಾ ಲೋಗೋವನ್ನು ಜೋಡಿಸಲಾಗಿದೆ. ಹೈರೈಡರ್ ಜಿ ಟ್ರಿಮ್ನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಗಳೊಂದಿಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಕನೆಕ್ಟಿವಿಟಿ ಕಾರ್ ಟೆಕ್, ಫುಲ್ ಎಲ್ಇಡಿ, ಆಂಬಿಯೆಂಟ್ ಇಂಟೀರಿಯರ್ ಲೈಟಿಂಗ್, ಮತ್ತು ಇತರ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಈ ಎಸ್‍ಯುವಿಯ ಜಿ ಟ್ರಿಮ್ನಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಈ ಹೊಸ ಟೊಯೊಟಾ ಹೈರೈಡರ್ ಎಸ್‌ಯುವಿ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅತ್ಯಂತ ಪ್ರೀಮಿಯಂ ಸಿಎನ್‌ಜಿ ಮಾದರಿಯಾಗಲಿದೆ. ಇದು ಟೊಯೊಟಾ ಹೈರೈಡರ್‌ನಂತೆಯೇ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು ಕೂಡ ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್‌ಜಿ ಕಿಟ್‌ನೊಂದಿಗೆ ಬರಲಿದೆ. ಇದಲ್ಲದೆ, ಸಿಎನ್‌ಜಿ ಮತ್ತು ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್ ಗಳೊಂದಿಗೆ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಹೆಚ್ಚಿನ ಮೈಲೇಜ್ ಅನ್ನು ನೀಡುವ ಎಸ್‍ಯುವಿ ಆಗಿರುತ್ತದೆ.